ಅಭಿಪ್ರಾಯ / ಸಲಹೆಗಳು

Crime Reported in : Konaje PS

ದಿನಾಂಕ 28-02-2022 ರಂದು ಪಿರ್ಯಾದಿ Sharanappa Bhandari ದಾರರು  ಇಲಾಖಾ ವಾಹನದಲ್ಲಿ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಮಯ ಸುಮಾರು 10-30 ಗಂಟೆಗೆ ಮಂಗಳೂರು ತಾಲೂಕು ಬೆಳ್ಮ ಗ್ರಾಮದ ಕಣಕೂರು ಪದವು ಎಂಬಲ್ಲಿ ರಸ್ತೆ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆರೋಪಿ ಅರ್ಪಕ್ @ ಮುಹಮ್ಮದ್ ಅರ್ಪಾಕ್ ಪ್ರಾಯ: 22 ವರ್ಷ, ಎಂಬವನು ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಸಿಬ್ಬಂದಿಯವರ ಸಹಾಯದಿಂದ ಆರೋಪಿಯನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟ ಮೇರೆಗೆ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂಬಿತ್ಯಾದಿ.

Crime Reported in Kankanady Town PS              

ಪಿರ್ಯಾದುದಾರರು ಪ್ರಜ್ಞಾ ಸ್ವಾಧಾರ ಗೃಹದಲ್ಲಿ ಅದೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ 15-08-2021 ರಂದು ಉತ್ತರ ಪೊಲೀಸ್ ಠಾಣೆ, ಮಂಗಳೂರು ರವರು ಧುನುಶ್ರೀ ಪ್ರಾಯ 21 ವರ್ಷ,  ವಿಳಾಸ:ಕತ್ತಿಹೊಸಳ್ಳಿ, ದೊಡ್ಡಬಳ್ಳಾಪುರ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂಬುವರನ್ನು  ಪ್ರಜ್ಞಾ ಸ್ವಾಧಾರ ಗೃಹದಲ್ಲಿ ದಾಖಲು ಮಾಡಿದ್ದು ದಿನಾಂಕ 28-02-2022 ರಂದು 12:00 AM ಸಮಯಕ್ಕೆ ಧುನುಶ್ರೀ ಎಂಬುವರು ಪ್ರಜ್ಞಾ ಸ್ವಾಧಾರ ಗೃಹದಿಂದ ಕಾಣೆಯಾಗಿರುತ್ತಾರೆ.

ಕಾಣೆಯಾದವರ ವಿವರ, ಕುಮಾರಿ ಧನುಶ್ರೀ, ವಯಸ್ಸು: 21  ವರ್ಷ, ಎತ್ತರ: 5’ 1 ಅಡಿ, ಮೈಬಣ್ಣ: ಕಪ್ಪು ಮೈ ಬಣ್ಣ,  ಸಪೂರ  ಶರೀರ, ಕೋಲು ಮುಖ, ಕಪ್ಪು ತಲೆಗೂದಲು ಹೊಂದಿದ್ದು, ಹೋಗುವಾಗ ಕಪ್ಪು ಬಣ್ಣದ ಷರ್ಟ್, ನೇರಳೆ ಬಣ್ಣದ ¾ ಜೀನ್ಸ್ ಪ್ಯಾಂಟ್ ಧರಿಸಿದ್ದು, ಕನ್ನಡ ಭಾಷೆ ಮಾತನಾಡುವವರಾಗಿದ್ದು ಕಾಣೆಯಾದ ಧುನುಶ್ರೀ ಎಂಬುವರನ್ನು ಪತ್ತೇ ಮಾಡಿಕೊಡಬೇಕಾಗಿ ಎಂಬಿತ್ಯಾದಿ.

