ಅಭಿಪ್ರಾಯ / ಸಲಹೆಗಳು

Crime Reported in: Traffic North Police Station

ದಿ: 28-06-2022 ರಂದು ಪಿರ್ಯಾದಿ Jebi P V ರವರ ತಮ್ಮ ಜೈಸನ್ ಪಿ ವಿ ಎಂಬವರು ಆತನ ಸ್ನೇಹಿತ ವಿಜಯ್ ಕುಮಾರ್ ಎಂಬವರ KA-19-N-2592 ನಂಬ್ರದ ಕಾರನ್ನು ಪಡಕೊಂಡು ಬೈಕಂಪಾಡಿಯಲ್ಲಿರುವ ಪ್ರಜಾವಾಣಿ ಪ್ರೆಸ್ ಕ್ಲಬ್ ಕಡೆಗೆ ರಾ ಹೆ 66 ರ ಉಡುಪಿ ರಸ್ತೆಯಲ್ಲಿ ಕಾರನ್ನು ಚಲಾಯಿಸಿಕೊಂಡು ಹೋಗುವಾಗ ಸಮಯ ಸುಮಾರು ರಾತ್ರಿ 01:00 ಗಂಟೆಗೆ MCF ರೈಲ್ವೇ ಗೇಟ್ ನಿಂದ ಮುಂದೆ ಹೋಗುತಿದ್ದಂತೆ ಬೈಕಂಪಾಡಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತಿದ್ದ KA-19-MC 6810 ನಂಬ್ರದ ಕಾರಿನ ಚಾಲಕ ಅಖಿಲ್ ಬಿ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಕಾರನ್ನು ಚಲಾಯಿಸಿಕೊಂಡು ಬಂದು ಡಿವೈಡರ್ ಮೇಲಿಂದ ಹಾರಿ ರಸ್ತೆಯ ಇನ್ನೊಂದು ಬದಿಗೆ ಬಂದು ಪಿರ್ಯಾದಿದಾರರ ತಮ್ಮನ ಕಾರಿನ ಎದುರಿಗೆ ಡಿಕ್ಕಿ ಪಡಿಸಿದ ಪರಿಣಾಮ ಆತ ಚಲಾಯಿಸುತಿದ್ದ ಕಾರು ಜಖಂಗೊಂಡು ಆತನಿಗೆ ಬಲ ಕಾಲಿನ ಬಳಿ, ಬಲಗೈ ಮೊಣಗಂಟಿನ ಬಳಿ, ಮೂಳೆ ಮುರಿತದ ಗಾಯ ಹಾಗೂ ತಲೆಗೆ ಗುದ್ದಿದ ರೀತಿಯ ಗಾಯವಾಗಿ ರಕ್ತ ಬರುತಿದ್ದುದ್ದಲ್ಲದೇ ಎದೆಯ ಬಳಿ, ಎಡಕಾಲಿನ ಮೊಣಗಂಟಿನ ಬಳಿ, ಗದ್ದದ ಬಳಿ, ಹಾಗೂ ಕೈಗಳಲ್ಲಿ ತರಚಿದ ರೀತಿಯ ಗಾಯವಾಗಿ AJ Hospital ನಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾನೆ ಎಂಬಿತ್ಯಾಧಿ.

                                         

