ಅಭಿಪ್ರಾಯ / ಸಲಹೆಗಳು

Crime Reported in Mangalore West Traffic PS

ದಿನಾಂಕ: 27-10-2021 ರಂದು ಸಮಯ ಸುಮಾರು ಬೆಳಿಗ್ಗೆ   08-30 ಗಂಟೆಗೆ ಫಿರ್ಯಾದಿ RAJESH C V

ದಾರರು ತನ್ನ ಬಾಬ್ತು ದ್ವಿಚಕ್ರ ವಾಹನ ಕೆಎ 19 ಇಪಿ 4846 ನೇದರಲ್ಲಿ ಮಗಳಾದ ಕಲಾಶ್ರೀ (11) ಎಂಬಾಕೆಯನ್ನು ಸಹ ಸವಾರಿನಿಯಾಗಿ ಕುಳ್ಳಿರಿಸಿಕೊಂಡು ಲೇಡಿಹಿಲ್ ಕಡೆಯಿಂದ ಲಾಲ್ ಭಾಗ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಲೇಡಿಹಿಲ್ ಕಡೆಯಿಂದ ಲಾಲ್ ಬಾಗ್ ಕಡೆಗೆ ಲಾರಿ ನಂಬ್ರ ಕೆಎ -12 – 9653 ನೇದನ್ನು ಅದರ ಚಾಲಕ ಕೃಷ್ಣಪ್ಪ ರವರು ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷತನದಿಂದ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಲೇಡಿಹಿಲ್ ಪೆಟ್ರೋಲ್ ಬಂಕ್ ಬಳಿ ತಲುಪುತ್ತಿದ್ದಂತೆ ಯಾವುದೇ ಸೂಚನೆಯನ್ನು ನೀಡದೇ ಒಮ್ಮೇಲೆ ಎಡಕ್ಕೆ ತಿರುಗಿಸಿದ ಪರಿಣಾಮ ಲಾರಿಯ ಎಡಭಾಗದ ಹಿಂಬದಿಯ ಬಾಡಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಫಿರ್ಯಾದಿದಾರರು ಮತ್ತು ಅವರ ಮಗಳು ವಾಹನ ಸಮೇತ ರಸ್ತೆಗೆ ಬಿದ್ದು, ಫಿರ್ಯಾದಿದಾರರ ಬಲಕಾಲಿನ ಪಾದಕ್ಕೆ ಮೂಳೆ ಮುರಿತದ ಗಾಯ ಹಾಗೂ ಫಿರ್ಯಾದಿದಾರರ ಮಗಳಾದ ಕು|| ಕಲಾಶ್ರೀ ಗೆ ಬಲಕೈಗೆ ತರಚಿದ ಗಾಯವಾಗಿದ್ದು,  ಚಿಕಿತ್ಸೆಯ ಬಗ್ಗೆ ಯೆನಪೋಯ ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಸರಕಾರಿ ಜಿಲ್ಲಾ ವೆನ್ಲಾಕ್ ಅಸ್ಪತ್ರೆಯಲ್ಲಿ  ಫಿರ್ಯಾದಿದಾರರನ್ನು ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಾಗಿರುತ್ತಾರೆ. ಫಿರ್ಯಾದಿದಾರರ ಮಗಳು ಯೆನಪೋಯ ಅಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ತೆರಳಿರುತ್ತಾರೆ ಎಂಬಿತ್ಯಾದಿ.

 

