ಅಭಿಪ್ರಾಯ / ಸಲಹೆಗಳು

Crime Reported in Mangalore East PS

ಪಿರ್ಯಾದಿ Umesh Bohar ದಾರರು ತನ್ನ ಹೆಂಡತಿ ಮತ್ತು ಮಗನೊಂದಿಗೆ ಸ್ವಂತ ಊರಾದ ನೇಪಾಳದಿಂದ ಮಂಗಳೂರಿಗೆ ಸುಮಾರು 3 ವರ್ಷಗಳ ಹಿಂದೆ ಬಂದು ಮಂಗಳೂರಿನಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ:27-09-2021 ರಂದು ಮಧ್ಯಾಹ್ನ ಸುಮಾರು 1-30 ಗಂಟೆಯಿಂದ 2.00 ಗಂಟೆ ಮಧ್ಯೆ ಪಿರ್ಯಾದಿದಾರರ ಹೆಂಡತಿ ಶ್ರೀಮತಿ ಸೀತಾ ಬೋಹರಾ ಎಂಬವಳು ಮನೆ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದವಳು ಈತನಕ ಮನೆಗೆ ವಾಪಾಸು ಬಂದಿರುವುದಿಲ್ಲ ಆಕೆಯು ಮನೆಗೆ ವಾಪಸ್ಸು ಬಾರದ ಕಾರಣ ಸಂಬಂಧಿಕರಲ್ಲಿ ಹಾಗೂ ಕೆಲಸ ಮಾಡುವ ಸ್ಥಳಗಳಲ್ಲಿ ವಿಚಾರಿಸಿದಾಗ ಆಕೆಯ ಪತ್ತೆಯಾಗಿರುವುದಿಲ್ಲ ಆದುದರಿಂದ ಕಾಣೆಯಾದ  ಹೆಂಡತಿಯನ್ನು ಪತ್ತೆ ಮಾಡಿಕೊಡಬೇಕಾಗಿ ಮತ್ತು ರಕ್ತ ಸಂಬಂಧಿಕರಲ್ಲಿ ಹಾಗೂ ಇತರರಲ್ಲಿ ವಿಚಾರಿಸಿ ದೂರು ನೀಡಲು ತಡವಾಗಿರುತ್ತದೆ ಎಂಬುದಾಗಿ ನೀಡಿರುವ ದೂರಿನಂತೆ ಪ್ರಥಮ ವರ್ಥಮಾನ ವರದಿ.

Crime Reported in Mangalore North PS

ಪಿರ್ಯಾದಿದಾರರಾದ ಆನಂದರಾಯ ಎಂಬವರು ದಿನಾಂಕ 17-09-2021 ರಂದು ವ್ಯವಹಾರದ ನಿಮಿತ್ತ ಮಂಗಳೂರು ಕಾರ್‌ಸ್ಟ್ರೀಟ್ ಎಂಬಲ್ಲಿಗೆ ಅವರ ಬಾಬ್ತು  KA-19 EB-0830 ನಂಬ್ರದ ಹೊಂಡಾ ಕಂಪೆನಿಯ ಆಕ್ವೀವಾ ಕಪ್ಪು ಬಣ್ಣದ ಸ್ಕೂಟರ್‌ನಲ್ಲಿ ಬಂದು  ಸದರಿ ಸ್ಕೂಟರನ್ನು ಕಾರ್‌ಸ್ಟ್ರೀಟ್‌ನ ಫ್ಲವರ್ ಮಾರ್ಕೇಟ್ ಹಿಂಬದಿಯ ರಸ್ತೆಯ ಬದಿಯಲ್ಲಿ ಮಧ್ಯಾಹ್ನ ಸುಮಾರು 3-15 ಗಂಟೆಗೆ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿ ಕೆಲಸದ ನಿಮಿತ್ತ ಹೋಗಿದ್ದು, ಕೆಲಸ ಮುಗಿಸಿಕೊಂಡು ವಾಪಾಸು ಸಂಜೆ ಸುಮಾರು 5-30 ಗಂಟೆಗೆ ಪಾರ್ಕ್ ಮಾಡಿದ ಅದೇ ಸ್ಥಳಕ್ಕೆ ಬಂದು ನೋಡಿದಾಗ ಸ್ಕೂಟರ್ ಅಲ್ಲಿ ಇರದೇ ಇದ್ದು  ಈ ಬಗ್ಗೆ  ಇಂದಿನ ದಿನದವರೆಗೆ ಎಲ್ಲಾ ಕಡೆ ಹುಡುಕಾಡಿದರೂ ಎಲ್ಲಿಯೂ ಸಿಗದ ಕಾರಣ  ಈ ದಿನ ತಡವಾಗಿ ದೂರು ನೀಡಿದ್ದು, ಪಿರ್ಯಾದಿದಾರರ ಬಾಬ್ತು   KA-19 EB-0830 ನೇ ನೊಂದಣಿ ನಂಬ್ರದ ಹೊಂಡಾ ಕಂಪೆನಿಯ ಆಕ್ವೀವಾ ಕಪ್ಪು ಬಣ್ಣದ ಸ್ಕೂಟರ್‌ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು  ಕಳವಾದ ಸ್ಕೂಟರ್‌ನ ಸೀಟಿನ ಅಡಿಯಲ್ಲಿ ಸ್ಕೂಟರ್‌ನ ಆರ್‌‌ಸಿ, ನನ್ನ ಡ್ರೈವಿಂಗ್ ಲೈಸೆನ್ಸ್‌‌ನ ಜೆರಾಕ್ಸ್ ಪ್ರತಿ ಮತ್ತು ಸ್ಕೂಟರ್‌ನ ಮೂಲ ವಿಮಾ ಪತ್ರದ, ದಾಖಲಾತಿಗಳು ಮತ್ತು ಹೆಲ್ಮೆಟ್‌ ಇತ್ತು ಎಂಬಿತ್ಯಾದಿಯಾಗಿ ಪಿರ್ಯಾದುದಾರರು ನೀಡಿದ ದೂರಿನ ಸಾರಾಂಶ

