ಅಭಿಪ್ರಾಯ / ಸಲಹೆಗಳು

Crime Reported in Mangalore Rural PS

ದಿನಾಂಕ 26-03-2022 ರಂದು ಸಂಜೆ 17:35 ಗಂಟೆ ಸುಮಾರಿಗೆ ನನ್ನ ಸ್ಕೂಟರ್ ಆದ KA-19-EX-2009 ಸುಜುಕಿ ಆಕ್ಸಿಸ್ ಸ್ಕೂಟರನ್ನುಪಿರ್ಯಾದಿ  Swastik  ರವರು ಹೋಟೆಲ್ ಹೊರಗಡೆ  ಕೆಲರೈ ಕ್ರಾಸ್ ಬಳಿ ಊರ್ದ ಕ್ಯಾಂಟಿನ್ ಎದುರುಗಡೆ ನಿಲ್ಲಿಸಿ ಒಳಗಡೆ ಹೋಗಿ ಎರಡು ನಿಮಿಷ ಬಿಟ್ಟು ಮರಳಿ ಬಂದು ನೋಡಿದಾಗ ನನ್ನ ಸುಜುಕಿ ಆಕ್ಸಿಸ್ ಸ್ಕೂಟರ್ ಕಾಣೆಯಾಗಿದ್ದು ಅದನ್ನು  ಯಾರೋ ಕಳವು ಮಾಡಿಕೊಂಡು ಹೋಗಿದ್ದು ಅದರ ಪತ್ತೆ ಗಾಗಿ ಪಿರ್ಯಾದಿ ಅವರ  ಮಾವನಾದ ಉದಯ ಮತ್ತು ಅರುಣ್ ರವರೊಂದಿಗೆ ನೀರುಮಾರ್ಗ,ಕೆಲರೈ ಕ್ರಾಸ್ ಕಡೆಗಳಲ್ಲಿ ಹುಡುಕಾಡಿದರೂ ಸ್ಕೂಟರ್ ಸಿಕ್ಕಿರುವುದಿಲ್ಲ ಆದುದರಿಂದ ಕಾಣೆಯಾದ ಸ್ಕೂಟರ್ ನ್ನು ಪತ್ತೆ ಮಾಡಿ ಕೊಡಬೇಕಾಗಿ  ಎಂಬಿತ್ಯಾದಿ ಈ ಪ್ರಕರಣದ ಸಾರಾಂಶ

 