Crime Reported in:  Mangalore East Traffic PS

ದಿನಾಂಕ 25-06-2022 ರಂದು ಪ್ರಕರಣದ ಪಿರ್ಯಾದಿದಾರರಾದ ಶ್ರೀಮತಿ ವಾಯಲೆಟ್ ಮೊಂತೆರೋ ರವರು ತನ್ನ ಬಾಬ್ತು KA 19 L 1270 ಸ್ಕೂಟರ್ ನಲ್ಲಿ ಹಿಂಬದಿ ಸವಾರಿಣಿಯಾಗಿ ಮಗಳು ಅಲ್ಡ್ರೀನಾ ಡಿ ಸೋಜಾ ನನ್ನು ಕುಳ್ಳಿರಿಸಿಕೊಂಡು ವೆಲೆನ್ಸಿಯಾ ಕಡೆಯಿಂದ ಮಂಕಿಸ್ಟ್ಯಾಂಡ್ ಕಡೆಗೆ ಹೋಗುತ್ತಾ ರಾತ್ರಿ ಸಮಯ ಸುಮಾರು 10.30 ಗಂಟೆಗೆ ಜಪ್ಪು ಪೆಟ್ರೋಲ್ ಪಂಪ್ ಎದುರುಗಡೆ ಬಂದು ತಲುಪುತ್ತಿದ್ದಂತೆ ಪೆಟ್ರೋಲ್ ಪಂಪ್ ಒಳಗಡೆಯಿಂದ KL-14-T-4906 ನೇ ಮೋಟಾರ್ ಸೈಕಲನ್ನು ಅದರ ಸವಾರ ನಿರ್ಲಕ್ಷ್ಯತನದಿಂದ ಮತ್ತು ಅಜಾಗರೂಕತೆಯಿಂದ ಮುಖ್ಯ ರಸ್ತೆ ಕಡೆಗೆ ಚಲಾಯಿಸಿ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರ ಎಡ ಕೈಗೆ ಮೂಳೆ ಮುರಿತದ ಗಾಯ, ಹಿಂಬದಿ ಸವಾರಿಣಿ ಅಲ್ಡ್ರೀನಾ ಡಿ ಸೋಜಾಳಿಗೆ ಎಡ ಕಾಲಿನ ಅಸ್ಥಿರಜ್ಜುನಲ್ಲಿ ಮುರಿತ ಉಂಟಾಗಿದ್ದು, ಚಿಕಿತ್ಸೆಯ ಬಗ್ಗೆ ಫಾದರ್ ಮುಲ್ಲಾರ್ ಆಸ್ಪತ್ರೆಗೆ ತೆರಳಿದ್ದು, ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ. ಅಪಘಾತಪಡಿಸಿದ ಮೋಟಾರ್ ಸೈಕಲ್ ಸವಾರ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸದೇ ಇದ್ದು ಅಪಘಾತ ಕುರಿತಾಗಿ ಠಾಣೆಗೆ ಮಾಹಿತಿ ನೀಡಿರುವುದಿಲ್ಲ. ಅಪಘಾತ ಪಡಿಸಿದ KL-14-T-4906 ಮೋಟಾರ್ ಸೈಕಲ್ ಸವಾರನ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ಕೋರಿದೆ ಎಂಬಿತ್ಯಾದಿ.

 

