ಅಭಿಪ್ರಾಯ / ಸಲಹೆಗಳು

Crime Reported in Konaje PS

ಪಿರ್ಯಾದಿ Mahammad Haneef ದಾರರು ದಿನಾಂಕ 07.04.2022 ರಂದು ಬೆಳಿಗ್ಗೆ 05.15 ಗಂಟೆಗೆ ಎಂದಿನಂತೆ KA 19 EZ 9651 ನೇ ಪಲ್ಸರ್ ಬೈಕ್ ನಲ್ಲಿ ಮನೆಯಿಂದ ಬಂಟ್ವಾಳ ತಾಲೂಕು ಪಜೀರು ಗ್ರಾಮದ ನಡುಹಿತ್ಲು ಎಂಬಲ್ಲಿರುವ ಮಸ್ಜಿದ್ದುಲ್ಲಾ ಮದೀನಾ ಮಸೀದಿಗೆ ಬಂದು ಕಂಪೌಂಡ್ ನ ಹೊರಗಡೆ ಬೈಕ್ ನ್ನು ನಿಲ್ಲಿಸಿ, ನಮಾಜಿಗೆ ಹೋಗಿದ್ದು, ಬೆಳಿಗ್ಗೆ 05.30 ಗಂಟೆಗೆ ನಮಾಜ್ ಮುಗಿಸಿ ವಾಪಾಸ್ಸು ಬಂದು ನೋಡಿದಾಗ ಬೈಕ್ ನ್ನು ಯಾರೋ ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದ್ದು, ಈ ಬಗ್ಗೆ  ಪಿರ್ಯಾದಿದಾರರು ಸದ್ರಿ ಮೋಟರ್ ಸೈಕಲ್ ನ್ನು ಎಲ್ಲಾ ಕಡೆ ಹುಡುಕಾಡಿ, ಈವರೆಗೆ ಪತ್ತೆಯಾಗದಿರುವುದರಿಂದ ಈ ದಿನ ಠಾಣೆಗೆ ಬಂದು ಬೈಕ್ ಪತ್ತೆ ಮಾಡಿಕೊಡಬೇಕೆಂದು ದೂರು ನೀಡಿರುತ್ತಾರೆ ಎಂಬಿತ್ಯಾದಿ.

 