Crime Reported in Traffic North PS

ದಿನಾಂಕ:26-03-2022 ರಂದು ಪಿರ್ಯಾದಿ ಅಪ್ಪು ಮ್ಯಾಥ್ಯೂ ರವರು ಲಾಲ್ ಕೃಷ್ಣ ರವರ ಗೆಳಯನ ಬಾಬ್ತು KL-60-H-249  ನಂಬ್ರದ ಮೋಟಾರ್ ಸೈಕಲಿನಲ್ಲಿ ಲಾಲ್ ಕೃಷ್ಣರವರು ಸವಾರರಾಗಿ ಅಪ್ಪು ಮ್ಯಾಥ್ಯೂ ರವರು ಸಹ ಸವಾರರಾಗಿ ಕುಳಿತುಕೊಂಡು, ಆಕರ್ಶ್ ನು ಅವನ ಬಾಬ್ತು KA-28-EA-0918 ನಂಬ್ರದ ಮೋಟಾರ್ ಸೈಕಲ್ ಸವಾರರಾಗಿ ಟೋನಿ ಥಾಮಸ್ ರವರನ್ನು ಸಹ ಸವಾರರನ್ನಾಗಿ ಕುಳ್ಳಿಸಿರಿಸಿಕೊಂಡು ಆಕರ್ಶ್ ಹಾಗೂ ಟೋನಿ ಥಾಮಸ್ ಮುಂದಿನಿಂದ ಲಾಲ್ ಕೃಷ್ಣ ಮತ್ತು ಅಪ್ಪು ಮ್ಯಾಥ್ಯೂ ರವರು ಹಿಂದುಗಡೆಯಿಂದ ಸುರತ್ಕಲ್ ಬೀಚ್ ನಿಂದ ಮಂಗಳೂರು ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ NH 66 ರ ಕುದುರೆಮುಖ ಜಂಕ್ಷನ್ ತಲುಪಿ ಮುಂದಕ್ಕೆ ಹೋಗುತ್ತಾ ಬೆಳಗಿನ ಜಾವ ಸಮಯ ಸುಮಾರು 03:00 ಗಂಟೆಗೆ ಆಕರ್ಶ್ ನು ಆತನ ಬಾಬ್ತು KA-28-EA-0918 ನಂಬ್ರದ ಮೋಟಾರ್ ಸೈಕಲನ್ನು ಕೂಳೂರು ಸೇತುವೆ ಬಳಿ ಹಂಪ್ಸ್ ನಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡುತ್ತಾ ಮೋಟಾರ್ ಸೈಕಲಿನ ಹತೋಟಿ ತಪ್ಪಿ ರಸ್ತೆಯ ಬಲಬದಿಯ ಸೇತುವೆಯ ಸಿಮೆಂಟ್ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಟೋನಿ ಥಾಮಸ್ ರಸ್ತೆಗೆ ಬಿದ್ದು, ತಡೆಗೋಡೆಗೆ ತಾಗಿ ತಲೆಗೆ ತೀವ್ರ ತರಹದ ರಕ್ತ ಗಾಯ, ದೇಹದ ಅಲ್ಲಲ್ಲಿ ಗುದ್ದಿದ ಹಾಗೂ ತರಚಿದ ಗಾಯವಾಗಿದ್ದು, ಮೋಟಾರ್ ಸೈಕಲ್ ಸವಾರ ಆಕರ್ಶ್ ನು ಮೋಟಾರ್ ಸೈಕಲ್ ಸಮೇತ ಸೇತುವೆಯ ಕೆಳಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಪಿಲ್ಲರ್ ಬಳಿ ಬಿದ್ದಿದ್ದು, ಅದೇ ಸಮಯಕ್ಕೆ ಪಿರ್ಯಾದಿದಾರರು ಸಹ ಸವಾರರಾಗಿ ಬರುತ್ತಿದ್ದ ಮೋಟಾರ್ ಸೈಕಲ್  ನಂಬ್ರ KL-60-H-249  ನೇಯದ್ದನ್ನು ಅದರ ಸವಾರ ಲಾಲ್ ಕೃಷ್ಣ ಎಂಬವರು ದುಡುಕುನತ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡಿ ಒಮ್ಮಲೇ ಬ್ರೇಕ್ ಹಾಕಿದ ಪರಿಣಾಮ ಮೋಟಾರ್ ಸೈಕಲ್ ಸಮೇತ ಸವಾರರಿಬ್ಬರು ರಸ್ತೆಗೆ ಬಿದ್ದು ಪಿರ್ಯಾದಿದಾರ ಎರಡು ಕೈಯ ಮೊಣಗಂಟಿಗೆ, ಎರಡು ಕಾಲುಗಳ ಮೊಣಗಂಟಿಗೆ ತರಚಿದ ಗಾಯ, ಮೋಟಾರ್ ಸೈಕಲ್ ಸವಾರ ಲಾಲ್ ಕೃಷ್ಣರವರ ಬಲ ಕೋಲು ಕೈ ಹಾಗೂ ಎಡ ಮೊಣಗಂಟಿಗೆ,ಎಡ ಪಕ್ಕೆಗೆ, ಎರಡು ಕಾಲಿನ ಮೊಣಗಂಟಿಗೆ ತರಚಿದ ಗಾಯವಾಗಿದ್ದು ಆಪಾದಿತ ಮೋಟಾರ್ ಸೈಕಲ್ ಸವಾರ ಆಕರ್ಶ್ ನ ಎದೆಯ ಬಲಭಾಗಕ್ಕೆ ಗುದ್ದಿದ ನೋವು, ಬಲ ಹಾಗೂ ಎಡ ಕೈ ಮೊಣಗಂಟಿಗೆ ತರಚಿದ ಗಾಯ ಹಾಗೂ ಎರಡು ಕಾಲಿನ ಮೊಣಗಂಟಿಗೆ ತರಚಿದ ಗಾಯ, ಬಲಕಾಲಿನ ಪಾದಕ್ಕೆ ರಕ್ತ ಗಾಯವಾಗಿದ್ದು, ಮೇಲ್ಕಾಣಿಸಿದ ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರ ತರಹದ ಗಾಯಗೊಂಡಿದ್ದ ಟೋನಿ ಥಾಮಸ್ ನು ಚಿಕಿತ್ಸೆ ಫಲಕಾರಿಯಾಗದೇ ಬೆಳಗಿನ ಜಾವ ಸಮಯ 03-31 ಗಂಟೆಗೆ ಮೃತಪಟ್ಟಿರುವುದಾಗಿದೆ.

Crime Reported in Mangalore South PS

ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪಿ.ಎಸ್.ಐ  ಶೀತಲ್ ಅಲಗೂರು  ರವರು ದಿನಾಂಕ : 26-03-2022 ರಂದು 15-45 ಗಂಟೆಯ ಸುಮಾರಿಗೆ ಠಾಣೆಯಲ್ಲಿರುವ ಸಮಯ ಠಾಣಾ ವ್ಯಾಪ್ತಿಯ ಮಂಗಳೂರು ನಗರದ ವೆಲೆನ್ಸಿಯಾ, ಗೋರಿಗುಡ್ಡೆಯ ಸ್ಮಶಾನದ ಬಳಿಯ ರಸ್ತೆಯ ಬದಿಯಲ್ಲಿ ಫರಂಗಿಪೇಟೆಯ ಮೊಹಮ್ಮದ್‌ ಯುಸೂಫ್‌ ಸಬಿತ್‌  ಹಾಗೂ  ಫರಂಗಿಪೇಟೆಯ ಸೈಯ್ಯದ್‌ ಅಫ್ರೀದ್‌  ಎಂಬವರು ದ್ವಿಚಕ್ರ ವಾಹನದೊಂದಿಗೆ ಮಾದಕ ವಸ್ತುವಾದ  ಎಮ್.ಡಿ.ಎಮ್.ಎ  ಅನ್ನು ಅಮಾಯಕರಿಗೆ ಮಾರಾಟ ಮಾಡುವ ಉದ್ದೇಶದಿಂದ ತಮ್ಮ ಬಳಿ ಇಟ್ಟುಕೊಂಡು  ಗ್ರಾಹಕರಿಗಾಗಿ ಕಾಯುತ್ತಿರುವುದಾಗಿ ಖಚಿತ ಬಂದಂತೆ,  ಮಾದಕ ವಸ್ತುವಾದ             ಎಮ್.ಡಿ.ಎಮ್.ಎ  ಅನ್ನು ಅಮಾಯಕರಿಗೆ ಮಾರಾಟ ಮಾಡುವ ಉದ್ದೇಶದಿಂದ ತಮ್ಮ ಬಳಿ ಇಟ್ಟುಕೊಂಡಿರುವ ಆರೋಪಿಗಳಾದ ಮೊಹಮ್ಮದ್ ಯುಸೂಫ್ ಸಬಿತ್ ಹಾಗೂ ಸೈಯ್ಯದ್ ಅಫ್ರೀದ್ ರವರ ವಿರುದ್ದ ಕಲಂ ಎನ್.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

