ಅಭಿಪ್ರಾಯ / ಸಲಹೆಗಳು

Crime Reported in Mangalore West Traffic PS               

ದಿನಾಂಕ 28/10/2021 ರಂದು ಪಿರ್ಯಾದಿ S MUKUNDA KAMATH ದಾರರ ತಂದೆಯವರಾದ ಎಸ್. ಪ್ರಭಾಕರ್ ಕಾಮತ್ (79) ರವರು ತನ್ನ ಮನೆಯಾದ ಕಾಪಿಕಾಡ್ ನ 1ನೇ ಅಡ್ಡರಸ್ತೆಯ ಕಡೆಗೆ ನಡೆದುಕೊಂಡು ಹೋಗುವಾಗ ರಾತ್ರಿ ಸುಮಾರು 20.45 ಗಂಟೆಗೆ ಬಿಜೈ ಎಂಬಲ್ಲಿರುವ ಬಸ್ತಿಕಾರ್ ಹಾರ್ಡವೇರ್ನ ಎದುರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವವರಿಗೆ ಮಂಗಳೂರು ಕೆಎಸ್ಆರ್ ಟಿಸಿ ಕಡೆಯಿಂದ ಬಿಜೈ ಕಾಪಿಕಾಡ್ ಕಡೆಗೆ ಸ್ಕೂಟರ್ ನಂ.ಕೆಎ19ಇಝಡ್3860 ನೇ ಸ್ಕೂಟರನ್ನು ಅದರ ಸವಾರನು ನಿರ್ಲಕ್ಷತನದಿಂದ ಹಾಗೂ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಎಸ್. ಪ್ರಭಾಕರ್ ಕಾಮತ್(79) ರವರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಎಸ್.ಪ್ರಭಾಕರ್  ಕಾಮತ್ ರವರಿಗೆ ಎಡಗಣ್ಣಿನ ಹುಬ್ಬಿಗೆ,ಮೂಗಿಗೆ,ಮತ್ತು ಕೈಗಳಿಗೆ ಗಾಯವಾಗಿದ್ದು ಸದ್ರಿಯವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು KMC ಆಸ್ಪತ್ರೆಗೆ ದಾಖಲು ಮಾಡಿರುವುದಾಗಿದೆ, ಎಂಬಿತ್ಯಾದಿ.

Crime Reported in Mangalore North PS

ಪಿರ್ಯಾದಿ KUSUMA (39) ದಾರರ ಗಂಡ ರಘು (43) ಎಂಬವರು ದಿನಾಂಕ 26.10.2021 ರಂದು ಮಧ್ಯಾಹ್ನ 12.30 ಗಂಟೆಗೆ ತಾನು ಕೆಲಸ ಮಾಡಿಕೊಂಡಿರುವ ಬಂದರು ಬಜಿಲಕೇರಿಯಲ್ಲಿರುವ ಸಹೋದ್ಯೋಗಿ ಸುರೇಶ ರವರಲ್ಲಿ ನಾನು ರಕ್ತ ಪರೀಕ್ಷೆ ಮತ್ತು ಶುಗರ್ ಟೆಸ್ಟ್ ಮಾಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಹೋದವರು ಈ ತನಕ ಕೂಡ ಮನೆಗೂ ಬಾರದೇ ಸಂಭಂದಿಕರ ಮನೆಗೆ ಕೂಡ ಹೋಗದೆ ಹಾಗೂ ತನ್ನ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದು ಈವರೆಗೂ ಕೂಡ ವಾಪಾಸ್ಸು ಮನೆಗೆ ಬಂದಿರುವುದಿಲ್ಲ. ಆದ್ದರಿಂದ ಕಾಣೆಯಾದ ವ್ಯಕ್ತಿಯನ್ನು ಪತ್ತೆಹಚ್ಚಿಕೊಡಬೇಕೆಂಬಿತ್ಯಾದಿಯಾಗಿದೆ.

