ಅಭಿಪ್ರಾಯ / ಸಲಹೆಗಳು

Crime Reported in Ullal PS

ಪ್ರಕರಣದ ಪಿರ್ಯಾದಿ Pradeep T R ದಾರರ ಮತ್ತು ಸಿಬ್ಬಂದಿಯವರ ಜೊತೆಯಲ್ಲಿ ಇಲಾಖಾ ವಾಹನದಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿ ಇರುವ ವೇಳೆಯಲ್ಲಿ ದಿನಾಂಕ:31-05-2022 ರಂದು ಬೆಳಿಗ್ಗಿನ ಜಾವ 02-30 ಗಂಟೆಯ ಸಮಯಕ್ಕೆ ರಾಷ್ಟ್ರೀಯ ಹೆದ್ದಾರಿ 66 ತಲಪಾಡಿ ಗ್ರಾಮದ ದೇವಿಪುರ ಕ್ರಾಸ್ ರಸ್ತೆಯ ಬಳಿಯ ಅಂಗಡಿಗಳ ಬಾಗಿಲಿನ ಬಳಿಯ ಕತ್ತಲು ಪ್ರದೇಶದಲ್ಲಿಗೆ ಪಿರ್ಯಾದಿದಾರರು  ಟಾರ್ಚ್ ಬೆಳಕನ್ನು ಹಾಯಿಸುತ್ತಿದ್ದಂತೆ ಅಂಗಡಿಯ ಬಾಗಿಲಿನ ಬಳಿಯಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಇದ್ದು, ಅವರುಗಳಲ್ಲಿ ಒರ್ವನು ತನ್ನ ಒಂದು ಕೈಯಲ್ಲಿ ಕಬ್ಬಿಣದ ರಾಡನ್ನು ಹಿಡಿದುಕೊಂಡಿದ್ದು,ಇಬ್ಬರು ವ್ಯಕ್ತಿಗಳು ಕೈಯಿಂದ ಮುಖವನ್ನು ಮರೆಮಾಚಿಕೊಳ್ಳಲು ಪ್ರಯತ್ನಿಸುತ್ತಾ ಇರುವುದನ್ನು ಕಂಡು ಪಿರ್ಯಾದಿದಾರರು ಮತ್ತು ಸಿಬ್ಬಂದಿಯವರು ಜೀಪನ್ನು ನಿಲ್ಲಿಸಿ ಅವರುಗಳ ಬಳಿಗೆ ಹೋಗುತ್ತಿದ್ದಂತೆ, ಅಲ್ಲಿಂದ ಓಡಿಕೊಂಡು ಪರಾರಿಯಾಗಲು ಪ್ರಯತ್ನಿಸಿದವನನ್ನು ಸುತ್ತುವರಿದು ಹಿಡಿದಿದ್ದು, ಆರೋಪಿಗಳನ್ನು ಸರಿಯಾಗಿ ವಿಚಾರಿಸಿದಾಗ ಒರ್ವನ  ಹೆಸರು ವಿಳಾಸ ನಿತೇಶ್ ಉಚ್ಚಿಲ್ ಪ್ರಾಯ 30 ವರ್ಷ ವಾಸ: ಕನಿಲ ದೇವಸ್ಥಾನದ ಬಳಿ, ಕನಿಲ, ಮಂಜೇಶ್ವರ ಗ್ರಾಮ, ಕಾಸರಗೋಡು ಜಿಲ್ಲೆ ಮತ್ತು ಇನ್ನೋರ್ವನ ಹೆಸರು ವಿಳಾಸ ನಿತಿನ್ ಪ್ರಾಯ 35 ವರ್ಷ ವಾಸ: ರಫ್ ವಾಲ ಕಂಪೌಂಡ್ , ನಿಯರ್ ಅರಬೀವಾಲ, ಮಾಡ, ಮಂಜೇಶ್ವರ, ಕಾಸರಗೋಡು ಎಂಬುವುದಾಗಿ ತಿಳಿಸಿದ್ದು, ಇರುವಿಕೆಯ ಬಗ್ಗೆ ಆರೋಪಿಗಳು ಸರಿಯಾಗಿ ಉತ್ತರಿದೇ ಇದ್ದು,  ಒರ್ವನು ಕೈಯಲ್ಲಿ ಕಬ್ಬಿಣದ ರಾಡನ್ನು ಹಿಡಿದುಕೊಂಡು ಸದ್ರಿ ಸ್ಥಳದಲ್ಲಿ ಇರುವಿಕೆಯ ಬಗ್ಗೆ ಯಾವುದೇ ಸಮಂಜಸವಾದ ಉತ್ತರ ನೀಡದೇ ಇದ್ದು, ಹೆಚ್ಚಾಗಿ ಅಂಗಡಿ, ಬ್ಯಾಂಕ್ ಏಟಿಎಂ, ಮನೆಗಳಿರುವ ಸದ್ರಿ ಸ್ಥಳದಲ್ಲಿ ಯಾವುದೋ ಬೇವಾರಂಟು ತಕ್ಷೀರು ನಡೆಸುವ ಬಲವಾದ ಇರಾದೆಯನ್ನು ಹೊಂದಿರಬಹುದಾಗಿ ಕಂಡು ಬಂದಿರುವುದರಿಮದ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

