ಅಭಿಪ್ರಾಯ / ಸಲಹೆಗಳು

Crime Reported in Mangalore Bajpe PS

ಫಿರ್ಯಾದಿ Mohammed Sinan Mohammed Sinan ದಾರರು ದಿನಾಂಕ 29-08-2021 ರಂದು ತನ್ನ ಬಾಬ್ತು ಸ್ಕೂಟರ್  ನಂಬ್ರ ಕೆಎ-19 ಹೆಚ್.ಎಫ್-2663 ನೇಯದರಲ್ಲಿ ಮನೆ ಕಡೆಗೆ ಹೋಗುತ್ತಿದ್ದಾಗ ಸಂಜೆ ಸುಮಾರು 7.30 ಗಂಟೆಗೆ  ಮಂಗಳೂರು ತಾಲೂಕು ಬಜಪೆ ಗ್ರಾಮದ ಕಿನ್ನಿಪದವು ಪೆಟ್ರೋಲ್ ಬಂಕ್ ಬಳಿ ತಲುಪುತ್ತಿದ್ದಂತೆ ಎದುರಿನಿಂದ ಅಂದರೆ ಕಿನ್ನಿಪದವು ಕಡೆಯಿಂದ ಕಾರು ನಂಬ್ರ ಕೆಎ 19 ಎಮ್ ಎಲ್ 3206 ನೇದನ್ನು ಅದರ ಚಾಲಕ  ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್  ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಎಡಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತದ ಗಾಯ ಹಾಗೂ ಸೊಂಟಕ್ಕೆ ಗುದ್ದಿದ ನೋವು ಉಂಟಾಗಿದ್ದು, ಫಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಮಂಗಳೂರು ಕೆ.ಎಂ.ಸಿ ಆಸ್ಪತ್ರೆ ಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ .” ಎಂಬಿತ್ಯಾದಿ.

2) ದಿನಾಂಕ 29-08-2021 ರಂದು ಪಿರ್ಯಾದಿ Anil kumar ದಾರರು ಕೆಲಸದ ನಿಮಿತ್ತ ಸದ್ರಿಯವರ ಕೆ.ಎ 19 ಇವೈ 2778 ನೇ ನಂಬ್ರದ ಬೈಕಿನಲ್ಲಿ ಮತ್ತು ಅವರ ದೊಡ್ಡಪ್ಪನ ಮಗ ಚೇತನ್ ರವರು ತುಕಾರಾಮ ಎಂಬಾತನ ಕೆ.ಎ 19 ಇ.ಕೆ 3467 ನೇ ನಂಬ್ರದ ಬೈಕುಗಳಲ್ಲಿ ಅರಸಲು ಪದವುಗೆ ಹೋಗಿದ್ದವರು ಕೆಲಸ ಮುಗಿಸಿ ಅರಸಲುಪದವು ಕಡೆಯಿಂದ ಕೆಂಚಗುಡ್ಡೆ ಕಡೆಗೆ ಬೈಕುಗಳಲ್ಲಿ ವಾಪಾಸು ಹೋಗುತ್ತಿದ್ದ ಸಮಯ ಸಂಜೆ ಸುಮಾರು 6-30 ಗಂಟೆಗೆ ಅರಸಲುಪದವು ತಿರುವು ರಸ್ತೆಯಲ್ಲಿ ತಲುಪುತ್ತಿದ್ದಂತೆ ಕೆ.ಎ 19 ಇ.ಕೆ 3467 ನೇ ನಂಬ್ರದ ಬೈಕನ್ನು ಅತೀ ವೇಗದಿಂದ ಚಲಾಯಿಸುತ್ತಿದ್ದ ತುಕಾರಾಮ ರವರು ಒಮ್ಮೇಲೆ ಅಜಾಗರುಕತೆಯಿಂದ ಬೈಕಿನ ಬ್ರೈಕ್ ಹಾಕಿದ ಪರಿಣಾಮ ತುಕಾರಾಮ ಮತ್ತು ಚೇತನ ರವರು ಬೈಕ್ ಸಮೇತ ರಸ್ತೆಗೆ ಬಿದ್ದು ಚೇತನ್ ರವರ ಎಡ ಕಾಲಿನ ಬಳಿ ರಕ್ತ ಗಾಯ ಉಂಟಾಗಿರುತ್ತದೆ ಎಂಬಿತ್ಯಾದಿಯಾಗಿರುತ್ತದೆ