ಕಾಣೆಯಾದ ವ್ಯಕ್ತಿಯ ಚಹರೆ:

ಎತ್ತರ 5’7” ಇಂಚು ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ದುಂಡು ಮುಖ, ವಿದ್ಯಾಭ್ಯಾಸ: 3 ನೇ ತರಗತಿ, ಕನ್ನಡ, ತುಳು, ಹಿಂದಿ ಭಾಷೆ ಮಾತನಾಡುತ್ತಾನೆ. ಕಂದು ಬಣ್ಣದ ಪ್ಯಾಂಟ್ , ನೀಲಿ ಬಣ್ಣದ ಫುಲ್ ಕೈ ತೋಳು  ಶರ್ಟ್ ಧರಿಸಿರುತ್ತಾನೆ.

Crime Reported in Traffic South P S                         

 ದಿನಾಂಕ:28-10-2021 ರಂದು ಪಿರ್ಯಾದಿ MOHAMMAD JAKERIYA  IBRAHIM ದಾರರ ಅಣ್ಣನಾದ ಹನೀಫ್ ರವರು ಸ್ಕೂಟರ್ ನಂಬ್ರ: KA-19-EV-7339 ನೇದರಲ್ಲಿ ಸವಾರನಾಗಿ ಹಾಗೂ ಸಾಧಿಕ್  ಎಂಬುವವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಮೇಲ್ಕಾರ್ ಕಡೆಯಿಂದ ಉಳ್ಳಾಲ ಕಡೆಗೆ ಆರ್ಕಾನ ಮಾರ್ಗವಾಗಿ ಹೋಗುತ್ತಿರುವಾಗ ಸಮಯ ಸುಮಾರು ಮಧ್ಯಾನ 12:00 ಗಂಟೆಗೆ ಆರ್ಕಾನದ ಸ್ವಲ್ಫ ಮುಂದೆ ತಲುಪಿದಾಗ ಸ್ಕೂಟರ್ ಸವಾರ ಹನೀಫ್ ರವರು ಸ್ಕೂಟರ್ ನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಹೋಗುತ್ತಾ ಸ್ಕೂಟರ್ ನ ನಿಯಂತ್ರಣ ತಪ್ಪಿ ಸ್ಕೀಡ್ ಆಗಿ ಸವಾರ ಹಾಗೂ ಸಹ ಸವಾರ ಹಾಗೂ ಸ್ಕೂಟರ್ ಸಮೇತ  ಡಾಮಾರು ರಸ್ತೆಗೆ ಬಿದ್ದು ಸವಾರ ಹನೀಫ್ ರವರಿಗೆ ಎದೆಗೆ ಗುದ್ದಿದ ಗಾಯ ಹಾಗೂ ಸಹ ಸವಾರ ಸಾದೀಕ್ ರವರಿಗೆ ಎಡಗೈ ಭುಜಕ್ಕೆ ಮೂಳೆ ಮುರಿತದ ಗಾಯವಾಗಿದ್ದು ಅಲ್ಲಿ ಸೇರಿದ ಜನರು ಅವರನ್ನು ಚಿಕಿತ್ಸೆ ಬಗ್ಗೆ ಆಟೋರಿಕ್ಷಾವೊಂದರಲ್ಲಿ ಮಂಗಳೂರಿನ ಹೈಲ್ಯಾಂಡ್ ಅಸ್ಪತ್ರೆಗೆ ಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ ಎಂಬಿತ್ಯಾದಿ .

