ಅಭಿಪ್ರಾಯ / ಸಲಹೆಗಳು

Crime Reported in Mangalore South PS

ಪಿರ್ಯಾದುದಾರರು  ಅಲ್ ಕೌಸರ್ ಎಂಬ ಬೋಟಿನಲ್ಲಿ ಸುಮಾರು 04 ತಿಂಗಳಿನಿಂದ  ಮೀನು ಹಿಡಿಯುವ ಕೆಲಸ ನಿರ್ವಹಿಸಿಕೊಂಡಿದ್ದು, ಪಿರ್ಯಾದುದಾರರ ಅಳಿಯನಾದ   ವೆಲ್ ಮುರುಗನ್  ಪ್ರಾಯ 24 ಇವರು ಮಂಗಳೂರಿಗೆ ಬಂದು ಮಂಗಳೂರು ದಕ್ಕೆಯ  ಅಲ್ ಕೌಸರ್ ಎಂಬ ಬೋಟಿನಲ್ಲಿ ಸುಮಾರು 04 ತಿಂಗಳಿನಿಂದ ಮೀನು ಹಿಡಿಯುವ  ಕೆಲಸ ಮಾಡಿಕೊಂಡಿದ್ದು  ದಿನಾಂಕ 24-10-2021 ರಂದು ರಾತ್ರಿ ಸುಮಾರು 10.30 ಗಂಟೆಗೆ  ಒಟ್ಟು 10 ಜನ ಬೋಟಿನಲ್ಲಿ ವೆಲ್ ಮುರುಗನ್ ನೊಂದಿಗೆ ಮೀನು ಹಿಡಿಯಲು ತೆರಳಿದ್ದು , ಸಮಯ ಸುಮಾರು ರಾತ್ರಿ 11.15 ಕ್ಕೆ ಬೋಟಿನಲ್ಲಿ ವೆಲ್ ಮುರುಗನ್ ಕಾಣೆಯಾಗಿದ್ದು ಸಮುದ್ರದಲ್ಲಿ ಟಾರ್ಚ್ ಹಾಕಿ ಸುತ್ತಮುತ್ತ ಪರಿಸರದಲ್ಲಿ ಹುಡುಕಾಡಿದರೂ ಪತ್ತೆಯಾಗಲಿಲ್ಲ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪತ್ತೆಗೆ ಪ್ರಯತ್ನಿಸಿದರೂ ಇದುವರೆಗೆ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಆವರನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ.

ಕಾಣೆಯಾದವರ ಚಹರೇ; ಹೆಸರು – ವೆಲ್ ಮುರುಗನ್  ಪ್ರಾಯ 24, ಎತ್ತರ-5 ಅಡಿ 3 ಇಂಚು, ಕೂದಲು- ಕಪ್ಪು ಕೂದಲು,ಮೈ ಬಣ್ಣ-  ಎಣ್ಣೆಗೆಂಪು ಮೈ ಬಣ್ಣ, ಸಪೋರ  ಶರೀರ,  ಕಂದು ಬಣ್ಣದ ಟೀ ಶರ್ಟ್ , ನೀಲಿ ಬಣ್ಣದ ಬರ್ಮುಡ ಧರಿಸಿರುತ್ತಾರೆ.. ಮಾತನಾಡುವ ಭಾಷೆ- ತಮಿಳು

