Feedback / Suggestions

Crime Reported  in Traffic South PS

ದಿನಾಂಕ :23.08.2021 ರಂದು  ಪಿರ್ಯಾದಿದಾರರಾದ ಬಸವರಾಜು (40 ವರ್ಷ) ರವರು  ನಾಗುರಿ ಕಡೆಯಿಂದ ಪಂಪ್ ವೇಲ್ ಕಡೆಗೆ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ಸುಮಾರು ಸಂಜೆ 7-30 ಗಂಟೆಗೆ ಪಂಪ್ ವೇಲ್ ಹತ್ತಿರದ ಬಿ ಹೆಚ್ ಕಿರಾಣಿ ಅಂಗಡಿ ಹತ್ತಿರ ತಲುಪಿದಾಗ ಪಡಿಲ್ ಕಡೆಯಿಂದ ಪಂಪ್ ವೇಲ್ ಕಡೆಗೆ ಬರುತ್ತಿದ್ದ  ಆಟೋರಿಕ್ಷಾ ನಂಬ್ರ:KA-19-AA-3934  ನೇದರ ಚಾಲಕ ಕೃಷ್ಣ ಮೂರ್ತಿ ಎಂಬಾತನು ಆಟೋರಿಕ್ಷಾವನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಸವರಾಜುರವರಿಗೆ ಆಟೋರಿಕ್ಷಾವನ್ನು ಡಿಕ್ಕಿ ಪಡಿಸಿದ ಪರಿಣಾಮ ಅವರು ರಸ್ತೆಯ ಬದಿಯಲ್ಲಿರುವ ಕಚ್ಚಾಮಣ್ಣು ರಸ್ತೆಗೆ ಬಿದ್ದು  ಅವರ ಬಲಗೈ ಮಣಿಗಂಟಿಗೆ ಮೂಳೆ ಮುರಿತದ ಗಾಯವಾಗಿದ್ದವರನ್ನು ಆಟೋರಿಕ್ಷಾ ಚಾಲಕ ಮತ್ತು ಅಲ್ಲಿ ಸೇರಿದ ಜನರು ಕೂಡಲೇ ಚಿಕಿತ್ಸೆ ಬಗ್ಗೆ ಅದೇ ಆಟೋರಿಕ್ಷಾದಲ್ಲಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ.

Crime Reported  in Mangalore South PS

ದಿನಾಂಕ 02-08-2021ರಂದು ಬೆಳಗ್ಗೆ 09-30 ಗಂಟೆಯಿಂದ 10-30 ಗಂಟೆಯ ಮದ್ಯಾವಧಿಯಲ್ಲಿ ಮಂಗಳೂರು ನಗರ ಓಲ್ಡ್ ಕೆಂಟ್ ರಸ್ತೆಯಲ್ಲಿರುವ  ಸೋನಿ ಪ್ಯಾರಡೇಸ್  ಅಪಾರ್ಟ್  ಮೆಂಟ್ ನ 2ನೇ ಮಹಡಿಯಲ್ಲಿರುವ 202ನೇ ಮನೆಯ ಬಾಗಿಲಿನ ಚಿಲಕವನ್ನು ಯಾರೋ ಕಳ್ಳರು ದೂಡಿ ಅಥವಾ ಪೀಪ್ ಹೋಲ್  ಮುಖೇನ ಕೈ ಹಾಕಿ ಬಾಗಿಲು ತೆಗೆದು ಒಳ ಪ್ರವೇಶಿಸಿ ಮನೆಯ ಹಾಲ್ ನಲ್ಲಿ ಟೇಬಲ್ ನಲ್ಲಿ ಇರಿಸಿದ್ದ ಲೆನಾವೋ ಕಂಪನಿಯ THINK PAD, SERIAL NO. PG01GGR9 ದ ಲ್ಯಾಪ್ ಟಾಪ್ ನ್ನು ಕಳವು ಮಾಡಿಕೊಂಡು ಹೋಗಿದ್ದು ಲ್ಯಾಪ್ ಟಾಪ್ ನ ಅಂದಾಜು ಮೌಲ್ಯ 25000/- ರೂಪಾಯಿ ಆಗಬಹುದು ಎಂಬಿತ್ಯಾದಿಯಾಗಿರುತ್ತದೆ.

