ಅಭಿಪ್ರಾಯ / ಸಲಹೆಗಳು

Crime Reported in Mangalore East Traffic PS

ದಿನಾಂಕ: 08-08-2021 ರಂದು ಪಿರ್ಯಾದಿ Smt.Roopa ದಾರರ  ಗಂಡ ದಿನೇಶ್ ರವರು ಔಷಧಿ ತರಲು ಮಾರ್ನಮಿಕಟ್ಟೆ ಯಲ್ಲಿರುವ ಔಷಧಿ ಅಂಗಡಿಗೆ ಅವರ ಬಾಬ್ತು  ಬಜಾಜ್ ಪಲ್ಸರ್ KA-19-HD-1537 ನಂಬ್ರದ ಮೋಟಾರು ಸೈಕಲ್ ನಲ್ಲಿ ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 8:15 ಗಂಟೆಗೆ ಮಾರ್ನಮಿಕಟ್ಟೆಯ ಬಳಿ ತಲುಪುತ್ತಿದ್ದಂತೆ PY-01-BZ-9595 ನಂಬ್ರದ ಕಾರನ್ನು ಅದರ ಚಾಲಕ ಮಾರ್ನಮಿಕಟ್ಟೆ ಕಡೆಯಿಂದ ಮೋರ್ಗನ್ಸ್ ಗೇಟ್ ಕಡೆಗೆ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ಮಾನವ ಜೀವಕ್ಕೆ  ಅಪಾಯಕಾರಿಯಾದ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಗಂಡ ದಿನೇಶ್ ಸವಾರಿ ಮಾಡಿಕೊಂಡಿದ್ದ ಮೋಟಾರು ಸೈಕಲಿಗೆ ಮುಖಾಮುಖಿ ಡಿಕ್ಕಿ ಪಡಿಸಿದ್ದು, ಢಿಕ್ಕಿಯ ಪರಿಣಾಮ ಮೋಟಾರು ಸೈಕಲ್ ಸವಾರ ದಿನೇಶ್ ರವರು ಮೋಟಾರು ಸೈಕಲ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದು, ಎಡ ಕಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು, ಅಪಘಾತ ಪಡಿಸಿದ ಕಾರು ಚಾಲಕನು  ಗಾಯಾಳು ದಿನೇಶ್ ರವರನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿರುವುದಾಗಿದೆ. ಬಳಿಕ ಸಾರ್ವಜನಿಕರ ಸಹಾಯದಿಂದ ಪಿರ್ಯಾದಿದಾರರು ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಯುನಿಟಿ ಆಸ್ಪತ್ರೆಗೆ ದಾಖಲಿಸಿದ್ದು, ಅಪಘಾತ ಪಡಿಸಿದ ಕಾರು ಚಾಲಕನು ಚಿಕಿತ್ಸೆಯ ವೆಚ್ಚವನ್ನು ನೀಡುವುದಾಗಿ ಹೇಳಿದ್ದು, ಇಲ್ಲಿಯ ತನಕ ನೀಡದೇ ಸತಾಯಿಸಿದ ಕಾರಣ ತಡವಾಗಿ ದೂರು ನೀಡಿರುವುದಾಗಿದೆ.

