ಅಭಿಪ್ರಾಯ / ಸಲಹೆಗಳು

Crime Reported in Bajpe PS  

ಪಿರ್ಯಾದಿ Umesh ದಾರರು  ದಿನಾಂಕ:25-05-2022 ರಂದು ಕೆಎ19-ಹೆಚ್ ಡಿ-7341 ನೇ ಆಕ್ಟಿವಾ ಸ್ಕೂಟರನಲ್ಲಿ  ಬಜಪೆ ಪೇಟೆಯಿಂದ ಲೋಕನಾಥ  ಎಂಬವರನ್ನು ಸಹಸವಾರರಾಗಿ ಕುಳ್ಳರಿಸಿಕೊಂಡು  ರಾತ್ರಿ 8.00 ಗಂಟೆಗೆ ಕೊಂಪದವು ಕಡೆಗೆ ಹೋಗುತ್ತಿರುವಾಗ ಮಂಗಳೂರು ತಾಲೂಕು ಪೆರ್ಮದೆ ಗ್ರಾಮದ  ಭಟ್ರಕೆರೆ ಎಂಬಲ್ಲಿ  ತಲುಪುತ್ತಿದ್ದಂತೆ  ತನ್ನ ಎದುರಿನಿಂದ ಅಂದರೆ ಪೆರ್ಮುದೆಯಿಂದ ಬಜಪೆ ಕಡೆಗೆ  ಮೋ.ಸೈಕಲ್ ನಂಬ್ರ ಕೆಎ19-ಹೆಚ್ ಎಫ್-9931 ನೇದನ್ನು ಅದರ ಸವಾರ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟೃರ್ ಗೆ ಡಿಕ್ಕಿಪಡಿಸಿದ  ಪರಿಣಾಮ  ಪಿರ್ಯಾದಿದಾರರು ಮತ್ತು ಸಹ ಸವಾರ ಲೋಕನಾಥ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು  ಲೋಕನಾಥರವರಿಗೆ  ತಲೆಗೆ ,ಕೈಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು ಬಜಪೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಓಳರೋಗಿಯಾಗಿ ದಾಖಲಾಗಿರುತ್ತಾರೆ.ಎಂಬಿತ್ಯಾದಿ.

 

Crime Reported in Traffic South Police Station   

ದಿನಾಂಕ: 25-05-2022 ರಂದು ಪಿರ್ಯಾದಿದಾರರಾದ ಹರ್ಫಿಕ್,ಜಿ ರವರು ತಮ್ಮಸ್ನೇಹಿತ ಧೀರಜ್ನ ಬಾಬ್ತು ಸ್ಕೂಟರ್ ನಂಬ್ರ:KA-19-HD-2846  ನೇದರಲ್ಲಿ  ತಮ್ಮ ಮನೆಯಿಂದ ದೇರಳಕಟ್ಟೆ ತತ್ವಯಸಿ ಕ್ಲಬ್ ಗೆ ಹೋಗಲು ತಮ್ಮ ಸ್ನೇಹಿತ ಪ್ರಜ್ಷಲ್ ಸವಾರನಾಗಿ ಪಿರ್ಯಾದಿದಾರ ಸಹ ಸವಾರನಾಗಿ  ಹೋಗುತ್ತೀರುವ ಸಮಯ ಸುಮಾರು  11:45 ಗಂಟೆಗೆ  ನಾಟೆಕಲ್ ನ ತಟ್ಲ ಎಂಬಲ್ಲಿ ಗೆ ತಲುಪಿದಾಗ ಸವಾರ ಪ್ರಜ್ಷಲ್ ಸ್ಕೂಟರನ್ನು ದುಡುಕುತನ ಹಾಗೂ  ನಿರ್ಲಕ್ಷ್ಯತನ ದಿಂದ ಸವಾರಿಮಾಡಿಕೊಂಡು  ಬಂದು ಓಮ್ಮಲೇ ಸ್ಕೂಟರ್ ನ್ನು ಬ್ರೇಕ್ ಹಾಕಿದ ಪರಿಣಾಮ  ಪಿರ್ಯಾದಿದಾರ ಹಾಗೂ ಸವಾರ ಪ್ರಜ್ಷಲ್  ರವರು ಸ್ಕೂಟರ್ ಸಮೇತ  ರಸ್ತೆಗೆ ಬಿದ್ದು ಪಿರ್ಯಾದಿದಾರರ  ಬಲಗೈ ಮೊಣಕೈ ಹತ್ತಿರ  ಮೂಳೆಮುರಿತದ  ಗಂಭೀರ ಸ್ವರೂಪದ ಗಾಯ ಹಾಗೂ  ಸ್ಕೂಟರ್ ಸವಾರನ ಎಡಗಾಲಿನ ಮೊಣಗಂಟಿಗೆ ಗುದ್ದಿದ ರೀತಿಯಾ ಗಾಯವಾಗಿದ್ದು ಗಾಯಾಳು ಪಿರ್ಯಾದಿದಾರರನ್ನು ಅಪಘಾತ ಪಡಿಸಿದ ಸ್ಕೂಟರ್ ಸವಾರ ಅದೇ ಸ್ಕೂಟರ್ ನಲ್ಲಿ ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾಧಿ.

 

ಇತ್ತೀಚಿನ ನವೀಕರಣ​ : 26-05-2022 04:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080