ಅಭಿಪ್ರಾಯ / ಸಲಹೆಗಳು

Crime Reported in Mangalore East Traffic PS                       

ಪಿರ್ಯಾದಿದಾರರಾದ ದೀಕ್ಷಿತ್ ರವರು ಅವರ ಬಾಬ್ತು KA-19-HG-6178  ನೋಂದಣಿ ನಂಬ್ರದ ಬೈಕ್ ನ್ನು  ಚಲಾಯಿಸಿಕೊಂಡು ದಿನಾಂಕ: 14-11-2021 ರಂದು ಎಂದಿನಂತೆ ಬೆಳಿಗ್ಗೆ ದಿನಪತ್ರಿಕೆಯನ್ನು ಹಂಚುತ್ತಾ ಪದವು ಕಡೆಯಿಂದ ಮಲ್ಲಿ ಕಂಪೌಂಡ್ ಕಡೆಗೆ ಹಾದುಹೋಗಿರುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಹೋಗುತ್ತಾ ಸಿದ್ಧಿವಿನಾಯಕ ದೇವಸ್ಥಾನದ ಬಳಿ ತಲುಪುತ್ತಿದ್ದಂತೆ  ಬೆಳಿಗ್ಗೆ ಸಮಯ ಸುಮಾರು 7:30 ಗಂಟೆಗೆ ಮಲ್ಲಿ ಕಂಪೌಂಡ್ ಕಡೆಯಿಂದ ಪದವು ಮುಖ್ಯ ರಸ್ತೆಯ ಕಡೆಗೆ KA-19-EP-5298 ನಂಬ್ರದ YAMAHA FZ ಮೋಟಾರು ಸೈಕಲ್  ನ್ನು ಅದರ ಸವಾರ ರಕ್ಷಿತ್ ಕೆ ಆರ್ ಎಂಬಾತನು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ  ಮೋಟಾರು ಸೈಕಲಿನ ಬಲಭಾಗದ ಹ್ಯಾಂಡಲಿಗೆ ಢಿಕ್ಕಿ ಪಡಿಸಿದ ಪರಿಣಾಮ  ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು, ಅವರ ಎಡ ಭಾಗದ ಸೊಂಟ ಉಳುಕಿದಂತಾಗಿದ್ದು, ಮರುದಿನ ದಿನಾಂಕ: 15-11-2021 ರಂದು ಪಿರ್ಯಾದಿದಾರರಿಗೆ ಸೊಂಟ ನೋವು ಹೆಚ್ಚಾಗಿ ಚಿಕಿತ್ಸೆ ಬಗ್ಗೆ ಜ್ಯೋತಿ ಕೆ ಎಂ ಸಿ ಆಸ್ಪತ್ರೆಗೆ ತೆರಳಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಸೊಂಟ ನೋವು ದಿನದಿಂದ ದಿನಕ್ಕೆ ಹೆಚ್ಚಾಗಿ ಚಿಕಿತ್ಸಾ ವೆಚ್ಚವು ಅಧಿಕವಾಗಿದ್ದರಿಂದ ಪಿರ್ಯಾದಿದಾರರು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದಾಗಿದೆ ಎಂಬಿತ್ಯಾದಿ.

 

