ಅಭಿಪ್ರಾಯ / ಸಲಹೆಗಳು

Crime Reported in Kankanady Town PS

ಪಿರ್ಯಾದಿದಾರರ ಚಿಕ್ಕಪ್ಪನ ಮಗನಾದ ವಿಜಯ್ ( 22 ವರ್ಷ) ಎಂಬವರು ದಿನಾಂಕ 28/03/2022 ರಂದು ಮಧ್ಯಾಹ್ನ ಮಧ್ಯಾಹ್ನ 12.30 ಗಂಟೆಗೆ ಮಂಗಳೂರು ನಗರದ ಪಡೀಲ್‌ ಜಂಕ್ಷನ್‌ ನಲ್ಲಿ ನಿರ್ಮಾಣ ಹಂತದಲ್ಲಿರುವ ಪಡೀಲ್‌ ಗೇಟ್‌ ಎಂಬ ವಾಣಿಜ್ಯ ಮಳಿಗೆ ಬಹು ಮಹಡಿ ಕಟ್ಟಡದ  ನಾಲ್ಕನೇ ಮಳಿಗೆಯಲ್ಲಿ ಸಂದೇಶ್ ಹಾಗೂ ವಿಜಯ್‌ ಎಂಬವರುಗಳ ಜೊತೆಗೆ ನಾಲ್ಕನೇ ಮಳಿಗೆಯ ಹೊರಭಾಗದಲ್ಲಿ ಸ್ಟೆಪ್ ಹೋಲ್ಡ್ ಮೇಲೆ ನಿಂತು ಪ್ಯಾಬ್ರಿಕೇಶನ್‌ ಕೆಲಸದ ಅಳತೆ ಕೆಲಸ ಮಾಡುತ್ತಿದ್ದ ವೇಳೆ ವಿಜಯ್‌ನು ಆಯ ತಪ್ಪಿ ನಾಲ್ಕನೇ ಮಳಿಗೆಯಿಂದ ಸುಮಾರು 60 ಅಡಿ ಕೆಳಗೆ ನೆಲದಲ್ಲಿ ಕಾಂಕ್ರೀಟ್‌ ಹಾಕಿ ಮಾಡಿರುವ ನೀರಿನ ಟ್ಯಾಂಕಿನ ಮೇಲೆ ಬಿದ್ದು, ತಲೆಗೆ ತೀವ್ರ ರಕ್ತ ಗಾಯವಾದವರನ್ನು ಚಿಕಿತ್ಸೆಯ ಬಗ್ಗೆ ಕಂಕನಾಡಿಯ ಫಾದರ್ ಮುಲ್ಲರ್ಸ್‌ ಆಸ್ಪತ್ರೆಗೆ ಕರೆದುಕೊಂಡು ವೈದ್ಯರು ಮುಂದೆ ಹಾಜರು ಪಡಿಸಿದಾಗ ವೈದ್ಯರು ವಿಜಯ್‌ನನ್ನು ಪರೀಕ್ಷಿಸಿ ಮಧ್ಯಾಹ್ನ 12.45 ಗಂಟೆಗೆ ಈಗಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿದ್ದುದಾಗಿದೆ. ವಿಜಯನು ನಾಲ್ಕನೇ ಅಂತಸ್ತಿನಲ್ಲಿ ಕೆಲಸ ಮಾಡುವ ವೇಳೆ ಆತನಿಂದ ಪ್ಯಾಬ್ರಿಕೇಶನ್‌ ಕೆಲಸ ಮಾಡಿಸುತ್ತಿದ್ದವರ ಮೇಲೆ ಜಾಗದ ಮಾಲಿಕರು ಹಾಗೂ ಸದ್ರಿ ಕಟ್ಟಡದ ಕಂಟ್ರಾಕ್ಟ್ ದಾರರುಗಳು ಸುಮಾರು 60 ಅಡಿ ಎತ್ತರದಲ್ಲಿ ಬಿಲ್ಡಿಂಗ್‌ನ ಹೊರಭಾಗದಲ್ಲಿ ಸ್ಟೆಪ್ ಹೋಲ್ಡ್‌ ನಲ್ಲಿ ಕೆಲಸಗಾರರು ನಿಂತು ಕೆಲಸ ಮಾಡಲು ಸುರಕ್ಷತಾ ದೃಷ್ಟಿಯಿಂದ ಹಲಗೆಯಂತಹ ಕಬ್ಬಿಣದ ಜಾಲಿ ಅಳವಡಿಸಬೇಕಿದ್ದು, ಆದರೆ ಜಾಲಿ ಅಳವಡಿಸದೇ ಇದ್ದುದರಿಂದ ಹಾಗೂ ಕೆಲಸಗಾರರಿಗೆ ಸುರಕ್ಷತಾ ದೃಷ್ಟಿಯಿಂದ ಸೇಪ್ಟಿ ಬೆಲ್ಟ್‌, ಸೇಪ್ಟಿ ಹೆಲ್ಮೆಟ್‌ ನೀಡದೇ ತೀವ್ರ ನಿರ್ಲಕ್ಷವಹಿಸಿರುವುದೇ ಈ ಅನಾಹುತಕ್ಕೆ ಕಾರಣವಾಗಿರುತ್ತದೆ ಎಂಬಿತ್ಯಾದಿ.

