ಅಭಿಪ್ರಾಯ / ಸಲಹೆಗಳು

Crime Reported in Mangalore East Traffic PS                                                      

 ದಿನಾಂಕ 30-10-2021 ರಂದು ಪಿರ್ಯಾದಿ ಕುಮಾರಿ ದಿಶಾ ಕಣ್ವತೀರ್ಥ ರವರ ತಾಯಿ ಶ್ರೀಮತಿ ವಿದ್ಯಾ ಹೆಚ್ ಕಣ್ವತೀರ್ಥ ರವರು ತನ್ನ ಬಾಬ್ತು  KA-19-EP-4081 ಸ್ಕೂಟರಿನಲ್ಲಿ ಸವಾರಳಾಗಿ ರಾಷ್ಟ್ರೀಯ ಹೆದ್ದಾರಿ 73ನೇ ಡಾಮಾರು ರಸ್ತೆಯಲ್ಲಿ ಕೈಕಂಬ ಕಡೆಯಿಂದ ಪಡೀಲ್ ಕಡೆಗೆ ಹೋಗುತ್ತಾ ಸಮಯ ಸುಮಾರು  07.45 ಗಂಟೆಗೆ ಕೆನರಾ ಸ್ಪ್ರೀಂಗ್ಸ್  ಎದುರುಗಡೆ ತಲುಪುತ್ತಿದ್ದಂತೆ ಕೆನರಾ ಸ್ಪ್ರಿಂಗ್ಸ್ ಗೇಟಿನ ಒಳಗಡೆಯಿಂದ  KA-19-AA-4043 ಲಾರಿಯನ್ನು ಅದರ ಚಾಲಕ  ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ  ಆಗುವ ರೀತಿಯಲ್ಲಿ  ಹಿಮ್ಮಖವಾಗಿ ಚಲಾಯಿಸಿಕೊಂಡು ರಾ.ಹೆ 73 ನೇ ಡಾಮಾರು ರಸ್ತೆಗೆ ಬಂದು  ಶ್ರೀಮತಿ ವಿದ್ಯಾ ಹೆಚ್ ಕಣ್ವತೀರ್ಥ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ವಿದ್ಯಾ ಹೆಚ್ ಕಣ್ವ ತೀರ್ಥ ರವರ ತಲೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿ ಚಿಕಿತ್ಸೆಯ ಬಗ್ಗೆ  ಇಂಡಿಯಾನ ಆಸ್ಪತ್ರೆಗೆ  ಸಾಗಿಸುವ ವೇಳೆ ದಾರಿಯ ಮಧ್ಯ ಮೃತಪಟ್ಟಿರುತ್ತಾರೆ       