Crime Reported in Konaje PS

1) ದಿನಾಂಕ:28.08.2021 ರಂದು ಪಿರ್ಯಾದಿದಾರರಾದ ಪಿಐ ಪ್ರಕಾಶ್ ದೇವಾಡಿಗ ರವರು ಇಲಾಖಾ ವಾಹನದಲ್ಲಿ ಸಿಬ್ಬಂದಿಯವರಾದ ಹೆಚ್ ಸಿ  ರಮೇಶ್ ರವರ ಜೊತೆ  ಠಾಣಾ  ವ್ಯಾಪ್ತಿಯಲ್ಲಿ ವಿಶೇಷ ರೌಂಡ್ಸ್ ಮಾಡುತ್ತಾ ಸಮಯ ಬೆಳಗ್ಗೆ ಸುಮಾರು 06.30  ಗಂಟೆಗೆ ಮಂಗಳೂರು ತಾಲೂಕು ಕೊಣಾಜೆ ಗ್ರಾಮದ ಗಣೇಶ್ ಮಹಲ್ ಎಂಬಲ್ಲಿ ತಲುಪಿದಾಗ ಕೊಣಾಜೆ ಕಡೆಯಿಂದ ದೇರಳಕಟ್ಟೆ ಕಡೆಗೆ  ಬರುತ್ತಿದ್ದ ಮರಳು ತುಂಬಿದ ಲಾರಿ ನಂಬ್ರ ಕೆಎಲ್.14.ಡಿ  6997  ನೇದರ ಚಾಲಕನು ಪೊಲೀಸು ವಾಹನವನ್ನು ಕಂಡು  ರಸ್ತೆ ಬದಿಯಲ್ಲಿ ನಿಲ್ಲಿಸಿ ಪರಾರಿಯಾಗಿದ್ದು, ಅವನ ಹೆಸರು ಸಂದೀಪ್ ಎಂಬುದಾಗಿ ತಿಳಿದು ಬಂದಿದ್ದು ಆರೋಪಿಯು ಸದ್ರಿ ಲಾರಿಯಲ್ಲಿ ಎಲ್ಲಿಯೋ ನದಿ ತೀರದಿಂದ ಮರಳನ್ನು ಕಳವು ಮಾಡಿ ತುಂಬಿಸಿ ಕರ್ನಾಟಕ ಸರಕಾರಕ್ಕೆ ಯಾವುದೇ ರಾಜಧನವನ್ನು ಪಾವತಿಸದೇ ಹಾಗೂ ಯಾವುದೇ ದಾಖಲೆ ಪತ್ರಗಳಿಲ್ಲದೇ ಅಧಿಕ ಲಾಭ ಪಡೆಯುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದುದ್ದನ್ನು ಪತ್ತೆ ಹಚ್ಚಿ, ಮರಳು ತುಂಬಿದ ಲಾರಿಯನ್ನು ಸ್ವಾಧೀನಪಡಿಸಿಕೊಂಡು ಠಾಣೆಗೆ ತಂದು ಆರೋಪಿಯ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

2) ದಿನಾಂಕ 28-08-2021 ರಂದು ಪಿರ್ಯಾದಿ Sharanappa Bhandari PSI ದಾರರು  ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಬೆಳಿಗ್ಗೆ ಸುಮಾರು 11:45 ಗಂಟೆಗೆ ಮಂಗಳೂರು ತಾಲೂಕು ಮಂಜನಾಡಿ ಗ್ರಾಮದ ನಾಟೆಕಲ್ ವಿಜಯ ನಗರ ಎಂಬಲ್ಲಿ ಕಿನ್ಯಾ ಕಡೆಗೆ ಹೋಗುವ ರಸ್ತೆ ಬದಿಯಲ್ಲಿ ಧೂಮಪಾನ ಮಾಡತ್ತಿದ್ದ ಮೂವರು ಯುವರಕನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಅವರುಗಳು ಗಾಂಜಾ ಎಂಬ ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿ ಗಾಂಜಾ ಸೇವನೆ ಮಾಡಿದ ಬಗ್ಗೆ ದೃಢಪಟ್ಟ ಮೇರೆಗೆ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂಬಿತ್ಯಾದಿ.

Crime Reported in Bajpe PS

ಪಿರ್ಯಾದಿ Mohan ದಾರರು ದಿನಾಂಕ: 27-08-2021 ರಂದು ಸಮಯ ಸುಮಾರು 18.00 ಗಂಟೆಗೆ ಅವರ ಪರಿಚಯದ ಉಮೇಶ್ ಎಂಬವರ ಬಾಬ್ತು ಸ್ಕೂಟರ್ ನಂಬ್ರ ಕೆಎ 19 ಇವೈ 2817 ನೇದರಲ್ಲಿ ಸಹಸವಾರನಾಗಿ  ಕುಳಿತು ಮನೆ ಕಡೆಗೆ ತೆರಳುತ್ತಿದ್ದಾಗ ಮಂಗಳೂರು ತಾಲೂಕು  ಕೆಂಜಾರು ಗ್ರಾಮದ, ಅಂತೋಣಿಕಟ್ಟೆ ಬಳಿ ತಲುಪುತ್ತಿದ್ದಂತೆ ಸ್ಕೂಟರ್ ಸವಾರ ಉಮೇಶ್ ನು ಸ್ಕೂಟರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಸ್ಕೂಟರ್ ನ ಹಿಂದಿನ ಟಯರ್ ಪಂಚರ್ ಆಗಿ ಸವಾರನ ನಿಯಂತ್ರಣ ತಪ್ಪಿ ಸವಾರ ಉಮೇಶ್ ಹಾಗೂ ಸಹಸವಾರರಾದ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು  ಪಿರ್ಯಾದಿದಾರರ ಎಡಕೈ ಮೊಣಗಂಟಿಗೆ ಮೂಳೆ ಮುರಿತದ ಗಾಯ ಹಾಗೂ ಉಮೇಶ್ ರವರಿಗೆ ಅಲ್ಲಲ್ಲಿ ಗುದ್ದಿದ ನೋವಾಗಿದ್ದು, ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ ಲಾಕ್  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ” ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 28-08-2021 07:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080