Crime Reported in Mangalore North PS

ದಿನಾಂಕ 29-08-2021 ರಂದು ಠಾಣಾ ವ್ಯಾಪ್ತಿಯಲ್ಲಿ  ಕೋವಿಡ್-19ರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ದ ಕ್ರಮ ಕೈಗೊಳ್ಳುವ ಸಲುವಾಗಿ  ಮೇಲಾಧಿಕಾರಿಗಳ ಸೂಚನೆಯಂತೆ ಉತ್ತರ ಠಾಣೆಯ ಪಿ ಎಸ್ ಐ. ರಾಮನಾಯ್ಕ್. ವೈ. ಸಿಬ್ಬಂದಿಯಾದ ಎ.ಎಸ್.ಐ ಚಿತ್ತರಂಜನ್ , ಎಎಸ್ ಐ ಹರಿಶ್ಚಂದ್ರ ಮತ್ತು ಪಿಸಿ  ಈಶಪ್ರಸಾದ್ ರವರೊಂದಿಗೆ   ರೌಂಡ್ಸ್ ಕರ್ತವ್ಯ ಮತ್ತು ಮಂಗಳೂರು ನಗರದ ನ್ಯೂಚಿತ್ರಾ ಜಂಕ್ಷನ್ ಬಳಿ ವಾಹನ ತಪಾಸಣೆ ನಡೆಸುತ್ತಿರುವ ಸಮಯ ಸಂಜೆ 18-40 ಗಂಟೆ ಸಮಯಕ್ಕೆ ಮಂಗಳೂರು ನಗರದ ನ್ಯೂಚಿತ್ರಾ ಜಂಕ್ಷನ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಒಬ್ಬ ದ್ವಿಚಕ್ರ ವಾಹನ ಸವಾರನು ತನ್ನ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಬರುತ್ತಿರುವಾಗ ಆತನನ್ನು ತಡೆದು ನಿಲ್ಲಿಸಿ ವಿಚಾರಿಸಿದಾಗ ಆತನು ಸರಿಯಾದ ಮಾಹಿತಿಯನ್ನು ನೀಡದೇ ಆತನ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಗಿರೀಶ್ ಎಂ ಪಿ, ಭದ್ರಾವತಿ ಎಂದು ತಿಳಿಸಿರುತ್ತಾನೆ. ಸದ್ರಿ ವಾಹನದ ನಂಬ್ರ KA-17 HC-3893 ನೇಯದು ಆಗಿದ್ದು, ಸದ್ರಿ ವಾಹನದ ದಾಖಲಾತಿಗಳನ್ನು ಕೇಳಿದಾಗ ದಾಖಲಾತಿಗಳನ್ನು ನೀಡಲು ನಿರಾಕರಿಸಿರುವುದರಿಂದ ಹಾಗೂ  ನಗರದಲ್ಲಿ ಕೊರೊನಾ ವಾರಾಂತ್ಯ ಕರ್ಫ್ಯೂ ಆದೇಶ ಜ್ಯಾರಿಯಲ್ಲಿದ್ದರೂ ಸರಕಾರದ ಆದೇಶವನ್ನು ಉಲ್ಲಂಘಿಸಿ ಸಾರ್ವಜನಿಕ ಸ್ಥಳದಲ್ಲಿ ವಾಹನವನ್ನು ಸವಾರಿ ಮಾಡಿಕೊಂಡು ಬಂದು ಸಾರ್ವಜನಿಕರ ಪ್ರಾಣಕ್ಕೆ ಅಪಾಯಕಾರಿಯಾದ ಸಾಂಕ್ರಾಮಿಕ ಮಾರಕ ವೈರಸ್ ಆದ ಕೊರೊನಾ ರೋಗದ ವೈರಸ್ ಹರಡುವ ಸಂಭವವಿದೆಯೆಂದು ತಿಳಿದಿದ್ದರೂ ಕೂಡಾ ಸಾರ್ವಜನಿಕವಾಗಿ ತಿರುಗಾಡಿಕೊಂಡು ನಿರ್ಲಕ್ಷ್ಯವನ್ನು ಉಂಟು ಮಾಡಿರುತ್ತಾನೆ.  ಈ ಹಿನ್ನೆಲೆಯಲ್ಲಿ ಈ ಮೇಲಿನ ವಾಹನವನ್ನು ವಶಕ್ಕೆ ಪಡೆದುಕೊಂಡು ಆರೋಪಿ ವಿರುದ್ದ ಕಲಂ. 269 ಐಪಿಸಿ ಮತ್ತು ಕಲಂ. 4, 5, EPIDEMIC DISEASE ACT-2020 ಮತ್ತು 51 (b) Disaster Management Act 2005  ರಂತೆ  ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ.

