ಅಭಿಪ್ರಾಯ / ಸಲಹೆಗಳು

Crime Reported in Mangalore South PS

ಪಿರ್ಯಾದಿದಾರರಾದ ಶ್ರೀಮತಿ, ನೀಲಂ ಪ್ರಾಯ:34 ವರ್ಷ ರವರ ಅಕ್ಕನ ಮಗಳಾದ ಲಿಶ್ಬ ಪ್ರಾಯ 21 ವರ್ಷ ರವರು  ಮಂಗಳೂರಿನ ನಂದಿಗುಡ್ಡೆಯ ವಿ ಕೇರ್ ನರ್ಸಿಂಗ್ ಹೋಮ್ ಪಿಜಿ ನಲ್ಲಿ ಹೋಮ್ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದು, ವಿ ಕೇರ್ ಹೋಮ್ ನರ್ಸಿಂಗ್ ಪಿಜಿ ಯಲ್ಲಿ ಉಳಿದುಕೊಂಡಿದ್ದರು. ಲಿಶ್ಬ ರವರು ಜ್ವರ ಬಂದ ಕಾರಣ ಆನಾರೋಗ್ಯದಿಂದ ಬಳಲುತ್ತಿದ್ದು, ದಿನಾಂಕ:17-08-2021 ರಂದು ಸಮಯ ಸುಮಾರು ಬೆಳ್ಳಿಗ್ಗೆ 10.00 ಗಂಟೆಗೆ ಊರಿಗೆ ಹೋಗುತ್ತೇನೆ ಎಂದು ತಾನು ಉಳಿದುಕೊಂಡಿದ್ದ ವಿಕೆರ್ ಹೋಮ್ ನರ್ಸಿಂಗ್ ನ ಮಾಲಿಕರಿಗೆ ತಿಳಿಸಿ, ಪಿಜಿಯಿಂದ ಹೋಗಿರುತ್ತಾರೆ. ನಂತರ ದಿನಾಂಕ 18-08-2021 ರಂದು ಅವರ ತಾಯಿಯಾದ ಮಂಜಿತ್ ರವರು ಸಮಯ ಸುಮಾರು 09.00 ಗಂಟೆಗೆ ಲಿಶ್ಬ ರವರಿಗೆ ಕರೆ ಮಾಡಿದಾಗ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುತ್ತದೆ. ಆ ಬಳಿಕ ಪಿಜಿ ಮಾಲಿಕರು ಮತ್ತು ಅವರ ಸ್ನೇಹಿತರನ್ನು ವಿಚಾರಿಸಿದಾಗ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ. ಅದ್ದರಿಂದ ನನ್ನ ಅಕ್ಕನ ಮಗಳನ್ನು ಪತ್ತೆ ಮಾಡಿಕೊಡುವರೇ ನೀಡಿದ ಪಿರ್ಯಾಧಿ ಸಾರಾಂಶವಾಗಿರುತ್ತದೆ.

ಕಾಣೆಯಾದ ಹೆಂಗಸಿನ ಚಹರೆ;

ಬಿಳಿ ಮೈಬಣ್ಣ,

ಸಾಧಾರಣ ಶರೀರ,

ಎತ್ತರ 5.3 ಅಡಿ,

ನೀಲಿ ಬಣ್ಣದ ಜೀನ್ಸ್ ಮತ್ತು ಕೆಂಪು ಬಣ್ಣದ ಟಾಪ್ ಧರಿಸಿರುತ್ತಾಳೆ.

 

2) ದಿನಾಂಕ 12-08-2021 ರಂದು ಬೆಳಿಗ್ಗೆ 09-30 ಗಂಟೆಯಿಂದ ದಿನಾಂಕ 21-082021 ರಂದು 13-30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಕಂಕನಾಡಿ, ಡೋರ್ ನಂಬ್ರ 17-23-1607 ಡೋರ್  ನಂಬ್ರದ್ ಬ್ಲೂಮ್ ಕಾಟೇಜ್ ನ ಮನೆಯ ಹಿಂಭಾಗದ ಬಾಗಿಲನ್ನು ಮುರಿದು ಒಳಗಡೆ ಪ್ರವೇಶಿಸಿ ಮನೆಯ ರೂಮ್ ನ ಕರ್ಬೋಡ್ ನಲ್ಲಿದ್ದ ಡೈಮಂಡ್  ಬೆಂಡೋಲೆ ಹಾಗೂ ಒಂದು ಜೊತೆ ಡೈಮಂಡ್ ಪೆಂಡೆಂಟ್ ನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸೊತ್ತಿನ ಅಂದಾಜು ಮೌಲ್ಯ 50,000/- ರೂಪಾಯಿ ಆಗಬಹುದು. ಅಲ್ಲದೇ ಕಳವು ವೇಳೆ ಮನೆಯ ಅಲರಾಂ ಸಿಸ್ಟಮ್ ಹಾಗೂ ಸಿ. ಸಿ. ಕ್ಯಾಮರಾಕ್ಕೆ ಹಾನಿ ಮಾಡಿರುತ್ತಾರೆ. ಎಂಬಿತ್ಯಾದಿಯಾಗಿರುತ್ತದೆ

