ಅಭಿಪ್ರಾಯ / ಸಲಹೆಗಳು

Crime Reported in Barke PS

ದಿನಾಂಕ:28-05-2022 ರಂದು ಬೆಳಗ್ಗೆ ಸಮಯ ಸುಮಾರು 06:00 ಘಂಟೆಗೆ ಮಣ್ಣಗುಡ್ಡ ಟವರ್ಸ್ ಎದುರುಗಡೆ ರಸ್ತೆಯ ಡಿವೈಡರ್ ಮಧ್ಯೆದಲ್ಲಿರುವ ಮೆಸ್ಕಾಂನ ಹೈ ಟೆನ್ಸನ್ ಲೈನ್ 9.5 ಮೀಟರ್ ವಿದ್ಯುತ್ ಕಂಬಕ್ಕೆ ಕೆಎ 19 ಎಡಿ 4669 ನಂಬರಿನ ಲಾರಿಯ ಚಾಲಕ ತನ್ನ ಲಾರಿಯನ್ನು ಅತೀ  ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ವಿದ್ಯುತ್ ಕಂಬ ತುಂಡಾಗಿ ಇತರೇ ವಿದ್ಯುತ್ ಸಾಮಗ್ರಿಗಳನ್ನು ಜಖಂಗೊಳಿಸಿ ಸುಮಾರು 30,000 /- ರೂ ನಷ್ಟವನ್ನುಂಟು ಮಾಡಿರುವುದು ಎಂಬಿತ್ಯಾದಿ

Crime Reported in Mangalore North PS

ಪಿರ್ಯಾಧಿದಾರರಾದ ಸುಧೀರ್ ಕುಮರ್ ರವರ ಬಾವ ರೂಪೇಶ್ ಕುಮಾರ್ ಗೆ ಸಂಬಂಧಿಸಿದ KA-05 HQ-8837 ನೊಂದಣಿ ನಂಬ್ರದ ಹೊಂಡಾ ಆಕ್ಟಿವಾ ಸ್ಕೂಟರನ್ನು ಬ್ಯಾಟರಿ ಕೊಂಡು ಹೋಗಲು ಪಿರ್ಯಾದಿದಾರರ ಅಂಗಡಿಯ ಬಳಿ ಇಟ್ಟಿದ್ದು ಪಿರ್ಯಾದಿದಾರರು ಸ್ಕೂಟರನ್ನು ಬ್ಯಾಟರಿ ತೆಗೆದುಕೊಂಡು ಹೋಗುವ ಕೆಲಸಕ್ಕ ಉಪಯೋಗಿಸುತ್ತಿದ್ದು, ಕೆಲಸವಾದ ಬಳಿಕ ಅದನ್ನು ಅವರ ಬಾವ ರೂಪೇಶ್ ಕುಮಾರ್ ರವರು ರಾತ್ರಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ದಿನಾಂಕ: 22-03-2022 ರಂದು  ಪಿರ್ಯಾದಿದಾರರ ಬಾವ ಸ್ಕೂಟರ್ ಕೊಂಡು ಹೋಗಲು ಬಾರದೇ ಇದ್ದುದರಿಂದ  ಪಿರ್ಯಾದಿದಾರರು  ದಿನಾಂಕ: 22-03-2022 ರಾತ್ರಿ 8-00 ಗಂಟೆಗೆ  ಅಂಗಡಿ ಬಂದ್ ಮಾಡಿದ ಬಳಿಕ KA-05 HQ-8837 ನೊಂದಣಿ ನಂಬ್ರದ  ಹೊಂಡಾ ಆಕ್ಟಿವಾ ಸ್ಕೂಟರನ್ನು ಅಂಗಡಿಯ ಎದುರುಗಡೆ ಲಾಕ್ ಮಾಡಿ ಪಾರ್ಕ್ ಮಾಡಿ ಇಟ್ಟಿದ್ದು, ದಿನಾಂಕ:23-03-2022 ರಂದು ಬೆಳಿಗ್ಗೆ 08-30 ಗಂಟೆಗೆ ಪಿರ್ಯಾದಿದಾರರು ಅಂಗಡಿಗೆ ಬಂದು ನೋಡಿದಾಗ ಗಡಿಯ ಎದುರುಗಡೆ ಪಾರ್ಕ್ ಮಾಡಿದ್ದ ಪಿರ್ಯಾದಿದಾರರ ಬಾವ ರೂಪೇಶ್ ಕುಮಾರ್ ಗೆ ಸಂಬಂಧಿಸಿದ KA-05 HQ-8837 ನೊಂದಣಿ ನಂಬ್ರದ ಹೊಂಡಾ ಆಕ್ಟಿವಾ ಸ್ಕೂಟರ್ ಅಲ್ಲಿರದೇ ಇದ್ದು ಸ್ಕೂಟರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಪಿರ್ಯಾದಿದಾರರು ಎಲ್ಲಾ ಕಡೆ ಹುಡುಕಾಡಿದರೂ ಸಿಗದೇ ಇದ್ದು ದೂರನ್ನು ನೀಡಿರುವುದಾಗಿದೆ ಎಂಬಿತ್ಯಾದಿ ಸಾರಾಂಶ.