Crime Reported in Traffic South PS

1)  ದಿನಾಂಕ: 26-03-2022 ರಂದು ಪಿರ್ಯಾದಿ MELWIN D SOUZA ದಾರರು ತೊಕ್ಕೊಟ್ಟು ಚರ್ಚ್ ಗೆ ಪೂಜೆಗೆ ಹೋಗಿ ವಾಪಾಸು ಮನೆಯ ಕಡೆಗೆ ಮೋಟಾರ್ ಸೈಕಲ್ ನ್ನು  ಸವಾರಿ ಮಾಡಿಕೊಂಡು ಹೋಗುತ್ತಿರುವ  ಸಮಯ ಸುಮಾರು ಬೆಳಿಗ್ಗೆ 07-15 ಗಂಟೆಗೆ ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಕಾಫಿಕಾಡ್ 2 ನೇ ಅಡ್ಡ ರಸ್ತೆ ಹತ್ತಿರ ರಾ.ಹೆ – 66 ರ ಏಕಮುಖ ಡಾಮಾರು ರಸ್ತೆ ತಲುಪುವಾಗ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ನ ಸುಮಾರು 80 ಅಡಿ ದೂರ ಮುಂದಿನಿಂದ ಸ್ಕೂಟರ್ ನೊಂದಣಿ ಸಂಖ್ಯೆ: KA-19-HA-6604 ನೇದನ್ನು ಕ್ಲೇವಿ ಡಿ ಸೋಜಾ ಎಂಬವರು ಸವಾರಳಾಗಿ  ಮತ್ತು ಎಮಿಲ್ಡಾ ಡಿ ಸೋಜಾರವರನ್ನು ಸಹ ಸವಾರಳನ್ನಾಗಿ  ಕುಳ್ಳಿರಿಸಿಕೊಂಡು ಮಂಗಳೂರು ಕಡೆಯಿಂದ  ಕಾಪಿಕಾಡ್  ಕಡೆಗೆ ಸವಾರಿ ಮಾಡಕೊಂಡು ಹೋಗುತ್ತಿರುವಾಗ ಅವರ ಹಿಂದಿನಿಂದ ಅಂದರೆ ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಹೋಗುತ್ತಿದ್ದ ಅಪರಿಚಿತ ಕಾರೊಂದರ ಚಾಲಕನು ಕಾರನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ  ಪಿರ್ಯಾದಿದಾರರ ಮುಂದಿನಿಂದ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರ್ ನ ಹಿಂಬದಿಗೆ ಡಿಕ್ಕಿ ಪಡಿಸಿ ನಂತರ ಅಪಘಾತ ಸ್ಥಳದಿಂದ  ಕಾರನ್ನು ನಿಲ್ಲಿಸದೇ ತಲಪಾಡಿ ಕಡೆಗೆ ಪರಾರಿಯಾಗಿರುತ್ತಾನೆ. ಈ ಅಪಘಾತದಿಂದ ಸ್ಕೂಟರ್ ಸವಾರಿ ಮಾಡುತ್ತಿದ್ದ ಸವಾರಳು ಹಾಗೂ ಸಹ ಸವಾರಳು ವಾಹನ ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಸ್ಕೂಟರ್ ಸವಾರಳಿಗೆ ಬಲಕಣ್ಣಿಗೆ, ಎಡ ಭುಜಕ್ಕೆ, ಎರಡೂ ಕಾಲುಗಳಿಗೆ ಹಾಗೂ ಎಡ ಕೈಗೆ ತರಚಿದ ಹಾಗೂ ಗಂಭೀರ ಸ್ವರೂಪದ ರಕ್ತಗಾಯಗಳಾಗಿದ್ದು ಹಾಗೂ ಸ್ಕೂಟರ್ ನ ಸಹ ಸವಾರಳಿಗೆ ತಲೆಗೆ ಗಂಭೀರ ಸ್ವರೂಪದ ರಕ್ತಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಕೂಡಲೇ ಪಿರ್ಯಾದಿದಾರರು  ಹಾಗೂ ಸಾರ್ವಜನಿಕರು ಗಾಯಾಳುಗಳನ್ನು ಆಟೋರಿಕ್ಷಾವೊಂದರಲ್ಲಿ ಚಿಕಿತ್ಸೆ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ಸ್ಕೂಟರ್ ಸಹ ಸವಾರಳಾದ ಶ್ರೀಮತಿ ಎಮಿಲ್ಡಾ ಡಿಸೋಜಾ ರವರನ್ನು ಪರೀಕ್ಷಿಸಿ ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ ಎಂಬಿತ್ಯಾದಿ.