Crime Reported in Traffic South PS

ದಿನಾಂಕ :25-11-2021 ರಂದು  ಪಿರ್ಯಾದಿ HARISH K ದಾರರು ಟ್ಯಾಕ್ಸಿ ಚಾಲಕರಾಗಿದ್ದು ರೈಲ್ವೆ ನಿಲ್ದಾಣದಲ್ಲಿ ಅವರ ಕಾರು ನಂಬ್ರ KA-19-MA8262 ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದಾಗ ಸಮಯ ಸುಮಾರು ಬೆಳಿಗ್ಗೆ 03:15 ಗಂಟೆಗೆ  ಕಾರು ನಂಬ್ರ KA-06-AB-0675 ನೇದರ ಚಾಲಕ ಅಜಾಕರೂಕತೆ ಮತ್ತು ದುಡುಕುತನದಿಂದ ಕಾರನ್ನು ಚಾಲಯಿಸಿ ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದ ಕಲ್ಯಾಣ್ ಸಿಂಗ್(50) ಮತ್ತು ಮಿಥುಲ್ ಲಾಲ್(50) ಎಂಬುವರ ಮೇಲೆ ಕಾರನ್ನು ಚಲಾಯಿಸಿದ ಪರಿಣಾಮ ಕಲ್ಯಾಣ್ ಸಿಂಗ್ ರವರಿಗೆ ಬಲಗೈ ಮೂಳೆಮುರಿತ ಹಾಗೂ ಬಲಪಾದಕ್ಕೆ ರಕ್ತಗಾಯ ಮತ್ತು ಮಿಥುಲ್ ಲಾಲ್ ರವರಿಗೆ ತಲೆಗೆ ತೀವ್ರತರಹದ ಗಂಬೀರ ಗಾಯವಾಗಿರುತ್ತದೆ ಕಾರನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿ ರೈಲ್ವೆ ನಿಲ್ದಾಣದಲ್ಲಿ ಪಾರ್ಕಿಂಗ್ ಮಾಡಿದ್ದ ಕಾರುಗಳು 01) KA-19-MK-1998 ನೆ ಕಾರಿನ ಹಿಂಬದಿಗೆ ಜಖಂಗೊಂಡಿರುತ್ತದೆ 02) KA-19-MA-8262 ಪಿರ್ಯಾದಿದಾರರ ಕಾರಿನ ಮುಂಬಾಗದ ಎರಡು ಬದಿ ಸಂಪೂರ್ಣ ಜಖಂಗೊಂಡಿರುತ್ತದೆ 03) KA-19-AC-8929 ನೇದರ ಕಾರಿನ  ಹಿಂಭಾಗದ ಎರಡು ಬದಿ ಸಂಪೂರ್ಣ ಜಖಂಗೊಂಡಿರುತ್ತದೆ 04) KA-19-AA-8188 ನೇದರ ಎಡ ಬದಿಗೆ ಜಖಂಗೊಂಡಿರುತ್ತದೆ, ಗಾಯಳು ಕಲ್ಯಾಣ್ ಸಿಂಗ್(50) ಮತ್ತು ಮಿಥುಲ್ ಲಾಲ್(50)ರವರನ್ನು ಚಿಕಿತ್ಸೆ ಬಗ್ಗೆ  ವೆನ್ಲಾಕ್  ಆಸ್ಪತ್ರೆಗೆ ದಾಖಲಿಸಿರುತ್ತಾರೆ, ಅಪಘಾತ ಪಡಿಸಿದ KA-06-AB-0675 ನೇದರ ಚಾಲಕ ಅಪಘಾತ ಪಡಿಸಿ ಸ್ಥಳದಿಂದ ಪರಾರಿಯಾಗಿರುತ್ತಾರೆ. ಎಂಬಿತ್ಯಾದಿ

 

Crime Reported in Moodabidre PS        

ಪಿರ್ಯಾದು Mrs Athika (46) ದಾರರಿಂದ 2 ನೇ ಆರೋಪಿ Smt Shahida ಯು ಏಳು ಲಕ್ಷ ಹಣವನ್ನು ಪಡೆದುಕೊಂಡು ಕರಾರು ಪತ್ರವನ್ನು ಬರೆದುಕೊಟ್ಟಿದ್ದು, ಪಿರ್ಯಾದಿದಾರರಿಂದ ಪಡೆದುಕೊಂಡ ಹಣವನ್ನು ವಾಪಾಸು ನೀಡದೇ ಮೋಸ ಮಾಡಿದ್ದು, ದಿನಾಂಕ: 23-11-2021 ರಂದು 12.30 ಗಂಟೆಗೆ ಆರೋಪಿಯ ಮನೆಗೆ ಹಣವನ್ನು ಕೇಳಲು ಹೋದಾಗ ಆರೋಪಿ ಮನೆಗೆ ಬಾಗಿಲು ಹಾಕಿದ್ದು, ನಂತರ 18.00 ಗಂಟೆಗೆ ಪಿರ್ಯಾದಿದಾರರು ತನ್ನ ಗಂಡ ಹಾಗೂ ಮಗಳು ಅಸ್ನಿಪಾ ರೊಂದಿಗೆ ಪಿರ್ಯಾದಿದಾರರು ವಾಸವಾಗಿರುವ ಅಪಾರ್ಟ್ ಮೆಂಟ್ ನಲ್ಲಿರುವಾಗ ಆರೋಪಿ Sulaiman , Harshad, Samshad, Mustha, Smt Shahida ರವರುಗಳು ಮನೆಯ ಒಳಗಡೆ ಬಂದು ಬ್ಯಾರಿ ಭಾಷೆಯಲ್ಲಿ ಬೇವರ್ಸಿ, ರಂಡೆ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈಯ್ದು ನಿಂದಿಸಿ, 1 ನೇ ಆರೋಪಿಯು ಪಿರ್ಯಾದಿದಾರರ ಬುರ್ಕಾವನ್ನು ಎಳೆದು ಕೈಗೆ ಹೊಡೆದು ಕಾಲಿನಿಂದ ಹೊಟ್ಟೆಗೆ ತುಳಿದಾಗ, ಎಲ್ಲಾ ಆರೋಪಿಗಳು ಸೇರಿ ಪಿರ್ಯಾದಿದಾರರಿಗೆ ಕಾಲಿನಿಂದ ತುಳಿದಿದ್ದು, 4 ಮತ್ತು 5 ನೇ ಆರೋಪಿಗಳು  ಪಿರ್ಯಾದಿದಾರರ ಮಾನಭಂಗಕ್ಕೆ ಯತ್ನ ಮಾಡಿ ಜೀವ ಬೆದರಿಕೆಯನ್ನು ಹಾಕಿದ್ದು, ಆರೋಪಿಗಳ ಹಲ್ಲೆಯಿಂದ ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಮೂಡಬಿದರೆ ಆಳ್ವಾಸ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಎಂಬಿತ್ಯಾದಿ.