 

Crime Reported in Mangalore Rural PS

ಪಿರ್ಯಾದಿದಾರರ ಗಂಡನಾದ ಹರೀಶ್ (49) ಎಂಬವರು ಆಶ್ರಯಕಾಲೋನಿ, ದೇವಿನಗರ, ಪಚ್ಚನಾಡಿ ಮಂಗಳೂರು ಎಂಬಲ್ಲಿಯ ನಿವಾಸಿಯಾಗಿದ್ದು ಪಚ್ಚನಾಡಿಯ ವಿಮಲ ಎಂಬವರಿಗೆ ಸಂಬಂದಪಟ್ಟ ಕಟ್ಟಡದಲ್ಲಿ  ಹೋಟೆಲ್ ಅಂಚನ್ ಎಂಬ ಹೋಟೆಲನ್ನು ನಡೆಸಿಕೊಂಡಿದ್ದು ದಿನಾಂಕ 17/04/2022 ರಂದು  ಸಂಜೆ 04-30 ಗಂಟೆಗೆ ಪಿರ್ಯಾದಿದಾರರ ತಂಗಿಯ ಮನೆಯಲ್ಲಿ ಇದ್ದವರು ಪಿರ್ಯಾದಿದಾರರ ತಂಗಿಯೊಂದಿಗೆ ಜಗಳ ಮಾಡಿ ಮನೆಯಿಂದ ಹೋಗಿದ್ದು ಜಗಳವಾದ ಬಗ್ಗೆ ಪಿರ್ಯಾದಿದಾರರಿಗೆ ಫೋನ್ ಮುಖೇನ ತಿಳಿಸಿದ್ದು ತದ ನಂತರ ಮನೆಗೂ ಬಾರದೆ ಸಂಬಂದಿಕರ ಮನೆಗೂ ಹೋಗದೆ ನಂತರ ಫೋನ್ ಸಂಪರ್ಕಕ್ಕೆ ಸಿಗದೆ ಇದ್ದು ದಿನಾಂಕ 07/05/2022 ರಿಂದ ಮೊಬೈಲ್ ಕೂಡಾ ಸ್ವಿಚ್ಛ್ ಆಫ್ ಬರುತ್ತಿದ್ದು ಕಾಣೆಯಾದ ಗಂಡ ಹರೀಶ್ ರವರನ್ನು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದೆ ಇರುವುದರಿಂದ ತಡವಾಗಿ ದೂರು ನೀಡುತ್ತಿದ್ದು ಕಾಣೆಯಾದ ಗಂಡ ಹರೀಶರವರನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂಬಿತ್ಯಾದಿ

ಕಾಣೆಯಾದವರ ಚಹರೆ ವಿವರ

ಹೆಸರು-ಹರೀಶ್

ವಯಸ್ಸು- 49 ವರ್ಷ

ಮೈ ಬಣ್ಣ – ಗೋಧಿ ಮೈ ಬಣ್ಣ

ಧರಿಸಿದ  ಬಟ್ಟೆಗಳು – ಗ್ರೇ ಕಲರ್ ಪ್ಯಾಂಟ್ ತುಂಬು ತೋಳಿನ ಕೆಂಪು ಕಲರ್ ನ ಉದ್ದ ಶರ್ಟ್

ಎತ್ತರ- 06 ಅಡಿ

ಮಾತನಾಡುವ ಭಾಷೆ : ಕನ್ನಡ, ತುಳು, ಮಲಯಾಳಿ

ಕಪ್ಪು ಕೂದಲು ತಲೆಯ ಮೇಲ್ಭಾಗ ಬೋಳುತಲೆ, ಕಪ್ಪು ದಪ್ಪ ಮೀಸೆ.

ವಿದ್ಯಾರ್ಹತೆ – 7 ನೇ ತರಗತಿ

 

 

ಇತ್ತೀಚಿನ ನವೀಕರಣ​ : 29-05-2022 04:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080