Crime Reported in  Moodabidre PS

 ಪಿರ್ಯಾದಿ Vivek Vallabh ದಾರರು ಎಸ್, ಕೆ, ಎಫ್, ಬಾಯ್ಲರ್ಸ ಮತ್ತು ಡ್ರೈಯರ್ಸ ಲಿಮಿಡೆಟ್ ನಲ್ಲಿ ಹೆಚ್ ಆರ್ ಮ್ಯಾನೇಜರ್ ಆಗಿ  ಕೆಲಸವನ್ನು ನಿರ್ವಹಿಸಿಕೊಂಡಿರುತ್ತಾರೆ. ಪಿರ್ಯಾದಿದಾರರು ದಿನಾಂಕ: 12-08-2021 ರಂದು ಬೆಳಗ್ಗೆ 10.30 ಗಂಟೆಯ ಸಮಯಕ್ಕೆ ಎಸ್, ಕೆ, ಎಫ್, ಬಾಯ್ಲರ್ಸ ಮತ್ತು ಡ್ರೈಯರ್ಸ ಕಂಪನಿಯಲ್ಲಿರವಾಗ ಆರೋಪಿ ರವಿ ಮೂಲ್ಯ ಹಾಗೂ ಅವರ ಸಹಚರರಾದ ಸೂರಜ್ ಜೈನ್, ನಿತಿನ್ ಕೋಟ್ಯಾನ್ ಎಂಬವರು ಪಿರ್ಯಾದಿದಾರರ ಕಚೇರಿಗೆ ಅಕ್ರಮ ಕೂಟ ಕಟ್ಟಿಕೊಂಡು ಏಕಾಏಕಿಯಾಗಿ ಪಿರ್ಯಾದಿದಾರರ ಕಚೇರಿಗೆ ನುಗ್ಗಿ ಪಿರ್ಯಾದಿದಾರರನ್ನು ಉದ್ದೇಶಿಸಿ  “ನಾವು ಹೇಳಿದ ರೀತಿಯಲ್ಲಿ ನೀವು ನಡೆದುಕೊಳ್ಳದಿದ್ದರೇ ಹಾಗೂ ನಮ್ಮ ಬೇಡಿಕೆಗಳನ್ನು ಪೂರೈಸದೇ ಇದ್ದಲ್ಲಿ ಪಿರ್ಯಾದಿದಾರರನ್ನು ಮತ್ತು ಸಂಬಂಧಪಟ್ಟ ಮಾನ್ಯೇಜಿಂಗ್ ಡೈರೆಕ್ಟರ್ ನ್ನು ಮತ್ತು ಸಿಇಒ ರನ್ನು ಬಿಡುವುದಿಲ್ಲ ಎಂದು  ಬೆದರಿಕೆ ಹಾಕಿದ್ದು, ಅಲ್ಲದೇ ನಮ್ಮ ಮಾತನ್ನು ಕೇಳದೇ ಇದ್ದರೆ ಕಂಪನಿ ಮತ್ತು ಕಂಪನಿಗೆ ಸಂಬಂಧಪಟ್ಟ ಎಲ್ಲಾ ವಸ್ತುಗಳನ್ನು ನಾಶ ಮಾಡುತ್ತೇವೆ. ಎಂದು ಮೂರು ಮಂದಿ ಆರೋಪಿಗಳು ತುಳು ಭಾಷೆಯಲ್ಲಿ ಬೆದರಿಕೆ ಹಾಕಿರುತ್ತಾರೆ. ಈ ಘಟನೆಗೆ ಈ ಹಿಂದೆ ಇದೇ ಕಂಪನಿಗೆ ಅಗತ್ಯ ಬಿದ್ದ ಸಂದರ್ಭದಲ್ಲಿ ಕೂಲಿಯಾಳುಗಳನ್ನು ಒದಗಿಸುತ್ತಿದ್ದ, ರವಿ ಮೂಲ್ಯರವರು ಕಂಪನಿಯ ವಿರುದ್ದ ಇತರ ಕೆಲಸದಾಳುಗಳಿಗೆ ಇಲ್ಲಸಲ್ಲದ ಮಾತುಗಳನ್ನು ಹೇಳಿ ಕಂಪನಿಯ ವಿರುದ್ದ ದಂಗೇ ಎಬ್ಬಿಸುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದರಿಂದ, ಮಾನ್ಯೇಜಿಂಗ್ ಡೈರೆಕ್ಟರ್ ರವರು ಜುಲೈ 31 ರ ನಂತರ ಅವರಿಗೆ ಯಾವುದೇ ಕೆಲಸವನ್ನು ಕೊಟ್ಟಿರುವುದಿಲ್ಲ ಇದರಿಂದ ಕೋಪಗೊಂಡು ಈ ಕೃತ್ಯ ವೆಸಗಿರುವುದಾಗಿದೆ.

 

