ಅಭಿಪ್ರಾಯ / ಸಲಹೆಗಳು

Crime Reported in Mangalore East Traffic PS        

ದಿನಾಂಕ: 26-08-2021 ರಂದು ಪಿರ್ಯಾದಿ SMT.ASMA AHMED ರವರು ತಮ್ಮ ಬಾಬ್ತು KA-19-MK-4566 ನಂಬ್ರದ ಕಾರಿನಲ್ಲಿ ತಮ್ಮ ನೆರೆಮನೆ ನಿವಾಸಿಗಳಾದ ಶ್ರೀಮತಿ.ಆಯಿಶಾ ಮತ್ತು ಅವರ ಮಗಳು ಕುಮಾರಿ ಫಾತಿಮಾ ಶಿಬಾ ರವರೊಂದಿಗೆ ರಾಷ್ಟ್ರೀಯ ಹೆದ್ದಾರಿ  ರಸ್ತೆಯಲ್ಲಿ  ನಂತೂರು ಜಂಕ್ಷನ್ ನಿಂದ ಪಂಪ್ ವೆಲ್ ಕಡೆಗೆ ಹೋಗುತ್ತಾ ರಾತ್ರಿ ಸಮಯ ಸುಮಾರು 19.45 ಗಂಟೆಗೆ ಪಂಪ್ ವೆಲ್ ಸಮೀಪದ ವಿಶ್ವಾಸ್ ವೀವ್ ಅಪಾರ್ಟ್ ಮೆಂಟ್ ಕಟ್ಟಡದ ಎದುರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ  ಹೋಗುತ್ತಿದ್ದಂತೆ ನಂತೂರು ಕಡೆಯಿಂದ KA-19-AA-7458  ನಂಬ್ರದ ಟ್ರೈಲರ್ ಲಾರಿಯನ್ನು ಅದರ ಚಾಲಕ ಅಬ್ದುಲ್ ರಜಾಕ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಕಾರಿನ ಹಿಂಬದಿಗೆ ಡಿಕ್ಕಿ ಪಡಿಸಿ, ಮುಂದಕ್ಕೆ ದೂಡಿಕೊಂಡು ಹೋಗಿದ್ದು ಕಾರು ಸರ್ವಿಸ್ ರಸ್ತೆಗಾಗಿ ವಿಭಜಿಸಲಾಗಿರುವ ರಸ್ತೆಯ ಡಿವೈಡರಿಗೆ ಡಿಕ್ಕಿಯಾಗಿ ನಿಂತಿರುತ್ತದೆ. ಡಿಕ್ಕಿಯ ಪರಿಣಾಮ ಪಿರ್ಯಾದಿದಾರರಿಗೆ, ಶ್ರೀಮತಿ.ಆಯಿಶಾ ಮತ್ತು ಫಾತಿಮಾ ಶಿಭಾ ರವರಿಗೆ ಸಾಮಾನ್ಯ ಸ್ವರೂಪದ ಗುದ್ದಿದ ರೀತಿಯ ಗಾಯಗಳಾಗಿದ್ದು, ಅಪಘಾತ ಪಡಿಸಿದ ಟ್ರೈಲರ್ ಲಾರಿಯ ಚಾಲಕ ಅಬ್ದುಲ್ ರಜಾಕ್ ರವರು ಕಾರಿಗೆ ಆಗಿರುವ ಜಖಂ ಬಗ್ಗೆ ಮತ್ತು ಗಾಯಾಳುಗಳ ಗಾಯದ ಬಗ್ಗೆ ಸಂಪೂರ್ಣ ಖರ್ಚುವೆಚ್ಚ ಭರಿಸುವುದಾಗಿ ತಿಳಿಸಿ ನಂತರ ನಿರಾಕರಿಸಿದ್ದರಿಂದ ತಡವಾಗಿ ಪಿರ್ಯಾದಿ ನೀಡಿರುತ್ತಾರೆ ಎಂಬಿತ್ಯಾದಿ.