 

Crime Reported in Moodabidre PS

ದಿನಾಂಕ: 29-05-2022 ರಂದು ಪಿರ್ಯಾದಿ UMESH KINI ದಾರರು ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆಎ-19-ಇಎಸ್-7316 ನೇದರಲ್ಲಿ ತನ್ನ ಹೆಂಡತಿ ಸುಮಂಗಲ ಕಿಣಿಯೊಂದಿಗೆ ಸಹ ಸವಾರಳಾಗಿ ಕುಳ್ಳಿರಿಸಿಕೊಂಡು ತನ್ನ ಮನೆಯಿಂದ ಮೂಡಬಿದ್ರೆ ಪೇಟೆಯ ಕಡೆಗೆ ಹೋಗುತ್ತಾ ಬೆಳಗ್ಗೆ ಸುಮಾರು 10.45 ಗಂಟೆಯ ಸಮಯ ಮೂಡಬಿದ್ರೆ ಸತ್ಯನಾರಾಯಣ ದೇವಸ್ಥಾನದ ಬಳಿ ತಲುಪಿದಾಗ ಅಮರ ಶ್ರೀ ಟಾಕೀಸ್ ನ ಕಡೆಯಿಂದ ಬರುವ ಕ್ರಾಸ್ ರಸ್ತೆಯಿಂದ ಕೆಎ-20-ಎಮ್‌ಬಿ-0419 ರಿಡ್ಜ್ ಕಾರಿನ ಚಾಲಕ ಪ್ರವೀಣ್ ಮನೋಹರ ಎಂಬವರು ಕಾರನ್ನು ಯಾವುದೇ ಸೂಚನೆಯನ್ನು ನೀಡದೇ ಮುಖ್ಯ ರಸ್ತೆಗೆ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಆದ ಅಪಘಾತದ ಪರಿಣಾಮ ಸಹ ಸವಾರ ಪಿರ್ಯಾದಿದಾರರ ಹೆಂಡತಿಗೆ ಬಲ ಕಾಲಿನ ಹೆಬ್ಬೆರಳಿಗೆ ಮೂಳೆ ಮುರಿತದ ಗಾಯವಾಗಿರುವುದಲ್ಲದೇ ಹಿಮ್ಮಡಿ ಹಾಗೂ ಗಂಟಿನ ಭಾಗಗಳಿಗೆ ಜಖಂ ಆಗಿರುತ್ತದೆ. ಗಾಯಾಳುವನ್ನು ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