ಕಳವಾದ ಸ್ಕೂಟರ್ ನ ವಿವರಗಳು ಈ ಕೆಳಗಿನಂತಿದೆ:

KA-19 EB-0830 ನಂಬ್ರದ ಹೊಂಡಾ ಕಂಪೆನಿಯ ಆಕ್ವೀವಾ ಕಪ್ಪು ಬಣ್ಣದ ಸ್ಕೂಟರ್

ಮೊಡೆಲ್- 2010,  ಅಂದಾಜು ಮೌಲ್ಯ ರೂ 20,000/- ಆಗಬಹುದು.

 

Crime Reported in Ullal PS

ದಿನಾಂಕ. 29-9-2021 ರಂದು ಬೆಳಿಗ್ಗೆ 10-45 ಗಂಟೆಗೆ ದೇರಳಕಟ್ಟೆ ಕಣಚೂರು ಪಬ್ಲಿಕ್ ಸ್ಕೂಲ್ನ  ಸಂಚಾಲಕರ ಕಛೇರಿಗೆ ಮಹಮ್ಮದ್ ಇಝಾನ್ ಮತ್ತು ಅವನ ತಾಯಿ ರಮಲತ್ ರವರು ಅಕ್ರಮವಾಗಿ ಪ್ರವೇಶಿಸಿ ಸಂಚಾಲಕ ಅಬ್ದುಲ್ ರಹಿಮಾನ್ ಮತ್ತು ಶಾಲಾ ಕಛೇರಿಯ ಮೆನೇಜರ್ ಇರ್ಫಾನ್ ರವರನ್ನು ಬೈದು ನಿಂದಿಸಿದಲ್ಲದೆ, ನಂತರ ಬೆಳಿಗ್ಗೆ 10:50 ಗಂಟೆಗೆ ಮುಸ್ತಾಫ ಎಂಬಾತನ ಜೊತೆ ಸೇರಿ ಕಬ್ಬಿಣದ ಮಾರಕ ಆಯುಧವನ್ನು ತಂದು ಬಲಾತ್ಕಾರದಿಂದ ಶಾಲಾ ಕಛೇರಿಯನ್ನು ಪ್ರವೇಶಿಸಿ ಅಕ್ರಮವಾಗಿ ನುಗ್ಗಿ ಶಾಲೆಯ ಸೆಕ್ಯೂರಿಟಿ ಸಿಬ್ಬಂದಿಯವರನ್ನು ದೂಡಿ ಬೆದರಿಸಿ ಕಛೇರಿಯನ್ನು ಅಕ್ರಮವಾಗಿ ಒಳಪ್ರವೇಶಿಸಿ ಕಛೇರಿಯ ಗಾಜುಗಳಿಗೆ ಹಾನಿ ಮಾಡಲು ಪ್ರಯತ್ನಿಸಿದಲ್ಲದೆ, ಕುರ್ಚಿಗಳನ್ನು ಎತ್ತಿ ಬಿಸಾಡಿದಲ್ಲದೆ, ಸಂಚಾಲಕ ಅಬ್ದುಲ್ ರಹಿಮಾನ್ ರನ್ನು ಮತ್ತು ಮೆನೇಜರ್ ಇರ್ಫಾನ್ ರವರನ್ನು ಬೈದು ನಿಂದಿಸಿ, ಹಲ್ಲೆಗೆ ಯತ್ನಿಸಿ ಕೊಲೆ ಮಾಡುವುದು ಖಚಿತ ಎಂದು ಬೆದರಿಕೆಯನ್ನು ಒಡ್ಡಿರುತ್ತಾರೆ ಎಂಬಿತ್ಯಾದಿ.