 

Crime Reported in Moodabidre PS

 ಮೂಡಬಿದ್ರೆ ತಾಲೂಕು ತೋಡಾರು ಗ್ರಾಮದ ಯೆನಪೋಯ ಕಾಲೇಜಿನಲ್ಲಿ ದಿನಾಂಕ: 30-10-2021 ರಂದು ನಡೆಯಲಿರುವ Traditional Day ಕಾರ್ಯಕ್ರಮದಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮವೂಂದರಲ್ಲಿ ಧರಿಸುವ ಬಟ್ಟೆ ಬರೆಗಳ ವಿಚಾರದಲ್ಲಿ ದಿನಾಂಕ: 26-10-2021 ರಂದು ಕಾಲೇಜಿನ ವಿದ್ಯಾರ್ಥಿಗಳಾದ ಸತೀಶ್ ಮತ್ತು ಮಹಮ್ಮದ್ ಸ್ವರೂಪ್ ರವರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವಾಗಿ ದಿನಾಂಕ: 27-10-2021 ರಂದು ಸಂಜೆ ಒಡೆದಾಡಿಕೊಂಡಿರುತ್ತಾರೆ, ಈ ಸಂಬಂಧವಾಗಿ ಕಾಲೇಜಿನ ಪ್ರಾಂಶುಪಾಲರು ದಿನಾಂಕ: 28-10-2021 ರಂದು ಸತೀಶನ ಗೆಳೆಯರಾದ ರೋಹನ್ ಪಿರೇರಾ, ಸಂದೇಶ್ ರಮೇಶ್, ಮಹಮ್ಮದ್ ಸೈಫ್, ರವರನ್ನು ಮತ್ತು ಮಹಮ್ಮದ್ ಸ್ವರೂಪ್ನ ಕಡೆಯಾವರಾದ ಮೊಹಜ್, ಹಸನ್ ಯಾಸಿನ್, ಶಹಜ್ ಎಂಬುವರನ್ನು ಸೇರಿಸಿ ಒಟ್ಟು 8 ಜನರನ್ನು ಕಾಲೇಜಿನಿಂದ ಅಮಾನತು ಮಾಡಿ ಹಾಸ್ಟೇಲ್ನಲ್ಲಿ ವಾಸವಾಗಿದ್ದವರನ್ನು ಸೇರಿಸಿ ಎಲ್ಲಾರನ್ನು ಕಾಲೇಜು ಕ್ಯಾಂಪಸಿನಿಂದ ಮದ್ಯಾಹ್ನ ಹೊರಗೆ ಕಳುಹಿಸಿದ ನಂತರ ಸುಮಾರು 12-45 ಗಂಟೆಗೆ ಸತೀಶ್, ರೋಹನ್ ಪಿರೇರಾ, ಸಂದೇಶ್ ರಮೇಶ್, ಮಹಮ್ಮದ್ ಸೈಫ್, ಮತ್ತು ಇತರ 30-40 ಜನರು ಬಂದು ಪಿರ್ಯಾದಿ ಮಹಮ್ಮದ್ ಸ್ವರೂಪ್ ಮತ್ತು ಗೆಳೆಯ ಶಹಜ್ ಮತ್ತು ಇತರರಿಗೆ ತಡೆದು ನಿಲ್ಲಿಸಿ ಕೈಯಿಂದ, ಮರದ ಕೋಲಿನಿಂದ ಮತ್ತು ಮೆಟಲ್ ವಾಚ್ ನಿಂದ ತೀವ ಹಲ್ಲೆ ಮಾಡಿ ಕಾಲಿಂದ ತುಳಿದು ಗಾಯ ನೋವುಗಳನ್ನು ಊಂಟು ಮಾಡಿರುವುದಲ್ಲದೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಗೆ ಒಡ್ಡಿರುವುದು ಎಂಬಿತ್ಯಾದಿ

 

