ಅಭಿಪ್ರಾಯ / ಸಲಹೆಗಳು

Crime Reported in : Kankanady Town PS

ದಿನಾಂಕ: 26-02-2022 ರಂದು ವಿಶೇಷ ಮಾರ್ನಿಂಗ್ ರಂಡ್ಸ್ ಕರ್ತವ್ಯಕ್ಕೆ ಪಿಸಿ ಕಾರ್ತಿಕ್ ಬಿ  ಮತ್ತು  ಪಿ.ಸಿ. ಶರಣಪ್ಪ ರವರು  ಬೆಳಗ್ಗೆ  04-00 ಗಂಟೆಗೆ ಠಾಣೆಯಿಂದ ಹೊರಟು ಪಂಪವೆಲ್, ಗೋರಿಗುಡ್ಡೆ  ಜಪ್ಪಿನಮೊಗರು, ಕಡೆಕಾರು ಪರಿಸರಗಳಲ್ಲಿ ಸಂಚರಿಸುತ್ತಾ ಸಮಯ ಬೆಳಗ್ಗೆ 04.30 ಗಂಟೆಗೆ ಪಂಪುವೆಲ್ ಸಿಟಿ ಲಾಡ್ಜ ಎದುರುಗಡೆಯ ಬಸ್ಸು ನಿಲ್ದಾಣದ ಹಿಂದುಗಡೆಯ ಪದ್ಮಶ್ರಿ ಹೋಟೆಲ್ ಬಳಿ  ಕತ್ತಲೆಯಲ್ಲಿ ಒರ್ವ ಅನುಮಾನಸ್ಪದ ವ್ಯಕ್ತಿ ತನ್ನನ್ನು ಮರೆಮಾಚಿತ್ತಿರುವುದನ್ನು ಕಂಡು ಹಿಡಿದು ವಿಚಾರಿಸಲಾಗಿ ಆತನು ತನ್ನ ಹೆಸರು ಅಬ್ದುಲ್ ರಶೀದ್ ಹಸನ್ ಅಬ್ಬ ಪ್ರಾಯ: 54 ವರ್ಷ, ದೇವಿನಗರ, ಕುಂಜತ್ ಬೈಲ್,ಮಂಗಳೂರು ಎಂದು ತಿಳಿಸಿರುತ್ತಾನೆ. ಈತನಲ್ಲಿ ಆ ವೇಳೆಯಲ್ಲಿ  ತನ್ನನ್ನು ಮರೆಮಾಚಿ ಇದ್ದ ಬಗ್ಗೆ ವಿಚಾರಿಸಿದಲ್ಲಿ ಯಾವುದೇ ಸಮಂಜಸ ಉತ್ತರ ನೀಡದೇ ಇದ್ದುದರಿಂದ ಈತನು ಆ ವೇಳೆಯಲ್ಲಿ ಯಾವುದೋ ರೀತಿಯ ಬೇವಾರಂಟು ತಕ್ಷೀರು ಮಾಡುವ ಇರಾದೆಯಿಂದ ಇರುವುದಾಗಿ  ಬಲವಾದ ಸಂಶಯಗೊಂಡು ವಶಕ್ಕೆ ಪಡೆದು ಠಾಣೆಗೆ  ಕರೆದುಕೊಂಡು ಬಂದು ಆರೋಪಿತನಾ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿರುವುದಾಗಿದೆ, ಎಂಬಿತ್ಯಾದಿ.

 

