ಅಭಿಪ್ರಾಯ / ಸಲಹೆಗಳು

Crime Reported in  Mangalore Rural PS

 ಪಿರ್ಯಾದಿ Sathish Ameen ದಾರರ ಅಣ್ಣನಾದ ಅಶೀತ್ ಎಂಬವರು ತಮ್ಮ ಪತ್ನಿಯ ಮನೆಯಾದ ಪಡಿಲ್ ಪಸ್ಟ್ ನ್ಯೂರೋ ಆಸ್ಪತ್ರೆ ಹಿಂಬದಿಯಲ್ಲಿ ವಾಸವಾಗಿದ್ದು MRPL ಬಳಿ HPCL ನಲ್ಲಿ ಗ್ಯಾಸ್ ಫಿಲ್ಲಿಂಗ್ ಕೆಲಸ ಮಾಡಿಕೊಂಡಿದ್ದು. ರಾತ್ರಿ ಕೆಲಸ ಮುಗಿಸಿಕೊಂಡು ಪಿರ್ಯಾದಿದಾರರ ಮನೆಗೆ ಬಂದವರು ದಿನಾಂಕ 25/10/2021 ರಂದು ಅರ್ಜಂಟ್ ಕೆಲಸವಿದೆ ಎಂದು ತಿಳಿಸಿ ಮಧ್ಯಾಹ್ನ ಸುಮಾರು 01-00 ಗಂಟೆಗೆ ಮನೆಯಲ್ಲಿ ತಿಳಿಸಿ ಬೈಕಿನಲ್ಲಿ ಹೋದವನು ರಾತ್ರಿಯಾದರು ಬಾರದೆ ಆತನ ಪತ್ನಿಯ ಮನೆಗೂ ಹೋಗದೆ ಬೈಕ್ ಹಾಗೂ ಮೊಬೈಲ್ ನ್ನು ಸುರತ್ಕಲ್ ಬಳಿ ಬಿಟ್ಟು ಹೋಗಿ ಕಾಣೆಯಾದವರನ್ನು ಹಲವು ಕಡೆ ಹುಡುಕಾಡಿದರೂ ಇದುವರೆಗೂ ಪತ್ತೆಯಾಗದೆ ಕಾಣೆಯಾಗಿರುವುದಾಗಿ ಪಿರ್ಯಾದಿಯ ಸಾರಾಂಶವಾಗಿರುತ್ತದೆ

ಕಾಣೆಯಾದವರ ಚಹರೆ ವಿವರ:

ಹೆಸರು: ಅಶೀತ್ ಆಮೀನ್, ವಯಸ್ಸು-36 ವರ್ಷ

ಎತ್ತರ: 5.5 ಅಡಿ,

ಎಣ್ಣೆಗಪ್ಪು ಮೈಬಣ್ಣ, ಕೋಲು ಮುಖ, ತಿಳುವಾದ ಗಡ್ಡವಿರುತ್ತದೆ.

ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಉದ್ದತೋಳಿನ ಅಂಗಿ ಮತ್ತು ಕಪ್ಪು ಪ್ಯಾಂಟ್  ಧರಿಸಿರುತ್ತಾರೆ.

ಗಾಯ- ಬಲ ಕಾಲಿನಲ್ಲಿ ಬೈಕ್ ನ ಸ್ಯಾಲೆಂಸರ್ ತಾಗಿ ಉಂಟಾದ ಹಳೆಯ ಸುಟ್ಟ ಗಾಯ 

Crime Reported in  Mangalore South PS

ದಿನಾಂಕ 11-10-2021ರಂದು 22-30 ಗಂಟೆಯಿಂದ ದಿನಾಂಕ 12-10-2021 ರಂದು ಬೆಳಿಗ್ಗೆ 04-30 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಬೋಳಾರ ಮುಳಿಹಿತ್ಲು ನಲ್ಲಿರುವ ಯುರೋ ಕಾಂಪ್ಲೇಕ್ಸ್ ನ ಕೆಳಗಡೆ ದ್ಚಿಚಕ್ರ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿಟ್ಟಿದ್ದ ಪಿರ್ಯಾದಿದಾರರ ಆರ್. ಸಿ. ಮಾಲಕತ್ವದ KA 19 ES 2687 ನೊಂದಣಿ ಸಂಖ್ಯೆಯ 2016 ನೇ ಮೊಡಲ್ ನ MD2A11CZ1GWM19624 ಚೆಸಿಸ್ ನಂಬ್ರದ DHZWGM84133 ಇಂಜಿನ್ ನಂಬ್ರದ, ಕಪ್ಪು ಬಣ್ಣದ, ಅಂದಾಜು ಮೌಲ್ಯ 40000/- ರೂಪಾಯಿ ಬೆಲೆಬಾಳುವ ಬಜಾಜ್ ಪಲ್ಸರ್ ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ದ್ಚಿಚಕ್ರ ವಾಹನವನ್ನು ಕಳವಾದ ದಿನದಿಂದ ದಿನಾಂಕ 27-10-2021 ವರೆಗೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.

Crime Reported in Ullal PS

ಪಿರ್ಯಾದಿದಾರರಾದ ಶ್ರೀಮತಿ ಆರ್  ಪದ್ಮಶ್ರೀ  ರವರು ಮಂಗಳೂರು ತಾಲೂಕು ಕೋಡಿ ಉಳ್ಳಾಲ ಪ್ರದೇಶಗಳಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಉಪನಿರ್ದೇಶಕರ ಮೌಖಿಕ   ಆದೇಶದಂತೆ ದಿನಾಂಖ 8-10-2021 ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಹಾಗೂ  ಸಿಬ್ಬಂದಿಯವರೊಂದಿಗೆ ನೇತ್ರಾವತಿ ದೋಣಿಗಳ ಮೂಲಕ ಹೋಗಿ ದಾಳಿ ನಡೆಸಿದಂತೆ ಮೂರು ದೋಣಿಗಳನ್ನು ವಶಪಡಿಸಿಕೊಳ್ಳಲಾಯಿತು. ಸದರಿ ಮೂರು ದೋಣಿಗಳ ಮಾಲೀಕರ ಬಗ್ಗೆ ಮಾಹಿತಿ ಲಭ್ಯವಾಗದೇ ಇದ್ದು ,ಸದರಿ ಕೃತ್ಯದಲ್ಲಿ ಸರ್ಕಾರಿ ಸ್ವತ್ತ ಮರಳನ್ನು ಕಳ್ಳತನದಿಂದ ತೆಗೆದು ಅಕ್ರಮ ಸಾಗಾಟ ಮಾಡಿರುವುದರಿಂದ ಸದರಿ ದೋಣಿ ಮಾಲಕರು ಯಾರೆಂಬೆಂದು ಪತ್ತೆ ಮಾಡಲು ಪ್ರಯತ್ನಿಸಿ ದೂರು ನೀಡಲು ತಡವಾಗಿರುವುದಾಗಿ ಮತ್ತು  ಸದ್ರಿ ಯವರ ವಿರುದ್ದ ಸೂಕ್ತ ಕ್ರಮಕ್ಕಾಗಿ ನೀಡಿದ ಪಿರ್ಯಾದಿ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ

ಇತ್ತೀಚಿನ ನವೀಕರಣ​ : 27-10-2021 05:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080