   

Crime Reported in Mangalore Rural PS

 ಪಿರ್ಯಾದಿ Mahammad Shafiq ದಾರರು ಮಂಗಳೂರು ತಾಲೂಕು ಅರ್ಕುಳ ಗ್ರಾಮದ ವೈಟ್ ಶೆಲ್ ಅಪಾರ್ಟ್ ಮೆಂಟ್ ಪ್ಲಾಟ್ ನಂಬ್ರ 104 ರಲ್ಲಿ ವಾಸವಾಗಿರುತ್ತಾರೆ. ನಿನ್ನೆ ದಿನ ದಿನಾಂಕ 26/03/2022 ರಂದು ರಾತ್ರಿ 07.30 ಗಂಟೆಗೆ ತಮ್ಮ ಸುಜುಕಿ ಆಕ್ಸಸ್ ಸ್ಕೂಟರ್ ನಂಬ್ರ KA-21-X-7811 ನೇದನ್ನು ತಾವು ವಾಸವಾಗಿರುವ ಪ್ಲಾಟನ ಹೊರಗಡೆ ರಸ್ತೆ ಬದಿ ನಿಲ್ಲಿಸಿ ಲಾಕ್ ಮಾಡಿಕೊಂಡು ಹೋಗಿದ್ದು ದಿನಾಂಕ 27/03/2022 ರಂದು ಬೆಳಿಗ್ಗೆ 11.00 ಗಂಟೆಗೆ ಬಂದು ನೋಡಿದಾಗ ಸ್ಕೂಟರ್ ಇರದೆ ಇದ್ದು ಇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ನಂತರ ಪಿರ್ಯಾದಿದಾರರು ಫರಂಗಿಪೇಟೆ, ಮಂಗಳೂರು ಹಾಗೂ ಇತರ ಕಡೆಗಳಲ್ಲಿ ಹುಡುಕಾಡಿದ್ದು ಪತ್ತೆಯಾಗದೆ ಇರುತ್ತದೆ. ಕಳುವಾದ ಸ್ಕೂಟರ್ ಅಂದಾಜು ಮೌಲ್ಯ 35000/- ರೂ ಆಗಿದ್ದು ಕಳುವಾಗಿರುವ ಸ್ಕೂಟರನ್ನು ಪತ್ತೆ ಮಾಡಿಕೊಡುವರೇ ಕೋರಿಕೆ ಎಂಬಿತ್ಯಾದಿಯಾಗಿ ನೀಡಿದ ದೂರು.

                              

Crime Reported in Moodabidre PS

ಮೂಡಬಿದ್ರೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಿಗೆ  ದಿನಾಂಕ: 27-03-2022 ರಂದು 14-00 ಗಂಟೆಗೆ ಠಾಣಾ ಸರಹದ್ದಿನ ಮಾಂಟ್ರಾಡಿ  ಗ್ರಾಮದ ಚೆಂಡುದಕಲ ಎಂಬಲ್ಲಿ ಕೋಳಿ ಅಂಕ ಎಂಬ ಜೂಜಾಟ ನಡೆಸುತ್ತಿದ್ದಾರೆ ಎಂಬುದಾಗಿ ಬಾತ್ಮೀದಾರರಿಂದ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಗಳೊಂದಿಗೆ 14-30 ಗಂಟೆಗೆ ಕೋಳಿ ಅಂಕ ಎಂಬ ಜೂಜಾಟ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಸೆರೆಸಿಕ್ಕ 5 ಜನ ಆರೋಪಿಗಳು, 9 ಹುಂಜಗಳು , ಅಂಕಕ್ಕೆ ಬಳಸಿದ ನಗದು ರೂ, 5450/- ಹಾಗೂ ಕೋಳಿ ಬಾಲ್ ಗಳು 2, ಮತ್ತು ಕೋಳಿಯ ಕಾಲಿಗೆ ಬಾಳನ್ನು ಕಟ್ಟಲು ಉಪಯೋಗಿಸಿದ ಹಗ್ಗ ವನ್ನು ವಶಪಡಿಸಿಕೊಂಡಿರುವುದಾಗಿದೆ. ಸ್ವಾಧಿನಪಡಿಸಿಕೊಂಡ ನಗದು ಹಣ ಹಾಗೂ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ ರೂ. 5450=00 ಆಗಿರುತ್ತದೆ.

       

ಇತ್ತೀಚಿನ ನವೀಕರಣ​ : 28-03-2022 08:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080