 

2) ಪಿರ್ಯಾದಿ Smt Shahida ದಾರರು ಆರೋಪಿ ಅತಿಕಾ ಎಂಬವರಿಂದ 3 ವರ್ಷಗಳ ಹಿಂದೆ 3 ಲಕ್ಷ ಸಾಲವನ್ನು ಪಡೆದುಕೊಂಡಿದ್ದು ಇದರಲ್ಲಿ ಸ್ವಲ್ಪ ಹಣವನ್ನು ಮರುಪಾವತಿ ಮಾಡಿದ್ದು ಉಳಿದ ಹಣವನ್ನು ಮರುಪಾವತಿಸುವರೇ ಅಸಾದ್ಯವಾಗಿರುತ್ತದೆ. ಇದೇ ವಿಚಾರವಾಗಿ ಅತಿಕಾರವರು ಅಬ್ದುಲ್ ರಜಾಕ್ @ ಚೆಯ್ಯ, ಅನ್ಸಾರ್ @ ಅಂಚು, ಹನೀಫ್, ಅಶ್ರಫ್, ಚುಮ್ಮಿ @ರೆಹನಾ, ನಜೀರ್ ರವರೊಂದಿಗೆ  ದಿನಾಂಕ:23-11-2021 ರಂದು ರಾತ್ರಿ ಸುಮಾರು 8.15 ಗಂಟೆಗೆ ಪಿರ್ಯಾದುದಾರರ ಮನೆಯ ಬಳಿ ಬಂದು ಹಣದ ವಿಚಾರದಲ್ಲಿ ತಕರಾರು ಮಾಡಿದ್ದಲ್ಲದೇ, ಅವರುಗಳು ಪಿರ್ಯಾದುದಾರರ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ರಜಾಕ್ ಮತ್ತು ಅನ್ಸಾರ್ ರವರು ಪಿರ್ಯಾದುದಾರರಿಗೆ ಕೈಯಿಂದ ಹೊಡೆದುದಲ್ಲದೇ ಅವರೆಲ್ಲರೂ ಕಾಲಿನಿಂದ ತುಳಿದು ಪಿರ್ಯಾದುದಾರರ ಗಂಡನಿಗೆ ರಜಾಕನು ಕೈಯಿಂದ ಕೆನ್ನೆಗೆ ಹೊಡೆದು, ಅನ್ಸಾರ್ ನು ಕತ್ತಿಯನ್ನು ಹಿಡಿದುಕೊಂಡು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲವಾಗಿ ಬೆದರಿಸಿರುತ್ತಾನೆ. ಆಗ ಪಿರ್ಯಾದುದಾರರು ಬೊಬ್ಬೆ ಹಾಕಿದಾಗ ನೆರೆಕರೆಯವರು ಬರುವುದನ್ನು ಕಂಡು ಆರೋಪಿಗಳು ಅವರು ಬಂದ ಕಾರು ಹಾಗೂ ಸ್ಕೂಟರಿನಲ್ಲಿ ಹೋಗುತ್ತಾ ನಮ್ಮ ಹಣ ಕೊಡದೇ ನಿನ್ನ ಮಗಳ ಮದುವೆಯ ಕಾರ್ಯವನ್ನು ಕೂಡಾ ಮಾಡಲು  ಬಿಡುವುದಿಲ್ಲ ಎಂಬುದಾಗಿ ಹೆದರಿಸಿ ಹೋಗಿರುತ್ತಾರೆ.

 

                               

 

ಇತ್ತೀಚಿನ ನವೀಕರಣ​ : 25-11-2021 06:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080