ಅಭಿಪ್ರಾಯ / ಸಲಹೆಗಳು

Crime Reported in Panambur PS

ಫಿರ್ಯಾದಿ MONIKANTO MILI ದಾರರು ಅಸ್ಸಾಂ ರಾಜ್ಯದ ತಿನ್ಸುಕಿಯಾ ಜಿಲ್ಲೆಯ, ಅಮೋರ್ ಪುರ ಗ್ರಾಮದವರಾಗಿದ್ದು, ಮದುವೆಯಾಗಿ ಸುಮಾರು 13 ವರ್ಷಗಳಾಗಿರುತ್ತದೆ. ಫಿರ್ಯಾದಿಯು ಬೈಕಂಪಾಡಿಯಲ್ಲಿ ಸಿಮೆಂಟು ಗಾರೆ ಕೂಲಿ ಕೆಲಸವನ್ನು ಮಾಡಿ ಕೊಂಡಿದ್ದು, ಮಂಗಳೂರಿನ ಬೈಕಂಪಾಡಿಯ ಶ್ರೀರಾಮ ಭಜನಾ ಮಂದಿರ ಸಮೀಪ ಬಾಡಿಗೆಗೆ ರೂಮ್ ಮಾಡಿ ಕಳೆದ 03 ವಾರಗಳಿಂದ ಅವರ ಪತ್ನಿ ಶ್ರೀಮತಿ ಕರ್ಪೆ ಪೇಗು ರವರೊಂದಿಗೆ ವಾಸವಾಗಿದ್ದರು. ದಿನಾಂಕ 25/05/22 ರಂದು ಫಿರ್ಯಾದಿಯು ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ನಂತರ ಮದ್ಯಾಹ್ನ ಬಂದು ಊಟ ಮಾಡಿ ಒಪಾಸು ಹೋಗುವಾಗ ಫಿರ್ಯಾದಿಯ ಹೆಂಡತಿ ಮನೆಯಲ್ಲಿಯೆ ಇದ್ದಳು.ನಂತರ ಸಂಜೆ ಫಿರ್ಯಾದಿಯು ಕೆಲಸ ಮುಗಿಸಿ ಮನೆಗೆ ಬಂದು ಸಂಜೆ 5.30 ಗಂಟೆಗೆ ನೋಡಿದಾಗ ಫಿರ್ಯಾದಿದಾರರ  ಹೆಂಡತಿ ಮನೆಯಲ್ಲಿ ಕಾಣಿಸಲಿಲ್ಲ. ಫಿರ್ಯಾದಿಯು ಅಕ್ಕ ಪಕ್ಕದಲ್ಲೆಲ್ಲ ನೋಡಿ ಹುಡುಕಾಡಿ, ರಾತ್ರಿ ಆದರೂ ಕೂಡ ಮನೆಗೆ ಬಾರದಿದ್ದರಿಂದ ಫಿರ್ಯಾದಿದಾರರ ಪತ್ನಿಯು ಹೇಳದೆ ಊರಿಗೆ ಹೋಗಿರಬಹುದಾ ಎಂದು 4ದಿನ ಕಾದು ಅಲ್ಲಿಗೆ ಪೋನ್ ಮಾಡಿ ವಿಚಾರಿಸಿದ್ದು, ಅವರ ಪತ್ನಿ ಊರಿಗೆ ಕೂಡ ಹೋಗದೆ ಇರುವ ವಿಚಾರ ಖಚಿತವಾಯಿತು ಫಿರ್ಯಾದಿಯ ಹೆಂಡತಿ ದಿನಾಂಕ 25/5/2022 ರಂದು ಮದ್ಯಾಹ್ನ 2-00 ಘಂಟೆ ಯಿಂದ ಕಾಣೆಯಾಗಿರುತ್ತಾರೆ. ಕಾಣೆಯಾಗಿರುವ ಹೆಂಡತಿಯನ್ನು ಪತ್ತೆ ಮಾಡಿಕೊಡಬೇಕಾಗಿ ಎಂಬಿತ್ಯಾದಿಯಾಗಿದೆ.

ಕಾಣೆಯಾಗಿರುವವರ ಚಹರೆಯ ವಿವರ:

 ಹೆಸರು: ಕರ್ಪೆ ಪೇಗು

 ಪ್ರಾಯ:36 ವರ್ಷ, ಎತ್ತರ: ಸುಮಾರು 4.7ಅಡಿ

 ದಪ್ಪ ಶರೀರ ಬಿಳಿ ಮೈ ಬಣ್ಣ ಗುಲಾಬಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ.ಅಸ್ಸಾಮಿ, ಹಿಂದಿ ಭಾಷೆಯನ್ನು ಮಾತನಾಡುತ್ತಾರೆ.

