ಅಭಿಪ್ರಾಯ / ಸಲಹೆಗಳು

Crime Reported in: Traffic North Police Station      

ಪಿರ್ಯಾದಿ Muttappa ದಾರರು ದಿನಾಂಕ: 30-06-2022 ರಾತ್ರಿ ಮನೆಯಲ್ಲಿದ್ದ ಸಮಯ ಸುಮಾರು 00:30 ಗಂಟೆಗೆ ವ್ಯಕ್ತಿಯೊಬ್ಬರು ಫೋನ್ ಕರೆ ಮಾಡಿ ಪಿರ್ಯಾದಿದಾರರಿಗೆ ಪರಿಚಿತರಾಗಿರುವ ಮಂಜುನಾಥ ಎಂಬುವರಿಗೆ ಕೊಟ್ಟಾರಚೌಕಿ ಬಳಿ ಅಪಘಾತವಾಗಿ ಎ,ಜೆ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಎ,ಜೆ ಆಸ್ಪತ್ರೆಗೆ ತೆರಳಿ ಗಾಯಾಳು ಮಂಜುನಾಥರನ್ನು ನೋಡಿ ಅಪಘಾತದ ಬಗ್ಗೆ ವಿಚಾರಿಸಿದಾಗ ದಿನಾಂಕ: 29-06-2022 ರಂದು ಕೂಳೂರು ಕಡೆಯಿಂದ ಮಂಗಳೂರು ಕಡೆಗೆ ಹಾದು ಹೋಗಿರುವ ರಾಹೆ 66 ನೇ ರಸ್ತೆಯನ್ನು ಮಂಜುನಾಥ ರವರು ಕೊಟ್ಟಾರಚೌಕಿ ಬಸ್ ಸ್ಟಾಪ್ ಕಡೆಯಿಂದ ಫ್ಲೈಓವರ್ ಕಡೆಗೆ ದಾಟುತ್ತಾ ಡಿವೈಡರ್ ಬಳಿ ರಾತ್ರಿ 11:00 ಗಂಟೆಗೆ ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ಅಂದರೆ ಕೂಳೂರು ಕಡೆಯಿಂದ  ಮಂಗಳೂರು ಕಡೆಗೆ KA-19-MF-1590 ನಂಬ್ರದ ಮಾರುತಿ ಸ್ವಿಫ್ಟ್ ಡಿಸೈರ್ ಕಾರನ್ನು ಅದರ ಚಾಲಕ ಪ್ರಸಾದ್ ಕುಮಾರ್ ಎಂಬಾತನು ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಮಂಜುನಾಥ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಮಂಜುನಾಥನು ಡಾಮಾರು ರಸ್ತೆಗೆ ಎಸೆಯಲ್ಪಟ್ಟು ಮಂಜುನಾಥರಿಗೆ ಹಣೆಗೆ, ಗಲ್ಲಕ್ಕೆ, ಕುತ್ತಿಗೆ ಬಳಿ ರಕ್ತಗಾಯಗಳಾಗಿದ್ದು ಎಡಕೈ ಭುಜದ ಕೆಳಗೆ ಮೂಳೆ ಮುರಿತದಂತೆ  ಕಂಡುಬಂದಿದ್ದು ಬಲಕೈಗೆ, ಎಡಕೈಗೆ ಅಲ್ಲಲ್ಲಿ ತರಚಿದ ರೀತಿಯ ಗಾಯಗಳಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರಿನ ಎ,ಜೆ ಆಸ್ಪತ್ರೆಗೆ ದಾಖಲಿಸಲ್ಪಟ್ಟು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿ ದಾಖಲಿಸಲ್ಪಟ್ಟವರು ದಿನಾಂಕ: 30-06-2022 ರಂದು ಮುಂಜಾನೆ 1:30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ.

 

Mulki PS

ದಿನಾಂಕ 29-06-2022 ರಂದು  ಕಾರ್ನಾಡ್ ಜಂಕ್ಷನ್ ಪೂನಂ ಬಾರ್ ಬಳಿ ಇದ್ದಾಗ 20.30 ಗಂಟೆಗೆ ಮುಲ್ಕಿ ಬಸ್ ಸ್ಟಾಂಡ್ ಬಳಿ ಇದ್ದಗಾ 20.30 ಗಂಟೆಗೆ ಕಾರ್ನಾಡ್ ಪೂನಂ ಬಾರ್ ಬಳಿ ಓರ್ವ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟಕ್ಕಾಗಿ ಹಣವನ್ನು ಸಂಗ್ರಹಿಸುತ್ತಿರುವ ಮಾಹಿತಿ ಮೇರೆಗೆ 20.45 ಗಂಟೆಗೆ ರವೀಂದ್ರ ರಾವ್ ಪ್ರಾಯ 53 ವಾಸ: 19-82, ಡೋರ್ ನಂಬ್ರ A2, ಕಾರ್ನಾಡು ಗ್ರಾಮ ಹತ್ತಿರ ವನ ಬೋಜನ , ಮುಲ್ಕಿ  ಮಂಗಳೂರು ತಾಲೂಕು ಎಂಬಾತನು ಮಟ್ಕಾ ಜೂಜಾಟಕ್ಕಾಗಿ ಚೀಟಿ ಬರೆಯತ್ತಾ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತೀರುವುದು ಕಂಡು ಬಂದಿದ್ದು ಈ ವೇಳೆಗೆ ದಾಳಿ ನಡೆಸಿ ಮಟ್ಕಾ ಜೂಜಾಟಕ್ಕೆ ಸಂಗ್ರಹಿಸಿದ  ನಗದು ಹಣ 1540/-  ರೂಪಾಯಿ ಮಟ್ಕಾ ನಂಬ್ರವನ್ನು ಬರೆಯಲು ಉಪಯೊಗಿಸುತ್ತಿದ್ದ ಚೀಟಿ -01, ಮತ್ತು ಕೇಸರಿ ಮತ್ತು ಕಪ್ಪು ಮಿಶ್ರಿತ ಬಣ್ಣದ ಬಾಲ್ ಪೆನ್ -01 ಇವುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟಕ್ಕಾಗಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿದ್ದ ರವೀಂದ್ರರಾವ್ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಂಡಿರುವುದು ಎಂಬಿತ್ಯಾದಿ.

                                     

ಇತ್ತೀಚಿನ ನವೀಕರಣ​ : 30-06-2022 10:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080