ಅಭಿಪ್ರಾಯ / ಸಲಹೆಗಳು

Crime Reported in Mangalore West Traffic PS

 ಪಿರ್ಯಾದಿ BHAVIN SATISH SHAHದಾರರ ತಂದೆ ಸತೀಶ್ ಶಾಂತಿಲಾಲ್ ಶಾ ರವರು ದಿನಾಂಕ:25-01-2022 ರಂದು ಮಂಗಳೂರು ಲೋವರ್ ಕಾರ್ಸ್ಟ್ರೀಟ್ ಬಳಿಯಿರುವ ತಮ್ಮ ಅಂಗಡಿಗೆ ಹೋಗಲೆಂದು ಪಿರ್ಯಾದಿದಾರರ ತಂದೆಯವರ ಹೆಸರಿನಲ್ಲಿರುವ ಕೆಎ:19:ಈಎಚ್:6559ನೇ ದ್ವಿಚಕ್ರ ವಾಹನದಲ್ಲಿ ಹೊರಟು ಪಿರ್ಯಾದಿದಾರರು ಹಿಂಬದಿ ಸವಾರನಾಗಿದ್ದು, ಅವರ ತಂದೆಯವರು ದ್ವಿಚಕ್ರ ವಾಹನವನ್ನು ಸವಾರಿ ಮಾಡುತ್ತಾ ಅವರು ವಾಸವಾಗಿರುವ ಫ್ಲಾಟ್ ನ ಪಾರ್ಕಿಂಗ್ ಸ್ಥಳದಿಂದ ಹೊರಟು ನಿರ್ಗಮನ ದಾರಿಯಲ್ಲಿ ನಿಂತು ಎರಡೂ ಬದಿ ಗಮನಿಸಿ ಯಾವುದೇ ವಾಹನಗಳು ಬಾರದೇ ಇರುವುದನ್ನು ಖಾತ್ರಿ ಪಡಿಸಿ ಭೋಜರಾವ್ ಲೇನ್ ಟಾರು ರಸ್ತೆಗೆ ಸಂಪರ್ಕಿಸಿ ಡೊಂಗರಕೇರಿ ರಸ್ತೆಯ ಕಡೆಗೆ ತಿರುಗುವ ವೇಳೆಯಲ್ಲಿ ಡೊಂಗರಕೇರಿ ಕಡೆಯಿಂದ ಅಳಕೆ ಕಡೆಗೆ ಕೆಎ:19:ಈಎಂ:9732ನೇ ದ್ವಿಚಕ್ರ ವಾಹನ ಸವಾರ ಸಾರ್ವಜನಿಕ ಟಾರು ರಸ್ತೆಯಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಂದೆ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದ ಬಲಬದಿಗೆ ಅಂದರೆ ತಂದೆಯವರ ಬಲಕಾಲಿಗೆ ಡಿಕ್ಕಿ ಪಡಿಸಿದರು. ಇದರ ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ತಂದೆ ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದಿರುತ್ತಾರೆ. ಈ ಘಟನೆ ನಡೆಯುವಾಗ ಸಮಯ ಸುಮಾರು ಬೆಳಿಗ್ಗೆ 08:40 ಗಂಟೆಯಾಗಬಹುದು. ಈ ಘಟನೆಯನ್ನು ನೋಡಿದ ಸಾರ್ವಜನಿಕರು ಹಾಗೂ ಅಪಘಾತಪಡಿಸಿದ ದ್ವಿಚಕ್ರ ವಾಹನ ಸವಾರ ಪಿರ್ಯಾದಿದಾರರ ತಂದೆಯನ್ನು ಎಬ್ಬಿಸಿ ಉಪಚರಿಸಿದ್ದು, ಪಿರ್ಯಾದಿದಾರರಿಗೆ ಸ್ವಲ್ಪ ಗುದ್ದಿದ ನೋವುಂಟಾಗಿದ್ದು, ಅವರ ತಂದೆಯವರ ಬಲಕಾಲಿನ ಕೋಲುಕಾಲಿಗೆ ರಕ್ತಗಾಯ ಹಾಗೂ ಮೂಳೆ ಮುರಿತದ ಗಾಯವಾಗಿದ್ದು, ತಂದೆಯವರನ್ನು ಕೂಡಲೇ ಸದ್ರಿ ಮಾರ್ಗದಲ್ಲಿ ಬರುತ್ತಿದ್ದ ಅವರ ಮನೆಯ ಹತ್ತಿರದ ಮನೆಯವರು ಅಟೋರಿಕ್ಷಾವೊಂದರಲ್ಲಿ ಕೊಡಿಯಾಲಬೈಲ್ ನಲ್ಲಿರುವ ಯನಪೋಯಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಇಲ್ಲಿನ ವೈದ್ಯರು ಪರೀಕ್ಷಿಸಿ ಪಿರ್ಯಾದಿದಾರರ ತಂದೆಯವರನ್ನು ಒಳರೋಗಿಯನ್ನಾಗಿ ದಾಖಲು ಮಾಡಿಕೊಂಡಿರುತ್ತಾರೆ.

