ಅಭಿಪ್ರಾಯ / ಸಲಹೆಗಳು

Crime Reported in Traffic North Police

ಈ ದಿನ ದಿನಾಂಕ:26-12-2021 ರಂದು ಪಿರ್ಯಾದಿದಾರರ ತಂದೆಯವರಾದ ಸುಂದರ ಕೊರಗ ರವರು ಅವರ ಬಾಬ್ತು KA-19-HE-3319 ನಂಬ್ರದ ಸ್ಕೂಟರಿನಲ್ಲಿ ಪಡುಪಣಂಬೂರಿಗೆ ಕಂಬಳ ನೋಡಲು ಹೋಗಿದ್ದವರು ವಾಪಸು ಮನೆಯ ಕಡೆಗೆ ಬರುತ್ತಾ ಮಧ್ಯಾಹ್ನ ಸುಮಾರು ಸಮಯ 3:00 ಗಂಟೆಗೆ ಹಳೆಯಂಗಡಿಯ ತೋಕೂರು ಆಟೋ ನಿಲ್ದಾಣದ ಬಳಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯಲ್ಲಿದ್ದ ಹೊಂಡವನ್ನು ತಪ್ಪಿಸಲು ಹೋಗಿ ಸ್ಕೂಟರಿನ ನಿಯಂತ್ರಣ ತಪ್ಪಿ ತೋಕೂರು ಆಟೋರಿಕ್ಷಾ ನಿಲ್ದಾಣದ ಕಬ್ಬಿಣದ ಕಂಬಕ್ಕೆ ಡಿಕ್ಕಿಯಾಗಿ ರಸ್ತೆಯ ಬದಿಯಲ್ಲಿ ಅಳವಡಿಸಿದ್ದ ಇಂಟರ್ ಲಾಕ್ ಮೇಲೆ ಬಿದ್ದು, ಅವರ ಬಲ ಕೆನ್ನೆಯ ಬಳಿ ಚರ್ಮ ಹರಿದ ರೀತಿಯ ಗಾಯ ಹಾಗೂ ಎಡ ಕೈಯ ಕೋಲು ಕೈಗೆ, ಎಡಕಾಲಿನ ತೊಡೆಯ ಬಳಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಹಾಗೂ ಬಲಕೈ, ಮುಂಗೈ, ಬಲಕಾಲಿನ ಮೊಣಗಂಟಿನ ಬಳಿ ತರಚಿದ ರೀತಿಯ ರಕ್ತ ಗಾಯವಾಗಿ ಮುಕ್ಕದ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ ಎಂಬಿತ್ಯಾದಿ.

Crime Reported in Traffic North Police

ದಿನಾಂಕ:26-12-2021 ರಂದು ಪಿರ್ಯಾದಿದಾರರ ತಂದೆಯಾದ ರಾಜೇಶ್ ಶೆಟ್ಟಿ (55 ವರ್ಷ) ಎಂಬವರು ತನ್ನ ಬಾಬ್ತು KA-19-EX-8444 ಸ್ಕೂಟರಿನಲ್ಲಿ ಸುರತ್ಕಲ್ ಜಂಕ್ಷನ್ ಕಡೆಯಿಂದ NH 66ನೇ ಡಾಮಾರು ರಸ್ತೆಯಲ್ಲಿ ಸವಾರಿಮಾಡಿಕೊಂಡು ಬಂದು ತಡಂಬೈಲ್ ಸುಪ್ರಿಂ ಮಾಲ್ ಕಟ್ಟಡದ ಎದುರಿನಲ್ಲಿರುವ ತೆರೆದ ಡಿವೈಡರಿನಲ್ಲಿ ಬಲದಿಗೆ ಅಂದರೆ ಮುಂಚೂರು-ಮಧ್ಯ ಕ್ರಾಸ್ ಕಡೆಗೆ ನಿಧಾನವಾಗಿ ಹೊಗುತ್ತಿದ್ದಂತೆ ಬೆಳಿಗ್ಗೆ ಸಮಯ ಸುಮಾರು 11:30 ಗಂಟೆಗೆ ಮುಕ್ಕಾ/ಮುಲ್ಕಿ ಜಂಕ್ಷನ್ ಕಡೆಯಿಂದ ಸುರತ್ಕಲ್ ಕಡೆಗೆ NH 66ನೇ ಡಾಮಾರು ರಸ್ತೆಯಲ್ಲಿ KA-09-ME-2068 ನಂಬ್ರದ ಕಾರನ್ನು ಅದರ ಚಾಲಕ ಮಹೇಂದ್ರ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ತೆರೆದ ಡಿವೈಡರ್ ಜಾಗದಲ್ಲಿ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಾಜೇಶ್ ಶೆಟ್ಟಿ ರವರು ಸವಾರಿ ಮಾಡುತ್ತಿದ್ದ ಸ್ಕೂಟರಿನ ಎಡಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ರಾಜೇಶ್ ಶೆಟ್ಟಿ ರವರು ಸ್ಕೂಟರ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಬಿದ್ದು ತಲೆಗೆ ಗಂಭೀರ ಸ್ವರೂಪದ  ರಕ್ತಗಾಯವಗಿ ಸ್ಥಳದಲ್ಲೇಮೃತ ಪಟ್ಟಿರುತ್ತಾರೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 29-12-2021 05:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080