2) ಮೂಡಬಿದ್ರೆ ತಾಲೂಕು ತೋಡಾರು ಗ್ರಾಮದ ಯೆನಪೋಯ ಕಾಲೇಜಿನಲ್ಲಿ ದಿನಾಂಕ: 26-10-2021 ರಂದು ಪಿರ್ಯಾದಿ SATHISH HEGDE ದಾರರು ಯೆನಪೋಯ ಕಾಲೇಜಿನ ನಮಾಜ್ ಹಾಲ್ ನ ಎದುರುಗಡೆ ನಡೆದುಕೊಂಡು ಹೋಗುವ ಸಮಯ ಆರೋಪಿ ಸಹಾಜ್ ನು ಪಿರ್ಯಾದಿದಾರರ ಭುಜಕ್ಕೆ ತನ್ನ ಭುಜದಿಂದ ಗುದ್ದಿಕೊಂಡು ಹೋಗಿದ್ದು, ಇದೇ ವಿಚಾರವಾಗಿ ನಿನ್ನೆ ದಿನ ದಿನಾಂಕ: 27-10-2021 ರಂದು ಸಂಜೆ ಸುಮಾರು 03:30 ಗಂಟೆಗೆ ಪಿರ್ಯಾದಿದಾರರು ಕಾಲೇಜಿನ ಕ್ಯಾಂಟೀನ್ ನಲ್ಲಿರುವ ಸಮಯ ಆರೋಪಿ ಸಹಾಜ್ ಹಾಗೂ ಆತನ ಗೆಳೆಯರು ಸುಮಾರು 8 ಜನ ಬಂದು ಎದುರಿನ ಟೇಬಲ್ ನಲ್ಲಿ ಕುಳಿತು ಪಿರ್ಯಾದಿದಾರರನ್ನು ತಮಾಷೆ ಮಾಡಿ ಗುರಾಯಿಸಿದ್ದು, ಈ ಸಮಯ ಪಿರ್ಯಾದಿದಾರರು ಏನು ಸಮಸ್ಯೆ ನಿನ್ನೆಯದು ನಿನ್ನೆಗೆ ಮುಗಿಯಿತ್ತಲ್ಲಾ ಎಂದು ಹೇಳಿದಾಗ ಸಹಜ್ ಮತ್ತು ಇತತರು ನಿನ್ನದು ಇನ್ನು ಒಂದು ವರ್ಷ ಮುಗಿಸಿ ಹೋಗುತ್ತಾ ಇರು ನೀನು ಕುಂದಾಪುರದವ ನಾನು ಲೋಕಲ್ ನಿನಗೆ ಏನು ಬೇಕಾದರೂ ಮಾಡಬಹುದು ಎಂದು ಹೇಳಿದ್ದು ಬಳಿಕ ಪ್ರಾದ್ಯಾಪಕರಾದ ಲಕ್ಷ್ಮೀ ಪ್ರಸಾದ್ ರವರು ಬಂದು ಸಮಾದಾನಪಡಿಸಿದ್ದು, ಬಳಿಕ ಪಿರ್ಯಾದಿದಾರರು ಕಾಲೇಜಿನ ಗ್ರೌಂಡ್ ಬಳಿ ಹೋಗಿ ಸಹಜ್ ಹಾಗೂ ಇತರರಲ್ಲಿ ಈ ರೀತಿ ಆಗದಂತೆ ಇರುವ ಎಂಬುದಾಗಿ ತಿಳಿಸಿದ್ದು, ಆ ಸಮಯದಲ್ಲಿ ಆರೋಪಿ ಸಹಜ್ ಆತನ ಗೆಳೆಯರು ಪಿರ್ಯಾದಿದಾರರಿಗೆ  ಬೇವರ್ಸಿ , ಮಾದರ್ ಚೋತ್ ಎಂಬುದಾಗಿ ಅವಾಚ್ಯ ಬ್ದಗಳಿಂದ ಬೈಯ್ದು, ಕೈಯಿಂದ ಹೊಡೆದು ಕಾಲಿನಿಂದ ಹೊಡೆದು ಹಲ್ಲೆ ನಡೆಸಿರುತ್ತಾರೆ. ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರು ಪಿರ್ಯಾದಿದಾರರು ಹಾಗೂ ಆರೊಪಿಗಳನ್ನು  ದಿನಾಂಕ: 28-10-2021 ರಂದು 12:30 ಗಂಟೆಗೆ  ಕಾಲೇಜಿನಿಂದ ಅಮಾನತುಗೊಳಿಸಿರುತ್ತಾರೆ. ಬಳಿಕ ಪಿರ್ಯಾದಿದಾರರು ಮತ್ತು ಗೆಳೆಯರಾದ ರೋನ್, ಸಂದೇಶ್ ಮತ್ತು ಮೊಹಮ್ಮದ್ ಸೈಪ್ ರವರು ಕಾಲೇಜ್ ಕ್ಯಾಂಪಸ್ ಹೊರಗಡೆ ಮೋಟಾರು ಸೈಕಲ್ ನಲ್ಲಿ ಹೋಗುತ್ತಿರುವ ಸಮಯ ಆರೋಪಿಗಳಾದ ಸಹಜ್ ಹಾಗೂ ಆತನ ಗೆಳೆಯರಾದ ಮೊಹಮ್ಮದ್ ಸ್ವರೂಪ್, ಹಸನ್ ಯಾಸೀನ್, ಮಹಜ್ ಹಾಗೂ ಇತರ ೧೦ ಜನ ಸೇರಿ ಪಿರ್ಯಾದಿದಾರರ ಸ್ಕೂಟರ್ ರನ್ನು ತಡೆದು ನಿಲ್ಲಿಸಿ, ಕಲ್ಲಿನಿಂದ ಹಲ್ಲೆ ಹಾಗೂ ಕಾಲಿನಿಂದ ತುಳಿದು ತೀವ್ರ ಹಲ್ಲೆ ನಡೆಸಿರುತ್ತಾರೆ. ಈ ಸಂದರ್ಭ ನಾನು ಮತ್ತು ನನ್ನ ಗೆಳೆಯರು ಓಡಿ ಹೋದಾಗ ಬೇವರ್ಸಿ, …ಮಗ, ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆಯನ್ನು ಹಾಕಿರುತ್ತಾರೆ.