Crime Reported in CEN Crime PS

ದಿನಾಂಕ 28-01-2022 ರಂದು ಮದ್ಯಾಹ್ನ 12-00 ಗಂಟೆಗೆ ಪ್ರಕರಣದ ಪಿರ್ಯಾದಿದಾರರಾದ ಪಿ ಎಸ್ ಐ ಸತೀಶ್ ರವರು ಸಿಬ್ಬಂದಿಯವರೊಂದಿಗೆ ಖಾಸಗಿ ವಾಹನದಲ್ಲಿ ರೌಂಡ್ಸ್ ನಲ್ಲಿರುವಾಗ ಮಂಗಳೂರು ನಗರದ ಮೂಲ್ಕಿ ಕಾರ್ನಾಡು ಜಂಕ್ಷನ್ ಬಳಿಯಿರುವ ಶ್ರೀ ಶಾರದ ಮೂಕಾಂಬಿಕ ಕಟ್ಟಡದ ಹಿಂಭಾಗ ಜನರೇಟರ್ ಶೆಡ್ಡಿನ ಬಳಿ ಓರ್ವ ವ್ಯಕ್ತಿಯು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ 12-20 ಗಂಟೆಗೆ ತಕ್ಷೀರು ಸ್ಥಳಕ್ಕೆ ತಲುಪಿ ಬಾತ್ಮಿದಾರರು ತಿಳಿಸಿದ ಸ್ಥಳದಲ್ಲಿ ನೋಡಿದಾಗ ಓರ್ವ ಯುವಕನು ತನ್ನ ಕೈಯಲ್ಲಿ ಮದ್ಯದ ಪ್ಯಾಕೆಟ್ ಗಳನ್ನು ಹಿಡಿದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು ಕಂಡು ಬಂತು. ಾತನನ್ನು  ವಿಚಾರಿಸಲಾಗಿ  ಮದ್ಯ ಮಾರಾಟ ಮಾಡುವರೇ ಪರವಾನಿಗೆ ಇರುವುದಿಲ್ಲವಾಗಿಯೂ ತಾನು ಪೂನಂ ಬಾರ್ ನಡೆಸುತ್ತಿದ್ದ ಜನಾರ್ಧನ ಪೂಜಾರಿ ತಿಳಿಸಿದ್ದಂತೆ ಇಲ್ಲಿ ಮಾರಾಟ ಮಾಡುವುದಾಗಿ  ತಿಳಿಸಿದಂತೆ ಆತನ ಹೆಸರು ವಿಳಾಸ ಕೇಳಲಾಗಿ ಪೂರ್ಣೇಶ್ (41) ವಾಸ: ಗುಡ್ಡಪ್ಪ ಬೀದಿ, ಹರಿಯಪ್ಪ ಸ್ಟ್ರೀಟ್, ಚಿಕ್ಕಮಗಳೂರು ಎಂದು ತಿಳಿಸಿದನು. ನಂತರ ಆತನ ವಶದಲ್ಲಿದ್ದ 1)  180 ml ನ DK DOUBLE KICK FINE WHISKY ಯ 22 ಸ್ಯಾಚೆಟ್ ಗಳು 2) 90 ml ನ DK DOUBLE KICK FINE WHISKY ಯ 14 ಸ್ಯಾಚೆಟ್ ಗಳು 3) 90 ml ನ Mysore Lancer Whisky ಯ 7 ಸ್ಯಾಚೆಟ್ ಗಳು ಮತ್ತು 4) 90 ml ನ Haywards Cheers Whisky ಯ 2 ಸ್ಯಾಚೆಟ್ ಗಳು ಹಾಗೂ ನಗದು ಹಣ ರೂ 1,060/- ವನ್ನು ಸ್ವಾಧೀನಪಡಿಸಿದಾಗಿದೆ. ಮದ್ಯದ ಅಂದಾಜು ಮೌಲ್ಯ 2,280/-  ಆಗಿರುತ್ತದೆ.