Crime Reported in Mangalore North PS

ಪಿರ್ಯಾದಿ JOSSY  VEIGAS ದಾರರ ಒಂದನೇ ಮಗಳು  ಜಸ್ವಿತಾ ವೇಗಸ್ 25 ಎಂಬುವವಳು ಸುಮಾರು 05 ವರ್ಷಗಳಿಂದ ಮಂಗಳೂರಿನ ಜ್ಯೋತಿ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ಬಿಲ್ಲಿಂಗ್ ಸೆಕ್ಷನ್ ನಲ್ಲಿ ಕೆಲಸ ಮಾಡುತ್ತಿದ್ದು, ನಿನ್ನೆ ದಿನ ದಿನಾಂಕ 26.10.2021 ರಂದು ನಮ್ಮ ಮನೆಯಾದ ಮಂಗಳೂರಿನ ಮರಕಡದಿಂದ ಬೆಳಗ್ಗೆ 09.15 ಕ್ಕೆ ಹೊರಟು ಜ್ಯೋತಿ ಕೆ.ಎಮ್.ಸಿ ಆಸ್ಪತ್ರೆಗೆ ಕೆಲಸಕ್ಕೆಂದು ಬಂದಿದ್ದು ನಂತರ ಮನೆಗೆ ಬಂದಿರುವುದಿಲ್ಲ ದಿನಾಂಕ 27.10.2021 ರಂದು ಮಧ್ಯಾಹ್ನ ಜ್ಯೋತಿ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಅವಳು ದಿನಾಂಕ 26.10.2021 ರಂದು ಸಂಜೆ 07.15 ಕ್ಕೆ ಕೆಲಸ ಮುಗಿಸಿ ಮನೆಗೆ ಹೊರಟಿರುವುದಾಗಿ ತಿಳಿಸಿದ್ದು, ಆ ನಂತರ ಮಂಗಳೂರಿನ ಸಂಭಂದಿಕರಲ್ಲಿ ವಿಚಾರಿಸಿದಾಗ ಅಲ್ಲಿಯು ಇಲ್ಲವೆಂದು ತಿಳಿಸಿದ್ದು ಎಲ್ಲಾ ಕಡೆ ಹುಡುಕಿ ಬಂದಿದ್ದು,  ಪಿರ್ಯಾದಿದಾರ ಮಗಳು ಜಸ್ವಿತಾ ವೇಗಸ್ ರವರು ಈವರೆಗೂ ಕೂಡ ವಾಪಾಸ್ಸು ಮನೆಗೆ ಬಂದಿರುವುದಿಲ್ಲ. ಆದ್ದರಿಂದ ಕಾಣೆಯಾದ ವ್ಯಕ್ತಿಯನ್ನು ಪತ್ತೆಹಚ್ಚಿಕೊಡಬೇಕೆಂಬಿತ್ಯಾದಿಯಾಗಿದೆ.

ಕಾಣೆಯಾದ ವ್ಯಕ್ತಿಯ ಚಹರೆ:

ಎತ್ತರ 5’6” ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ, ವಿದ್ಯಾಭ್ಯಾಸ:ವಾಣಿಜ್ಯ ಪಧವೀಧರೆ, ಕನ್ನಡ, ತುಳು, ಇಂಗ್ಲೀಷ್, ಕೊಂಕಣಿ ಭಾಷೆ ಮಾತನಾಡುತ್ತಾನೆ. ಗುಲಾಬಿ ಮತ್ತು ನೀಲಿ ಬಣ್ಣದ ಸೀರೆ ಧರಿಸಿರುತ್ತಾನೆ.

Crime Reported in Kankanady Town PS

ದಿನಾಂಕ 18-10-2021 ರಂದು ಪಿರ್ಯಾದಿ Smt  R Padmashri ದಾರರಿಗೆ ಮಂಗಳೂರು ತಾಲೂಕು ಕಣ್ಣೂರು ಗ್ರಾಮದ ಮಾತಾ ನರ್ಸರಿ ಬಳಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಉಪನಿರ್ದೇಶಕರ  ಮೌಖಿಕ ಆದೇಶದಂತೆ ಪಿರ್ಯಾದಿದಾರರು ಹಾಗೂ ಸಿಬ್ಬಂದಿಗಳೊಂದಿಗೆ ಬೆಳಗ್ಗೆ 04-00 ಗಂಟೆಗೆ ದಾಳಿ ಮಾಡಿ ಸ್ಥಳ ಪರಿಶೀಲನೆ ಮಾಡಿದಾಗ ಮರಳುಗಾರಿಕೆ ನಡೆಸುತ್ತಿರುವುದು ಟಾರ್ಚ್ ಬೆಳಕಿನಲ್ಲಿ ಕಂಡು ಬಂದಿರುತ್ತದೆ, ಸದ್ರಿ ಮರಳುಗಾರಿಕೆ ನಡೆಸುತ್ತಿದ್ದ ಪ್ರದೇಶವನ್ನು ಸಮೀಪಿಸುತ್ತಿದ್ದಾಗ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ಕಾರ್ಮಿಕರು ಹಾಗೂ ವಾಹನ ಚಾಲಕರು ಓಡಿ ಹೋಗಿರುತ್ತಾರೆ, ಸದ್ರಿ ಪ್ರದೇಶದಲ್ಲಿದ್ದ KA-19 AC-8613, KA-42 7047 ನೇ ಟಿಪ್ಪರ್ ಗಳು  ಹಾಗೂ ಮರಳನ್ನು ತುಂಬಲು ಬಳಸುತ್ತಿದ್ದ ಜೆಸಿಬಿ 3DX KA-19-MK-7310 ಅನ್ನು ಮಹಜರು ಮುಖೇನಾ ವಶಪಡಿಸಿಕೊಳ್ಳಲಾಯಿತು. ನಂತರ  ಪೊಲೀಸರ ಸಹಾಯದಿಂದ ಠಾಣಾ ಸುಪರ್ದಿಗೆ ನೀಡಲಾಗಿದೆ.  ಸದ್ರಿ ಕೃತ್ಯದಲ್ಲಿ ಸರ್ಕಾರಿ ಸ್ವತ್ತನ್ನು ಕಳ್ಳತನ ಮಾಡಿ ಸಾಗಣಿಕೆ ಮಾಡಿರುತ್ತಾರೆ. ಹಾಗಾಗಿ ಸದ್ರಿರವರುಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ   ನೀಡಿದ ಪಿರ್ಯಾದಿ ಸಾರಾಂಶ ಎಂಬಿತ್ಯಾದಿ.