Crime Reported  in Ullal PS  

ದಿನಾಂಕ 25-08-2021 ರಂದು ಮೇಲಾಧಿಕಾರಿಗಳ  ಆದೇಶದಂತೆ  ಕೋವಿಡ್ ನಿಯಂತ್ರಣ  ಕರ್ತವ್ಯ ಕ್ಕೆ Pradeep Helth Inspector ನೇಮಿಸಿದಂತೆ  ಕೇರಳ ರಾಜ್ಯದಿಂದ ಕರ್ನಾಟಕ ರಾಜ್ಯಕ್ಕೆ  ಪ್ರವೇಶಿಸುವ  ಜನರನ್ನು ಹಾಗೂ ವಾಹನಗಳಲ್ಲಿ   ಬರುವ ಜನರನ್ನು   ತಡೆದು  ನಿಲ್ಲಿಸಿ   ಅವರಲ್ಲಿರುವ ಕರ್ನಾಟಕ ಪ್ರವೇಶಿಸಲು ಕಡ್ಡಾಯವಾಗಿ  ಬೇಕಾಗಿರುವಂತಹ  ಆರ್.ಟಿ.ಪಿ.ಸಿ.ಆರ್  ಗಳನ್ನು  ಪರಿಶೀಲಿಸುತ್ತಿದ್ದ ಸಮಯ ಬೆಳಿಗ್ಗೆ  10-15  ಗಂಟೆಗೆ   ಕೇರಳದ ಕಡೆಯಿಂದ ಕರ್ನಾಟಕದ ಕಡೆಗೆ  ನಡೆದುಕೊಂಡು ಬಂದವರನ್ನು  ತಡೆದು   ಕರ್ನಾಟಕ ಪ್ರವೇಶಿಸಲು ಬೇಕಾದಂತಹ ಆರ್.ಟಿ,ಪಿ.ಸಿ.ಆರ್ ಧಾಖಲೆ ಪತ್ರಗಳನ್ನು ವಿಚಾರಿಸಿದಾಗ ಅವರುಗಳ ಮೊಬೈಲ್ ಗಳಲ್ಲಿರುವ ಧಾಖಲೆಗಳನ್ನು ತೋರಿಸಿದ್ದನ್ನು ಪರಿಶೀಲಿಸಿದಲ್ಲಿ ಇವರುಗಳು ಆ.ರ್.ಟಿ.ಪಿ.ಸಿ.ಆರ್ ಗಳಲ್ಲಿ ನಮೂದಿಸಿರುವ ದಿನಾಂಕವನ್ನು ತಿದ್ದಿರುವ ಸಂಶಯ ಕಂಡು ಬಂದು ಅಲ್ಲಿಯೇ ಕರ್ತವ್ಯದಲ್ಲಿದ್ದ ಪೊಲೀಸು  ನಿರೀಕ್ಷಕರಾದ ಚಂದ್ರ ಶೇಖರಯ್ಯ ರವರು ಹಾಗೂ ಸಿಬ್ಬಂಧಿಗಳಲ್ಲಿ  ವಿಚಾರ  ತಿಳಿಸಿದಲ್ಲಿ  ಅವರು  ಪರಿಶೀಲಿಸಿದಾಗ ಆರೋಪಿಗಳಿಬ್ಬರು  ತಮ್ಮ ತಪ್ಪನ್ನು ಒಪ್ಪಿಕೊಂಡಿರುತ್ತಾರೆ, ಅವರ ಹೆಸರು ವಿಳಾಸ ವಿಚಾರಿಸಿದಲ್ಲಿ 1] ಅಬ್ದುಲ್ ತಮೀಮ್ ಪ್ರಾಯ 19 ವರ್ಷ, ವಾಸ: ತೈವಳಪ್ಪು ಹೌಸ್, ಆಲಂಪಾಡಿ ಅಂಚೆ , ಚೆಂಗಳ , ಕಾಸರಗೋಡು ತಾಲೂಕು, ಮತ್ತು ಜಿಲ್ಲೆ, ಕೇರಳ, 2] ಕು: ಫಾತಿಮತುಲ್ ಮುಬೀನಾ ಪ್ರಾಯ 20 ವರ್ಷ, ವಾಸ: ಕಯ್ಯಾರ್, ಉಪ್ಪಳ , ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ,  ಹಾಗೂ ಇನ್ನೋಬ್ಬಾಕೆಯಲ್ಲಿ ವಿಚಾರಿಸಿದಾಗ ಆಕೆಯು ತನ್ನ ಬ್ಯಾಗಿನಿಂದ ತೆಗೆದು ಒಂದು ಝೆರಾಕ್ಸ್ ಆರ್.ಟಿ.ಪಿ.ಸಿ.ಆರ್ ಧಾಖಲೆಯನ್ನು ತೋರಿಸಿದ್ದು ಇದು ಕೂಡಾ ತಿದ್ದಿರುವ ಧಾಖಲೆಪತ್ರ ಎಂಬುದಾಗಿ  ತಿಳಿಸಿದ್ದು ಆವಳ ಹೆಸರು ವಿಳಾಸ ವಿಚಾರಿಸಿದಲ್ಲಿ  3]  ಕು: ಸಹನಾ ಸಂಶೀರಾ ಬೇಗಂ , ಪ್ರಾಯ 20 ವರ್ಷ ವಾಸ:  ಉಪ್ಪಳ , ಕಾಸರಗೋಡು ಜಿಲ್ಲೆ ,ಕೇರಳ ರಾಜ್ಯ, ಎಂಬುದಾಗಿ ತಿಳಿಸಿರುತ್ತಾಳೆ       ಆದುದರಿಂದ  ಮೇಲಿನ ಆರೋಪಿಗಳೆಲ್ಲರೂ ಸಮಾನ ಉದ್ದೇಶದಿಂದ ಆರ್.ಟಿ.ಪಿ.ಸಿ.ಆರ್ ಧಾಖಲೆ ಪತ್ರಗಳನ್ನು ತಾವೇ ತಿದ್ದಿಕೊಂಡು ನಖಲಿಯಾಗಿ ಸೃಷ್ಠಿಸಿ ಕರ್ನಾಟಕ ಸರಕಾರದ ಆದೇಶವನ್ನು  ಉಲ್ಲಂಘಿಸಿ, ಆರೋಗ್ಯ  ಇಲಾಖೆ ಯ ಅಧಿಕಾರಿಗಳನ್ನು ಮತ್ತು ಪೊಲೀಸು ಅಧಿಕಾರಿಗಳನ್ನು  ಮೋಸದಿಂದ ನಖಲಿ ಎಂದು ಗೊತ್ತಿದ್ದರೂ ಕೂಡಾ  ನೈಜ ಆರ್.ಟಿ.ಪಿ.ಸಿ ಆರ್ ಎಂದು ನಂಬಿಸಿ  ಕೇರಳ ರಾಜ್ಯದಿಂದ ಕರ್ನಾಟಕ್ಕ ರಾಜ್ಯಕ್ಕೆ ಅಕ್ರಮವಾಗಿ  ಪ್ರವೇಶಿಸಿ  ದೇಶದೆಲ್ಲೆಡೆ ಹರಡಿರುವ  ಕೊರೋನಾ ಎಂಬ ಸಾಂಕ್ರಾಮಿಕ ರೋಗವನ್ನು ಹರಡಲು ಪ್ರಯತ್ನಿಸಿರುತ್ತಾರೆ ಎಂಬಿತ್ಯಾದಿಯಾಗಿ ಪ್ರಕರಣದ ಸಾರಾಂಶ.

