ಅಭಿಪ್ರಾಯ / ಸಲಹೆಗಳು

Crime Reported in Ullal PS

ದಿನಾಂಕ. 13-9-2021 ರಂದು ಸಂಜೆ 5-30 ಗಂಟೆಗೆ ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಬಸ್ತಿಪಡ್ಪು ದರ್ಗಾರಸ್ತೆ ಎಂಬಲ್ಲಿರುವ ಫಿರ್ಯಾದಿದಾರರಾದ ಐರಿನ್ ಡಿ ಸೋಜ ರವರ ಮಗಳು ಸ್ವೀಟಾ ಡಿ ಸೋಜ (32) ರವರು ತನ್ನ ವಾಸದ ಮನೆಯಿಂದ ಹೊರಟು ಹೋದವಳು ವಾಪಾಸು ಬಾರದೇ ಕಾಣೆಯಾದವಳು ಆಕೆಯನ್ನು ಹುಡುಕಾಡಿ ಈ ತನಕ ಪತ್ತೆಯಾಗದೇ ಇದ್ದುದರಿಂದ ಕಾಣೆಯಾದವಳನ್ನು ಪತ್ತೆ ಮಾಡಿಕೊಡುವ ಬಗ್ಗೆ ದಿನಾಂಕ. 29-9-2021 ರಂದು ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

 

Crime Reported in Traffic North PS

ದಿನಾಂಕ 27-09-2021 ರಂದು ಪಿರ್ಯಾದಿದಾರರಾದ ಹಿಮಕರ ಸುವರ್ಣ ರವರು ತನ್ನ ಗೆಳಯನಾದ ಕೇಶವ ರವರ ಬಾಬ್ತು KA-21-P-0610 ನಂಬ್ರದ ಕಾರಿನಲ್ಲಿ ತನ್ನ ಮತ್ತೊಬ್ಬ ಗೆಳಯನಾದ ರಘುನಾಥ ಪೂಜಾರಿ ಎಂಬವರೊಂದಿಗೆ ಮುಲ್ಕಿಯಿಂದ ಹಳೆಯಂಗಡಿ ಕಡೆಗೆ ಹೋಗುತ್ತಾ ಕೇಶವನು ಕಾರು ಚಲಾಯಿಸುತ್ತಿದ್ದು, ಕಾರಿನ ಎದುರಿನ ಎಡಬದಿಯ ಸೀಟಿನಲ್ಲಿ ರಘುನಾಥ ಪೂಜಾರಿಯು ಕುಳಿತಿದ್ದು, ಪಿರ್ಯಾದಿದಾರರು ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತು ರಾ.ಹೆ 66 ರಲ್ಲಿ ಚಲಾಯಿಸಿಕೊಂಡು ಹೋಗುತ್ತಾ  ಸಂಜೆ ಸಮಯ ಸುಮಾರು 4:30 ಗಂಟೆಗೆ ಮುಲ್ಕಿ-ಕಾರ್ನಾಡು ಬೈಪಾಸು ರಸ್ತೆಯ ಭಾರತ್ ಪೆಟ್ರೋಲ್ ಪಂಪ್ ನ ಎದುರಿನ ರಸ್ತೆಯಲ್ಲಿ ಹೋಗುತ್ತಿದ್ದಂತೆ ಚಾಲಕ ಕೇಶವನು ಕಾರನ್ನು ದುಡುಕತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ಮಧ್ಯದ ಡಿವೈಡರಿಗೆ ಡಿಕ್ಕಿ ಪಡಿಸಿ, ಕಾರು ಅದೇ ವೇಗದಲ್ಲಿ ರಾ.ಹೆ 66 ರ ಹಳೆಯಂಗಡಿ ಕಡೆಯಿಂದ ಮುಲ್ಕಿ ಕಡೆಗೆ ಹಾದು ಹೋಗುವ ರಸ್ತೆಗೆ ಪಲ್ಟಿಯಾಗಿ ಬಿದ್ದಿದ್ದು, ಕಾರಿನ ಎದುರಿನ ಎಡ ಬಾಗದಲ್ಲಿ ಕುಳಿತಿದ್ದ ರಘುನಾಥ ಪೂಜಾರಿ ರವರಿಗೆ ತಲೆಗೆ ಜಜ್ಜಿದ ಗಂಭೀರ ಸ್ವರೂಪದ ರಕ್ತ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಕಾರು ಚಾಲಕ ಕೇಶವ ರವರಿಗೆ ಎಡ ಕೈ ಭುಜಕ್ಕೆ ಮತ್ತು ಎಡಕಾಲಿನ ಮೊಣಗಂಟಿಗೆ ಗುದ್ದಿದ ರೀತಿಯ ಗಾಯವಾಗಿರುತ್ತದೆ, ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಪಿರ್ಯಾದಿದಾರರಿಗೆ ಸಣ್ಣ ಪ್ರಮಾಣದ ಗಾಯವಾಗಿದ್ದರಿಂದ ಯಾವುದೇ ರೀತಿಯ ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ, ಹಾಗೂ ಚಾಲಕ ಕೇಶವನು ಚಿಕಿತ್ಸೆ ಬಗ್ಗೆ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಅಲ್ಲದೇ ಅಪಘಾತ ವೇಳೆ ಕಾರಿನಲ್ಲಿದ್ದ ಮೂರೂ ಜನರು ಅಮಲು ಪದಾರ್ಥ ಸೇವಿಸಿರುವುದಾಗಿ ಪಿರ್ಯಾದಿಯ ಸಾರಾಂಶ.