Crime Reported in Traffic South PS

ದಿನಾಂಕ :27.08.2021 ರಂದು  ಪಿರ್ಯಾದಿದಾರರಾದ ಶೈಹಾ ಹವ್ವಾ(20 ವರ್ಷ) ರವರು  ಅವರ ಮನೆಯಾದ ತುಂಬೆಯಿಂದ ಅವರ ಕಾಲೇಜ್ ಗೆ ಹೋಗಲು ಬಸ್ಸಿನಲ್ಲಿ ಬಂದು ಇಳಿದು ಅವರ ಕಾಲೇಜ್ ಆದ ಶ್ರೀನಿವಾಸ ಕಾಲೇಜ್ ವಳಚ್ಚಿಲ್ ಕಡೆಗೆ ಹೋಗಲು ರಾ.ಹೆ-73 ರ ಡಾಮಾರು ರಸ್ತೆಯನ್ನು ದಾಟುತ್ತಿರುವ ಸಮಯ ಸುಮಾರು ಬೆಳಿಗ್ಗೆ 8-30 ಗಂಟೆಗೆ ವಳಚ್ಚಿಲ್ ಜಂಕ್ಷನ್  ಹತ್ತಿರ ತಲುಪಿದಾಗ ಬಿ ಸಿ ರೋಡ್ ಕಡೆಯಿಂದ ಪಡೀಲ್  ಕಡೆಗೆ ಹೋಗುತ್ತಿದ್ದ  ಸ್ಕೂಟರ್ ನಂಬ್ರ: KA-19-EN-0661  ನೇದರ ಸವಾರ ಶ್ರೇಯಸ್ಸ್ ಎಂಬಾತನು ಸಹ ಸವಾರಳಾಗಿ ಶಿಲ್ಪ ಎಂಬುವರನ್ನು ಹಿಂದುಗಡೆ ಕುಳ್ಳಿರಿಸಿಕೊಂಡು ಸ್ಕೂಟ ರ್ ನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಯನ್ನು ದಾಟುತ್ತಿದ್ದ ಪಿರ್ಯಾದಿದಾರರಿಗೆ ಸ್ಕೂಟರ್ ನ್ನು ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಸ್ಕೂಟರ್ ಸವಾರ ಮತ್ತು ಸಹ ಸವಾರಳು ಕೂಡ ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರ  ಬಲಗಾಲಿಗೆ ಮೂಳೆ ಮುರಿತದ ಗಾಯ ಹಾಗೂ ಎಡಬದಿ ಗಲ್ಲದ ಹತ್ತಿರ ತರಚಿದ ಗಾಯವಾಗಿದ್ದವರನ್ನು ಅಲ್ಲಿನ ಆಟೋರಿಕ್ಷಾ ಚಾಲಕರು ಉಪಚರಿಸಿ ಅದೇ ಆಟೋರಿಕ್ಷಾದಲ್ಲಿಯೇ ಚಿಕಿತ್ಸೆ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಅಪಘಾತ ಪಡಿಸಿದ ಸ್ಕೂಟರ್ ಸವಾರ ಶ್ರೇಯಸ್ಸ್ ಮತ್ತು ಸಹ ಸವಾರೆ ಶಿಲ್ಪ ರವರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದವರನ್ನು ಅಲ್ಲಿ ಸೇರಿದ ಜನರು ಚಿಕಿತ್ಸೆ ಬಗ್ಗೆ ಪಡೀಲ್ ನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿರುತ್ತಾರೆ.ಎಂಬಿತ್ಯಾದಿ.