Crime Reported in Barke PS

ಪಿರ್ಯಾದಿ SHOBHA PSI ರವರು  ದಿನಾಂಕ 28/29-08-2021 ರಂದು ಬರ್ಕೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ರಾತ್ರಿ ರೌಂಡ್ಸ್  ಕರ್ತವ್ಯದ ಬಗ್ಗೆ ಠಾಣೆಯಿಂದ ರಾತ್ರಿ 11-00 ಗಂಟೆಗೆ ಇಲಾಖಾ ವಾಹನದಲ್ಲಿ ಸಿಬ್ಬಂದಿಗಳೊಂದಿಗೆ  ಠಾಣಾ ಸರಹದ್ದಿನಲ್ಲಿ ಸಂಚರಿಸಿ, ಉರ್ವ ಮಾರ್ಕೆಟ್ ಬಳಿ ಬರುತ್ತಿದ್ದಾಗ ಉರ್ವ ಮಾರ್ಕೆಟ್ ಸಂಕೀರ್ಣದಲ್ಲಿ  ಕತ್ತಲೆಯಲ್ಲಿ ಸಮಯ ಸುಮಾರು 4-30 ಗಂಟೆಗೆ 3 ಜನ  ವ್ಯಕ್ತಿಗಳು ಅನುಮಾನಾಸ್ಪದ ರೀತಿಯಲ್ಲಿದ್ದು,  ತನ್ನ ಇರುವಿಕೆಯ ಬಗ್ಗೆ ಮುಖವನ್ನು ಮರೆಮಾಚಿಕೊಂಡು ಇದ್ದು,  ಪೊಲೀಸ್ ವಾಹನವನ್ನು  ಕಂಡು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದವರನ್ನು ಹಿಡಿದು, ಸದ್ರಿ ವ್ಯಕಿಯಲ್ಲಿ ಕತ್ತಲೆಯಲ್ಲಿ ಅವಿತು ಕುಳಿತುಕೊಂಡು ತನ್ನ ಇರುವಿಕೆಯನ್ನು ಮರೆಮಾಚಿಕೊಂಡು ಇದ್ದ ಬಗ್ಗೆ ವಿಚಾರಿಸಿದಲ್ಲಿ ಸಮರ್ಪಕವಾದ ಉತ್ತರವನ್ನು ನೀಡಿರುವುದಿಲ್ಲ. ಸದ್ರಿಯವರುಗಳ ಹೆಸರು ವಿಳಾಸ ವಿಚಾರಿಸಿದಲ್ಲಿ  