Crime Reported in CEN Crime PS

ಪಿರ್ಯಾದಿದಾರರು ಎಸ್.ಬಿ.ಐ ಕ್ರೆಡಿಟ್ ಕಾರ್ಡ್ ನ್ನು ಹೊಂದಿದ್ದು. ದಿನಾಂಕ 29-10-2021 ರಂದು ಮಧ್ಯಾಹ್ನ 3.18 ಗಂಟೆಗೆ ಪಿರ್ಯಾದಿದಾರರ  ಮೊಬೈಲ್ ನಂಬ್ರಕ್ಕೆ ಯಾರೋ ಮಹಿಳೆಯು 7089961456 ನೇ ನಂಬ್ರದಿಂದ ಕರೆ ಮಾಡಿ ತಾನು ಎಸ್.ಬಿ.ಐ ಕ್ರೆಡಿಟ್ ಕಾರ್ಡ್ ಕಛೇರಿಯಿಂದ ಕರೆ ಮಾಡುವುದಾಗಿ ನಂಬಿಸಿ ತಾನು ಕ್ರೆಡಿಟ್ ಕಾರ್ಡ್ ಪರಿಶೀಲನೆ ಬಗ್ಗೆ ಕರೆ ಮಾಡಿದ್ದು ಪಿರ್ಯದಿದಾರರ cash limit ಹಾಗೂ credit limit ನ್ನು  ಜಾಸ್ತಿ ಮಾಡುವುದಾಗಿಯು  ತಿಳಿಸಿ ನಂತರ ಪಿರ್ಯಾದಿದಾರರಲ್ಲಿ OTP ಯನ್ನು ಶೇರ್ ಮಾಡಲು ತಿಳಸಿದಂತೆ ಪಿರ್ಯಾದಿದಾರರು ತನ್ನ ಮೊಬೈಲ್ ಗೆ ಬಂದ OTP ನಂಬ್ರವನ್ನು ತಿಳಿಸಿದ್ದು ಆ ಕೂಡಲೇ ಪಿರ್ಯಾದಿದಾರರ ಎಸ್.ಬಿ.ಐ ಕ್ರೆಡಿಟ್ ಸಂಖ್ಯೆ ನೇ ದರಿಂದ ರೂ.99,274/- ವರ್ಗಾವಣೆಯಾಗಿದ್ದು ತದನಂತರ ಸುಮಾರು 3.51 ಗಂಟೆಯವರೆಗೂ ಸದ್ರಿ ಮಹಿಳೆಯು ಪೋನಿನಲ್ಲಿ ಮಾತನಾಡಿದ್ದು ಸುಮಾರು 6 OTP ಗಳನ್ನು ಪಡೆದುಕೊಂಡು ಪಿರ್ಯಾದಿದಾರರ ಕ್ರೆಡಿಟ್ ಕಾರ್ಡ್ ನಿಂದ ಹಂತಹಂತವಾಗಿ ಒಟ್ಟು 6,94,918/- ತನ್ನ ಖಾತೆಯಿಂದ  ವರ್ಗಾವಣೆ ಮಾಡಿಕೊಂಡಿರುತ್ತಾರೆ.  ಈ ರೀತಿ ತನಗೆ ಎಸ್.ಬಿ.ಐ ಕ್ರೆಡಿಟ್ ಕಾರ್ಡ್ ಕಛೇರಿಯಿಂದ ಕರೆ ಮಾಡುವುದಾಗಿ ತಿಳಿಸಿ ಕ್ರೆಡಿಟ್ ಕಾರ್ಡ್ cash limit ಹಾಗೂ credit limit ನ್ನು ಹೆಚ್ಚಿಸುವಂತೆ ನಂಬಿಸಿ ಪಿರ್ಯಾದಿದಾರರ  ಕ್ರೆಡಿಟ್ ಕಾರ್ಡ್ ನಿಂದ ಹಂತ ಹಂತವಾಗಿ ಒಟ್ಟು ರೂ. 6,94,918/-  ತನ್ನ ಖಾತೆಗೆ ವರ್ಗಾಯಿಸಿ ಮೋಸ ಮಾಡಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿಯಾಗಿ ದೂರಿನ  ಸಾರಾಂಶವಾಗಿರುತ್ತದೆ.

Crime Reported in Traffic North PS

ದಿನಾಂಕ 29-10-2021 ರಂದು ಪಿರ್ಯಾದಿದಾರರಾದ ಹರ್ಷಿತ್ ಜಿ ಬಿ ರವರು ಬೈಕಂಪಾಡಿಯ ದೀಪಕ್ ಪೆಟ್ರೋಲ್ ಪಂಪ್ ಕಡೆಯಿಂದ ಪಣಂಬೂರು ಜಂಕ್ಷನ್ ಕಡೆಗೆ ನಡೆದುಕೊಂಡು ಹೋಗುತ್ತಾ ರಾತ್ರಿ ಸಮಯ ಸುಮಾರು 7:45 ಗಂಟೆಗೆ ಪಣಂಬೂರು ಜಂಕ್ಷನ್ ಬಳಿ ಇರುವ ಬಸ್ ಸ್ಟಾಪ್ ಸಮೀಪ ಪಾದಾಚಾರಿ ರವೀಂದ್ರ ಎಂಬವರು ರಸ್ತೆ ದಾಟುತ್ತಾ ರಸ್ತೆಯ ಇನ್ನೊಂದು ಬದಿಗೆ ಸಮೀಪಿಸುತ್ತಿದ್ದಂತೆ ಪಣಂಬೂರು ಜಂಕ್ಷನ್ ಕಡೆಯಿಂದ ಬೈಕಂಪಾಡಿ ಕಡೆಗೆ KA-21-M-2130 ನಂಬ್ರದ ಜೀಪ್ ಅನ್ನು ಅದರ ಚಾಲಕನಾದ ರಾಜನ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಾದಾಚಾರಿ ರವೀಂದ್ರ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರ ಎದೆಗೆ ಹಾಗೂ ಸೊಂಟದ ಎಡಬದಿಗೆ ಗುದ್ದಿದ ಗಂಭೀರ ಸ್ವರೂಪದ ಗಾಯವಾಗಿದ್ದು ಅಲ್ಲದೇ ಹಣೆಗೆ, ಕೆನ್ನೆಗೆ, ಎದೆಗೆ, ಕೈಗೆ, ಹೊಟ್ಟೆಗೆ ಅಲ್ಲಲ್ಲಿ ತರಚಿದ ರೀತಿಯ ರಕ್ತಗಾಯವಾಗಿ ಚಿಕಿತ್ಸೆಯ ಬಗ್ಗೆ ಎಜೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತ ಪಟ್ಟಿರುವುದಾಗಿ ಪಿರ್ಯಾದಿ ಸಾರಾಂಶ