Crime Reported in Urva PS           

ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳೂರು ಗ್ರಾಮದ ಉರ್ವಾ ಮಾರಿಗುಡಿ ದೇವಸ್ಥಾನದ ಬಳಿ ರುಗಾನಾಥ ಶರ್ಮ ಎಂಬವರ ಮನೆಯ ನಿರ್ಮಾಣದ ಗುತ್ತಿಗೆಯನ್ನು ಮಹೇಶ್ ಕಾಮತ್ ಎಂಬವರು ವಹಿಸಿಕೊಂಡಿದ್ದು ಇವರ ಕೈಕೆಳಗೆ ಪಿರ್ಯಾದಿ Harishchandra ದಾರರು ಹಾಗೂ ಗಾಯಾಳುಗಳಾದ ಕಿರಣ್ ಮತ್ತು ಹನುಮಂತ ರವರು ಮತ್ತು ಇತರರು ಕೆಲಸವನ್ನು ಮಾಡುತ್ತಿದ್ದು ಆ ಸಮಯ ಕೆಲಸದ ಮೇಲ್ವಿಚಾರಣೆಯನ್ನು ಸುಪರ್ ವೈಸರ್ ನಿತಿನ್ ರವರು ನೋಡಿಕೊಳ್ಳುತ್ತಿದ್ದು ಎಂದಿನಂತೆ ತಾರೀಖು 28-04-2022 ರಂದು ಬೆಳಿಗ್ಗೆ 11-00 ರ ವೇಳೆಗೆ ಸುಪರ್ ವೈಸರ್ ನಿತಿನ್ ರವರು ತಿಳಿಸಿದಂತೆ ಪಿರ್ಯಾದಿ ಹಾಗೂ ಗಾಯಾಳು ಹನುಮಂತ ಮತ್ತು ಕಿರಣ್ ರವರು ಒಂದನೇ ಮಹಡಿಯ ಮೇಲ್ಗಡೆ ನಿರ್ಮಿಸಿದ 15x4 ಉದ್ದಗಲದ ಕಾಂಕ್ರೀಟ್ ಸ್ಲಾಪ್ ನ ನಿರ್ಮಾಣಕ್ಕೆ ಬಳಸಿರುವ ಕಬ್ಬಿಣದ ತಗಡ್ ಶೀಟ್ ಮತ್ತು ಕಬ್ಬಿಣದ ಕಂಬ(ಗುಜ್ಜಿ) ಕೀಳುತ್ತಿದ್ದ ಸಮಯ, ಕೆಲಸದ ನಿಮಿತ್ತ ಪಿರ್ಯಾದಿದಾರರು ಮೇಲ್ಗಡೆಯಿಂದ ಕೆಳಗಡೆಗೆ ಬಂದು ಕೆಲಸ ಕೇಳಲು ಬಂದಿದ್ದ ಅಪರಿಚಿತ ವ್ಯಕ್ತಿ ಸಲೀಂ ಎ ಶೇಖ್ ರವರಿಂದ ಸ್ವಲ್ಪ ದೂರ ನಿಂತಿದ್ದು ಆ ಸಮಯ ಒಂದನೇ ಮಹಡಿಯ ಮೇಲ್ಗಡೆ ನಿರ್ಮಿಸಿರುವ ಸ್ಲಾಪ್ ಸಮೇತ ಕೆಲಸ ಮಾಡಿಕೊಂಡಿದ್ದ ಹನುಮಂತ ಮತ್ತು ಕಿರಣ್ ರವರು ಕೆಳಗಡೆ ಬಿದ್ದಿದ್ದು ಈ ಸ್ಲಾಪ್ ನ ಒಂದು ಬದಿಯು ಕೆಲಸ ಕೇಳಲು ಬಂದು ಕೆಳಗಡೆ ನಿಂತು ನಾವು ಕೆಲಸ ಮಾಡುವುದನ್ನು ನೋಡುತ್ತಿದ್ದ ಸಲೀಂ ಎ ಶೇಖ್ ರವರಿಗೆ ತಾಗಿ ಅವರು ತೀವ್ರ ಸ್ವರೂಪದ ಗಾಯಗೊಂಡಿದ್ದು, ಗಾಯಗೊಂಡಿದ್ದ ಹನುಮಂತ, ಕಿರಣ್ ಮತ್ತು ಸಲೀಂ  ರವರನ್ನು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ಗಾಯಾಳುಗಳನ್ನು ಪರೀಕ್ಷಿಸಿ ತೀವ್ರ ಸ್ವರೂಪದ ಗಾಯಗೊಂಡಿದ್ದ ಕಿರಣ್ ಮತ್ತು ಹನುಮಂತ ರವರನ್ನು ಒಳರೋಗಿಯನ್ನಾಗಿ ದಾಖಲಿಸಿಕೊಂಡಿದ್ದು, ಸಲೀಂ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಘಟನೆ ಕಟ್ಟಡ ಮಾಲಕ ರುಗಾನಾಥ ಶರ್ಮ ಮತ್ತು ಗುತ್ತಿಗೆದಾರ ಮಹೇಶ್ ಕುಮಾರ್ ರವರು ಕೆಲಸಗಾರರನ್ನು ಎತ್ತರವಾದ ಕಟ್ಟಡದಲ್ಲಿ ಕೆಲಸ ಮಾಡಿಸುವ ಸಮಯ ಸರಿಯಾದ ಸುರಕ್ಷಿತ ಸಾಮಾಗ್ರಿಗಳಾದ ಹೆಲ್ಮೆಟ್, ಜಾಕೇಟ್ ಮತ್ತು ಸೆಫ್ಟಿ ಬೆಲ್ಟ್ ನ್ನು ನೀಡದೆ ನಿರ್ಲಕ್ಷತನದಿಂದ ಕೆಲಸ ಮಾಡಿಸಿರುವುದಲ್ಲದೆ ಕೆಲಸದ ಸ್ಥಳದಲ್ಲಿ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದ ಸುಪರ್ ವೈಸರ್ ನಿತಿನ್ ರವರು ಸರಿಯಾದ ಮಾರ್ಗದರ್ಶನವನ್ನು ನೀಡದೇ ಸುರಕ್ಷಿತ ಕ್ರಮವನ್ನು ಅನುಸರಿಸದೆ ಕೆಲಸ ಮಾಡಿಸಿರುವುದೆ ಕಾರಣವಾಗಿರುತ್ತದೆ. ಎಂಬಿತ್ಯಾದಿ.