Crime Reported in Ullal PS

 ಪಿರ್ಯಾದಿದಾರರಾದ ರೇವಣಸಿದ್ದಪ್ಪ PSI ಉಳ್ಳಾಲ ಠಾಣೆ ರವರು ಸಿಬ್ಬಂಧಿಯವರ ಜೊತೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಖಚಿತ ಮಾಹಿತಿ ಮೇರೆಗೆ ದಿನಾಂಕ 28-02-2022 ರಂದು ಬೆಳಿಗ್ಗೆ 8-20 ಗಂಟೆ ಸಮಯಕ್ಕೆ ಸೋಮೇಶ್ವರ ಗ್ರಾಮದ ಪೆರಿಬೈಲ್ ಬೀಚ್ ಬಳಿ ಗಿರಾಕಿಗಳಿಗೆ ಹಣಕ್ಕಾಗಿ ಯಾವುದೇ ಪರವಾನಿಗೆ ಅಥವಾ ದಾಖಲಾತಿ ಹೊಂದದೆ ಅಕ್ರಮವಾಗಿ ಆರೋಪಿ ಮೊಹಮ್ಮದ್ ಅಫ್ರೀದನು ತನ್ನ ಕೈಯಲ್ಲಿ ಸುಮಾರು 700 ಗ್ರಾಂ ತೂಕದ ಮಾದಕ ವಸ್ತು ಗಾಂಜಾವನ್ನು ಪ್ಲಾಸ್ಟಿಕ್ ಕೈಚಿಲದಲ್ಲಿ ತುಂಬಿಸಿದ್ದ ಕಟ್ಟನ್ನು ಮತ್ತು ಅಶ್ಫಲ್ ಎಂಬಾತನು ತನ್ನ ಕೈಯಲ್ಲಿ ಸುಮಾರು 400 ಗ್ರಾಂ ತೂಕದ ಮಾದಕ ವಸ್ತು ಗಾಂಜಾವನ್ನು ಪ್ಲಾಸ್ಟಿಕ್ ಕೈಚಿಲದಲ್ಲಿ ತುಂಬಿಸಿದ್ದ ಕಟ್ಟನ್ನು ಕೈಯಲ್ಲಿ ಹಿಡಿದುಕೊಂಡು ಮಾರಾಟ ಮಾಡಲು ನಿಂತುಕೊಂಡಿದ್ದವರನ್ನು ಪತ್ತೆ ಮಾಡಿದ್ದು  ಆರೋಪಿಗಳಿಬ್ಬರ ವಶದಿಂದ ಅಂದಾಜು ಮೌಲ್ಯ 11000/- ರೂಪಾಯಿಯ ಮೌಲ್ಯದ ಸುಮಾರು 1 ಕೆಜಿ 100 ಗ್ರಾಂ ತೂಕದ ಮಾದಕ ವಸ್ತು ಗಾಂಜಾವನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

Crime Reported in Mangalore East PS

ಪಿರ್ಯಾದಿದಾರರಾದ  ರಾಜೇಂಧ್ರ ಕೆ. ರವರು ತನ್ನ ಬಾಬ್ತು KA-19-EZ2505 ನೇ ಅಪ್ರೀಲಾ ಕಂಪೆನಿಯ ಸ್ಕೂಟರ್ ನ್ನು ದಿನಾಂಕ: 23-02-2022 ರಂದು ಸಂಜೆ 7-30 ಗಂಟೆಗೆ  ಸ್ಕೂಟರ್ ನಲ್ಲಿ ಪೆಟ್ರೋಲ್ ಖಾಲಿಯಾದ ಕಾರಣ ಸ್ಕೂಟರ್ ನ್ನು ಮಂಗಳೂರು ನಗರದ ಸಿಟಿ ಆಸ್ಪತ್ರೆಯಲ್ಲಿರುವ ಅಭಿಮಾನ್ ಗಾರ್ಡನ್ ಹತ್ತಿರ ಪಾರ್ಕ್ ಮಾಡಿ ದಿನಾಂಕ: 24-02-2022 ರಂದು ಬೆಳಿಗ್ಗೆ 8-30 ಗಂಟೆಯ ಮದ್ಯೆ ಯಾರೋ ಕಳ್ಳರು ಕಳವು ಮಾಡಿ ಕೊಂಡು ಹೋಗಿದ್ದು, ಇದರ ಅಂದಾಜು ಮೌಲ್ಯ ರೂ: 70,000/- ಆಗಬಹುದು. ಇದರ ಚಾಸಿಸ್ ನಂ: MET0001AAWD049039 ಇಂಜಿನ್ ನಂಬರ್:  M911M3050278, ಮಾಡೆಲ್- 2018 ಬಣ್ಣ: ಕಪ್ಪು ಮತ್ತು ಕೆಂಪು ,  ಪಿರ್ಯಾದಿದಾರರು ಕಳವಾದ ತನ್ನ ಸ್ಕೂಟರ್ ನ್ನು ನಗರ ಎಲ್ಲಾ ಕಡೆ ಹುಡುಕಾಡಿ, ಸಿಗದ ಕಾರಣ ತಡವಾಗಿ ಬಂದು ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 28-02-2022 07:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080