ಅಭಿಪ್ರಾಯ / ಸಲಹೆಗಳು

Crime Reported in: Traffic North Police Station

ಪಿರ್ಯಾದಿದಾರರಾದ ರವಿ(33) ರವರು ದಿನಾಂಕ 29-06-2022 ರಂದು KA-19-C-7324 ನಂಬ್ರದ 407 ಟೆಂಪೋದಲ್ಲಿ ಯಶವಂತ ರಾಯ ರವರು ಚಾಲಕರಾಗಿ ಹಾಗೂ, ಭಗವಂತರಾಯ ಮತ್ತು ಕುಮಾರ್ ರವರ ಜೊತೆಯಲ್ಲಿ 407 ಟೆಂಪೋದ ಹಿಂಬದಿಯಲ್ಲಿ ಸಿಮೆಂಟ್ ಮಿಕ್ಸಿಂಗ್ ಮಿಲ್ಲರನ್ನು ಲೋಡ್ ಮಾಡಿಕೊಂಡು ಲಿಂಗಪ್ಪಯ್ಯಕಾಡು ಬಸ್ಸು ನಿಲ್ದಾಣದಿಂದ ಸುರತ್ಕಲ್ ಕಡಗೆ ಹೊರಟು ಬೆಳಿಗ್ಗೆ ಸಮಯ ಸುಮಾರು 07:45 ಗಂಟೆಗೆ  ಕೋಲ್ನಾಡು ಜಂಕ್ಷನ್ ಬಳಿ ಕೋಲ್ನಾಡು ಕೈಗಾರಿಕ ಪ್ರದೇಶದ ಇಳೀಜಾರು ರಸ್ತೆಯಲ್ಲಿ 407 ಟೆಂಪೋವನ್ನು ಅದರ ಚಾಲಕ ಯಶವಂತರಾಯ ಎಂಬಾತನು ದುಡುಕುನತ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಚಾಲನಾ ನಿಯಂತ್ರಣ ತಪ್ಪಿ ಟೆಂಪೋವನ್ನು ಬಲಕ್ಕೆ ಚಲಾಯಿಸಿ ಟೆಂಫೋ ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಇದರ ಪರಿಣಾಮ ಚಾಲಕನ ಸೀಟಿನ ಎಡಭಾಗದಲ್ಲಿ ಕುಳಿತಿದ್ದ ಭಗವಂತರಾಯ ಮತ್ತು ಕುಮಾರ್ ರವರಿಗೆ ತರಚಿದ ಗಾಯ ಮತ್ತು ಗುದ್ದಿದ ರೀತಿಯ ಗಾಯವಾಗಿದ್ದು ಚಾಲಕ ಯಶವಂತರಾಯ ರವರಿಗೆ ಟೆಂಪೋದ ಸ್ಟೇರಿಂಗ್ ಎದೆಗೆ ಬಡಿದು ಬಾಯಲ್ಲಿ ರಕ್ತ ಬಂದು ಚಿಕಿತ್ಸೆಯ ಬಗ್ಗೆ ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿ ಚಾಲಕ ಯಶವಂತರಾಯ ದಾರಿ ಮಧ್ಯದಲ್ಲಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ.

2) ಪಿರ್ಯಾದಿದಾರರಾದ ಅಶ್ವತ್ ಕುಮಾರ್ (26)ರವರು ದಿನಾಂಕ: 28-06-2022 ರಂದು ಕೂಳೂರು VRL ಕಛೇರಿಯಲ್ಲಿ ನೈಟ್ ಕರ್ತವ್ಯದ ನಿಮಿತ್ತ ಮನೆಯಿಂದ ಹೊರಟು ಕೂಳೂರು ಮೇಲು ಸೇತುವೆ ಮುಕ್ತಾಯದ ಬಳಿ ಚಾವಡಿ ಹೋಟೆಲ್ ಎದುರು ಸರ್ವಿಸ್ ರಸ್ತೆಯನ್ನು ದಾಟಿ ಬೈಕಂಪಾಡಿಯಿಂದ ಮಂಗಳೂರು ಕಡೆಗೆ ಹಾದು ಹೋಗುವ NH66 ನೇ ಡಾಮಾರು ರಸ್ತೆಯಲ್ಲಿ ನಡೆದುಕೊಂಡು ರಸ್ತೆ ದಾಟುತ್ತಾ ರಸ್ತೆಯ ಅಂಚಿನ ಡಿವೈಡರ್ ಬಳಿ ತಲುಪುತ್ತಿದ್ದಂತೆ ರಾತ್ರಿ ಸಮಯ ಸುಮಾರು 08:30 ಗಂಟೆಗೆ ಬೈಕಂಪಾಡಿ ಕಡೆಯಿಂದ ಮಂಗಳೂರು ಕಡೆಗೆ KA-19-ES-1938 ನಂಬ್ರದ ಸ್ಕೂಟರನ್ನು ಅದರ ಸವಾರ ಪಾಂಡುರಂಗ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ  ಪಿರ್ಯಾದಿದಾರರಾದ ಅಶ್ವತ್ ಕುಮಾರ್ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಸ್ಕೂಟರ್ ಸವಾರ ಮತ್ತು ಅಶ್ವತ್ ಕುಮಾರ್  ರವರು ಡಾಮಾರು ರಸ್ತೆಗೆ ಬಿದ್ದು ಅಶ್ವತ್ ಕುಮಾರ್ ರವರಿಗೆ ಬಲಕಾಲಿನ ಮೊಣಗಂಟಿಗೆ ಗುದ್ದಿದ ರೀತಿಯ ಗಾಯವಾಗಿದ್ದು ಅಪಘಾತ ಪಡಿಸಿದ ಸ್ಕೂಟರ್ ಸವಾರನಿಗೆ ಎಡ ಭುಜದ ಬಳಿ ಗುದ್ದಿದ ರೀತಿಯ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರಿನ ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