Crime Reported in Moodabidre PS

ಪಿರ್ಯಾದಿ Shambhu Shetty ದಾರರು ದಿನಾಂಕ: 29-09-2021 ರಂದು ತನ್ನ ಬಾಬ್ತು ಮೋಟಾರು ಸೈಕಲಿನಲ್ಲಿ ಮೂಡಬಿದ್ರೆಯಿಂದ ಮಾರೂರು ಕಡೆಗೆ ಹೋಗುತ್ತಾ ಮೂಡಬಿದ್ರೆ ತಾಲೂಕು ಕಲ್ಲಬೆಟ್ಟು ಗ್ರಾಮದ ಗಂಟಾಲ್ ಕಟ್ಟೆ ಎಂಬಲ್ಲಿಗೆ ತಲುಪುವಾಗ ತನ್ನ ಎದುರಿನಿಂದ ಅಂದರೆ ಮೂಡಬಿದ್ರೆ ಕಡೆಯಿಂದ ಮಾರೂರು ಕಡೆಗೆ ಕೆಎ-19-ಇಡಬ್ಲ್ಯೂ-6105 ನಂಬ್ರದ ಮೋಟಾರು ಸೈಕಲ್ ಸವಾರರಾದ ವಿಕಾಸ್ ಶೆಟ್ಟಿ, ಪ್ರಾಯ: 38 ವರ್ಷ, ತಂದೆ: ಮಹಾಬಲ ಶೆಟ್ಟಿ, ವಾಸ: ಚಾಮುಂಡೇಶ್ವರಿ ಕೃಪಾ, ಬೆಟ್ಟು ಮನೆ, ಮಾರೂರು ಗ್ರಾಮ ಮತ್ತು ಅಂಚೆ, ಮೂಡಬಿದ್ರೆ ತಾಲೂಕುರವರು ತನ್ನ ಮೋಟಾರು ಸೈಕಲನ್ನು ರಸ್ತೆಯ ಬಲ ಬದಿಗೆ ತಿರುಗಿಸಿ ಹೋಗುವಷ್ಟರಲ್ಲಿ ವೇಣೂರು ಕಡೆಯಿಂದ ಮೂಡಬಿದ್ರೆ ಕಡೆಗೆ ಬರುತ್ತಿದ್ದ ಕೆಎ-21-6364 ನಂಬ್ರದ ಪಿಕಪ್ ವಾಹನವನ್ನು ಅದರ ಚಾಲಕರಾದ ಸತೀಶ್, ಪ್ರಾಯ: 43 ವರ್ಷ, ತಂದೆ: ಲೋಕಯ್ಯ ಶೆಟ್ಟಿ, ವಾಸ: ಜಾರಿಗೆದಡಿ ಮನೆ, ಮೂಡುಕೋಡಿ ಗ್ರಾಮ ಮತ್ತು ಅಂಚೆ, ವೇಣೂರು, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬಲಬದಿಗೆ ತಿರುಗಿಸುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿಯಾದ ಪರಿಣಾಮ ಮೋಟಾರು ಸೈಕಲ್ ಸವಾರನ ಬಲತೊಡೆಗೆ ಮೂಳೆ ಮುರಿತದ ಗಂಭೀರ ಗಾಯವಾಗಿದ್ದು, ತಲೆಗೆ ಮತ್ತು ಎರಡೂ ಕೈಗಳಿಗೆ ರಕ್ತಗಾಯವಾಗಿದ್ದು, ದೇಹದ ಇತರ ಕಡೆಗಳಿಗೆ ಸಣ್ಣ ಪುಟ್ಟ ಗಾಯಗಳಾದವರನ್ನು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ಸಾಗಿಸಿ ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿರುವುದು ಅಲ್ಲದೇ ಅಪಘಾತದಿಂದ ಎರಡೂ ವಾಹನಗಳು ಜಖಂ ಆಗಿರುತ್ತವೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 30-09-2021 07:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080