Crime Reported in  Kankanady Town PS

ದಿನಾಂಕ 27-10-2021 ರಂದು ಪಿರ್ಯಾದುದಾರರಾದ ಎಎಸ್ಐ ಜಗದೀಶ್ ರವರು ಮೇಲಾಧಿಕಾರಿಗಳ ಆದೇಶದಂತೆ ಹೆಚ್ ಸಿ ಮಂಜುನಾಥ ಹೆಗ್ಡೆರವರೊಂದಿಗೆ ಶಕ್ತಿನಗರದ ದತ್ತನಗರದಲ್ಲಿ 17-00 ಗಂಟೆಯಿಂದ 24:00 ಗಂಟೆಯವರೆಗೆ ಸರಗಳ್ಳತನ  ತಡೆಯುವರೇ ಚೆಕ್ ಪಾಯಿಂಟ್  ಕರ್ತವ್ಯಕ್ಕೆ ನೇಮಿಸಿದಂತೆ. ಸದ್ರಿ ಪ್ರದೇಶಕ್ಕೆ ಕರ್ತವ್ಯಕ್ಕೆ ಹಾಜರಾಗಿ  ರಸ್ತೆಗೆ ಜಿಗ್ ಜಾಗ್ ನಲ್ಲಿ ಬ್ಯಾರಿಕೇಡ್ ಆಳವಡಿಸಿಕೊಂಡು ಕರ್ತವ್ಯ ನಿರ್ವಹಿಸುವ ಸಮಯ ಸುಮಾರು 23-45 ಗಂಟೆಗೆ ಬಿಕರ್ಣ ಕಟ್ಟೆಯಿಂದ ಒಂದು ಬಿಳಿ ಹಾಗೂ ನೀಲಿ ಬಣ್ಣದಿಂದ ಕೂಡಿದ  ಡಿಯೋ ಸ್ಕೂಟರ್‌ ನಲ್ಲಿ  ಹಿಂಬದಿಯಲ್ಲಿ ಒಬ್ಬಾತನನ್ನು ಕುಳ್ಳಿರಿಸಿಕೊಂಡು ವೇಗವಾಗಿ ಬರುತ್ತಿದ್ದನ್ನು ನೋಡಿ ಪಿರ್ಯಾದುದಾರರು   ಹಾಗೂ   ಜೊತೆಯಲ್ಲಿದ್ದ ಹೆಚ್‌,ಸಿ, ಮಂಜುನಾಥ ಹೆಗ್ಡೆರವರು   ವಾಹನವನ್ನು ನಿಲ್ಲಿಸಲು ಸೂಚಿಸಿ ನಿಲ್ಲಿಸಲು ಪ್ರಯತ್ನಿಸುತ್ತಿದ್ದಂತೆ, ಸದ್ರಿ ಡಿಯೋ ಸ್ಕೂಟರ್‌ ಸವಾರನು ಬ್ಯಾರಿಕೇಡ್‌ ಗೆ ಡಿಕ್ಕಿ ಹೊಡೆದು ಬ್ಯಾರಿ ಕೇಡ್‌  ಬಳಿ ಇದ್ದ ಹೆಚ್ ಸಿ ಮಂಜುನಾಥ  ಹೆಗ್ಡೆಯವರ ಬಲ ಕೈ ಹಾಗೂ ಕಾಲಿಗೆ ತಾಗಿಸಿಕೊಂಡು ಸ್ಕೂಟರ್ ನ್ನು   ನಿಲ್ಲಿಸದೇ ರಸ್ತೆಯಲ್ಲಿ ಪದವಿನಂಗಡಿ ಕಡೆಗೆ ಹೋಗಿರುತ್ತಾನೆ,  ಸದ್ರಿ ಡಿಯೋ ಸ್ಕೂಟರ್ ಸವಾರನು ಮಂಜುನಾಥ ಹೆಗ್ಡೆಯವರ ಬಲಕೈಗೆ ಹಾಗೂ ಕಾಲಿಗೆ ಸ್ಕೂಟರನ್ನು ತಾಗಿಸಿಕೊಂಡು ಹೋಗಿರುವುದರಿಂದ ಸದ್ರಿಯವರ ಬಲ ಕೈಗೆ ಹಾಗೂ ಬಲ ಕಾಲಿಗೆ ಗುದ್ದಿದ ಗಾಯವಾಗಿರುತ್ತದೆ, ಸದ್ರಿ ಬಿಳಿ ಹಾಗೂ ನೀಲಿ ಬಣ್ಣದಿಂದ  ಕೂಡಿದ ಡಿಯೋ ಸ್ಕೂಟರ್‌ನ ಸವಾರರು  ಸ್ಕೂಟರ್‌ನ್ನು ನಿಲ್ಲಿಸಲು ಸೂಚನೆ ನೀಡಿದಾಗ, ಡಿಯೋ ಸ್ಕೂಟರ್ ನ ಸಹ ಸವಾರನು “ನಿಕ್ಕಂಡ ಪೋಲಾ, ಪೋಲಾ “ ಎಂದು ಬ್ಯಾರಿ ಭಾಷೆಯಲ್ಲಿ ಹೇಳುತ್ತಿದ್ದಂತೆ, ಸ್ಕೂಟರ್ ಸವಾರನು ಪೊಲೀಸರು ನೀಡಿದ ಸೂಚನೆಯನ್ನು ಉಲ್ಲಂಘಿಸಿ ಸ್ಕೂಟರ್ ನ್ನು ನಿಲ್ಲಿಸದೇ  ಪರಾರಿಯಾಗಿ ಪೊಲೀಸ್‌ ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿರುವುದಾಗಿದೆ   ಎಂಬಿತ್ಯಾದಿ

       

 

ಇತ್ತೀಚಿನ ನವೀಕರಣ​ : 29-10-2021 06:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080