ಅಭಿಪ್ರಾಯ / ಸಲಹೆಗಳು

Crime Reported in Mangalore South PS

ಪಿರ್ಯಾದಿದಾರರಾದ ಅಮಲ್ ಗಿರೀಶ್ ಹಾಗೂ ಸ್ನೇಹಿತ ಕಾರ್ತಿಕ್ ರವರು ಮಂಗಳೂರು ಅತ್ತಾವರದ ಡಿ ಮಾರ್ಟಿನಿಂದ ತಮ್ಮ  ಯೂನಿಟಿ ಆಸ್ಪತ್ರೆಯ ಬಳಿ ಇರುವ ರೂಮಿಗೆ ಹೋಗುವರೇ ನಡೆದುಕೊಂಡು ಹೋಗುತ್ತಿದ್ದಾಗ  ಸಮಯ ರಾತ್ರಿ 7.30 ಗಂಟೆಗೆ ಅತ್ತಾವರದ ಬಳಿಯ LEROYAL APARTMENT ತಲುಪಿದಾಗ 5 ಜನ ಮಳೆಯಾಲಂ ಮಾತಾಡುವ ಹುಡುಗರನ್ನು ನೋಡಿ ಪಿರ್ಯಾದಿದಾರರು "ಹಾಯ್" ಎಂದು ಹೇಳಿದ್ದು, ಅದಕ್ಕೆ ಆ 5 ಜನ ಯುವಕರು "ಹಾಯ್" ಎಂದು ಹೇಳಿದ್ದಕ್ಕೆ ಬೊಬ್ಬೆ ಹಾಕುತ್ತಾ ಪಿರ್ಯಾದಿದಾರರನ್ನು ಹಾಗೂ ಕಾರ್ತಿಕ್ ರವರನ್ನು ತಮ್ಮ LEROYAL ಅಪಾರ್ಟ್ ಮೆಂಟಿನ T-1 ರೂಮಿಗೆ ಕರೆದುಕೊಂಡು ಹೋಗಿದ್ದು, ಬಳಿಕ ಇತರ 4 ಜನರು ಆರೋಪಿತರನ್ನು ಸೇರಿಕೊಂಡಿರುತ್ತಾರೆ. ಎಲ್ಲಾ ಆರೋಪಿತರುಗಳು ಕೃತ್ಯ ನಡೆಸುವ ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿಕೊಂಡು ಪಿರ್ಯಾದಿದಾರರನ್ನು ಹಾಗೂ ಅವರ ಗೆಳೆಯ ಕಾರ್ತಿಕ್ ರವರನ್ನು ಅಕ್ರಮವಾಗಿ ಬಂಧನದಲ್ಲಿರಿಸಿ ಪಿರ್ಯಾದಿದಾರರಿಗೆ ಹಾಗೂ ಅವರ ಗೆಳೆಯ ಕಾರ್ತಿಕ್ ರವರಿಗೆ ಹಾಡು ಹೇಳುವಂತೆ ಕಿರುಕುಳ ನೀಡಿ, ಬಲವಂತವಾಗಿ ಪಿರ್ಯಾದಿದಾರರ ಇಚ್ಚೆಗೆ ವಿರುದ್ದವಾಗಿ ಪಿರ್ಯಾದಿದಾರರ ಗಡ್ಡ ಬೋಳಿಸಿ ಕಿರುಕುಳ ನೀಡಿ ರಾಗಿಂಗ್ (RAGGING)  ಮಾಡಿ ತೊಂದರೆ ನೀಡಿರುತ್ತಾರೆ. ಆರೋಪಿಗಳು ಪಿರ್ಯಾದಿದಾರರು ಹಾಗೂ ಕಾರ್ತಿಕ್ ರವರಿಗೆ ಹೆಲ್ಮೆಟ್ ಹಾಗೂ ಕೈಯಿಂದ ಹಲ್ಲೆ ನಡೆಸಿ  ಹಣ ಕೊಡದಿದ್ದರೆ ಪಿರ್ಯಾದಿದಾರರನ್ನು ಕೊಲೆ ಮಾಡುವುದಾಗಿ ಆರೋಪಿತರುಗಳು ಬೆದರಿಸಿ ರೂ. 270/- ನ್ನು ಆರೋಪಿತರ ಖಾತೆಗೆ ಪಿರ್ಯಾದಿದಾರರು ವರ್ಗಾಯಿಸಿರುತ್ತಾರೆ.  ಆರೋಪಿತರುಗಳು ಪರಸ್ಪರ ಮಾತನಾಡಿಕೊಂಡಿದ್ದಾಗ ಅವರುಗಳ ಹೆಸರು ಅಭಿ ಅಲೆಕ್ಸ್, ನಂದು ಶ್ರೀಕುಮಾರ್, ಶಿಹಾಸ್, ಪ್ರವೀಶ್, ಗೋಪಿ ಕೃಷ್ಣ, ಹಸನ್, ವಿಷ್ಣು, ಜಾಸಿಲ್, ಆಲೆನ್ ಎಂಬುದಾಗಿ ಪಿರ್ಯಾದಿದಾರರಿಗೆ ತಿಳಿದುಬಂದಿರುತ್ತದೆ.