2) ದಿನಾಂಕ 25-08-2021 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಚಂದ್ರ ಚಂದ್ರ ಶೇಖರಯ್ಯ  ಪಿ.ಎಸ್.ಐ ಸುರತ್ಕಲ್  ಪೊಲೀಸ್ ಠಾಣೆ ರವರು ಆರೋಪಿ ಮತ್ತು ಸೊತ್ತು ಸಮೇತ ಠಾಣೆಗೆ ಬಂದು ನೀಡಿರುವ ದೂರಿನ ಸಾರಾಂಶವೇನೆಂದರೆ,   ದಿನಾಂಕ 25-08-2021 ರಂದು ಬೆಳಿಗ್ಗೆ 07-00  ಗಂಟೆಯಿಂದ  ಮೇಲಾಧಿಕಾರಿಗಳ  ಆದೇಶದಂತೆ  ಕೋವಿಡ್ ನಿಯಂತ್ರಣ  ಕರ್ತವ್ಯ ಕ್ಕೆ ತಲಪ್ಪಾಡಿ ಚೆಕ್ ಪೋಸ್ಟ್ ನಲ್ಲಿ  ಸಿಬ್ಬಂಧಿಗಳ ಜೊತೆಯಲ್ಲಿ ಕರ್ತವ್ಯಕ್ಕೆ  ನೇಮಿಸಿದಂತೆ  ಕರ್ತವ್ಯದಲ್ಲಿರುವ ಸಮಯ  ಆರೋಗ್ಯ ನಿರೀಕ್ಷಣಾ ಅಧಿಕಾರಿಯವರಾದ   ಪ್ರದೀಪ್  ಕೋಟೆಕ್ಕಾರ್ , ಪ್ರಾಥಮಿಕ ಆರೋಗ್ಯ ಕೇಂದ್ರ ರವರು ಇತರ ಆರೋಗ್ಯ ಇಲಾಖೆಯ ಸಿಬ್ಬಂಧಿಗಳ ಜೊತೆಯಲ್ಲಿ  ಕೇರಳ ರಾಜ್ಯದಿಂದ ಕರ್ನಾಟಕ ರಾಜ್ಯಕ್ಕೆ  ಪ್ರವೇಶಿಸುವ  ಜನರನ್ನು ಹಾಗೂ ವಾಹನಗಳಲ್ಲಿ  ಬರುವ ಜನರನ್ನು  ತಡೆದು  ನಿಲ್ಲಿಸಿ ಅವರಲ್ಲಿರುವ ಕರ್ನಾಟಕ ಪ್ರವೇಶಿಸಲು ಕಡ್ಡಾಯವಾಗಿ  ಬೇಕಾಗಿರುವಂತಹ  ಆರ್.ಟಿ.ಪಿ.ಸಿ.ಆರ್  ಗಳನ್ನು  ಪರಿಶೀಲಿಸುತ್ತಿದ್ದ ಸಮಯ ಬೆಳಿಗ್ಗೆ 11-00 ಗಂಟೆಗೆ   ಕೇರಳದ ಕಡೆಯಿಂದ ಕರ್ನಾಟಕದ ಕಡೆಗೆ ಬಂದ ಕೆ.ಎ-19 ಎಂ.ಹೆಚ್-0636 ಇನ್ನೋವಾ  ಕಾರ್  ಮತ್ತು  ಕೆ.ಎಲ್-60 ಎಸ್-2727  ಸುಝುಕಿ ಕಂಪೆನಿಯ ಮೋಟಾರ್ ಸೈಕಲ್ ವಾಹನಗಳನ್ನು ತಡೆದು ನಿಲ್ಲಿಸಿ ಅವರು  ಕರ್ನಾಟಕ ಪ್ರವೇಶಿಸಲು ಬೇಕಾದಂತಹ ಆರ್.ಟಿ,ಪಿ.ಸಿ.ಆರ್ ಧಾಖಲೆ ಪತ್ರಗಳನ್ನು ವಿಚಾರಿಸಿದಾಗ ಅವರುಗಳ ಮೊಬೈಲ್ ಗಳಲ್ಲಿರುವ ಧಾಖಲೆಗಳನ್ನು ತೋರಿಸಿದ್ದನ್ನು ಪರಿಶೀಲಿಸಿದಲ್ಲಿ ಇವರುಗಳು ಆ.ರ್.ಟಿ.ಪಿ.ಸಿ.