 

2) ದಿನಾಂಕ 08-10-2021 ರಂದು ಪಿರ್ಯಾದಿ Smt. R Padmashri ದಾರರಿಗೆ ಮಂಗಳೂರು ತಾಲೂಕು ಫೈಜಲ್ ನಗರ ಬಜಾಲ್/ಬಡ್ಲ ಪ್ರದೇಶಗಳಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಉಪನಿರ್ದೇಶಕರ  ಮೌಖಿಕ ಆದೇಶದಂತೆ ಪಿರ್ಯಾದಿದಾರರು ಹಾಗೂ ಸಿಬ್ಬಂದಿಗಳೊಂದಿಗೆ ನದಿಯಲ್ಲಿ(ನೇತ್ರಾವತಿ) ದೋಣಿಗಳ ಮೂಲಕ ಹೋಗಿ ದಾಳಿ ನಡೆಸಿ ಸದ್ರಿ ಮರಳುಗಾರಿಕೆ ನಡೆಯುತ್ತಿದ್ದ ಪ್ರದೇಶದಲ್ಲಿ ಒಟ್ಟು 12 ದೋಣಿಗಳನ್ನು ವಶಪಡಿಸಿಕೊಳ್ಳಲಾಯಿತು. ವಶಪಡಿಸಿಕೊಂಡ ದೋಣಿಗಳನ್ನು ಮಳಲಿ ಸ್ಟಾಕ್ ಯಾರ್ಡ್ ಗೆ  ಕೊಂಡೊಯ್ಯಲು 35 ಕಿಮೀ ಇದ್ದು ಟ್ರೇಲರ್ಸ್ ಗಳ  ವ್ಯವಸ್ಥೆ ಲಭ್ಯವಾಗದಿದ್ದರಿಂದ ಜಪ್ಪಿನಮೊಗೆರು ಕಡೇಕಾರು ನಂದರಾಜ್ ಇವರ ದಕ್ಕೆಯಲ್ಲಿ ದೋಣಿಗಳನ್ನು ಇರಿಸಲಾಗಿದೆ. ಸದ್ರಿ ದೋಣಿಗಳ ಮಾಲೀಕರ ಮಾಹಿತಿ ಲಭ್ಯವಾಗಿರುವುದಿಲ್ಲ. ಸದ್ರಿ ಕೃತ್ಯದಲ್ಲಿ ಸರ್ಕಾರಿ ಸ್ವತ್ತನ್ನು ಕಳ್ಳತನದಿಂದ ತೆಗೆದು ಸಾಗಣಿಕೆ ಮಾಡಿರುತ್ತಾರೆ. ಹಾಗಾಗಿ ಸದ್ರಿ ದೋಣಿಗಳ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ  ನೀಡಿದ ಪಿರ್ಯಾದಿ ಸಾರಾಂಶ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 28-10-2021 09:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080