ಅಭಿಪ್ರಾಯ / ಸಲಹೆಗಳು

Crime Reported in Traffic South PS

ದಿನಾಂಕ:29-11-2021 ರಂದು ಪಿರ್ಯಾದಿದಾರರು  ಅಝಿಝ್ ಅಬ್ದುಲ್ ರೆಹಮಾನ್  (45) ರವರು ತಮ್ಮ ಭಾವ ನವರ ಬಾಬ್ತು ಸ್ಕೂಟರ್ ನಂಬ್ರ :KA-19-EE-9806  ನೇದರಲ್ಲಿ ಸಹ ಸವಾರನಾಗಿ ಅಬ್ದುಲ್ ಅರೀಸ್ ರವರು ಸವಾರನಾಗಿ ತೊಕ್ಕಟ್ಟು  ನಿಂದ ಪಂಪವೆಲ್ ಕಡೆಗೆ ಬರುತ್ತಿರುವ ಸಮಯ ಸುಮಾರು 17:30 ಗಂಟೆಗೆ ರಾ ಹೆ 66 ರಲ್ಲಿ ನೇತ್ರಾವತಿ ಬ್ರೀಡ್ಜ್ ಬಳಿ ತಲುಪಿದಾಗ ರಸ್ತೆಯಲ್ಲಿ ಇದ್ದ ದೊಡ್ಡ ಗುಂಡಿಯನ್ನು  ನೋಡದೆ ಸವಾರ ಸ್ಕೂಟರ್ ಅನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನ ದಿಂದ ಸವಾರಿಮಾಡಿ ರಸ್ತೆಯಲ್ಲಿರುವ ಗುಂಡಿಗೆ ಸ್ಕೂಟರ್ ಅನ್ನು ಬಿಳಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಸವಾರ ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರ ತಲೆಗೆ ಗುದ್ದಿದ್ದ ರೀತಿಯಾ ಗಾಯ ಹಾಗೂ ಎಡಗಾಲಿನ ಮೊಣಗಂಟಿನ ಹತ್ತಿರ ಮೂಳೆ ಮುರಿತದ ಗಾಯ ಮತ್ತು ಸವಾರನ ಸೊಂಟಕ್ಕೆ ಸಣ್ಣಮಟ್ಟದ ಗುದ್ದಿದ ರೀತಿಯ ಗಾಯವಾಗಿದ್ದು ಪಿರ್ಯಾದಿದಾರರ ಸ್ಕೂಟರ್ ಹಿಂದೆ ಬರುತ್ತಿದ್ದ ಬಸೀರ್ ರವರು ತಮ್ಮ ಕಾರಿನಲ್ಲಿ  ಗಾಯಳುಗಳನ್ನು ನಗರದ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾಧಿ,