Crime Reported in Mulki PS

ದಿನಾಂಕ 28-05-2022 ರಂದು ಮುಲ್ಕಿ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ವಿನಾಯಕ ತೋರಗಲ್ ರವರು ಸಿಬ್ಬಂದಿಗಳೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದ ಬಗ್ಗೆ ಇಲಾಖಾ ವಾಹನದಲ್ಲಿ ಠಾಣೆಯಿಂದ 20:00 ಗಂಟೆಗೆ ಹೊರಟು ಮುಲ್ಕಿ, ಕಾರ್ನಾಡು, ಕೆರೆಕಾಡು ಕಡೆಗಳಲ್ಲಿ ಸಂಚರಿಸುತ್ತಾ 22:00 ಗಂಟೆಗೆ ಕಿಲ್ಪಾಡಿ ಗ್ರಾಮದ ಕೆಂಚನ ಕೆರೆ ಎಂಬಲ್ಲಿರುವ ಕೆರೆಯ ಬದಿಯಲ್ಲಿ ಓರ್ವ ವ್ಯಕ್ತಿಯು ಸಿಗರೇಟ್ ಸೇದುತ್ತಿರುವುದು ಕಂಡು ಬಂದಂತೆ.  ಆತನ ಬಳಿ ತೆರಳಿ ವಿಚಾರಿಸಲಾಗಿ ನಂದಕಿಶೋರ್, ಪ್ರಾಯ : 36 ವರ್ಷ,  ವಾಸ : ರುದ್ರಭೂಮಿ ರಸ್ತೆ ಕೆರೆಕಾಡು, ಕಿಲ್ಪಾಡಿ ಗ್ರಾಮ, ಮಂಗಳೂರು ತಾಲೂಕು ಎಂಬುದಾಗಿ ತಿಳಿಸಿರುತ್ತಾನೆ. ಆತನನ್ನು  ವಶಕ್ಕೆ ಪಡೆದು ಮಂಗಳೂರು ಎ.ಜೆ ಆಸ್ಪತ್ರೆಯ ವೈದ್ಯಾದಿಕಾರಿಯವರ ಮೂಲಕ ಪರೀಕ್ಷೆಗೊಳಪಡಿಸಿದ್ದಲ್ಲಿ ಗಾಂಜಾ ಸೇವನೆ ಮಾಡಿರುವುದಾಗಿ ದೃಡಪತ್ರವನ್ನು ನೀಡಿರುವುದರಿಂದ ಆರೋಪಿಯ ವಿರುದ್ದ ಎನ್ ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ

Crime Reported in Mangalore East Traffic PS                                     

ಪಿರ್ಯಾದಿ ದಾರರಾದ ಬಾಗೇವಾಡಿ ನಾಯ್ಕ್ ಎಂಬುವರು ದಿನಾಂಕ; 28/05/2022 ರಂದು ತಮ್ಮ ಬಾಬ್ತು ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ: KA-19-HD-5949 ನೇಯದರಲ್ಲಿ ತಮ್ಮ ಹೆಂಡತಿ ನೀಲಾಬಾಯಿ ನಾಯ್ಕ್ ಎಂಬುವರನ್ನು ಹಿಂಬದಿ ಸವಾರೆಯನ್ನಾಗಿ ಕರೆದುಕೊಂಡು ತಮ್ಮ ಮನೆಯಿಂದ ಪಂಪವೆಲ್ ಪ್ಲೈಓವರ್ ಮಾರ್ಗವಾಗಿ ನಂತೂರು ಕಡೆಗೆ ಇರುವ ರಾ.ಹೆ 66 ನೇಯದರಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಸಂಜೆ ಸಮಯ 5-30 ಗಂಟೆ ವೇಳೆಗೆ ಪಂಪವೆಲ್ ಪ್ಲೈಓವರ್ ಎಕ್ಸಿಟ್ ನಿಂದ ಸುಮಾರು 100 ದೂರ ತಲುಪುತ್ತಿದ್ದಂತೆ ಅವರ ಹಿಂದುಗಡೆಯಿಂದ ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ: KL-59-V-2651 ನೇಯದನ್ನು ಅದರ ಚಾಲಕ ಅಭಿರಾಮ್ ಎಂಬುವರು ದುಡುಕುತನ, ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬೈಕಿನ ಹಿಂಬದಿಗೆ ಡಿಕ್ಕಿ ಪಡಿಸಿದ್ದರಿಂದ ಹಿಂಬದಿ ಸವಾರೆಯಾಗಿದ್ದ ನೀಲಾಬಾಯಿ ಎಂಬುವರು ರಸ್ತೆಗೆ ಬಿದ್ದ ಪರಿಣಾಮ ಅವರ ಎರಡೂ ಕಾಲಿನ ಕೋಲುಕಾಲಿಗೆ ಒಳಪೆಟ್ಟಾದ ಗಾಯ ಹಾಗೂ ಬಲ ಪಾದದ ಬೆರಳುಗಳಿಗೆ ಹಾಗೂ ಬಲ ಕಾಲಿನ ತೊಡೆಗೆ ತರಚಿದ ರಕ್ತಗಾಯವಾಗಿದ್ದು, ಅಲ್ಲದೇ ಡಿಕ್ಕಿಪಡಿಸಿದ ಬೈಕ್ ಸವಾರನಿಗೂ ಕೂಡ ಸಣ್ಣಪುಟ್ಟ ತರಚಿದ ಗಾಯಗಳಾಗಿರುತ್ತವೆ, ಈ ಬಗ್ಗೆ ಎ.ಜೆ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದು ಆ ಸಮಯ ಡಿಕ್ಕಿ ಪಡಿಸಿದ ಬೈಕ್ ಸವಾರನು ಚಿಕಿತ್ಸಾ ವೆಚ್ಚ ನೀಡುವುದಾಗಿ ತಿಳಿಸಿ ನಂತರ ನೀಡಲು ನಿರಾಕರಿಸಿದ್ದರಿಂದ ಈ ದಿನ ತಡವಾಗಿ ದೂರು ನೀಡುತ್ತಿರುವುದಾಗಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳು ವಂತೆ ಕೋರಿಕೆ. ಎಂಬಿತ್ಯಾದಿ.