ಹನುಮಂತ ಪ್ರಾಯ 35 ವರ್ಷ ವಾಸ ದೂದಿ ಹಳ್ಳೀ  ಮನೆ ಚೆನ್ನಳ್ಳಿ ಅಂಚೆ ಹಿರೇಕೆರುರೂ ತಾಲ್ಲೂಕು ಹಾವೇರಿ ಜಿಲ್ಲೆ,  ಇನ್ನೊಬ್ಬ ಆತನ ಹೆಸರು   ಮಂಜುರಾಜ್ ಪ್ರಯ 29 ವರ್ಷ ವಾಸ 3/126 ವಿನೋಬ ನಗರ ಅಂಚೆ  3 ನೇ ಕ್ರಾಸ್ ಶೀವಮೊಗ್ಗ ತಾಲ್ಲೂಕು ಮತ್ತು ಜಿಲ್ಲೆ. ಮೂರನೆಯವ ಶಂಕರ ಶೆಟ್ಟಿ ಪ್ರಾಯ 66 ವರ್ಷ ವಾಸ ಸುಭಾಷ್ ನಗರ  ಎಮ್ ಎಲ್ ಎ  ರಸ್ತೆ  ಡಾಲ್ಫಿನ್ ಎಂಬುವರ  ಬಾಡಿಗೆ ಮನೆ ಕುತ್ತಾರ್  ಕೊರಗಜ್ಜ ಕಟ್ಟೆ ಹಿಂದೆ ಮಂಗಳೂರು ತಾಲ್ಲೂಕು , ಸದ್ರಿಯವರು ಈ ಅಪರಾತ್ರಿ ಸಮಯದಲ್ಲಿ ತಿರುಗಾಡಿಕೊಂಡಿದ್ದರಿಂದ ಹಾಗೂ ಮಂಗಳೂರು ನಗರದಲ್ಲಿ ಯಾವುದೇ ಕೆಲಸ ಕಾರ್ಯವಿಲ್ಲದೇ ಇದ್ದು, ಹಾಗೂ ಇವನಿಗೆ ಸಂಬಂಧಿಕರು ಮಂಗಳೂರಿನಲ್ಲಿ ಇಲ್ಲವೆಂಬ ಮಾಹಿತಿ ತಿಳಿದು ಬಂದುದರಿಂದ ಸದ್ರಿಯವನು ಯಾವುದೋ ಬೇವಾರಂಟು ತಕ್ಷೀರು ನಡೆಸುವ ಇರಾದೆಯಿಂದ ಸದ್ರಿ ಜಾಗದಲ್ಲಿ ಕತ್ತಲೆಯಲ್ಲಿ ಅವಿತು ಕುಳಿತಿರುವ ಬಗ್ಗೆ ಬಲವಾದ ಸಂಶಯದಿಂದ ಸ್ಥಳದಲ್ಲಿಯೇ ವಶಕ್ಕೆ ಪಡೆದು ಇವರುಗಳ  ಮೇಲೆ ಕಾನೂನು ಕ್ರಮ ಕೈಗೊಮಡಿರುವುದು ಎಂಬಿತ್ಯಾದಿ.