 

Crime Reported in Traffic South PS

ಪಿರ್ಯಾದಿದಾರರಾದ ಮಹಮ್ಮದ್ ನಾಸೀರ್(35 ವರ್ಷ) ರವರ ಮಗನಾದ ಮಹಮ್ಮದ್ ನಿಶಾನ್ (02 ವರ್ಷ)ನಿಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರ ಪತ್ನಿ ಸುಮಯ್ ಹುಸೇನ್ ಸಾಬ್ (30 ವರ್ಷ) ಮತ್ತು ಅವರ ತಂದೆ ಎ ಹೆಚ್  ಯಾಕುಬ್ (63 ವರ್ಷ) ರವರ ಜೊತೆಯಲ್ಲಿ ತೊಕ್ಕೊಟ್ಟಿನ  ಸಾಕ್ಷಿ ಕ್ಲಿನಿಕ್ ಗೆ ಹೋಗಿ ಮಗನಿಗೆ ಚಿಕಿತ್ಸೆ  ಕೊಡಿಸಿ ನಂತರ ಎಲ್ಲರೂ ಒಟ್ಟಾಗಿ ಕಲ್ಲಾಪು ಬಳಿ ಇರುವ ಕುಲ್ಕಿ ಹಬ್ ಹೋಟೆಲ್ ನಲ್ಲಿ  ಊಟ ಮುಗಿಸಿ ವಾಪಸ್ಸು ತಮ್ಮ ಮನೆಗೆ ಹೋಗಲು  ಕಲ್ಲಾಪುವಿನ ಕುಲ್ಕಿ ಹೋಟೆಲ್ ಎದುರು ಪಂಪವೆಲ್ ಕಡೆಯಿಂದ ತೊಕ್ಕೊಟ್ಟು ಕಡೆಗೆ ಹಾದು ಹೋಗಿರುವ ರಾ.ಹೆ.66 ರ ಡಾಮಾರು ರಸ್ತೆ ದಾಟುತ್ತಿರುವ ಸಮಯ ಸುಮಾರು 21:30 ಗಂಟೆಗೆ ರಾ ಹೆ 66 ರಲ್ಲಿ ಪಂಪವೆಲ್ ಕಡೆಯಿಂದ  ತೊಕ್ಕೊಟ್ಟು ಕಡೆಗೆ  ಬರುತ್ತಿದ್ದ KA-19-EN-0103  ನೇದರ ಬೈಕ್ ಸವಾರ ತೀರ್ಥೇಶ್ ಎಂಬಾತನು ಬೈಕ್ ನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ  ಹಾಗೂ ಅವರ ಪತ್ನಿ   ಹಾಗೂ ಅವರ ತಂದೆ ಮತ್ತು ಮಗನಿಗೆ ಬೈಕ್ ಡಿಕ್ಕಿಪಡಿಸಿದ ಪರಿಣಾಮ ಎಲ್ಲರೂ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಬಲ ಹಣೆಯ ಬಳಿ ಗುದ್ದಿದ ಗಾಯ, ಬಲಗೈ ಮೊಣಗಂಟಿಗೆ ಗುದ್ದಿದ ಗಾಯ ಹಾಗೂ ಬಲಪಾದದ ಬಳಿ ಮೂಳೆ ಮುರಿತದ  ಗಾಯ  ವಾಗಿದ್ದು ಹಾಗೂ ಪಿರ್ಯಾದಿದಾರರ ಪತ್ನಿಯಾದ ಸುಮಯ್ಯ ಹುಸೇನ್ ಸಾಬ್ (30)ರವರಿಗೆ ಹಣೆಯ ಮತ್ತು ಕಿಬ್ಬೊಟ್ಟೆ ಬಳಿ ಗಂಭೀರ ಸ್ವರೂಪದ ರಕ್ತಗಾಯ ಹಾಗೂ ಎಡಗಾಲಿನ ಪಾದದ ಬಳಿ ಮೂಳೆಮುರಿದ ಗಾಯ  ಮತ್ತು ಪಿರ್ಯಾದಿದಾರರ ತಂದೆ ಎ ಹೆಚ್  ಯಾಕುಬ್ (63)ರವರಿಗೆ ಬಲಗಾಲಿನ ಕೋಲುಕಾಲಿನ ಬಳಿ ಮೂಳೆಮುರಿತದ ಗಂಭೀರ ಸ್ವರೂಪದ  ರಕ್ತಗಾಯ  ಹಾಗೂ ಮುಖದ ಬಳಿ ತರಚಿದ ರಕ್ತಗಾಯ ಮತ್ತು ಪಿರ್ಯಾದಿದಾರರ ಮಗನಾದ ಮಹಮ್ಮದ್ ನಿಶಾನ್ (02) ರವರ ತಲೆಯ ಮತ್ತು ಎಡಕೆನ್ನೆಯ ಬಳಿ ತರಚಿದ ರಕ್ತಗಾಯವಾಗಿದ್ದು ಗಾಯಾಳುಗಳನ್ನು ಅಲ್ಲಿ ಸೇರಿದ ಸಾರ್ವಜನಿಕರು ಉಪಚರಿಸಿ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ ಹಾಗೂ ಅಪಘಾತ ಪಡಿಸಿದ ಬೈಕ್ ಸವಾರನಿಗೂ ಮುಖಕ್ಕೆ ಗಾಯವಾಗಿರುತ್ತದೆ ಎಂಬಿತ್ಯಾದಿ.