Crime Reported in CEN Crime PS

 ಪಿರ್ಯಾದಿದಾರರು ಮಂಗಳೂರು ನಗರದ ಫೌಂಡರ್ಸ್ ಬ್ರಾಂಚಿನಲ್ಲಿ ಖಾತೆ ಯನ್ನು ಹೊಂದಿರುತ್ತಾರೆ. ದಿನಾಂಕ 01-06-2021 ರಂದು ಬೆಳಿಗ್ಗೆ 10.00 ಗಂಟೆಗೆ ಪಿರ್ಯಾದಿದಾರರಿಗೆ   7908256272 ನೇ ನಂಬ್ರದಿಂದ ಕರೆ ಬಂದಿದ್ದು ಪೋನಿನಲ್ಲಿ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ತಾನು ಬಿ.ಎಸ್.ಎನ್.ಎಲ್ ಕಛೇರಿಯಿಂದ ಮಾತನಾಡುತ್ತಿರುವುದಾಗಿ ತಿಳಿಸಿ ಮೊಬೈಲ್ ರೀಚಾರ್ಜ್ ಅಪ್ ಡೇಟ್ ಮಾಡುವರೇ Any desk App ನ್ನು ಡೌನ್ ಲೋಡ್ ಮಾಡಲು ತಿಳಿಸಿದಂತೆ ಪಿರ್ಯಾದಿದಾರರು Any desk App ನ್ನು ಡೌನ್ ಲೋಡ್ ಮಾಡಿದಾಗ ವೆಬ್ ಪೇಜೊಂದು ಓಪನ್ ಆಗಿದ್ದು ಕರೆ ಮಾಡಿದ ವ್ಯಕ್ತಿಯು ಪಿರ್ಯಾದಿದಾರರಿಗೆ              CVV ನಂಬ್ರವನ್ನು ಹಾಕಲು ತಿಳಿಸದಂತೆ ಪಿರ್ಯಾದಿದಾರರು   CVV ನಂಬ್ರವನ್ನು ಹಾಕಿದ್ದು ಕೂಡಲೇ ಪಿರ್ಯಾದಿದಾರರ ಬ್ಯಾಂಕ್ ಖಾತೆಯಿಂದ ರೂ.99,900/- ವರ್ಗಾವಣೆಗೊಂಡಿರುತ್ತದೆ. ಈ ರೀತಿಯಾಗಿ ಬಿ.ಎಸ್.ಎನ್.ಎಲ್ ಕಛೇರಿಯಿಂದ ಕರೆ ಮಾಡುವುದಾಗಿ ತಿಳಿಸಿ  ಪಿರ್ಯಾದಿದಾರರಿಗೆ ಮೊಬೈಲ್ ರೀಚಾರ್ಜ್ ಮಾಡುವಂತೆ ತಿಳಿಸಿ ಪಿರ್ಯಾದಿದಾರರ ಬ್ಯಾಂಕ್ ಖಾತೆ ಸಂಖ್ಯೆ ಯಿಂದ ತನ್ನ ಖಾತೆಗೆ ರೂ.99,900/- ವನ್ನು ವರ್ಗಾಯಿಸಿರುವ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ.

Crime Reported in Konaje PS  

ದಿನಾಂಕ 29.11.2021 ರಂದು ಬೆಳಗ್ಗೆ ಸುಮಾರು 09.15 ಗಂಟೆಗೆ ಪಿರ್ಯಾದಿ Hanamappa Nagavva Madar ದಾರರ ಮಗನಾದ ಸಂಜು ಹನಮಂತಪ್ಪ ಮಾದರ (24 ವರ್ಷ) ಎಂಬಾತನು ಮಂಗಳೂರು ತಾಲೂಕು ಬೆಳ್ಮ ಗ್ರಾಮದ ಜಲಾಲ್ ಬಾಗ್ ಕ್ರಾಸ್ ಎಂಬಲ್ಲಿ ರಸ್ತೆಯ ಅಗಲೀಕರಣ ಕಾಮಗಾರಿ ಕೆಲಸವನ್ನು ನಿರ್ವಹಿಸುತ್ತಿದ್ದ ಸಮಯ ಹಿಟಾಚಿ ವಾಹನದ ಮೇಲೆ ನಿಂತು ಮರದ ಕೊಂಬೆಗೆ ಹಗ್ಗವನ್ನು ಕಟ್ಟುತ್ತಿದ್ದಾಗ ಹಿಟಾಚಿ ಚಾಲಕ ವೀರೇಶ್ ಎಂಬಾತನು ಹಿಟಾಚಿಯ ಬಕೇಟ್ ನ್ನು ಒಮ್ಮೆಲೆ ಎತ್ತಿದಾಗ ಸಂಜು ಹನಮಂತಪ್ಪ ಮಾದರನು ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುತ್ತಾನೆ. ಕಾರ್ಮಿಕರ ಹಿತದೃಷ್ಟಿಯಿಂದ ಯಾವುದೇ ಮುಂಜಾಗೃತ ಕ್ರಮ ಕೈಗೊಳ್ಳದಿರುವುದರಿಂದ ರಸ್ತೆ ಕಾಮಗಾರಿ ಕಂಟ್ರಾಕ್ಟರ್ ಮಹಮ್ಮದ್ ರಫಿ, ಸೂಪರ್ ವೈಸರ್ ಅಬೂಬಕರ್ ಹಾಗೂ ಹಿಟಾಚಿ ಚಾಲಕ ವಿರೇಶ್ ಎಂಬವರುಗಳ ನಿರ್ಲಕ್ಷ್ಯತನವೇ ಪಿರ್ಯಾದಿದಾರರ ಮಗನ ಸಾವಿಗೆ ಕಾರಣ ಎಂಬಿತ್ಯಾದಿ.