 

2) ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪ್ರಕರಣದಲ್ಲಿ ದಸ್ತಗಿರಿ ಮಾಡಲಾದ ಆರೋಪಿಗಳನ್ನು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವಿಚಾರಣೆ  ನಡೆಸುವ ಸಮಯ ಆರೋಪಿಗಳಾದ, 1) ನಂದ ಶ್ರೀಕುಮಾರ್, ಪ್ರಾಯ 19 ವರ್ಷ,  ವಾಸ: ಕುಝೀಕ್ಕಲಾಯಿಲ್ ಹೌಸ್, ತಂಕಮಣಿ ಪೋಸ್ಟ್, ಇಡುಕ್ಕಿ ಜಿಲ್ಲೆ, ಕೇರಳ ರಾಜ್ಯ. 2) ಶಿಹಾಸ್. ಸಿ.ಕೆ.ಪಿ. ಪ್ರಾಯ 20 ವರ್ಷ, ವಾಸ: ದಾರುಲ್ ಹಂಮ್ದ್ ಹೌಸ್, ಚೆರುವತ್ತೂರು, ಪುರುತಿ ಪೋಸ್ಟ್, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ  3) ಪ್ರವೀಶ್.ಕೆ.ಪಿ. ಪ್ರಾಯ 21 ವರ್ಷ, ವಾಸ: ಕಾರಕ್ಕಟ್ ಹೌಸ್, ತೈಕ್ಕಾಡ್ ಪೋಸ್ಟ್, ಗುರುವಾಯೂರು, ತ್ರಿಶ್ಶೂರ್, ಕೇರಳ ರಾಜ್ಯ  4)ಗೋಪಿಕೃಷ್ಣ , ಹೆಚ್. ಪ್ರಾಯ 21 ವರ್ಷ,  ವಾಸ: ನಿಪ್ಪೋಳೀ ಹೌಸ್, ನಂಬಝೀಕ್ಕಾಡ್ ಪೋಸ್ಟ್, ಕಂಡನ್ನಶ್ಶೇರಿ, ತ್ರಿಶ್ಶೂರ್, ಕೇರಳ ರಾಜ್ಯ 5) ಹಸನ್ .ಪಿ.ಎಸ್. ಪ್ರಾಯ 21 ವರ್ಷ, ವಾಸ: ಪೂತುವೀಟಿಲ್ ಹೌಸ್, ಚವಕ್ಕಾಡ್ ಪೋಸ್ಟ್, ತ್ರಿಶ್ಶೂರ್, ಕೇರಳ ರಾಜ್ಯ   6) ವಿಷ್ಣು.ಪಿ.ಆರ್. ಪ್ರಾಯ 22 ವರ್ಷ, ವಾಸ: ಪಲಕ್ಕಳ್ ಹೌಸ್, ಚವಕ್ಕಾಡ್ ಪೋಸ್ಟ್, ತ್ರಿಶ್ಶೂರ್, ಕೇರಳ ರಾಜ್ಯ. 7) ಆಲೆನ್ ಶೈಜು, ಪ್ರಾಯ 19 ವರ್ಷ, ವಾಸ: ಪುಳಿಕ್ಕಲ್ ಪೀಡಿಕಾಯಿಲ್ಹೌಸ್,  ತಂಕಮಣಿ ಪೋಸ್ಟ್, ಇಡುಕ್ಕಿ ಜಿಲ್ಲೆ, ಕೇರಳ ರಾಜ್ಯ. ಎಂಬುವರುಗಳು ಗಾಂಜಾ ಸೇವಿಸಿರುವ ಬಗ್ಗೆ ವಾಸನೆ ಬಂದಿದ್ದು, ಆರೋಪಿತರಲ್ಲಿ ಗಾಂಜಾ ಸೇವನೆ ಮಾಡಿದ ಬಗ್ಗೆ ವಿಚಾರಿಸಿದಾಗ ಆರೋಪಿಗಳು ದಿನಾಂಕ 28-11-2021 ರಂದು ಬೆಳಿಗ್ಗೆ ಸಮಯ ಅತ್ತಾವರದ ಲೀ ರಾಯಲ್ ಅಪಾರ್ಟ್ ಮೆಂಟ್ ನ ರೂಮ್ ನಲ್ಲಿ ಗಾಂಜಾ ಸೇವನೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು, ಆರೋಪಿತರನ್ನು ಮಂಗಳೂರು ಕುಂಟಿಕಾನದ ಎಜೆ ಆಸ್ಪತ್ರೆಯಲ್ಲಿ ಫಾರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ತಪಾಸಣೆ ನಡೆಸಿದಾಗ, ಆರೋಪಿಗಳು ಗಾಂಜಾ ಸೇವನೆ ನಡೆಸಿರುವುದು ದೃಢಪಟ್ಟಿದ್ದು, ಆರೋಪಿಗಳ ವಿರುದ್ದ ಕಲಂ   ಎನ್.ಡಿ.ಪಿ.ಎಸ್ ಆಕ್ಟ್  1985 ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ. ಎಂಬಿತ್ಯಾದಿಯಾಗಿರುತ್ತದೆ.