Crime Reported in Kavoor PS   

ಪಿರ್ಯಾದಿ Raghava S Padil ದಾರರು ದಿನಾಂಕ 29/08/2021 ರಂದು  ಸಂಜೆ 19.15 ಗಂಟೆಗೆ ಇಲಾಖಾ ವಾಹನದಲ್ಲಿ ಠಾಣಾ ಸಿಬ್ಬಂದಿಗಳೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ   ಠಾಣಾ ವ್ಯಾಪ್ತಿಯ ಬಂಗ್ರ ಕೂಳೂರು ಗ್ರಾಮದ ಸುಪ್ರಿಮ್ ಬಜಾಜ್ ಶೋರೂಮ್ ನ ಹಿಂದುಗಡೆ ಇರುವ ಮನೆಯ ಹತ್ತಿರದ ಖಾಲಿ ಜಾಗದಲ್ಲಿ ಸುಮಾರು 5 ರಿಂದ 7 ಜನ ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿ ಇಟ್ಟು ಇಸ್ಪಿಟ್ ಜುಗಾರಿ ಆಟದಲ್ಲಿ ನಿರತರಾಗಿರುವುದಾಗಿ ಮಾಹಿತಿ ಬಂದಂತೆ ಕೂಡಲೆ ಸಿಬ್ಬಂದಿಗಳ ಜೊತೆಯಲ್ಲಿ 19.45 ಗಂಟೆಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿದಲ್ಲಿ ಆಪಾದಿತರು ಸರ್ಕಾರವು ಕೊರೊನಾ ವೈರಸ್ ತಡೆಗಟ್ಟಲು ಹೊರಡಿಸಿದ ಮಾರ್ಗಸೂಚಿ ಆದೇಶವನ್ನು ಉಲ್ಲಂಘಿಸಿ ಮಾನವ ಜೀವಕ್ಕೆ ಅಪಾಯಕಾರಿ ರೋಗದ ಸೊಂಕನ್ನು ಹರಡುವಲ್ಲಿ ನಿರ್ಲಕ್ಷವಹಿಸಿ ಸದ್ರಿ ಖಾಲಿ ಜಾಗದಲ್ಲಿ ಗುಂಪಾಗಿ ಕುಳಿತುಕೊಂಡು ಒಬ್ಬರಿಗೊಬ್ಬರು ದೈಹಿಕ ಅಂತರವನ್ನು ಕಾಪಾಡಿಕೊಳ್ಳದೇ ಮುಖಕ್ಕೆ ಸರಿಯಾಗಿ ಮಾಸ್ಕ್ ಹಾಕದೇ ಕುಳಿತುಕೊಂಡಿದ್ದು ಹಣವನ್ನು ಪಣವಾಗಿಟ್ಟು ಇಸ್ಪಿಟ್ ಜುಗಾರಿ ಆಟದಲ್ಲಿ ನಿರತರಾಗಿರುವುದನ್ನು ನೋಡಿದ ಪಿರ್ಯಾದಿದಾರರು ಹಾಗೂ ಸಿಬ್ಬಂದಿಗಳು ಆಪಾದಿತರನ್ನು ತಡೆದು ನಿಲ್ಲಿಸಿ ಇಸ್ಪಿಟ್ ಜುಗಾರಿ ಆಟದಲ್ಲಿ ನಿರತರಾಗಿರುವ Chandrashekhar(A1) Ramesh(A2) Movin Rabelo(A3) Joy prakash D souza (A4) Madava(A5)  Rathnakara(A6) Raki perera(A7) ಬವರುಗಳನ್ನು ವಶಕ್ಕೆ ಪಡೆದು  ಜುಗಾರಿ ಆಟಕ್ಕೆ  ಬಳಸಿದ ನಗದು ರೂ.9,500 ರೂಗಳು ಮತ್ತು 4 ಮೊಬೈಲ್ ಫೊನ್ ಗಳು ಹಾಗೂ ಜೂಜಾಟಕ್ಕೆ ಬರಲು ಬಳಸಿದ 2 ಬೈಕ್ ಗಳನ್ನು ಸ್ವಾಧೀನಪಡಿಸಿಕೊಂಡು ಆಪಾದಿತರ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿ ಎಂಬಿತ್ಯಾದಿ.