3) ಪಿರ್ಯಾದಿದಾರರಾದ ವಿಕ್ರಂ ಕೊಟ್ಟಾರಿ (31) ರವರು ದಿನಾಂಕ: 28-06-2022 ರಂದು ಅವರ ಬಾಬ್ತು KA-19-EX-1629 ನಂಬ್ರದ ಮೋಟಾರ್ ಸೈಕಲಿನಲ್ಲಿ ಅವರ ತಾಯಿ ಶ್ರೀಮತಿ ಸರಳ ರವರನ್ನು ಸಹ ಸವಾರೆಯಾಗಿ ಕುಳ್ಳಿರಿಸಿಕೊಂಡು ಮನೆಯಿಂದ ಕಿನ್ನಿಗೋಳಿಯ ಕಬತ್ತಾರು ದೇವಸ್ಥಾನಕ್ಕೆ ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 09:00 ಗಂಟೆಗೆ ಕಾವೂರು ಜಂಕ್ಷನ್ ನಿಂದ ಮುಂದೆ ಉಲ್ಲಾಸ್ ನಗರದ ಗ್ಯಾರೇಜ್ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ಹಿಂದಿನಿಂದ KA-19-AA-3331 ನಂಬ್ರದ ಆಟೋ ರಿಕ್ಷಾವನ್ನು ಅದರ ಚಾಲಕನಾದ ಹರೀಷ್ ಎಂಬಾತನು ದುಡುಕುತನ ಹಾಗೂ ನಿರ್ಲಕಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ನ್ನು ಬಲಬದಿಯಿಂದ ಓವರ್ ಟೆಕ್ ಮಾಡಿ ಎಡಕ್ಕೆ ತಿರುಗಿಸಿದ ಸಮಯ ರಿಕ್ಷಾದ ಹಿಂಭಾಗ ಪಿರ್ಯಾದಿದಾರರ ಮೋಟಾರ್ ಸೈಕಲ್ನ ಹ್ಯಾಂಡಲ್ ಗೆ ಡಿಕ್ಕಿ ಪಡಿಸಿದ್ದು ಇದರ ಪರಿಣಾಮ ಪಿರ್ಯಾದಿದಾರರು ಮತ್ತು ಅವರ ತಾಯಿ ಮೋಟಾರ್ ಸೈಕಲ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲಕೈ ಮೊಣಗಂಟಿನ ಬಳಿ ತರಚಿದ ರೀತಿಯ ಗಾಯವಾಗಿದ್ದು ಮತ್ತು ಅವರ ತಾಯಿ ಶ್ರೀಮತಿ ಸರಳ ರವರಿಗೆ ಬಲಕೈ ತೋಳಿನ ಬಳಿ ಮೂಳೆ ಮುರಿತದ ಗಾಯ ಹಾಗೂ ಸೊಂಟದ ಬಳಿ ಗುದ್ದಿದ ರೀತಿಯ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರಿನ ವಿನಯ ಆಸ್ಪತ್ರೆಯಲ್ಲಿ ಪಿರ್ಯಾದಿದಾರರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದು, ಅವರ ತಾಯಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 Crime Reported in Ullal PS