Crime Reported in Konaje PS     

ಪಿರ್ಯಾದಿದಾರರಾದ ಬಂಟ್ವಾಳ ತಾಲೂಕು ಆಹಾರ ನಿರೀಕ್ಷಕರಾದ ಶ್ರೀ ರಾಜ್ ಕುಮಾರ್  ರವರು ಮಾನ್ಯ ತಹಶಿಲ್ದಾರರ ಆದೇಶದಂತೆ  ದಿನಾಂಕ:23.08.2021  ರಂದು ಸಂಜೆ 5.00 ಗಂಟೆಗೆ ಬಂಟ್ವಾಳ  ತಾಲೂಕು ನರಿಂಗಾನ  ಗ್ರಾಮದ ತೌಡುಗೋಳಿ ಕ್ರಾಸ್ ಎಂಬಲ್ಲಿನ  ಆರೋಪಿ ಮಹಮ್ಮದ್ ಶಾಹಿದ್ ಬಿನ್ ಕೆ ಯೂಸುಫ್ ರವರ ಮನೆಗೆ ಶ್ರೀ ರಾಜೇಶ್ ನಾಯ್ಕ್ ಆಹಾರ ಶಿರಸ್ತೇದಾರರು ಮತ್ತು ನರಿಂಗಾನ ಗ್ರಾಮದ ಗ್ರಾಮ ಕರಣೀಕರೊಂದಿಗೆ ಹಾಗೂ  ಪಂಚರಾದ ಹಮ್ಮಬ್ಬ  ಹಾಗೂ ರಜಾಕ್ ರವರೊಂದಿಗೆ ದಾಳಿ ನಡೆಸಿ ನೋಡಿದಾಗ ಆಹಾರ ಪಡಿತರ ಅಕ್ಕಿಯನ್ನು 50 ಕೆಜಿ ತೂಕದ 60 ಬ್ಯಾಗ್ ಗಳಲ್ಲಿ  ಮತ್ತು 27 ಚಿಲ್ಲರೆ ಬ್ಯಾಗ್ ಗಳಲ್ಲಿ ಒಟ್ಟಾರೆಯಾಗಿ 35 ಕ್ವಿಂಟಾಲ್  ಅಕ್ಕಿಯನ್ನು  ನಿಯಮ ಬಾಹಿರವಾಗಿ ಅಕ್ರಮವಾಗಿ ದಾಸ್ತಾನು ಇರಿಸಿದ್ದು  ಕಂಡುಬಂದಿದ್ದು’ ಇವುಗಳನ್ನು ಪಂಚರ ಸಮಕ್ಷಮದಲ್ಲಿ ವಿವರವಾದ ಮಹಜರನೊಂದಿಗೆ ಸ್ವಾಧೀನಪಡಿಸಿಕೊಂಡು ಅನಧಿಕೃತವಾಗಿ ದಾಸ್ತಾನು ಇರಿಸಿದ್ದ ಅಕ್ಕಿಯುಳ್ಳ ಚೀಲಗಳನ್ನು  ಅದೇ ದಿನ ರಾತ್ರಿ 20.00 ಗಂಟೆಗೆ   ಬಿಸಿ ರೋಡಿನ ಕೆ,ಎಫ್, ಸಿ ಗೋದಾಮಿನಲ್ಲಿ ಸಂಗ್ರಹಿಸಿ ನಂತರ  ಈ ಘಟನೆಯ ನೈಜತೆಯ ಸತ್ಯತೆಯನ್ನು ಪರಿಶೀಲಿಸಿ  ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತಾರೆ ಎಂಬಿತ್ಯಾದಿ