Crime Reported in Bajpe PS

 “ಫಿರ್ಯಾದಿ Puthu Gowda ದಾರರು  ದಿನಾಂಕ 28.11.2021 ರಂದು ಬೆಳಿಗ್ಗೆ ಮನೆಯಿಂದ ಮೂಡಬಿದ್ರೆಗೆ ಕಲಸದ ಪ್ರಯುಕ್ತ ತಮ್ಮ ಬಾಬ್ತು ಸ್ಕೂಟರ್ ನಂಬ್ರ ಕೆಎ-19ಇಯು-2322 ನೇಯದರಲ್ಲಿ ಹೋಗುತ್ತಿರುವಾಗ ಬೆಳಿಗ್ಗೆ ಸುಮಾರು 07:20 ಗಂಟೆಗೆ ಮಂಗಳೂರು ತಾಲೂಕು, ತೆಂಕ ಎಡಪದವು ಗ್ರಾಮದ, ಎಡಪದವು ಜಂಕ್ಷನ್ ಬಳಿ ತಲುಪುತ್ತಿದ್ದಂತೆಯೇ ಮೂಡಬಿದ್ರೆ ಕಡೆಯಿಂದ ಓಮ್ನಿ ಕಾರು ಒಂದನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು  ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿ ಒಬ್ಬರಿಗೆ ಢಿಕ್ಕಿ ಹೊಡೆದ ಪರಿಣಾಮ ಪಾದಾಚಾರಿಯು ಫಿರ್ಯಾದಿದಾರರ ಸ್ಕೂಟರಿನ ಮೇಲೆ ಬಿದ್ದು ಫಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು, ಈ ಅಫಘಾತದಿಂದ ಪಾದಾಚಾರಿ ಅರುಣ ಎಂಬವರ ಹಣೆಗೆ, ತಲೆಗೆ ಗಂಭೀರ ಸ್ವರೂಪದ ರಕ್ತ ಗಾಯವಾಗಿದ್ದು ಗಾಯಾಳು ಅರುಣರವರನ್ನು ಒಂದು ಆಂಬ್ಯುಲೆನ್ಸ್ ನಲ್ಲಿ ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತ ಪಟ್ಟಿರುತ್ತಾರೆ. ಆರೋಪಿ  ಓಮ್ನಿ ಕಾರಿನ ಚಾಲಕನು ಅಫಘಾತ ಪಡಿಸಿ ಸ್ಥಳದಿಂದ ಕಾರು ಸಮೇತ ಪರಾರಿಯಾಗಿರುತ್ತಾನೆ” ಎಂಬಿತ್ಯಾದಿಯಾಗಿರುತ್ತದೆ

 