2) ದಿನಾಂಕ 29-10-2021 ರಂದು ಪಿರ್ಯಾದಿದಾರರಾದ ಎಎಸ್ಐ ಯಂ ರಾಜು ರವರು ಇಲಾಖಾ ವಾಹನವಾದ ಹೈವೇ ಪೆಟ್ರೋಲ್ – 01 ರಲ್ಲಿ ಚಾಲಕರಾದ ಪಿಸಿ ಸತೀಶ್ ರವರೊಂದಿಗೆ ರಾ ಹೆ 66 ರ ಹೆದ್ದಾರಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ ಸಂಜೆ ಸಮಯ ಸುಮಾರು 5:00 ಗಂಟೆಗೆ ಕೂಳೂರು ಕಡೆಯಿಂದ ಕೊಟ್ಟಾರ ಕಡೆಗೆ ಹೆದ್ದಾರಿಯಲ್ಲಿ ರೌಂಡ್ಸ್ ಮಾಡುತ್ತಾ ಕೋಡಿಕಲ್ ಕ್ರಾಸ್ ನಿಂದ ಸ್ವಲ್ಪ ಮುಂದಕ್ಕೆ ಪ್ಲೈಓವರ್ ನ ಬಳಿಗೆ ತಲುಪಿದಾಗ ಅದೇ ರಸ್ತೆಯಲ್ಲಿ ರಾ ಹೆ 66 ರ ಮುಖ್ಯ ರಸ್ತೆಯ ಮಧ್ಯದಲ್ಲಿ KA-01-AJ-4693 ನಂಬ್ರದ 12 ಚಕ್ರದ ಲಾರಿಯನ್ನು ಅದರ ಚಾಲಕ ಮೋಹನ್ ಎಂಬವರು ರಸ್ತೆ ಮಧ್ಯದಲ್ಲಿ ಅಪಾಯಕರ ರೀತಿಯಲ್ಲಿ ನಿಲ್ಲಿಸಿ ಇತರ ವಾಹನಗಳ ಸಗುಮ ಸಂಚಾರಕ್ಕೆ ಅಡಚಣೆ ಉಂಟು ಮಾಡಿರುವುದಾಗಿ ಪಿರ್ಯಾದಿ ಸಾರಾಂಶ.

 

Crime Reported in Moodabidre PS

ಪಿರ್ಯಾದಿ Smt Mayuri Smitha ದಾರರ ಸಹೋದರಿಯಾದ ಕುಮಾರಿ ಸುಜಾತಾ 29 ವರ್ಷ ಇವರು ಅಲಿಯ ಮನೋರ್ ಅಪಾರ್ಟಮೆಂಟ್ ನಲ್ಲಿ ಪಿರ್ಯಾಧಿದಾರರೊಂದಿಗೆ ವಾಸವಾಗಿದ್ದು, ಆಳ್ವಾಸ್ ಮೂಡಬಿದ್ರೆ, ಎಸ್ ಡಿ ಎಮ್, ಉಜಿರೆ ಹಾಗೂ ಪಿಪಿಸಿ ಅದಮಾರ್ ನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿಕೊಂಡಿದ್ದವರು, ಇವರು ಕೆಲವು ತಿಂಗಳುಗಳಿಂದ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದು,ಚಿಕಿತ್ಸೆಯಲ್ಲಿದ್ದುದರಿಂದ ಮನೆಯಲ್ಲಿಯೇ ಇದ್ದವರು, ದಿನಾಂಕ: 29-10-2021 ರಂದು ಸಮಯ ಸುಮಾರು 12.15 ಗಂಟೆಗೆ ಅಲಿಯ ಮನೋರ್ ಅಪಾರ್ಟ ಮೆಂಟ್ ನಲ್ಲಿರುವ ಮನೆಯಿಂದ ಯಾರಿಗೂ ತಿಳಿಸದೇ ಮನೆಯಿಂದ ಹೋಗಿರುತ್ತಾಳೆ. ಆಕೆಯ ಪತ್ತೆಗಾಗಿ ಬಿ.ಸಿ ರೋಡ್, ಮಂಗಳೂರು  ಕಡೆಗಳಲ್ಲಿ ಹುಡುಕಾಡಿ ಪತ್ತೆಯಾಗದ ಕಾರಣ ಠಾಣೆಗೆ ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

ಕಾಣೆಯದಾದವರ ಚಹರೆ:

ಎತ್ತರ: 5’2

ಮೈಬಣ್ಣ: ಗೋಧಿ ಬಣ್ಣ

ಕೋಲು ಮುಖ,

ಕೂದಲು: ದಪ್ಪ ಹಾಗೂ ಕಪ್ಪು ಕೂದಲು

ಇತ್ತೀಚಿನ ನವೀಕರಣ​ : 30-10-2021 06:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080