Crime Reported in Kavoor PS

ಪಿರ್ಯಾದಿ ದಾರರು ದಿನಾಂಕ 13/10/2021 ರಂದು ತನ್ನ ಮನೆಯಲ್ಲಿ ಕಷ್ಟ ಇದ್ದ ಕಾರಣ ಕುಂಜತ್ತಬೈಲ್ ನಲ್ಲಿರುವ ಜೋತಿಷ್ಯರಾದ ವಿನೋದ ಪೂಜಾರಿ ರವರ ಬಳಿಗೆ ಹೋಗಿದ್ದು, ವಿನೋದ ಪೂಜಾರಿ ರವರು ನಿಮಗೆ ತುಂಬಾ ದೋಷವಿದೆ, ಆ ದೋಷವನ್ನು ಕಳೆಯುವ ಸಲುವಾಗಿ ಪೂಜೆ ಮಾಡಿಸಿಕೊಡುವೆ ಎಂದು ನಂಬಿಸಿ, ಪೂಜೆಯ ಸಮಯ ಕಳಶಕ್ಕೆ ಇಡಲು ಚಿನ್ನದ ಆಭರಣಗಳ ಅವಶ್ಯಕತೆಯಿರುವುದರಿಂದ ನಿಮ್ಮ ಯಾವುದಾದರು ಚಿನ್ನಾಭರಣ ತಂದು ಕೊಡುವಂತೆ ತಿಳಿಸಿದ್ದು, ಅದರಂತೆ ಪಿರ್ಯಾದಿದಾರರು 5 ½ ಪವನ ತೂಕದ ಚಿನ್ನದ ಕರಿಮಣಿಸರವನ್ನು ಪೂಜೆಗೆಂದು ಆಪಾದಿತ ವಿನೋದ ಪೂಜಾರಿ ರವರಿಗೆ ನೀಡಿದ್ದು, ಆಪಾದಿತ ವಿನೋದ ಪೂಜಾರಿ ಈ ಸರವನ್ನು 15 ದಿನಗಳ ಕಾಲ ಪೂಜೆ ಮಾಡಿ ವಾಪಾಸ್ಸು ನೀಡುವುದಾಗಿ ತಿಳಿಸಿ ಈವರೆಗೂ ವಾಪಾಸ್ಸು ನೀಡದೇ ಮೋಸ ಮಾಡಿ ತಲೆಮರೆಸಿಕೊಂಡಿರುತ್ತಾನೆ, ಆಪಾದಿತ ವಿನೋದ ಪೂಜಾರಿಯು ಹಲವಾರು ಜನರಿಂದ ಪೂಜೆಗೆಂದು ಬಂಗಾರವನ್ನು ಪಡೆದು ವಾಪಾಸ್ಸು ನೀಡದೆ ಮೋಸ ಮಾಡಿರುತ್ತಾನೆ, ಎಂಬಿತ್ಯಾದಿ.

Crime Reported in Surathkal PS

ಪವರ್ ವಿಷನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಬೆಂಗಳೂರು ರವರಿಗೆ ಸಂಬಂಧಿಸಿದಂತೆ ಮಂಗಳೂರು ತಾಲೂಕು ಕುಳಾಯಿ ಗ್ರಾಮದ ಕೋಡಿಕೆರೆ ಕೃಷ್ಣನಗರ ಎಂಬಲ್ಲಿರುವ ಮೊಬೈಲ್ ಟವರ್ ಪಕ್ಕದಲ್ಲಿದ್ದ ಬ್ಯಾಟರಿ ಕೊಠಡಿಯಲ್ಲಿ ಅಳವಡಿಸಲಾದ ಬ್ಯಾಟರಿಗಳ ಪೈಕಿ 24 ಬ್ಯಾಟರಿಗಳನ್ನು ಯಾರೋ ಕಳ್ಳರು ದಿನಾಂಕ: 11/11/2021 ರ ಹಿಂದಿನ ದಿನಗಳಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ   75000

 

ಇತ್ತೀಚಿನ ನವೀಕರಣ​ : 30-11-2021 06:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080