ದಿನಾಂಕ 28/06/2022 ರಂದು ಉಳ್ಳಾಲ ತಾಲೂಕು ಕೋಟೆಕಾರು ಗ್ರಾಮದ ದೇರಳಕಟ್ಟೆ ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬ ಯಾವುದೋ ಮಾಧಕ ವಸ್ತು ಸೇವನೆ ಮಾಡಿ ನಶೆಯಲ್ಲಿ ಇದ್ದ ಅಬ್ದುಲ್ ಸಮದ್ (36 ವರ್ಷ) ವಾಸ : ಬದ್ರಿಯಾ ಜುಮ್ಮಾ ಮಸೀದಿ ಬಳಿ, ಬಂಗ್ರಗುಡ್ಡೆ, ಇಮ್ಮಿಂಜೆ ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಎಂಬವರನ್ನು ವಶಕ್ಕೆ ಪಡೆದು ದೇರಳಕಟ್ಟೆಯ ಕೆ. ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರಲ್ಲಿ ಗಾಂಜಾ ಸೇವನೆ ಮಾಡಿರುವ ಬಗ್ಗೆ ತಪಾಸಣೆಗೆ ಒಳಪಡಿಸಿ ಪರೀಕ್ಷಿಸಿದ ಆಸ್ಪತ್ರೆಯ ವೈದ್ಯಾಧಿಕಾರಿಯವರು ಸದ್ರಿ ವ್ಯಕ್ತಿಯು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ದೃಡಪತ್ರ ನೀಡಿರುತ್ತಾರೆ. ಆದುದರಿಂದ  ಕಾನೂನು ಬಾಹಿರವಾದ  ನಿಷೇದಿತ ಮಾಧಕ ವಸ್ತು ಗಾಂಜಾ ಸೇವನೆ ಮಾಡಿರುವ ಬಗ್ಗೆ ಸದ್ರಿ ವ್ಯಕ್ತಿಯ ವಿರುದ್ದ ಕಾನೂನು ರೀತಿಯ ಕ್ರಮಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

Crime Reported in Kankanady Town PS

ಪಿರ್ಯಾದಿದಾರರಾದ ವಸಂತ ಅಮೀನ್ ರವರ ಮಾವ ರವಿರಾಜ್ (53)  ರವರು ದಿನಾಂಕ 28-06-2022 ರಂದು ಮಂಗಳೂರು ನಗರದ ಪದವಿನಂಗಡಿಯ ಬಾಂದೊಟ್ಟು ದ್ವಾರದ ಹತ್ತಿರ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಜಾರ್ಜ್ ಟಿ.ವಿ. ಎಂಬವರ ಮಾಲಕತ್ವದ 5 ಅಂತಸ್ತಿನ ಕಟ್ಟಡದಲ್ಲಿ ಕಂಟ್ರಾಕ್ಟ್ ದಾರರಾದ ಪ್ರಶಾಂತ್ ರವರ ನೇತೃತ್ವದಲ್ಲಿ 4 ನೇ ಅಂತಸ್ತಿನಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದವರು ಮದ್ಯಾಹ್ನ 12-00 ಗಂಟೆಗೆ ಕೆಲಸ ಮಾಡುತ್ತಿರುವ ಸಮಯ ಆಯತಪ್ಪಿ 3 ನೇ ಅಂತಸ್ತಿಗೆ ಬಿದ್ದು ಗಂಭೀರ ಗಾಯಗೊಂಡವರನ್ನು  ಕಂಟ್ರಾಕ್ಟ್ ದಾರರಾದ ಪ್ರಶಾಂತ್ ಮತ್ತು ಮಾಲಕರಾದ ಜಾರ್ಜ್ ಟಿ.ವಿ ರವರು ಯೂನಿಟಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ  ದಾಖಲಿಸಿದ್ದು, ರವಿರಾಜ್ ರವರು ಚಿಕಿತ್ಸೆಯಲ್ಲಿದ್ದವರು   ಚಿಕಿತ್ಸೆಗೆ ಸ್ಪಂಧಿಸದೆ ಸಂಜೆ 4.00  ಗಂಟೆಗೆ ಮೃತಪಟ್ಟಿರುತ್ತಾರೆ. ಕೆಲಸಗಾರರಿಗೆ ಕಟ್ಟಡದ  ಹೊರಭಾಗದ  ಸ್ಟೆಪ್ ಹೋಲ್ಡ್‌ ನಲ್ಲಿ  ನಿಂತು ಕೆಲಸ ಮಾಡಲು ಸುರಕ್ಷತಾ ದೃಷ್ಟಿಯಿಂದ ಹಲಗೆಯಂತಹ ಕಬ್ಬಿಣದ ಜಾಲಿ ಅಳವಡಿಸಬೇಕಿದ್ದು, ಆದರೆ ಕಾಂಟ್ರಕ್ಟರ್ ಮತ್ತು ಕಟ್ಟಡದ ಮಾಲೀಕರು ಜಾಲಿ ಅಳವಡಿಸದೇ ಹಾಗೂ ಕೆಲಸಗಾರರಿಗೆ ಸುರಕ್ಷತಾ ದೃಷ್ಟಿಯಿಂದ ಸೇಪ್ಟಿ ಬೆಲ್ಟ್‌, ಸೇಪ್ಟಿ ಹೆಲ್ಮೆಟ್‌ ನೀಡದೇ,  ಮಾನವನ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿದೂ ತೀವ್ರ ನಿರ್ಲಕ್ಷವಹಿಸಿರುವುದೇ ಈ ಅನಾಹುತಕ್ಕೆ ಕಾರಣವಾಗಿರುತ್ತದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 30-06-2022 11:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080