 Crime Reported in Traffic South P. S      

ದಿನಾಂಕ 25.02.2022ರಂದು ಪಿರ್ಯಾದಿದಾರರಾದ   ಎಂ ಎಸ್  ಹರೀಶ್ ಕುಮಾರ್ (37) ರವರು ತಮ್ಮ ಬಾಬ್ತು ಆಂಬುಲೆನ್ಸ್ ವೊಂದರಲ್ಲಿ ರಾ ಹೆ 66 ರ ಪಂಪವೆಲ್ ಕಡೆಯಿಂದ  ತೊಕ್ಕೊಟ್ಟು ಕಡೆಗೆ ಹೋಗುತ್ತಿರುವ ಸಮಯ ಸುಮಾರು 22.00 ಗಂಟೆಗೆ ಎಕ್ಕೂರು  ಎಂಬಲ್ಲಿಗೆ ತಲುಪಿದಾಗ ಅಲ್ಲಿ ರಸ್ತೆಯಲ್ಲಿ ಸೇರಿದ ಸಾರ್ವಜನಿಕರ ಗುಂಪನ್ನು  ನೋಡಿ  ಪಿರ್ಯಾದಿದಾರರು ತಮ್ಮ ಆಂಬುಲೆನ್ಸ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಬಂದು ನೋಡಿದಾಗ ರಸ್ತೆ ಅಪಘಾತವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯನ್ನು  ಕಂಡು ತಮ್ಮ ಆಂಬುಲೆನ್ಸ್ ನಲ್ಲಿ ನಗರದ ಫಾದರ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಕೊಡಿಸಿ ನಂತರ ಹೆಚ್ಚಿನ ಚಿಕತ್ಸೆಬಗ್ಗೆ  ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ  ಈ ಅಪಘಾತದ ಬಗ್ಗೆ ಸ್ಥಳದಲ್ಲಿದ್ದ  ಸಾರ್ವಜನಿಕರಲ್ಲಿ ವಿಚಾರಿಸಲಾಗಿ ಗಾಯಳುವಾದ ಅಪರಿಚಿತ ವ್ಯಕ್ತಿಯು ರಾ ಹೆ 66 ರ ಎಕ್ಕೂರಿನಲ್ಲಿ ರಸ್ತೆದಾಟುತ್ತಿದ್ದ ಸಮಯದಲ್ಲಿ ಯಾವುದೋ ಅಪರಿಚಿತ ಲಾರಿ ಚಾಲಕ ಲಾರಿಯನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನ ದಿಂದ ಚಾಲನೆಮಾಡಿಕೊಂಡು ಬಂದು ರಸ್ತೆದಾಟುತ್ತಿದ್ದ ಅಪರಿಚಿತ ವ್ಯಕ್ತಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವ್ಯಕ್ತಿಯ ಎಡಗಾಲಿಗೆ ಮೂಳೆಮುರಿತದ ಗಾಯ ಹಾಗೂ ಹಣೆಗೆ ಗಂಭೀರ ಸ್ವರೂಪದ ಗಾಯವಾಗಿರುತ್ತದೆ  ಅಪಘಾತ ಪಡಿಸಿದ ಲಾರಿಚಾಲಕ ಅಪಘಾತ ಸ್ಥಳದಲ್ಲಿ ಲಾರಿಯನ್ನು ನಿಲ್ಲಿಸದೇ ಲಾರಿ ಸಮೇತ ಪರಾರಿಯಾಗಿರುತ್ತಾನೆ ಎಂಬಿತ್ಯಾಧಿ,

Crime Reported in Bajpe PS

ಪಿರ್ಯಾದಿದಾರರಾದ  Kum. Melita ರವರು ದಿನಾಂಕ 15.02.2022 ರಂದು ಸಂಜೆ ವೇಳಗೆ ತಮ್ಮ ಬಾಬ್ತು ಡಸ್ಟಿನ್ ರೆಡಿಗೋ ಕಾರು ನಂಬ್ರ ಕೆಎ-19ಎಂಹೆಚ್-6910 ನೇಯದರಲ್ಲಿ ಪೆರ್ಮುದೆಯಿಂದ ಬಜಪೆ ಕಡೆಗೆ ಬರುತ್ತಿರುವಾಗ ಸಂಜೆ ಸುಮಾರು 7:00 ಗಂಟೆಗೆ ಮಂಗಳೂರು ತಾಲೂಕು, ಪೆರ್ಮುದೆ ಗ್ರಾಮದ ಭಟ್ರಕೆರೆ ಬಳಿ ತಲುಪುತ್ತಿದ್ದಂತೆಯೇ ಎದುರಿನಿಂದ ಅಂದರೆ ಬಜಪೆ ಕಡೆಯಿಂದ ಮೋಟಾರ್ ಸೈಕಲ್ ನಂಬ್ರ ಕೆಎ-19ಹೆಚ್.ಎ-2350 ನೇಯದನ್ನು ಅದರ ಸವಾರ ಜಾಯ್ ಮಿರಾಂಡ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಸ್ಸನ್ನು ಓವರ್ ಟೇಕ್ ಮಾಡಿ ಫಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಬಂಪರ್ ಹಾಗೂ ಬಾಡಿ ಜಖಂಗೊಂಡಿರುತ್ತದೆ.  ಆರೋಪಿಯು ಕಾರಿನ ದುರಸ್ಥಿಯ ಹಣ ನೀಡುವುದಾಗಿ ತಿಳಿಸಿದ್ದು ಈಗ ಹಣ ನೀಡಲು ನಿರಾಕರಿಸಿರುವುದರಿಂದ  ಈ ದಿನ ತಡವಾಗಿ ಫಿರ್ಯಾದಿ ನೀಡಿರುವುದಾಗಿದೆ” ಎಂಬಿತ್ಯಾದಿ.

 

 

 

ಇತ್ತೀಚಿನ ನವೀಕರಣ​ : 26-02-2022 10:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080