Crime Reported in Mangalore North PS

ಪಿರ್ಯಾದಿ LAKSHMAN GOUDA K ದಾರರು ದಿನಾಂಕ: 24-04-2022 ರಂದು  ಬೆಳಿಗ್ಗೆ 08-45 ಗಂಟೆಗೆ ಮಂಗಳೂರು ನಗರದ ಕೆ ಎಮ್ ಸಿ ಲೈಟ್ ಹೌಸ್ ಕಾಲೇಜಿನ ಪಾರ್ಕಿಂಗ್ ಸ್ಥಳದಲ್ಲಿ  ಅವರ ಬಾಬ್ತು KA-20-w-1681 ನೊಂದಣಿ ನಂಬ್ರದ  ಹಿರೋ ಹೊಂಡಾ ಮೋಟಾರ್ ಸೈಕಲನ್ನು ಬೆಳಿಗ್ಗೆ 10-05 ಗಂಟೆಗೆ  ಪಾರ್ಕ್ ಮಾಡಿ ಇಟ್ಟು ನಂತರ ಮೋಟಾರ್ ಸೈಕಲ್ ನ್ನು ಇಟ್ಟಿದ್ದ ಸ್ಥಳಕ್ಕೆ  ಬಂದು ನೋಡಿದಾಗ ಅಲ್ಲಿರದೇ ಇದ್ದು   ನಂತರ  ಎಲ್ಲಾ ಕಡೆ ಹುಡುಕಾಡಿದರೂ  ಮೋಟಾರ್ ಸೈಕಲ್ ಸಿಗದೇ  ಇದ್ದು  ಈ ಬಗ್ಗೆ  ಸ್ನೇಹಿತರಲ್ಲಿ  ವಿಚಾರ ತಿಳಿಸಿ  ಈವರೆಗೂ ಹುಡುಕಾಡಿದರೂ  ಮೋಟಾರ್ ಸೈಕಲ್ ಸಿಗದೇ ಇದ್ದುದರಿಂದ  ಕೆಂಪು ಕಪ್ಪು ಬಣ್ಣದ KA-20-w-1681 ಸೈಕಲ್ ಅಲ್ಲಿರದೇ ಇದ್ದು ಸದರಿ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ  ಪಿರ್ಯದಿದಾರರು ಈ ತನಕ ಎಲ್ಲಾ ಕಡೆ ಹುಡುಕಾಡಿದರೂ ಸಿಗದೇ ಇದ್ದು ಈ ದಿನ ತಡವಾಗಿ ದೂರನ್ನು ನೀಡಿರುವುದಾಗಿದೆ ಎಂಬಿತ್ಯಾದಿ ಸಾರಾಂಶ.

 

Crime Reported in Moodabidre PS

ಪಿರ್ಯಾದಿ DINESH ದಾರರ ಹೆಂಡತಿಯಾದ ಸುನೀತಾ ಪ್ರಾಯ: 45 ವರ್ಷ ಎಂಬವರು ಮಂಗಳೂರು ತಾಲೂಕಿನ ಅರ್ಕುಳದ ನಿವಾಸಿಯಾದ ಗಿಲ್ಬರ್ಟ್ ಡಿಕುನ್ಹಾ ಎಂಬವರ ಮನೆಯಲ್ಲಿ ಮನೆಕೆಲಸವನ್ನು ಮಾಡಿಕೊಂಡಿದ್ದು, ದಿನಾಂಕ: 16-04-2022 ರಂದು ಮದ್ಯಾಹ್ನ 02-00 ಗಂಟೆಗೆ ಗಿಲ್ಬರ್ಟ್ ಡಿಕುನ್ಹಾ ರವರ ಮನೆಯಿಂದ ಮೂಡಬಿದ್ರೆಗೆ ಹೋಗುತ್ತಿರುವುದಾಗಿ ತಿಳಿಸಿ ಮೂಡಬಿದ್ರೆಗೆ ಬಂದವರು, ಪಿರ್ಯಾದಿದಾರರ ಮನೆಗೂ ಬಾರದೇ, ಪಿರ್ಯಾದಿದಾರರ ಸಂಬಂಧಿಕರ ಮನೆಗೂ ಹೋಗದೇ, ಹಾಗೂ ಸುನೀತಾ ರವರು ಕೆಲಸ ಮಾಡುತ್ತಿದ್ದ ಗಿಲ್ಬರ್ಟ್ ಡಿಕುನ್ಹಾ ರವರ ಮನೆಗೂ ವಾಪಸ್ಸು ಹೋಗದೇ ಕಾಣೆಯಾಗಿರುವುದು ಎಂಬಿತ್ಯಾದಿ.

ಕಾಣೆಯಾದ ಹುಡುಗನ ಚಹರೆ ವಿವರಗಳು:

ಹೆಸರು  :    ಸುನೀತಾ

ಪ್ರಾಯ  :    45 ವರ್ಷ   

ಗಂಡ    :    ದಿನೇಶ್ 

ಎತ್ತರ   :    04 ಅಡಿ 05 ಇಂಚು 

ಚಹರೆ   :    ಎಣ್ಣೆ ಕಪ್ಪು ಮೈಬಣ್ಣ, ಮೂಗಿನ ಬಲಭಾಗದಲ್ಲಿ ಕಪ್ಪು ಬಣ್ಣದ ಎಳ್ಳು ಗಾತ್ರದ ಮಚ್ಚೆ ಇರುತ್ತದೆ.

 

ಇತ್ತೀಚಿನ ನವೀಕರಣ​ : 30-05-2022 08:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080