Crime Reported in Mangalore Women PS                                            

ದಿನಾಂಕ 28-11-2021 ರಂದು ಪಿರ್ಯಾದಿದಾರರು ಠಾಣೆಗೆ ಹಾಜರಾಗಿ  ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ, ಪಿರ್ಯಾದಿದಾರರಿಗೆ ದಿನಾಂಕ 21-05-2021 ರಂದು ಆರೋಪಿ 1 ನೇ NAVEEN TAKUR ಯವರೊಂದಿಗೆ  ರಿಜಿಸ್ಟರ್ ಮದುವೆಯಾಗಿದ್ದು, ಮದುವೆಯಾದ 2 ತಿಂಗಳ ನಂತರ ಪಿರ್ಯಾದಿದಾರರು ಮತ್ತು ಆರೋಪಿ 1 ನೇಯವರು ಮಂಗಳೂರು ನಗರದ ಶಕ್ತಿನಗರದಲ್ಲಿ ವಾಸವಾಗಿದ್ದರು.ಈ ಸಮಯ ಅನೋನ್ಯವಾಗಿದ್ದು, ನಂತರದ ದಿನಗಳಲ್ಲಿ ಆರೋಪಿ 1 ನೇಯವರು ಕುಡಿದು ಬಂದು ಪಿರ್ಯಾದಿದಾರರ ಜೊತೆ ಗಲಾಟೆ ಮಾಡಿ ಕೈಯಿಂದ ಹೊಡೆದು ಖರ್ಚಿಗೆ ಹಣ ತರುವಂತೆ ಹಾಗೂ ಡೈವೋರ್ಸ್ ಕೊಡು ಎಂದು ಒತ್ತಾಯಿಸುತ್ತಿದ್ದನು.ಈ ವಿಷಯವನ್ನು ಆರೋಪಿ 1 ನೇಯವರು ಆರೋಪಿ 2 NARESH TAKUR ಮತ್ತು 3ನೇ POOJA TAKUR ಯವರಿಗೆ ಪೋನ್ ಕರೆ ಮಾಡಿ ಹೇಳುತ್ತಿದ್ದು, ಆರೋಪಿ 2 ಮತ್ತು 3ನೇಯವರು ಪಿರ್ಯಾದಿದಾರರ ಮನೆಗೆ ಬಂದು ಪಿರ್ಯಾದಿದಾರರಿಗೆ ಹಿಂದಿ ಭಾಷೆಯಲ್ಲಿ “ಕುತ್ತಾ,  ಬೆವರ್ಸಿ ಮನೆ ಬಿಟ್ಟು ಹೋಗು, ಆರೋಪಿ 1 ನೇ ಯವನಿಗೆ ಡೈವೊರ್ಸ್ ಕೊಡು” ಎಂದು ಹೇಳಿ ಹೊರಟು ಹೋಗಿರುತ್ತಾರೆ. ಅಲ್ಲದೇ ಪಿರ್ಯಾದಿದಾರರಿಗೆ ಆರೋಪಿ 1 , 2 ಮತ್ತು 3ನೇಯವರು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರು ಎಂಬಿತ್ಯಾದಿಯಾಗಿ

Crime Reported in Surathkal PS

ದಿನಾಂಕ 27/11/2021 ರಂದು ಸಮಯ ರಾತ್ರಿ ಸುಮಾರು 9.00 ಗಂಟೆಗೆ ಪಿರ್ಯಾದಿ SEEMA RANJITH SHETTY ದಾರರು ತನ್ನ ಗಂಡನ ಬಾಬ್ತು KA-51-MH-7887 ನೇದ್ದರಲ್ಲಿ ಸುರತ್ಕಲ್ ಟೋಲ್ ಗೇಟ್ ಬಳಿ ತಲುಪಿ, ಟೋಲ್ ಗೇಟ್ ಎಡ ಬದಿ ರಸ್ತೆಯಲ್ಲಿ ತೆರಳಲು ಕಾರನ್ನು ಎಡ ಬದಿ ತಿರುಗಿಸಿದಾಗ ಟೋಲ್ ಸಿಬ್ಬಂದಿಯವರು ವಾಹನಕ್ಕೆ ಅಡ್ಡವಾಗಿ ನಿಂತು  ಈ ರಸ್ತೆಯಲ್ಲಿ ಹೋಗಬಾರದು ಬಲ ಬದಿಯ ಗೇಟ್ ಮೂಲಕ ತೆರಳುವಂತೆ ತಿಳಿಸಿ ವಾಹನದ ಎದುರು ರಸ್ತೆಗೆ ಕೋನ್ ಗಳನ್ನು ಅಡ್ಡವಾಗಿ ನಿಲ್ಲಿಸಿರುತ್ತಾರೆ. ಈ ವೇಳೆ ಪಿರ್ಯಾದಿದಾರರು ಈ ರೀತಿ ಯಾಕೆ ಮಾಡುತ್ತಿರಿ ಎಂದು ಟೋಲ್ ಸಿಬ್ಬಂದಿಯವರನ್ನು ಕೇಳಿದಾಗ ಟೋಲ್ ಸಿಬ್ಬಂದಿಯಾದ ಯೋಗೀಶ್ ಎಂಬಾತನು ಪಿರ್ಯಾದಿದಾರರ ಬಳಿ ಬಂದು ಹೊಡೆಯುವ ರೀತಿಯಲ್ಲಿ ಮೈಗೆ ಕೈ ಹಾಕಲು ಪ್ರಯತ್ನಿಸಿ ಮಾನ ಹಾನಿ ಮಾಡಿರುತ್ತಾನೆ ಹಾಗೂ ತಡೆಯಲು ಬಂದ ಪಿರ್ಯಾದಿದಾರರ ಗಂಡನಿಗೂ ಅವಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೆದರಿಕೆ ಹಾಕಿರುತ್ತಾನೆ ಎಂಬಿತ್ಯಾದಿ