 

2) ದಿನಾಂಕ 26-03-2022 ರಂದು ಪಿರ್ಯಾದಿದಾರಳಾದ ಶರ್ಮಿಳಾ   ಬಾರ್ಬೋಸ್  ರವರು ತಮ್ಮ ಸ್ಕೂಟರ್ ನಂಬ್ರ MH-14-EV-2399 ನೇದರಲ್ಲಿ ಸವಾರಳಾಗಿ ಹಾಗೂ ಅವರ ಮಗಳಾದ ಜಿಯಿನಾ ಬಾರ್ಬೋಸ್ ರವರನ್ನು ಸಹ ಸವಾರಳನ್ನಾಗಿ ಕುಳ್ಳಿರಿಸಿಕೊಂಡು ಕೆಲಸದ ನಿಮಿತ್ತ ಕೊಣಾಜೆ ಕಡೆಗೆ ಹೋಗಿ ಅಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ಸು ಕೊಣಾಜೆ  ಕಡೆಯಿಂದ ಬರ್ವ ಮಾರ್ಗವಾಗಿ ಕರೇಕಳ  ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 4-25 ಘಂಟೆಗೆ ಬರ್ವ ತಿರುವು ರಸ್ತೆ ಸ್ವಲ್ಪ ಮುಂದೆ  ತಲುಪಿದಾಗ ಪಿರ್ಯಾದಿದಾರರ ಎದುರಿನಿಂದ ಅಂದರೆ ಬರ್ವ ಕಡೆಯಿಂದ ಕೊಣಾಜೆ ಕಡೆಗೆ ಹೋಗುತ್ತಿದ್ದ ಕಾರು ನಂಬ್ರ KA-19-MF-9666  ನೇದನ್ನು ಅದರ ಚಾಲಕ ಸಲ್ಮಾನ್ ಎಂಭಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು ಸಹ ಸವಾರಳು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಬಲಕಾಲಿನ ತೊಡೆಗೆ ಮೂಳೆ ಮುರಿತದ ಗಾಯವಾಗಿದ್ದು, ಸಹ ಸವಾರಳಿಗೆ ಯಾವುದೇ ಗಾಯವಾಗಿರುವುದಿಲ್ಲ. ಕೂಡಲೇ ಅಲ್ಲಿ ಸೇರಿದ ಸಾರ್ವಜನಿಕರು  ಮತ್ತು ಡಿಕ್ಕಿ ಪಡಿಸಿದ ಕಾರಿನ ಚಾಲಕ ಸಲ್ಮಾನ್  ಸೇರಿ ಚಿಕಿತ್ಸೆ ಬಗ್ಗೆ ಕಣಚೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು,  ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಹೋಗಿ ದಾಖಲಿಸಿರುತ್ತಾರೆ. ಎಂಬಿತ್ಯಾದಿ .

 

Crime Reported in Surathkal PS

1) ಫಿರ್ಯಾದಿ HANUMANTHA ದಾರರು ಹಾಗೂ ಅವರ ಪತ್ನಿ ಪ್ರಾಯ ಸುಮಾರು 35 ವರ್ಷದ ಶ್ರೀಮತಿ ಭಾರತಿ ಮಾದರ ಇವರು ಕೊಪ್ಪಳ ವಾಸಿಗಳಾಗಿದ್ದು, ಪ್ರಸ್ತುತ ಕಾಟಿಪಳ್ಳ ಗ್ರಾಮದ ಗಣೇಶಪುರದಲ್ಲಿ ಬಾಡಿಗೆ ಮನೆಯಲ್ಲಿ 11 ವರ್ಷದ ಮಗಳು ಮತ್ತು 9 ವರ್ಷದ ಮಗನೊಂದಿಗೆ  ವಾಸವಾಗಿ, ಕೂಲಿ ಕೆಲಸ ಮಾಡಿಕೊಂಡಿದ್ದಾಗಿದೆ. ದಿನಾಂಕ 21-03-2022 ರಂದು ರಾತ್ರಿ ಸುಮಾರು 7.30 ಗಂಟೆಯಿಂದ ರಾತ್ರಿ 9.00 ಗಂಟೆಯ ಮಧ್ಯೆ ಫಿರ್ಯಾದಿದಾರರು ಮಲಗಿದ ಸಮಯ ಮನೆಯಲ್ಲಿದ್ದ ಫಿರ್ಯಾದಿದಾರರ ಪತ್ನಿ ಶ್ರೀಮತಿ ಭಾರತಿ ಮಾದರ ರವರು ಮಕ್ಕಳೊಂದಿಗೆ ಮನೆ ಮುಂಭಾಗಿಲಿನ ಚಿಲಕವನ್ನು ಹೊರಗಿನಿಂದ ಹಾಕಿ ಹೊರಗಡೆ ಹೋದವರು ವಾಪಾಸು ಮನೆಗೆ ಬಾರದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಹುಡುಕಾಡಿ ಸಂಬಂಧಿಕರಲ್ಲಿ ವಿಚಾರಿಸಿ ಪತ್ತೆಯಾಗದೇ ಇದ್ದು ಕಾಣೆಯಾದ ಪತ್ನಿ ಶ್ರೀಮತಿ ಭಾರತಿ ಮಾದರ ಮತ್ತು ಮಕ್ಕಳನ್ನು  ಪತ್ತೆ ಮಾಡುವರೇ ಎಂಬಿತ್ಯಾದಿಯಾಗಿರುತ್ತದೆ