Crime Reported in Konaje PS

ದಿನಾಂಕ 27-01-2022 ರಂದು ಪಿರ್ಯಾದಿದಾರರಾದ PSI Shanaranappa Bhandari ರವರು  ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ 15-00 ಗಂಟೆಗೆ  ಬಂಟ್ವಾಳ ತಾಲೂಕು  ಕೈರಂಗಳ ಗ್ರಾಮದ ಮುಡಿಪು ದರ್ಖಾಸು ಬಳಿ  ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪಿತ ಜಾಫರ್ ಸಾಧಿಕ್ ಎಂಬಾತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆರೋಪಿತನು ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಸಿಬ್ಬಂದಿಯವರ ಸಹಾಯದಿಂದ ಆರೋಪಿತನನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿ  “Positive for Amphitemine and Morphine” ಎಂಬುದಾಗಿ  ದೃಢಫತ್ರವನ್ನು ನೀಡಿರುತ್ತಾರೆ.  ಆರೋಪಿ ಜಾಫರ್ ಸಾಧಿಕನು ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟ ಮೇರೆಗೆ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂಬಿತ್ಯಾದಿ.

Crime Reported in Barke PS              

ಪಿರ್ಯಾದಿದಾರರ ಮಗಳು ಸುಸನ್ನ ಡಿ’ ಕೋಸ್ತಾ ಪ್ರಾಯ(24) ವರ್ಷ ರವರು ಮಂಗಳೂರಿನ ಖಾಸಗೀ  ಆಸ್ಪತ್ರೆಯಲ್ಲಿ ಸುಮಾರು 9 ತಿಂಗಳಿನಿಂದ ನರ್ಸ್ ಆಗಿ ಕೆಲಸ ಮಾಡುತ್ತಿದ್ದು ದಿನಾಂಕ: 15.01.2022 ರಂದು ಬೆಳಗ್ಗೆ ಹಾಸ್ಟೆಲ್ ನಿಂದ ಆಸ್ಪತ್ರೆಗೆ ಕೆಲಸಕ್ಕೆ ಹೋಗಿ ಸಂಜೆ ಹಾಸ್ಟಲ್ ಗೆ ಬಂದು ಅಲ್ಲಿ ರಿಜಿಸ್ಟರ್ ಬುಕ್ ನಲ್ಲಿ ಸಂಜೆ ಸಮಯ 4.15 ಗಂಟೆಗೆ ನಾನು ಮನೆಗೆ ಹೋಗುತ್ತೇನೆಂದು