Crime Reported in  Barke PS

ದಿನಾಂಕ: 25-10-2021 ರಂದು ಪೊಲೀಸ್ ಉಪ-ನಿರೀಕ್ಷಕರಾದ Harun Aquther ರವರು ಸಿಬ್ಬಂದಿಗಳೊಂದಿಗೆ  ಮಂಗಳೂರು ನಗರದ  ಸಾಯಿಬೀನ್  ಕಾಂಪ್ಲೇಕ್ಸ್ ನಲ್ಲಿ ಸಂಜೆ ಸಮಯ ಸುಮಾರು  16-15   ಗಂಟೆಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಂಗಳೂರು ನಗರದ ಸಾಯಿಬಿನ್ ಕಾಂಪ್ಲೆಕ್ಸ್ ನಲ್ಲಿ ಪ್ರಥಮೇಶ  ಎಂ  ದೇವಾಡಿಗ ಪ್ರಾಯ-20 ವರ್ಷ  ,ಹೊಗೆಬೈಲ್ 1 ನೇ ಕ್ರಾಸ್ ,ದೈವಜ್ಞ ಕಲ್ಯಾಣ ಮಂಟಪದ ಹತ್ತಿರ ಉರ್ವ ಮಂಗಳೂರು, ಎಂಬಾತನು ಸಂಶಯಾಸ್ಪದವಾಗಿ ಸಿಗರೇಟು ಸೇದುತ್ತಿದ್ದು ನೋಡಿ ವಿಚಾರಿಸಲಾಗಿ  ಮಾದಕ ದ್ರವ್ಯ ಸೇವನೆ ಮಾಡಿಕೊಂಡಿರುವಂತೆ ಕಂಡುಬಂದಿದ್ದು, ಪ್ರಥಮೇಶ  ಎಂಬಾತನನ್ನು ವಶಕ್ಕೆ ಪಡೆದು ಮಾದಕ ದ್ರವ್ಯ ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ತಪಾಸಣೆಗೆ ಮಂಗಳೂರು ನಗರ ಕೆ.ಎಸ್ ಹೆಗಡೆ  ದೇರಳಕಟ್ಟೆ  ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ವೈದ್ಯರು ಇವರ ವೈದ್ಯಕೀಯ ತಪಾಸಣೆ ನಡೆಸಿ ಪರೀಕ್ಷಿಸಿದಲ್ಲಿ ಆಪಾದಿತರು ಗಾಂಜಾ ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿರುವುದರಿಂದ ಆಪಾದಿತನ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದು  ಎಂಬಿತ್ಯಾದಿಯಾಗಿರುತ್ತದೆ.

Crime Reported in  Mangalore East Traffic PS          

ದಿನಾಂಕ 22-10-2021 ರಂದು ಬೆಳಿಗ್ಗೆ ಫಿರ್ಯಾದಿ CHANDRAHAS KOTEKARಧಾರರು ತನ್ನ ಪತ್ನಿಯ ಬಾಬ್ತು  ಕೆಎ-19-ER-0381 ನಂಬ್ರದ ಟಿ.ವಿ.ಎಸ್ ಜುಪಿಟರ್  ಸ್ಕೂಟರ್ ನಲ್ಲಿ ತನ್ನ  ಮಾವ ಉಮಾನಾಥ್ ಬಿ ರವರೊಂದಿಗೆ ಹಿಂಬದಿ ಸಹಸವಾರನಾಗಿ ಕುಳಿತುಕೊಂಡು ಬಿಜೈ ಮಾರ್ಕೇಟ್ ಗೆ ತೆರಳಿ ವಾಪಾಸು ಮನೆಯ ಕಡೆಗೆ ಹೋಗಲು  ಬೆಳಿಗ್ಗೆ ಸಮಯ ಸುಮಾರು 10:45 ಗಂಟೆಗೆ ಬಿಜೈ ಕಡೆಯಿಂದ ಬಟ್ಟಗುಡ್ಡ ಜಂಕ್ಷನ್ ಗೆ ಬಂದು ಕದ್ರಿ ಕಂಬಳ ಸಾರ್ವಜನಿಕ ಕಾಂಕ್ರೀಟು ರಸ್ತೆಯಲ್ಲಿ  ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ ಸ್ಕೂಟರನ್ನು ಚಲಾಯಿಸಿಕೊಂಡಿದ್ದ ಉಮಾನಾಥ ಬಿ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಒಮ್ಮೆಲೆ ಬ್ರೇಕ್ ಹಿಡಿದ ಪರಿಣಾಮ ಸ್ಕೂಟರ್ ಹತೋಟಿ ತಪ್ಪಿ ಎಡ ಭಾಗಕ್ಕೆ ಕಾಂಕ್ರೀಟು ರಸ್ತೆಗೆ ಬಿದ್ದು ಪಿರ್ಯಾದಿದಾರರ ಸೊಂಟದ ಎಡಭಾಗಕ್ಕೆ ಗುದ್ದಿದ ಗಾಯವಾಗಿ ಚಿಕಿತ್ಸೆ ಬಗ್ಗೆ ತೇಜಸ್ವಿನಿ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿಕೊಂಡಲ್ಲಿ ಸೊಂಟದ ಎಡಭಾಗಕ್ಕೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿರುವುದು ತಿಳಿದು ಬಂದಿರುತ್ತದೆ. ಫಿರ್ಯಾದಿದಾರರು ಸದ್ರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 26-10-2021 07:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080