 

2) ಫಿರ್ಯಾದಿ SHIVAPRASAD SHETTY ದಾರರ ತಂದೆ ಪ್ರಾಯ ಸುಮಾರು 72 ವರ್ಷದ ವಸಂತ ಶೆಟ್ಟಿ ರವರು ಒಬ್ಬಂಟಿಯಾಗಿ ಕಾಟಿಪಳ್ಳ ಗ್ರಾಮದ 2ನೇ ಬ್ಲಾಕ್ ನಲ್ಲಿರುವ ಮಜೀದ್ ರವರ ಬಾಡಿಗೆ ಮನೆಯಲ್ಲಿ ವಾಸವಾಗಿ ಆಯುರ್ವೇದ ಔಷಧಿ, ಊದು ಬತ್ತಿ ಮಾರಾಟ ಮಾಡಿ ಜೀವನ ಸಾಗಿಸುವುದ್ದಾಗಿದೆ. ಉಡುಪಿ ಜಿಲ್ಲಾ ಬೆಳ್ಳಂಪಳ್ಳಿಯಲ್ಲಿ ವಾಸವಾಗಿರುವ ಫಿರ್ಯಾದಿದಾರರು ದಿನಾಂಕ 20/03/2022 ರಂದು ಸಂಜೆ 4.30 ಗಂಟೆಗೆ ಪೋನ್ ನಲ್ಲಿ ಮಾತಾಡಿಕೊಂಡಿದ್ದು, ದಿನಾಂಕ 21/03/2022 ರಂದು ಬೆಳಿಗ್ಗೆ 10.30 ಗಂಟೆಯ ಸುಮಾರಿಗೆ ವಸಂತ ಶೆಟ್ಟಿಯವರ ಮೊಬೈಲ್ ಸ್ವಿಚ್ ಆಫ್ ಆಗಿದ್ದ ಕಾರಣ ಹುಡುಕುತ್ತಾ ಕಾಟಿಪಳ್ಳ ಬಾಡಿಗೆ ಮನೆಗೆ ಬಂದಾಗ ಸದ್ರಿ ಮನೆಗೆ ಬೀಗ ಹಾಕಿದ್ದು, ದಿನಾಂಕ 21/03/2022 ರಂದು ಬೆಳಿಗ್ಗೆ 5.30 ಗಂಟೆಯ ಸುಮಾರಿಗೆ ಮನೆಗೆ ಬೀಗ ಹಾಕಿ ಹೊರಗೆ ಹೋದವರು ವಾಪಾಸು ಬಂದಿಲ್ಲವಾಗಿಯೂ,  ಪತ್ತೆ ಮಾಡುವರೇ ಎಂಬಿತ್ಯಾದಿಯಾಗಿರುತ್ತದೆ.