Crime Reported in Moodabidre PS

ದಿನಾಂಕ: 29-08-2021 ರಂದು ಮಧ್ಯಾಹ್ನ 1-30 ಗಂಟೆಗೆ ಮೂಡಬಿದ್ರೆ ತಾಲೂಕು ಪಡುಮಾರ್ನಾಡು ಗ್ರಾಮದ ಬನ್ನಡ್ಕ ಜಂಕ್ಷನ್ ಎಂಬಲ್ಲಿ ಪಿರ್ಯಾದಿದಾರರಾದ ಶ್ರೀ ಸುದೀಪ್ ಎಂ ವಿ. PSI ರವರು  ಠಾಣಾ ಸಿಬ್ಬಂದಿಗಳೊಂದಿಗೆ ವಾಹನ ತಪಾಸಣೆ ಮಾಡುತ್ತಿರುವಾಗ ಅಮನೊಟ್ಟು ಒಳ ರಸ್ತೆಯ ಕಡೆಯಿಂದ ಬಂದ ಟರ್ಪಾಲ್ ಹೊದಿಸಿದ ಕೆಎ-02-ಬಿ-8130 ನೇ ಲಾರಿಯನ್ನು ಅನುಮಾನಗೊಂಡು ತಪಾಸಣೆ ಸಲುವಾಗಿ ತಡೆದು ತಪಾಸಣೆ ನಡೆಸಲಾಗಿ ಲಾರಿಯಲ್ಲಿ ವಿವಿಧ ಜಾತಿಯ ಮರದ ತುಂಡುಗಳು ಇರುವುದನ್ನು ಖಚಿತಪಡಿಸಿಕೊಂಡು ಲಾರಿಯಲ್ಲಿದ್ದ 1.ಸುಬ್ರಾಯ ಆಚಾರ್ಯ, 2.ರತ್ನಾಕರ ಆಚಾರ್ಯ, 3.ಆನಂದ ಎಂಬವರಲ್ಲಿ ಲಾರಿಯಲ್ಲಿದ್ದ ಮರದ ತುಂಡುಗಳನ್ನು ಸಾಗಾಟ ಮಾಡಲು ದಾಖಲಾತಿಗಳನ್ನು ಕೇಳಲಾಗಿ ಯಾವುದೇ ದಾಖಲಾತಿಗಳು ಇರುವುದಿಲ್ಲವಾಗಿ ತಿಳಿಸಿರುತ್ತಾರೆ. ಈ ಮೂವರು ಮಂದಿ ಆರೋಪಿಗಳು ಯಾವುದೇ ಪರವಾನಿಗೆ ಮತ್ತು ಸೂಕ್ತ ದಾಖಲಾತಿಗಳಿಲ್ಲದೇ ಎಲ್ಲಿಂದಲೋ ಕಳವು ಮಾಡಿರಬಹುದಾದ ಬೆಲೆ ಬಾಳುವ ವಿವಿಧ ಜಾತಿಯ ಮರದ ತುಂಡುಗಳನ್ನು ಲಾರಿಯಲ್ಲಿ ಸಾಗಾಟ ಮಾಡುತ್ತಿರುವುದರಿಂದ ವಾಹನ ಮತ್ತು ಸೊತ್ತುಗಳ ಸಮೇತ ಠಾಣೆಗೆ ಬಂದು ಕಾನೂನು ಕ್ರಮ ಕೈಗೊಂಡಿರುವುದು ಎಂಬಿತ್ಯಾಧಿ