 

Crime Reported in Traffic South Police Station       

ಪಿರ್ಯಾದಿ MOHAN DAS SHETTYದಾರರು ಪದವಿನಂಗಡಿಯಲ್ಲಿ ದಿನಸಿ ವ್ಯಾಪಾರ ನಡೆಸುತ್ತಿದ್ದು ದಿನಾಂಕ:24-04-2022 ರಾತ್ರಿ 9-30 ಗಂಟೆಗೆ ಪಿರ್ಯಾದಿದಾರರು ಎಂದಿನಂತೆ ತನ್ನ ಅಂಗಡಿಯನ್ನು ಮುಚ್ಚಿ ಮನೆಯ ಕಡೆಗೆ ಹೋಗಲು ಅವರ ಬಾಬ್ತು ಹೊಂಡಾ ಆಕ್ಟಿವಾ ನಂಬ್ರ:KA-19-EB-2139  ನೇದನ್ನು ಪದವಿನಂಗಡಿ ಕಡೆಯಿಂದ ಮೇರಿಹೀಲ್ ಕಡೆಗೆ ಹೋಗುತ್ತಿರುವಾಗ ದೇವಿನಗರ ಕಟ್ಟೆ ಬಳಿ ತಲುಪುತ್ತಿದ್ದಂತೆ ಮೇರಿಹೀಲ್ ಕಡೆಯಿಂದ ಆಟೋರಿಕ್ಷಾ ನಂಬ್ರ:KA-19-AB-8781 ನೇದರ ಚಾಲಕ ಆಟೋರಿಕ್ಷಾವನ್ನುದುಡುಕುತನ ಹಾಗೂ ನಿರ್ಲಕ್ಷ್ಯತನ ದಿಂದ ಚಲಾಯಿಸಿಕೊಂಡು ಬಂದು ದೇವಿನಗರ ಕಟ್ಟೆ ರಸ್ತೆ ವಿಭಾಜಕದ ಬಳಿ ಯಾವುದೇ ಸೂಚನೆ ನೀಡದೇ ಯು ಟರ್ನ್ ಮಾಡಿದ ಪರಿಣಾಮ ಪಿರ್ಯಾದಿದಾರರಿಗೆ ಮೋಟಾರ್ ಸೈಕಲ್ ಗೆ ಡಿಕ್ಕಿಯಾಗಿ ಅವರು ರಸ್ತೆಗೆ ಬಿದ್ದು ಅವರ ಎಡಗೈ ಯ ಕಿರುಬೆರಳು ಮುರಿತದ ಗಾಯ,ಕೈತಟ್ಟಿನ ಎಲುಬು ಮುರಿತ ಹಾಗೂ ಎಡಗೈಯ ಭುಜಕ್ಕೆ ಗಾಯವಾಗಿದ್ದು,ಅವರ ಹೊಂಡಾ ಆಕ್ಟಿವಾ ವಾಹನ ಕೂಡ ಜಖಂಗೊಂಡಿರುತ್ತದೆ ಅಲ್ಲಿ ಸೇರಿದ ಸಾರ್ವಜನಿಕರು ಮತ್ತು ಆಟೋರಿಕ್ಷಾ ಚಾಲಕ ಸೇರಿ ಅದೇ ಆಟೊರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ ಕದ್ರಿಯ ವಿಜಯ ಕ್ಲೀನಿಕ್ ಯಲ್ಲಿ ಪ್ರಥ, ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಫಾದರ್ ಮುಲ್ಲರ್ ಕಂಕನಾಡಿ ಆಸ್ಪತ್ರೆಗೆ ದಾಖಲಿಸಿದ್ದು  ಈ ಅಪಘಾತಕ್ಕೆ ಕಾರಣರಾದ ಆಟೋರಿಕ್ಷಾ ಚಾಲಕ ಅಪಘಾತ ಪಡಿಸಿದ ಸಮಯ ಚಿಕಿತ್ಸಾ ವೆಚ್ಚ ಭರಿಸುವುದಾಗಿ ತಿಳಿಸಿದ್ದು ತದ ನಂತರ ಚಿಕಿತ್ಸಾ ವೆಚ್ಚ ಜಾಸ್ತಿಯಾಗಿರುವುದ್ದರಿಂದ ನಿರಾಕರಿಸಿರುತ್ತಾರೆಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 29-04-2022 04:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080