ಆರ್ ಗಳಲ್ಲಿ ನಮೂದಿಸಿರುವ ದಿನಾಂಕವನ್ನು ತಿದ್ದಿರುವ ಸಂಶಯ ಬಂದು ಪ್ರದೀಪ್ ರವರು  ವಿಚಾರ ತಿಳಿಸಿದಲ್ಲಿ ಅವರ ಬಳಿಗೆ ಹೋಗಿ  ಪರಿಶೀಲಿಸಲು ಪ್ರಾರಂಭಿಸಿದಾಗ ಆರೋಪಿಗಳು ತಮ್ಮ ತಪ್ಪನ್ನು ನನ್ನಲ್ಲಿ  ಒಪ್ಪಿಕೊಂಡಿರುತ್ತಾರೆ,  ಹಾಗೂ  ಇನ್ನೋವಾ ಕಾರಿನಲ್ಲಿದ್ದ  ಆರೋಪಿಗಳ ಹೆಸರು ವಿಳಾಸ ಕೇಳಿದಲ್ಲಿ   1] ಹಾದೀಲ್ ಪ್ರಾಯ 25ವರ್ಷ,    ವಾಸ: ಕೈದಕ್ಕಾಡ್  ಪೋಸ್ಟ್ , ಚೆರುವತ್ತೂರು ಗ್ರಾಮ ,ಕಾಸರಗೋಡು ತಾಲೂಕು ಮತ್ತು ಜಿಲ್ಲೆ, ಕೇರಳ ರಾಜ್ಯ ,2] ಇಸ್ಮಾಯಿಲ್, ಪ್ರಾಯ 48 ವರ್ಷ, ಕಡಪ್ಪುರ ಪೋಸ್ಟ್, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ,   3] ಶ್ರೀಮತಿ ರಂಶೀದಾ ಪ್ರಾಯ 33 ವರ್ಷ  ವಾಸ: ಕೈದಕ್ಕಾಡ್  ಪೋಸ್ಟ್ , ಚೆರುವತ್ತೂರು ಗ್ರಾಮ ,ಕಾಸರಗೋಡು ತಾಲೂಕು ಮತ್ತು ಜಿಲ್ಲೆ, ಕೇರಳ ರಾಜ್ಯ.   ಎಂಬುದಾಗಿಯೂ  ತಿಳಿಸಿರುತ್ತಾರೆ, ಮೋಟಾರ್ ಸೈಕಲಿನಲ್ಲಿ ಬಂದ ವ್ಯಕ್ತಿಯ ಹೆಸರು ವಿಳಾಸ ಕೇಳಿದಲ್ಲಿ 4] ಹಸೀನ್ ಪ್ರಾಯ 31 ವರ್ಷ ವಾಸ: ವಾಸ: ಕೈದಕ್ಕಾಡ್  ಪೋಸ್ಟ್ , ಚೆರುವತ್ತೂರು ಗ್ರಾಮ ,ಕಾಸರಗೋಡು ತಾಲೂಕು ಮತ್ತು ಜಿಲ್ಲೆ, ಕೇರಳ ರಾಜ್ಯ.  ಎಂಬುದಾಗಿನ ತಿಳಿಸಿದ್ದು ಕೆ.ಎ-19 ಎಂ.ಹೆಚ್-0636 ಇನ್ನೊವಾ ಕಾರಿನಲ್ಲಿ ಬಂದ ಎಲ್ಲರ ಆರ್.ಟಿ ಪಿ.ಸಿ.ಆರ್ ಗಳ ಧಾಖಲೆಗಳನ್ನು ಕೆ.ಎಲ್-60 ಎಸ್-2727  ಸುಝುಕಿ ಕಂಪೆನಿಯ   ಮೋಟಾರ್ ಸೈಕಲಿನಲ್ಲಿ ಬಂದಿರುವ  ಹಸೀನ್ ನು ಆತನ ಮೊಬೈಲಿನಲ್ಲಿ   ತೋರಿಸಿರುತ್ತಾನೆ, ಆದುದರಿಂದ ಇವರುಗಳೆಲ್ಲರೂ ಸಮಾನ ಉದ್ದೇಶದಿಂದ ಆರ್.ಟಿ.ಪಿ.ಸಿ.ಆರ್ ಧಾಖಲೆ ಪತ್ರಗಳನ್ನು ತಾವೇ ತಿದ್ದಿಕೊಂಡು ನಖಲಿಯಾಗಿ ಸೃಷ್ಠಿಸಿ ಕರ್ನಾಟಕ ಸರಕಾರದ ಆದೇಶವನ್ನು  ಉಲ್ಲಂಘಿಸಿ, ಪೊಲೀಸು ಅಧಿಕಾರಿಗಳನ್ನು  ಹಾಗೂ ಆರೋಗ್ಯ  ಇಲಾಖೆ ಯ ಅಧಿಕಾರಿಗಳನ್ನು  ಮೋಸದಿಂದ ನೈಜ ಆರ್.ಟಿ.ಪಿ.ಸಿ ಆರ್ ಎಂದು ನಂಬಿಸಿ  ಕೇರಳ ರಾಜ್ಯದಿಂದ ಕರ್ನಾಟಕ್ಕ ರಾಜ್ಯಕ್ಕೆ ಅಕ್ರಮವಾಗಿ  ಪ್ರವೇಶಿಸಿ  ದೇಶದೆಲ್ಲೆಡೆ ಹರಡಿರುವ  ಕೊರೋನಾ ಎಂಬ ಸಾಂಕ್ರಾಮಿಕ ರೋಗವನ್ನು ಹರಡಲು ಪ್ರಯತ್ನಿಸಿರುತ್ತಾರೆ ಎಂಬಿತ್ಯಾದಿಯಾಗಿ ಪ್ರಕರಣದ ಸಾರಾಂಶ