ಕಾಣೆಯಾದವರ ಚಹರೆ:

ಹೆಸರು : ವಸಂತ ಶೆಟ್ಟಿ

ಪ್ರಾಯ: 72 ವರ್ಷ

ಎತ್ತರ : 5.2 ಇಂಚು

ಕಪ್ಪು ಮೈಬಣ್ಣ, ಬೋಳು ತಲೆ,

ತುಳು, ಕನ್ನಡ, ,ಮಲಯಾಳಿ ಮಾತನಾಡುತ್ತಾರೆ.

ಧರಿಸಿದ ಬಟ್ಟೆಗಳು : ಬಿಳಿ ಬಣ್ಣದ ಶರ್ಟ್ ಮತ್ತು ಲುಂಗಿ

 

Crime Reported in Ullal PS

ದಿನಾಂಕ 14-03-2022 ರಂದು ಪಿರ್ಯಾದಿ Abdulla ದಾರರ ಹೆಸರಿನಲ್ಲಿರುವ KA-19-EU-3766 ನೇ ನಂಬ್ರದ YAMAHA FZ 16 ಮೋಟಾರು ಬೈಕ್ ನ್ನು ಪಿರ್ಯಾದಿದಾರರ ಮಗ ಮಹಮ್ಮದ್ ಬಸೀರ್ ದಿನಾಂಕ 14-03-2022ರಂದು ಮದ್ಯಾಹ್ನ 3-20 ಗಂಟೆಗೆ ತೊಕ್ಕೊಟ್ಟು ಸಹಾರಾ ಆಸ್ಪತ್ರೆಯ ಹಿಂಭಾಗದ ಖಾಲಿ ಸ್ಥಳದಲ್ಲಿ ಪಾರ್ಕ್ ಮಾಡಿ, ಮಹಮ್ಮದ್ ಬಸೀರ್ ರವರು ತನ್ನ ಮಿನಿ ಬಸ್ಸಿನಲ್ಲಿ ಬಾಡಿಗೆಗೆಂದು ತೆರಳಿದ್ದು, ಸಂಜೆ 04-30 ಗಂಟೆಯ ಸಮಯಕ್ಕೆ ಕೆಲಸ ಮುಗಿಸಿ ನಂತರ ತೊಕ್ಕೊಟ್ಟು ಸಹಾರಾ ಆಸ್ಪತ್ರೆಯ ಹಿಂಭಾಗದ ಖಾಲಿ ಸ್ಥಳದಲ್ಲಿ ನಿಲ್ಲಿಸಿದ್ದ ಮೋಟಾರು ಬೈಕ್ ನ್ನು  ಬಂದು ನೋಡಿದಾಗ ಮೋಟಾರು ಬೈಕ್ ಕಾಣಿಸದೇ ಇದ್ದು, ಪಿರ್ಯಾದಿದಾರರಿಗೆ ಕರೆಯ ಮುಖಾಂತರ ತಿಳಿಸಿರುತ್ತಾರೆ. ನಂತರ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಿದಾಗ ಮೋಟಾರು ಬೈಕ್ ಇರುವುದಿಲ್ಲ. ನಂತರ ಅಲ್ಲೇ ಅಕ್ಕಪಕ್ಕದಲ್ಲಿ ಹುಡುಕಾಡಿದ್ದು ಎಲ್ಲಿಯೂ ಕಂಡು ಬಂದಿರುವುದಿಲ್ಲ. ಮೋಟಾರು ಬೈಕ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಬೈಕ್ ನ್ನು ಅಂದಿನಿಂದ ಇಂದಿನ ತನಕ ಹುಡುಕಾಡಿದಲ್ಲಿ ಮೋಟಾರು ಬೈಕ್ ಪತ್ತೆಯಾಗಿರುವುದಿಲ್ಲ. ಕಳವಾದ ಪಿರ್ಯಾದಿದಾರರ ಬಾಬ್ತು KA-19-EU-3766 ನೇ ನಂಬ್ರದ YAMAHA FZ 16  ಮೋಟಾರು ಬೈಕ್ ನ ಅಂದಾಜು ಮೌಲ್ಯ 35000/- ಆಗಬಹುದು. ಎಂಬಿತ್ಯಾದಿ.

 

 

ಇತ್ತೀಚಿನ ನವೀಕರಣ​ : 27-03-2022 02:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080