Crime Reported in Mangalore South PS                                  

ದಿನಾಂಕ 30-05-2022 ರಂದು ಬೆಳಿಗ್ಗೆ 02-00 ಗಂಟೆ ಸುಮಾರಿಗೆ Sheetal Algur ನಾನು ಠಾಣಾ ಸಿಬ್ಬಂದಿಯೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಮಂಗಳೂರು ನಗರದ ಪೋರಮ್ ಮಾಲ್ ಬಳಿಯ ನೆಹರೂ ಸ್ಟಾಚ್ಯೂ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಜನರಿಗೆ ತೊಂದರೆ ಕೊಡುತ್ತಿದ್ದ ಓರ್ವ ಯುವಕನನ್ನು ಹಿಡಿದು ವಶಕ್ಕೆ ಪಡೆದುಕೊಂಡಾಗ,  ಸದ್ರಿ ವ್ಯಕ್ತಿ ಗಾಂಜಾ ಸೇವನೆ ಮಾಡಿದಂತೆ ಕಂಡು ಬಂದಿದ್ದು, ಆತನ ಹೆಸರು ವಿಳಾಸ ಕೇಳಲಾಗಿ, ಆತನು ತನ್ನ ಹೆಸರು, ಪ್ರಥಮ್ ದೇವಾಡಿಗ, ಪ್ರಾಯ: 21 ವರ್ಷ ವಾಸ: ಯಶಶ್ವಿ ಮನೆ, ಅಚ್ಚುಗೋಡಿ ರಸ್ತೆ, ಬೊಂದೆಲ್, ಮಂಗಳೂರು ಎಂಬುದಾಗಿ ತಿಳಿಸಿದ್ದು, ಆತನು ಗಾಂಜಾ ಸೇವಿಸಿರುವುದಾಗಿ ಒಪ್ಪಿಕೊಂಡಂತೆ, ಆತನನ್ನು ವೈದ್ಯಕೀಯ ತಪಾಸಣೆಗಾಗಿ ಮಂಗಳೂರು ಎ.ಜೆ ಆಸ್ಪತ್ರೆಯ ವೈಧ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ಪರೀಕ್ಷೆಗೊಳಪಡಿಸಿದಾಗ, ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುವುದರಿಂದ ಆರೋಪಿಯ ವಿರುದ್ದ ಎನ್ ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

 

 

ಇತ್ತೀಚಿನ ನವೀಕರಣ​ : 31-05-2022 08:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080