Crime Reported in: Mangalore East Traffic PS               

ಪಿರ್ಯಾದಿದಾರರಾದ ಮೊಹಮ್ಮದ್ ಅಝರುದ್ದೀನ್ ರವರು ದಿನಾಂಕ; 26-06-2022 ರಂದು ಸಾಯಂಕಾಲ ಬಟ್ಟೆ ಖರೀದಿಸಲೆಂದು ತನ್ನ ಸ್ನೇಹಿತ ಮೊಹಮ್ಮದ್ ಅಝರುದ್ದೀನ್ ಎಂಬವರೊಂದಿಗೆ KA-19-EQ-4480 ನಂಬ್ರದ ಮೋಟಾರು ಸೈಕಲಿನಲ್ಲಿ ಹಿಂಬದಿ ಸಹಸವಾರನಾಗಿ ಕುಳಿತುಕೊಂಡು ನಂತೂರು ಮತ್ತು ಪದವಿನಲ್ಲಿರುವ ಬಟ್ಟೆ ಅಂಗಡಿಗೆ ಬಂದು ಯಾವುದೇ ಬಟ್ಟೆಗಳು ಇಷ್ಟವಾಗದೇ ಇದ್ದು ವಾಪಾಸು ಮನೆಗೆ ಹೋಗಲು ಪದವು ಕಡೆಯಿಂದ ನಂತೂರು ಕಡೆಗೆ ತುಂಬಾ ಟ್ರಾಫಿಕ್ ಇದ್ದ ಕಾರಣ ಪಿರ್ಯಾದಿದಾರರ ಸ್ನೇಹಿತ ಮೊಹಮ್ಮದ್ ಅಝರುದ್ದೀನ್ ನು ಈಡನ್ ಕ್ಲಬ್ ಒಳರಸ್ತೆಯ ಮೂಲಕ ಕಂಡೆಟ್ಟು ಕ್ರಾಸ್ ಕಡೆಗೆ ಹೋಗಲು ನಿರ್ಧರಿಸಿ ಪಿರ್ಯಾದಿದಾರರನ್ನು ಹಿಂಬದಿ ಸಹಸವಾರನಾಗಿ ಕುಳ್ಳಿರಿಸಿಕೊಂಡು ಮೋಟಾರು ಸೈಕಲನ್ನು ಈಡನ್ ಕ್ಲಬ್ ಒಳರಸ್ತೆಯ ಮೂಲಕ ಚಲಾಯಿಸುತ್ತಾ  ಹೊರಟು, ಸಾಯಂಕಾಲ ಸುಮಾರು 6-15 ಗಂಟೆಗೆ ಈಡನ್ ಕ್ಲಬ್ ಪಕ್ಕದಲ್ಲಿರುವ ಲೇಔಟ್ ದಾಟಿ ಸ್ವಲ್ಪ ಮುಂದೆ ಶಕ್ತಿನಗರ ಮುಖ್ಯ ರಸ್ತೆ ಕಡೆಗೆ ಹಾದು ಹೋಗಿರುವ ಕಚ್ಚಾ ಡಾಮಾರು ರಸ್ತೆಗೆ ಬಂದು ತಲುಪುತ್ತಿದ್ದಂತೆ ಮೋಟಾರು ಸೈಕಲನ್ನು ಮೊಹಮ್ಮದ್ ಅಝರುದ್ದೀನ್ ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು ಅವರ ಸ್ನೇಹಿತ ಮೊಹಮ್ಮದ್ ಅಝರುದ್ದೀನ್ ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದ ವೇಳೆ ಪಿರ್ಯಾದಿದಾರರ ಬಲಕಾಲು ಮೋಟಾರು ಸೈಕಲಿನ ಅಡಿಯಲ್ಲಿ ಸಿಲುಕಿದ್ದು ನಿಂತುಕೊಳ್ಳಲು ಆಗದಷ್ಟು ನೋವು ಕಾಣಿಸಿಕೊಂಡಿದ್ದರಿಂದ ಸ್ನೇಹಿತ ಮೊಹಮ್ಮದ್ ಅಝರುದ್ದೀನ್ ನೊಂದಿಗೆ ಹೈಲ್ಯಾಂಡ್ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿಕೊಂಡಲ್ಲಿ, ಅಲ್ಲಿನ ವೈದ್ಯರು ಬಲಕಾಲಿನ ಮೊಣಗಂಟಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇರುವುದಾಗಿ ತಿಳಿಸಿದಂತೆ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಈ ಬಗ್ಗೆ ಮೋಟಾರು ಸೈಕಲನ್ನು ಚಲಾಯಿಸುತ್ತಿದ್ದ ಮೊಹಮ್ಮದ್ ಅಝರುದ್ದೀನ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

 