Crime Reported in Ullal PS

ಪಿರ್ಯಾದಿ Arjun Maduru ರವರ ಗೆಳೆಯ ಶಂಕರ್ ಮಡ್ಯಾರ ಎಂಬುವರು ದೂರವಾಣಿ ಕರೆಯ ಮೂಲಕ Kotekar  Village   ಮನೆಯ ಹತ್ತಿರ ಗುಡ್ಡದಿಂದ ಗುಂಡು ಹೊಡೆದ ಶಬ್ದ ಕೇಳಿ ನಾನು ಮತ್ತು ನನ್ನ ಗೆಳೆಯರಾದ ಹರೀಶ್, ಸುರೇಶ್, ಇತರರು ಗುಡ್ಡದ ಕಡೆಗೆ ಹೋಗಿ ನೋಡಿದಾಗ ಒಂದು ದೋಡ್ಡ ಕೋಣವನ್ನು ಯಾರೋ ಕಿಡಿಗೇಡಿಗಳು ಗುಂಡು ಹಾರಿಸಿ ಮತ್ತು ಅದರ ಕತ್ತನ್ನು ಕೊಯ್ದು ಸಾಯಿಸಿರುತ್ತಾರೆ. ಎಂಬಂತೆ  ಪಿರ್ಯಾದಿದಾರರಿಗೆ ತಿಳಿಸಿದಂತೆ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೊಡಿದಾಗ ಕೋಣವು ಸ್ಥಳದಲ್ಲಿ ಸತ್ತು ಬಿದ್ದಿತ್ತು. ಪಿರ್ಯಾದಿದಾರರು ಸ್ಥಳದಲ್ಲಿದ್ದ ಜಯರಾಮ ರೈ ಹಾಗೂ ಇತರರನ್ನು ವಿಚಾರಿಸಿದಾಗ ಕೋಣವು ನಾಲ್ಕೈದು ದಿನಗಳ ಹಿಂದೆ ಯಾರೋ ಕಳ್ಳರು ಎಲ್ಲಿಂದಲೋ ಕಳವು ಮಾಡಿ ತಂದು ಗುಡ್ಡದಲ್ಲಿ ಮೇಯಿಸಲು ಬಿಟ್ಟು ಹೋಗಿದ್ದು ಆ ಕೋಣವು ಜಯರಾಮ ರೈ ರವರ ತೋಟಕ್ಕೆ ಒಳಹೋಕ್ಕಿ ಅವರು ಬೆಳೆಸಿದ ಬೆಳೆಯನ್ನು ನಾಶಮಾಡಿದರಿಂದ  ಉಮ್ಮರ್ ಪಾರೂಕ್ ಎಂಬವರಲ್ಲಿ ಜಯರಾಮ ರೈ ವಿಷಯವನ್ನು ತಿಳಿಸಿದಂತೆ ಉಮ್ಮರ ಪಾರೂಕ್, ಮೋಹಮ್ಮದ್ ಕಲಂದರ್, ಇಲಿಯಾಸ್, ಮೋಹಮ್ಮದ್ ಸೂಹೈಲ್ ಇತತರು ಸೇರಿಕೊಂಡು ದಿನಾಂಕ 29-08-2021 ಸಮಯ ಸಂಜೆ 04-30 ಗಂಟೆಗೆ ಗುಡ್ಡದ ಬಳಿ ಬಂದು ಆ ಕೋಣಕ್ಕೆ ಗುಂಡು ಹೋಡೆದು ಅದರ ಕತ್ತನ್ನು ಕೊಯ್ದು ಹಾಕಿರುವದು ತಿಳಿಯಿತು. ಗುಂಡಿನ ಶಬ್ದದಿಂದ ಜನ ಸೇರುವುದನ್ನು ಅರಿತ ಆರೋಪಿಗಳು ತಾವು ತಂದಿದ್ದ ಕೆಎ-19-ಇಯು-0604 ನೇ ಸ್ಕೂಟರ್ ಸ್ಥಳದಲ್ಲಿಯೇ ಬಿಟ್ಟು ಇನ್ನೂಂದು ವಾಹನದಲ್ಲಿ ತಾವು ತಂದಿದ್ದ ಹತ್ಯಾರುಗಳೊಂದಿಗೆ ಪರಾರಿಯಾಗಿರುತ್ತಾರೆ. ಆದುದರಿಂದ ಆರೋಪಿಗಳಾದ ಉಮ್ಮರ ಪಾರೂಕ್, ಮೋಹಮ್ಮದ್ ಕಲಂದರ್, ಇಲಿಯಾಸ್, ಮೋಹಮ್ಮದ್ ಸೂಹೈಲ್ ಎಲ್ಲಿಂದಲೋ ಕೋಣವನ್ನು ಕದ್ದು ಜಯರಾಮ ರೈ ರವರ ಸಹಕಾರದೊಂದಿಗೆ ಕೋಣವನ್ನು ಗುಂಡು ಹಾರಿಸಿ ಹಿಂಸಾತ್ಮಕವಾಗಿ ಕೊಂದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವರೆ ಎಂಬಿತ್ಯಾದಿಯಾಗಿ ಪ್ರಕರಣದ ಸಾರಾಂಶ

 

ಇತ್ತೀಚಿನ ನವೀಕರಣ​ : 31-08-2021 06:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080