Crime Reported  in Traffic North PS

ದಿನಾಂಕ: 25-08-2021 ರಂದು ಪಿರ್ಯಾದಿ Litha Chandran ದಾರರ ತಂದೆಯಾದ ಚಂದ್ರ ನಾಯರ್(70 ವರ್ಷ) ರವರು ಎಂದಿನಂತೆ ತನ್ನ ಸೆಕ್ಯುರಿಟಿ ಗಾರ್ಡ್ ಕೆಲಸ ಮುಗಿಸಿಕೊಂಡು ವಾಪಸ್ಸು ಮನೆಗೆ ಕಡೆಗೆ ಬರುತ್ತಾ ರಾತ್ರಿ ಸಮಯ ಸುಮಾರು 08-05 ಗಂಟೆಗೆ ಕುಳಾಯಿಯ ಕಿಂಗ್ಸ್ ಮಾರ್ಬಲ್ ಸಮೀಪ ರಸ್ತೆ ದಾಟುತ್ತಾ ರಸ್ತೆಯ ಇನ್ನೊಂದು ಬದಿಗೆ ತಲುಪುತ್ತಿದ್ದಂತೆ KA-19-F-3140 ನಂಬ್ರದ KSRTC  ಬಸ್ಸನ್ನು ಅದರ ಚಾಲಕನಾದ Suryakant Channappa ಎಂಬಾತನು ಬೈಕಂಪಾಡಿ ಕಡೆಯಿಂದ ಮುಲ್ಕಿ ಕಡೆಗೆ ದುಡುಕುತನದಿಂದ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಂದೆ ಚಂದ್ರನ್ ನಾಯರ್ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ತಲೆಗೆ ಗಂಭೀರ ಸ್ವರೂಪದ ಗಾಯಗೊಂಡು ಚಿಕಿತ್ಸೆಯ ಬಗ್ಗೆ ಖಾಸಗಿ ಅಂಬುಲೆನ್ಸ್ ನಲ್ಲಿ ವೆನ್ಲಾಕ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯ ಚಂದ್ರನ್ ನಾಯರ್ ರವರು ಮೃತಪಟ್ಟಿರುತ್ತಾರೆ. ಎಂಬಿತ್ಯಾದಿ

Crime Reported  in Mangalore North PS

 ಪಿರ್ಯಾದಿ DERIL JOHN LASRADO ದಾರರು ಮಂಗಳೂರು ಕೆಥೋಲಿಕ್ ಬ್ಯಾಂಕ್ ನ ಮುಖ್ಯ ಕಛೇರಿಯಲ್ಲಿ ಪ್ರಬಂಧಕರಾಗಿದ್ದು, ಸದ್ರಿ ಬ್ಯಾಂಕಿನ ಕಂಕನಾಡಿ ಕಛೇರಿಯಲ್ಲಿ 2019 ನೇ ಇಸವಿಯಲ್ಲಿ ಮಹಮ್ಮದ್ ಮುಸ್ತಪಾ ಎಂಬವರು ನಿಸ್ಸಾನ್ ಕಿಕ್ಸ್ ಕಂಪನಿಯ ಕಾರು