ಅಭಿಪ್ರಾಯ / ಸಲಹೆಗಳು

Crime Reported in Surathkal PS

ದಿನಾಂಕ: 25-01-2022 ರಂದು ಸಂಜೆ 6-20 ಗಂಟೆ ಸುಮಾರಿಗೆ ಸುರತ್ಕಲ್ ಗ್ರಾಮದ  NITK ಟೋಲ್ ಗೇಟ್ ನ ಟೋಲ್ ಬೂತ್ ನ ಗೇಟಿಗೆ KA-20-AA-6816 ನೇ ನೊಂದಣಿ ಸಂಖ್ಯೆಯ ದುರ್ಗಾಂಬಾ ಬಸ್ಸನ್ನು ಅದರ ಚಾಲಕ ನು ಟೋಲಗೇಟನಲ್ಲಿ ನಿಲ್ಲಿಸದ ಪರಿಣಾಮ ಟೋಲ್ ಬೂತ್ ಗೇಟಿಗೆ ಡಿಕ್ಕಿ ಹೊಡೆದು ಟೋಲ್ ಬೂತ್ ಗೇಟ್ ಹಾಳಾಗಿ ನಷ್ಟವುಂಟಾಗಿರುವುದಾಗಿಯೂ ಆರೋಪಿ ಬಸ್ಸ್ ಚಾಲಕನ ವಿರುದ್ದ ಕ್ರಮ ಜರುಗಿಸಬೇಕಾಗಿ ಎಂಬಿತ್ಯಾದಿಯಾಗಿರುತ್ತದೆ.

 

Crime Reported in Urva PS

ಪಿರ್ಯಾದಿದಾರರಾದ ಶ್ರೀಮತಿ ಕಮಲಾ ಎಂಬುವವರ ಗಂಡನಾದ ಶಂಕರ ಪ್ರಾಯ 50 ವರ್ಷ ಹುಬ್ಬಳ್ಳಿ ತಿರ್ಲಪುರದವರಾಗಿದ್ದು ಕಳೆದ 21 ವರ್ಷದಿಂದ ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದವರು ದಿನಾಂಕ 04-11-2021 ರಂದು ಸಂಜೆ 04.00 ಗಂಟೆಗೆ ಊರಿಗೆ ಹೋಗುತ್ತೇನೆಂದು ಹೇಳಿ ಚಿಲಿಂಬಿ ಮನೆಯಿಂದ ಹೊರಟು ಹೋದವರು ಈ ತನಕ ವಾಪಾಸು ಮನೆಗೆ ಬಂದಿರುವುದಿಲ್ಲ ಈ ಹಿಂದೆಯೂ ಕೂಡಾ ಮನೆಯಿಂದ ಹೊರಗೆ ಹೋದವರು ಕೆಲವು ದಿನಗಳ ಬಳಿಕ ವಾಪಾಸು ಬರುತ್ತಿದ್ದರು ಅದರಂತೆಯೇ ವಾಪಾಸು ಬರುತ್ತಾರೆಂಬ ನಿರೀಕ್ಷೆಯಲ್ಲಿದ್ದು ಈ ವರೆಗೂ ವಾಪಾಸು ಬಂದಿರುವುದಿಲ್ಲ ಈ ಬಗ್ಗೆ ಸಂಬಂಧಿಕರಲ್ಲಿ ಹಾಗೂ ನೆರೆಕೆರೆಯವರಲ್ಲಿ ವಿಚಾರಿಸಿದಲ್ಲಿ ಈ ತನಕ ಪತ್ತೆಯಾಗಿರುವುದಿಲ್ಲ ಪಿರ್ಯಾದಿದಾರರ ಗಂಡನವರು ವಿಪರೀತ ಸಾರಾಯಿ ಕುಡಿತದ ಚಟ ಹೊಂದಿದ್ದಲ್ಲದೇ ಪಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದವರಾಗಿದ್ದಾರೆ ಕಾಣೆಯಾದ ಶಂಕರ ರವರನ್ನು  ಪತ್ತೆ ಮಾಡಿಕೊಡಬೇಕಾಗಿ  ಎಂಬಿತ್ಯಾದಿ. 

ಕಾಣೆಯಾದ ಶಂಕರ ರವರ ಚಹರೆ ವಿವರ

1)  ಪ್ರಾಯ :  50  ವರ್ಷ,

2)  ಎತ್ತರ : ಅಂದಾಜು 5 ಅಡಿ,

3)  ಶರೀರ : ಧೃಡಕಾಯ ಶರೀರ

4)  ಮೈ ಬಣ್ಣ: ಎಣ್ಣೆ  ಕಪ್ಪು ಮೈ ಬಣ್ಣ

5)  ಧರಿಸಿರುವ ಬಟ್ಟೆಗಳು: ಕಪ್ಪು  ಬಣ್ಣದ  ಪ್ಯಾಂಟ್,  ಟೀ-ಶರ್ಟ್ ಧರಿಸಿರುತ್ತಾರೆ. 

6)  ಮಾತನಾಡುವ  ಭಾಷೆಗಳು: ಕನ್ನಡ,

 

ಇತ್ತೀಚಿನ ನವೀಕರಣ​ : 26-01-2022 11:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080