ಅಭಿಪ್ರಾಯ / ಸಲಹೆಗಳು

Crime Reported in Panambur PS

ದಿನಾಂಕ: 26-05-2022 ರಂದು  ರಾಘವೇಂದ್ರ ನಾಯ್ಕ್  ಪೊಲಿಸ್ ಉಪ ನಿರೀಕ್ಷಕ ಪಣಂಬೂರು ಪೊಲೀಸ್ ಠಾಣೆಯವರು ಠಾಣಾ ಸಿಬ್ಬಂದಿಗಳೊಂದಿಗೆ  ಇಲಾಖಾ ವಾಹನದಲ್ಲಿ ರೌಂಡ್ಸ್ ನಲ್ಲಿದ್ದ 10-00 ಗಂಟೆಗೆ  ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ  ಬ್ರೈಟ್ ಪ್ಯಾಕೇಜ್ ಕಂಪನಿ ಬಳಿ ಯಾವುದೋ ಮಾದಕ ವಸ್ತು ಸೇವನೆ ಮಾಡಿ ಅದರ ನಶೆಯಲ್ಲಿ ಇದ್ದಂತೆ ಕಂಡುಬಂದಿದ್ದ, ಮೊಹಮ್ಮದ್ ತೌಪಿಕ್ @ ಮೊಹಮ್ಮದ್ ತೌಸಿಪ್ ಪ್ರಾಯ:26 ವರ್ಷ, ವಾಸ: ಮಾಸ್ತಿಕಟ್ಟೆ, ಬೈದೆರ್ ಪಾಲ್ ದೇವಸ್ಥಾನದ ಬಳಿ ಉಳ್ಳಾಲ ಮಂಗಳೂರು ತಾಲೂಕು ಎಂಬವನನ್ನು  ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆಗೆ ಎ.ಜೆ.ಆಸ್ಪತ್ರೆ,  ಮಂಗಳೂರುರವರ ಬಳಿ ಕಳುಹಿಸಿಕೊಟ್ಟಿದ್ದು  ವೈದ್ಯಾಧಿಕಾರಿಗಳು ಪರೀಕ್ಷಿಸಿ The Urine Sample Tested For The Presence of Tetrahydracannabinoid (Marijuna) is Positive ಎಂದು ವರದಿ ನೀಡಿರುತ್ತಾರೆ.  ಆರೋಪಿ  ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುತ್ತದೆ. ಆರೋಪಿ ವಿರುದ್ದ ಕಲಂ: 27(ಬಿ) ಎನ್.ಡಿ.ಪಿ.ಎಸ್ ಕಾಯ್ದೆ 1985 ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.ಎಂಬಿತ್ಯಾದಿ

Crime Reported in Mangalore North PS                 

ದಿನಾಂಕ: 27-05-2022 ರಂದು ಮದ್ಯಾಹ್ನ 12-45 ಗಂಟೆಗೆ ಶ್ರೀ ಪ್ರಜ್ವಲ್  ರೈ. ಪಿ. ರವರು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿದಾರರು ದಿನಾಂಕ: 22-05-2022 ರಂದು ಬೆಳಿಗ್ಗೆ 11-15 ಗಂಟೆಗೆ ಮಂಗಳೂರು ನಗರದ ಬಾವುಟಗುಡ್ಡ ಮಸೀದಿಯ ಬಳಿ ಪಾರ್ಕಿಂಗ್ ಸ್ಥಳದಲ್ಲಿ  ಅವರ ಬಾಬ್ತು KA-21, EB-2288 ನೊಂದಣಿ ನಂಬ್ರದ ಬಜಾಜ್ ಪಲ್ಸರ್ NS 200 ಮೋಟಾರ್ ಸೈಕಲನ್ನು ಬೆಳಿಗ್ಗೆ 11-15 ಗಂಟೆಗೆ  ಪಾರ್ಕ್ ಮಾಡಿ ಇಟ್ಟು ನಂತರ ಕೆಲಸಕ್ಕೆ ಸಿಟಿ ಸೆಂಟರ್ ಮಾಲ್ ನಲ್ಲಿರುವ  ಲೈಪ್ ಸ್ಟೈಲ್  ಅಂಗಡಿಗೆ ಹೋಗಿದ್ದು ನಂತರ ಕೆಲಸ ಮುಗಿಸಿ ರಾತ್ರಿ  9-30 ಗಂಟೆಗೆ ಮೋಟಾರ್ ಸೈಕಲ್ ಇಟ್ಟಿದ್ದ ಸ್ಥಳಕ್ಕೆ ಬಂದು ನೋಡಿದಾಗ ಮೋಟಾರ್ ಸೈಕಲ್ ಅಲ್ಲಿರದೇ ಇದ್ದು ಸದರಿ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ  ಪಿರ್ಯದಿದಾರರು ಈ ತನಕ ಎಲ್ಲಾ ಕಡೆ ಹುಡುಕಾಡಿದರೂ ಸಿಗದೇ ಇದ್ದು ಈ ದಿನ ದೂರನ್ನು ನೀಡಿರುವುದಾಗಿದೆ ಎಂಬಿತ್ಯಾದಿ ಸಾರಾಂಶ.

ಕಳವಾದ ಮೋಟಾರ್ ಸೈಕಲ್ ನ ವಿವರಗಳು ಈ ಕೆಳಗಿನಂತಿದೆ:

KA-21, EB-2288 ನೊಂದಣಿ ನಂಬ್ರದ ಬಜಾಜ್ ಪಲ್ಸರ್ NS 200 ಮೋಟಾರ್ ಸೈಕಲ್, ಕಪ್ಪು ಬಣ್ಣ

ಮಾಡೆಲ್ 2020, ಅಂದಾಜು ಮೌಲ್ಯ ರೂ. 1,25,000/-

ಇಂಜಿನ್ ನಂಬ್ರ: JLXCLC54621, ಚಾಸಿಸ್ ನಂಬ್ರ: MD2A36FX7LCC24949

 

ಇತ್ತೀಚಿನ ನವೀಕರಣ​ : 27-05-2022 07:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080