ನಮೂದಿಸಿ ಮನೆಗೂ ಬಾರದೆ, ಹಾಸ್ಟೆಲ್ ಗೂ ಮರಳಿ ಹೋಗದೆ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದು,  ಈ ವರೆಗೂ ಹುಡುಕಾಡಿದರು ಪತ್ತೆಯಾಗಿರುವುದಿಲ್ಲ ಎಂಬಿತ್ಯಾದಿ ಸಾರಾಂಶ.

ಕಾಣೆಯಾದವರ ವಿವರ:

ಹೆಸರು: ಸುಸನ್ನಾ ಡಿ’ ಕೋಸ್ತಾ ಪ್ರಾಯ 24 ವರ್ಷ 

ಎತ್ತರ: 5’ 2 ಅಡಿ

ಮಾನಾಡುವ ಭಾಷೆ: ಕನ್ನಡ, ಕೊಂಕಣಿ, ಹಿಂದಿ, ಇಂಗ್ಲೀಷ,

ಬಣ್ಣ: ಗೋದಿ ಮೈಬಣ್ಣ, ಉದ್ದ ಮುಖ, ಸಪೂರ ಶರೀರ,

ಧರಿಸಿರುವ ಬಟ್ಟೆ: ಕಪ್ಪು ಜೀನ್ಸ್, ಕೆಂಪು ಬಣ್ಣದ ಟೀ ಶರ್ಟ್ ಧರಿಸಿರುತ್ತಾರೆ.

 

2) ದಿನಾಂಕ 27-01-2022  ರಂದು ಪಿರ್ಯಾದಿ ಟೀನಾ ದಾರರು  ಮತ್ತು ಅವರ ತಾಯಿ ಮನೆಯಲ್ಲಿಲ್ಲದ ಸಮಯ ಡೊನಾಲ್ಡ್ ಮತ್ತು ಆತನ ಸಹಚರರಾದ ಡೈನ್, ಶೈಲಾ, ರೋಶನ್, ಪೂರ್ಣಿಮಾ ಇತರರು ಮಿಷನ್ ಕೌಂಪೌಂಡ್ ಸುಲ್ತಾನ್ ಬತ್ತೇರಿಯಲ್ಲಿರುವ ದೂರುದಾರರ ಮನೆ ಎದುರಿಗೆ ಅಕ್ರಮವಾಗಿ ಬಂದು ,ಪಿರ್ಯಾದಿದಾರರ ಮನೆಗೆ ಹಾದು ಹೋಗುವ ದಾರಿಗೆ ಕಲ್ಲುಗಳನ್ನು ಹಾಕಿರುವ ಬಗ್ಗೆ ಪಿರ್ಯಾದಿದಾರರ ಮಗಳು ತಿಳಿಸಿದ್ದು, ಪಿರ್ಯಾದಿದಾರರು ಸಂಜೆ 06:15 ಗಂಟೆಗೆ ಮನೆಗೆ ಬಂದಾಗ ಮನೆಗೆ ಹೋಗುವ ದಾರಿಯನ್ನು ಕಲ್ಲುಗಳಿಂದ ಮುಚ್ಚಿದ್ದು, ಇದನ್ನು ಕೇಳಲು ಹೋದಾಗ ಡೋನಾಲ್ಡ್ ಎಂಬಾತನು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು , ಮೈ ಮೇಲೆ ಕೈ ಹಾಕಿ ಹೊಡೆದು ತಳ್ಳಿರುತ್ತಾರೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 28-01-2022 08:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080