Crime Reported in Mulki PS

ಪ್ರಕರಣದ ಪಿರ್ಯಾದಿದಾರರಾದ ಮುಲ್ಕಿ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ವಿನಾಯಕ ತೋರಗಲ್ ರವರು ಠಾಣಾ ಸಿಬ್ಬಂದಿ ರವರೊಂದಿಗೆ ದಿನಾಂಕಃ 26-11-2021 ರಂದು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ರಾತ್ರಿ 11:00 ಗಂಟೆಗೆ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ನಾಗಬನದ ಬಳಿ ಸಾರ್ವಜನಿಕ ಸ್ಥಳದಲ್ಲಿ  4-5 ಜನ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯಂತೆ ರಾತ್ರಿ 11:30 ಗಂಟೆಗೆ ತಲುಪಿ ನೋಡಲಾಗಿ, ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಎಂಬಲ್ಲಿ ನಾಗಬನದ ಬಳಿ ಸ್ಟ್ರೀಟ್ ಲೈಟ್ ಕಂಬದ ಕೆಳಗೆ 4-5 ಜನ ಯುವಕರು ಸುತ್ತುವರಿದು ಕುಳಿತು  ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿರುವುದನ್ನು ದೃಢಪಡಿಸಿಕೊಂಡು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿದಾಗ ಜೂಜಾಟದಲ್ಲಿ ನಿರತರಾಗಿದ್ದವರು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ಓಡಲು ಪ್ರಯತ್ನಿಸಿದವರನ್ನು ಸಿಬ್ಬಂದಿಗಳ ಸಹಾಯದಿಂದ ಅವರುಗಳನ್ನು ಸುತ್ತುವರಿದು ಇಬ್ಬರನ್ನು ಹಿಡಿದಿದ್ದುಇತರರು ಓಡಿ ಹೋಗಿರುತ್ತಾರೆ. ಪಂಚರುಗಳ ಸಮಕ್ಷಮ ಇಬ್ಬರ ಹೆಸರು ವಿಳಾಸ ಕೇಳಲಾಗಿ ಒಬ್ಬಾತನು ನವೀನ್ (23) ವಾಸ: ಕೆರೆಕಾಡು ಶಾಲೆಯ ಬಳಿ ಬೆಳ್ಳಾಯೂರು ಗ್ರಾಮ ಮಂಗಳೂರು ತಾಲೂಕು, ಮತ್ತೊಬ್ಬನು ಮಲ್ಲಿಕಾರ್ಜುನ @ ಚಿಟ್ಟಿ (38)  ವಾಸ: ಯಲ್ಲಮ್ಮನ ಗುಡಿ ಬಳಿ ಲಿಂಗಪ್ಪಯ್ಯಕಾಡು, ಕಾರ್ನಾಡು ಗ್ರಾಮ ಮಂಗಳೂರು ತಾಲೂಕು ಎಂಬುದಾಗಿ ತಿಳಿಸಿದ್ದು ಸ್ಥಳದಿಂದ ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ ಒಬ್ಬನ ಹೆಸರು ಲೋಕೇಶ್ ವಾಸ ಲಿಂಗಪ್ಪಯ್ಯಕಾಡು ಶಾಲೆ ಬಳಿ ಎಂಬುದಾಗಿಯೂ ಉಳಿದವರ ಪರಿಚಯವಿರುವುದಿಲ್ಲವಾಗಿ ತಿಳಿಸಿರುತ್ತಾರೆ. ಆರೋಪಿತರುಗಳು ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 2600/-, ಇಸ್ಪೀಟ್ ಎಲೆಗಳು 52, ಹಾಗೂ ಮೊಬೈಲ್ - 02 ಇವುಗಳನ್ನು ಮುಂದಿನ ಕ್ರಮದ ಸ್ವಾಧೀನಪಡಿಸಿಕೊಂಡು ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಪಿರ್ಯಾದಿ.

 

ಇತ್ತೀಚಿನ ನವೀಕರಣ​ : 29-11-2021 01:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080