ಖರೀದಿಸುವ ಬಗ್ಗೆ 13 ಲಕ್ಷ ರೂಪಾಯಿ ವಾಹನ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಸಮಯ ಅಬ್ದುಲ್ ಲತೀಫ್ ಎಂಬವರು ಒಂದನೇ ಜಾಮೀನುದಾರರಾಗಿ ಹಾಗೂ ಶ್ರೀಮತಿ ಜೈನಾಬಿ ಎಂಬವರನ್ನು 2 ನೇ ಜಾಮೀನುದಾರರಾಗಿ ನಮೂದಿಸಿ ಬ್ಯಾಂಕಿನಿಂದ ಸಾಲ ಪಡೆದು ಮೆ|ಒನ್ ಫೀನಿಯೋ ವೆಂಚರ್ಸ್ ಪ್ರೈವೆಟ್ ಲಿಮಿಟೆಡ್ ನ ಸಂಸ್ಥೆಯ ಡೈರೆಕ್ಟರ್ ಅಬ್ದುಲ್ ಅಜೀಜ್ ಮತ್ತು ಇರ್ಫಾನ್ ಖಾದರ್ ರವರಿಂದ ಕಾರು ಖರೀದಿ ಮಾಡಿದ ಬಗ್ಗೆ ಬ್ಯಾಂಕಿಗೆ ಇನ್ ವಾಯ್ಸ್ ನೀಡಿ ಕಾರನ್ನು ಖರೀದಿಸಿದ ಬಗ್ಗೆ ದಾಖಲಾತಿಗಳನ್ನು ನೀಡಿದ್ದು, ಆರೋಪಿ ಸಾಲ ಕಟ್ಟದೇ ಇರುವುದರಿಂದ ಈ ಸಂಸ್ಥೆಯನ್ನು ಸಂಪರ್ಕಿಸಿದಾಗ ಸದ್ರಿ ಸಂಸ್ಥೆಯು 2020 ನೇ ಇಸವಿ ಎಪ್ರಿಲ್ ನಲ್ಲಿ ಕಾರು ವಿತರಕ ಸಂಸ್ಥೆ ಬಂದ್ ಆಗಿದ್ದು, ಇವರಿಗೆ ಆರೋಪಿ ಮಹಮ್ಮದ್ ಇಕ್ಬಾಲ್ ಮತ್ತು ಆದಾಂ ಎಂಬವರು ಸಾಲ ಪಡೆಯಲು ಸಹಕರಿಸಿ ಇವರುಗಳು ಬ್ಯಾಂಕಿನಿಂದ ಕಾರು ಖರೀದಿಸಲು ಪಡೆದ ಸಾಲದ ಕಂತನ್ನು ಸರಿಯಾಗಿ ಪಾವತಿ ಮಾಡದೇ ಇದ್ದಾಗ 1 ನೇ ಆರೋಪಿಯು ಬ್ಯಾಂಕಿಗೆ ನೀಡಿರುವ ದಾಖಲಾತಿಗಳಾದ ಟ್ಯಾಕ್ಸ್ ಇನ್ ವಾಯ್ಸ್, ಸ್ವೀಕೃತಿ ರಶೀದಿ ಮುಂಗಡ ಪಾವತಿ ರಶೀದಿಗಳನ್ನು ಪಿರ್ಯಾದಿದಾರರು ಪರಿಶೀಲಿಸಿದ್ದಲ್ಲಿ ಈ ದಾಖಲಾತಿಗಳು ನಕಲಿ ದಾಖಲೆಯಾಗಿ ಕಂಡುಬಂದಿದ್ದು, ಆರೋಪಿಗಳೆಲ್ಲರೂ ಸೇರಿ ಬ್ಯಾಂಕಿಗೆ ಮೋಸ ಮಾಡುವ ಉದ್ದೇಶದಿಂದ ಈ ಎಲ್ಲಾ ದಾಖಲಾತಿಗಳನ್ನು ನಕಲಿಯಾಗಿ ತಯಾರಿಸಿ ಬ್ಯಾಂಕಿಗೆ ಮೋಸ ಮಾಡುವ ಉದ್ದೇಶದಿಂದ ಬ್ಯಾಂಕಿಗೆ ಹಾಜರುಪಡಿಸಿ ಸಾಲ ಪಡೆದು ಸಾಲದ ಕಂತನ್ನು ಕಟ್ಟದೇ ಬ್ಯಾಂಕಿಗೆ ಮೋಸ ಮಾಡಿರುವುದಾಗಿದೆ

Last Updated: 26-08-2021 08:28 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080