2) ಪ್ರಕರಣದ ಪಿರ್ಯಾದಿದಾರರಾದ ಶ್ರೀಮತಿ ಆರ್ ಪದ್ಮಶ್ರೀ, ಭೂ ವಿಜ್ಞಾನಿ, ಉಪನಿರ್ದೇಶಕರ ಕಛೇರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಂಗಳೂರು ಎಂಬವರು ಮಂಗಳೂರು ತಾಲೂಕು ಆಂಬ್ಲಮೋಗರು ಗ್ರಾಮ ಗಟ್ಟಿ ಕುದ್ರು ಎಂಬಲ್ಲಿ ಅನಧಿಕೃತವಾಗಿ ಮರಳುಗಾರಿಕೆಯನ್ನು ನಡೆಸುತ್ತಿರುವುದಾಗಿ ಕರ್ನಾಟಕ ಲೋಕಾಯುಕ್ತ ಮಂಗಳೂರು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ದ.ಕ ಕಛೇರಿಯಿಂದ ದೂರುಗಳು ಸ್ವೀಕೃತವಾದ ಹಿನ್ನಲೆಯಲ್ಲಿ ಉಪನಿರ್ದೇಶಕರ ಆದೇಶದಂತೆ ದಿನಾಂಕ 25.08.2021 ರಂದು ಗಟ್ಟಿಕುದ್ರು ಪ್ರದೇಶದ ಡೇವಿಡ್ ಡಿಸೋಜ (ಕುಡ್ವ) ಹಾಗೂ ಇತರರುಗಳಿಗೆ ಸೇರಿದ ಪಟ್ಟ ಜಮೀನಿಗೆ ತೆರಳಿ ಪರಿಶೀಲಿಸಿದಲ್ಲಿ ಮರಳುಗಾರಿಕೆ ಚಟುವಟಿಕೆ ನಡೆದಿರುವ ಕುರುಹುಗಳು ಕಂಡು ಬಂದಂತೆ ಪಟ್ಟಾದಾರರಾದ ಡೇವಿಡ್ ಡಿಸೋಜ ಎಂಬವರನ್ನು ವಿಚಾರಿಸಲಾಗಿ ಸಚಿನ್ ಬಿನ್ ಜನ್ನಪ್ಪ ಪೂಜಾರಿ, ಮದಕ ಪರಿಯಲ ಮನೆ, ಆಂಬ್ಲಮೋಗರು ಗ್ರಾಮ ಎಂಬವರು ಒಂದು ತಿಂಗಳ ಹಿಂದೆ ಮರಳನ್ನು ತೆಗೆದಿರುತ್ತಾರೆ ಹಾಗೂ ಪ್ರಸ್ತುತ ಮರಳುಗಾರಿಕೆಯನ್ನು ನಿಲ್ಲಿಸಿರುತ್ತಾರೆ, ರಸ್ತೆಯನ್ನು ಹೊಂಡ ತೆಗೆದು ಬಂದ ಮಾಡುವುದಾಗಿ ತಿಳಿಸಿದಂತೆ ಹೇಳಿಕೆ ಪಡೆದುಕೊಂಡು, ಸದ್ರಿ ಸ್ಥಳದಲ್ಲಿ ಯಾವುದೇ ಅನುಮತಿಯನ್ನು ಯಾ ಪರವಾನಿಗೆಯನ್ನು ಪಡೆದುಕೊಳ್ಳದೆ ಅನಧಿಕೃತವಾಗಿ ಮರಳು ಉಪಖನಿಜ ಗಣಿಗಾರಿಕೆ ಯಾ ಸಾಗಾಟ ನಡೆಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿ ಸುಮಾರು 10 ಮೆಟ್ರಿಕ್ ಟನ್ ಮರಳನ್ನು ಸಂಗ್ರಹಿಸಿದ್ದು, ಸದ್ರಿ ಮರಳನ್ನು ಮಹಜರು ಮುಖೇನ ವಶಕ್ಕೆ ಪಡೆದುಕೊಂಡು ತಕ್ಷೀರು ಸ್ಥಳದಲ್ಲಿ ವಾಹನ ಸಂಚಾರ ಅಸಾಧ್ಯವಾದ ಕಾರಣ ಆರೋಪಿ ಡೇವಿಡ್ ಡಿಸೋಜಾ ಸುಪರ್ದಿಗೆ ಮರಳನ್ನು ನೀಡಲಾಗಿದ್ದು, ಸದ್ರಿ ಪ್ರದೇಶದಲ್ಲಿ ಯಾವುದೇ ಅನುಮತಿಯನ್ನು ಪಡೆದುಕೊಳ್ಳದೆ ಅಕ್ರಮವಾಗಿ ಮರಳು ಗಣಿಗಾರಿಕೆ ಯಾ ಸಾಗಾಟ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಆರೋಪಿಗಳಾದ ಸಚಿನ್ ಅಂಚನ್, ಡೇವಿಡ್ ಡಿಸೋಜ ಹಾಗೂ ಇತರೆ ಪಟ್ಟಾದಾರರ ವಿರುದ್ದ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ. 

ಇತ್ತೀಚಿನ ನವೀಕರಣ​ : 27-08-2021 07:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080