 Crime Reported in:Traffic South Police Station

ದಿನಾಂಕ:27-06-2022 ರಂದು ಪಿರ್ಯಾದಿದಾರರು Smt KIRANA P K ಅವರ ಬಾಬ್ತು ಸ್ಕೂಟರ್ ನಂಬ್ರ KA-19-EV-7441 ನೇದರಲ್ಲಿ ಕೆಲಸದ ಬಗ್ಗೆ ಕಾಲೇಜ್ ಗೆ ಹೋಗಿ ವಾಪಾಸು ಮನೆಯ ಕಡೆಗೆ ಸವಾರಿಮಾಡಿಕೊಂಡು ಹೋಗಿತ್ತಿರುವಾಗ ಸಮಯ ಸುಮಾರು ಸಂಜೆ 04:00  ಗಂಟೆಗೆ ಮಂಗಳೂರು ತಾಲ್ಲೂಕು ಜೆಪ್ಪಿನಮೊಗೆರು ಗ್ರಾಮದ ಜೆಪ್ಪಿನಮೊಗೆರು ಎಂಬಲ್ಲಿಗೆ ತೊಕ್ಕೊಟ್ಟು ಕಡೆಯಿಂದ ಪಂಪ್ವೆಲ್ ಕಡೆಗೆ ಹೋಗುವ ರಾ.ಹೆ-66 ರ ಡಾಮಾರು ರಸ್ತೆಯಲ್ಲಿ ತಲುಪಿದಾಗ KA-19-HH-6664 ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ರಿತೇಶ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿಮಾಡಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರ್ ಗೆ ಹಿಂದಿನಿಂದ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಅವರ ಎಡ ಕೈಗೆ ಮೂಳೆ ಮುರಿತದ ಗಾಯ ಹಾಗೂ ತಲೆಗೆ ಗುದ್ದಿದ ಗಾಯ ಮತ್ತು ಬಲಕಾಲಿಗೆ ತರಚಿದ ಗಾಯವಾಗಿರುತ್ತದೆ,ಕೂಡಲೇ ಅವರನ್ನು ಚಿಕಿತ್ಸೆ ಬಗ್ಗೆ ಪಿರ್ಯಾದಿದಾರರ ಗಂಡ ಗೋವಿಂದ ಪ್ರಸಾದ್ ಹಾಗೂ ಅಪಘಾತಪಡಿಸಿದ ರಿತೇಶ್ ರವರು ಮಂಗಳೂರಿನ ಅಥೇನಾ  ಆಸ್ಪತ್ರೆಗೆ ಕಾರಿನಲ್ಲಿ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ, ಎಂಬಿತ್ಯಾದಿ.

Crime Reported in:Moodabidre PS

ದಿನಾಂಕ:26-06-2022 ರಂದು ಪಿರ್ಯಾದಿ SANTOSH KUMARರವರು ಕೆಎ-19-ಹೆಚ್‌ಡಿ-5284 ನಂಬ್ರದ ಸ್ಕೂಟರ್‌ನ್ನು ಸವಾರಿಮಾಡಿಕೊಂಡು ಹಿಂಬದಿಯ ಸಹ ಸವಾರರನ್ನಾಗಿ ಪಿರ್ಯಾದಿದಾರರ ದೂರದ ಸಂಬಂಧಿ ಸಂಜಯ್ ರವರನ್ನು ಕುಳ್ಳಿರಿಸಿಕೊಂಡು ಕೆಲಸದ ನಿಮಿತ್ತ ಪಡುಬಿದ್ರೆಗೆ ಹೋಗಿ ವಾಪಸ್ಸು ಮನೆ ಕಡೆಗೆ ಬರುತ್ತಾ ಕಡಲಕೆರೆ ಕ್ರಾಸ್ ಬಳಿ ತಲುಪುತ್ತಿದ್ದಂತೆ ಸಮಯ ಸುಮಾರು ರಾತ್ರಿ 10-30 ಗಂಟೆಗೆ ಅಲಂಗಾರು ಕಡೆಯಿಂದ ಕೆಎ-20-ಇಎಫ್-8286 ನಂಬ್ರದ ಮೋಟಾರು ಬೈಕನ್ನು ಅದರ ಸವಾರ ಅನಿಲ್ ಭಟ್ ರವರು ನಿರ್ಲಕ್ಷ್ಯತನ ಹಾಗೂ ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರ ಬಲಕೈ ಕಿರುಬೆರಳಿಗೆ ಮೂಳೆ ಮುರಿತದ ಗಾಯ ಹಾಗೂ ಬಲಕಾಲಿನ ಪಾದದ ಬಳಿ ಗುದ್ದಿದ ಗಾಯ ಹಾಗೂ ಹಿಂಬದಿ ಸಹ ಸವಾರರಾಗಿ ಕುಳಿತಿದ್ದ ಸಂಜಯ್ ರವರಿಗೆ ಬಲಕೈ ಕಿರುಬೆರಳಿಗೆ ರಕ್ತಗಾಯವಾಗಿದ್ದು, ಆಳ್ವಾಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮೌಂಟ್ ರೋಜರಿಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 28-06-2022 06:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080