 Crime Reported in Mangalore South PS

ದಿನಾಂಕ 26-09-2021ರಂದು 18-00 ಗಂಟೆಯಿಂದ 19-15 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಪೊರಂ ಪಿಜಾ ಮಹಲ್ ಮಹಲ್ ನ ದ್ಚಿಚಕ್ರ ವಾಹನದಲ್ಲಿ ಪಾರ್ಕ್ ಮಾಡಿಟ್ಟಿದ್ದ ಪಿರ್ಯಾದಿದಾರರು ಉಪಯೋಗಿಸುತ್ತಿದ್ದ. ಲಿಖಿತ್ ರವರ ಆರ್. ಸಿ. ಮಾಲಕತ್ವದ ಟಿವಿಎಸ್ INTRQ-125, 2020ನೇ ಮೊಡಲ್ ನ KA 70 H  4202 ನೊಂದಣಿ ಸಂಖ್ಯೆಯ MD626AK36L2L03242  ಚೆಸಿಸ್ ನಂಬ್ರದ, AK3LL2203047 ಇಂಜಿನ್ ನಂಬ್ರದ, ಕಪ್ಪು-ಕೆಂಪು ಬಣ್ಣದ, ಅಂದಾಜು ಮೌಲ್ಯ 1,00,000/- ರೂಪಾಯಿ ಬೆಲೆಬಾಳುವ ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ದ್ಚಿಚಕ್ರ ವಾಹನದ ಸೀಟ್ ನ ಕೆಳಗಡೆ ಬಾಕ್ಸ್ ನಲ್ಲಿ ಸದ್ರಿ ವಾಹನಕ್ಕೆ ಸಂಬಂಧಿಸಿದ ಆರ್.ಸಿ.ಯ ಮೂಲ ಪ್ರತಿ, ನನ್ನ ಡಿಎಲ್ ನ ಮೂಲ ಪ್ರತಿ, ಇನ್ಸೂರೆನ್ಸ್ ಪಾಲಿಸಿ ಪ್ರತಿ, ವಾಹನದ ಸರ್ವಿಸ್ ಪುಸ್ತಕ, ನನ್ನ ಪಾನ್ ಕಾರ್ಡ್ , ಕರ್ನಾಟಕ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್ ನ ಡಿಬಿಟ್ ಕಾರ್ಡ್ ಗಳು, ಹಾಗೂ KA 04 HR 2995 ವಾಹನಕ್ಕೆ ಸಂಬಂಧಿಸಿದ ಆರ್. ಸಿ.ಯ ಮೂಲ ಪ್ರತಿಗಳು ಹಾಗೂ ನನ್ನ ಆಪೀಸ್ ನ ಕೀಗಳು ಕೂಡ ಇದ್ದವು. ಈ ದಿನ ದಿನಾಂಕ 27-09-2021ರ ವರೆಗೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ

 

ಇತ್ತೀಚಿನ ನವೀಕರಣ​ : 29-09-2021 09:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080