Crime Reported in Mangalore East PS  

ಮಂಗಳೂರು ಪೂರ್ವ ಪೊಲೀಸ್ ಠಾಣಾ ಪಿ.ಎಸ್.ಐ ಶ್ರೀಮತಿ ಅನಿತಾ ನಿಕ್ಕಂ ರವರು ದಿನಾಂಕ: 30-08-2021 ರಂದು ಮೇಲಾಧಿಕಾರಿಗಳ ಅದೇಶದಂತೆ ಠಾಣಾ ವ್ಯಾಪ್ತಿಯಲ್ಲಿ  ಸಿಬ್ಬಂದಿಗಳೊಂದಿಗೆ ಇಲಾಖಾ ವಾಹನದಲ್ಲಿ ಕರ್ತವ್ಯದಲ್ಲಿ ತೆರಳಿ ಸಂಚರಿಸುತ್ತಾ 22-05 ಗಂಟೆಯ ಸುಮಾರಿಗೆ ಮಂಗಳೂರು ನಗರದ ಪಂಪ್ ವೆಲ್ ನಿಂದ ಕಂಕನಾಡಿ ಸರ್ಕಲ್ ಕಡೆಗೆ ಹಳೆ ಬೈಪಾಸ್ ರಸ್ತೆಯಲ್ಲಿ ಸಂಚರಿಸುತ್ತಾ ಮಾಸ್ಕೊ ಮೆರಿಡಿಯನ್ ಕಟ್ಟಡದ ಹತ್ತಿರ ತಲುಪುವಾಗ ಕಟ್ಟಡದ ಕೆಳಭಾಗದಲ್ಲಿ ಚಾಯ್ ಕಡ ಎಂಬ ಚಾ ಮತ್ತು ಸ್ನಾಕ್ಸ್ ಅಂಗಡಿಯನ್ನು ಅದರ ಮಾಲಿಕರು 22-05 ಗಂಟೆಯಾದರೂ ರಾತ್ರಿ ವೇಳೆ ಅಂಗಡಿಯನ್ನು ತೆರೆದಿಟ್ಟುಕೊಂಡು ಅಂಗಡಿಯ ಮಾಲಕರು ಸಾರ್ವಜನಿಕರನ್ನು ನಿಲ್ಲಿಸಿಕೊಂಡು ಸ್ಥಳದಲ್ಲಿ ಆಹಾರ ಪೂರೈಸಿ ವ್ಯಾಪಾರ ವ್ಯವಹಾರವನ್ನು ನಡೆಸಿಕೊಂಡಿರುವುದು ಕಂಡು ಬಂದಿರುತ್ತದೆ. ಜನತಾ ಕರ್ಫ್ಯೂ ಮತ್ತು ಲಾಕ್ ಡೌನ್ ಆದೇಶದ ಸಮಯ ಸದ್ರಿ ಅಂಗಡಿಯನ್ನು ತೆರೆದು 21-00 ಗಂಟೆಯ ನಂತರ ವ್ಯಾಪಾರವನ್ನು ಮಾಡಲು ಅನುಮತಿ ಇಲ್ಲದೆ ಇದ್ದು ಈ ಮಾಹಿತಿಯನ್ನು ಅರಿತು ವ್ಯಾಪಾರವನ್ನು ನಡೆಸುವುದರ ಮೂಲಕ ಸದರಿ ಅಂಗಡಿಯ ಮಾಲಿಕರು ಸರಕಾರದ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಕಂಡು ಬಂದಿರುತ್ತದೆ.           ಸದ್ರಿ ಆಂಗಡಿಯ ಮಾಲಕರು ಈ ರೀತಿ ವ್ಯಾಪಾರವನ್ನು ಮಾಡುವ ಸಮಯ ಅಂಗಡಿಗೆ ಬರುವ ಗ್ರಾಹಕರ ಪೈಕಿ ಯಾರಿಗಾದರೂ ಕೋವಿಡ್-19 ಸಾಂಕ್ರಾಮಿಕ ರೋಗದ ಲಕ್ಷಣಗಳಿದ್ದರೆ, ಅದು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿ ಅಥವಾ ಸಮುದಾಯಕ್ಕೆ ಹರಡುವ ಸಾಧ್ಯತೆ ಇರುತ್ತದೆ. ಸದ್ರಿ ಅಂಗಡಿಯ ಮಾಲಕರು ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟುವಿಕೆ ಬಗ್ಗೆ ಸರಕಾರದ ಮಾರ್ಗ ಸೂಚಿ ಹಾಗೂ ಮಾನ್ಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ದ.ಕ. ಜಿಲ್ಲೆಯವರ ಆದೇಶವನ್ನು ಉಲ್ಲಂಘಿಸಿ ವ್ಯವಹಾರವನ್ನು ನಡೆಸಿದ್ದು, ಸದರಿ ಅಂಗಡಿಯ ಮಾಲಕರ ವಿರುದ್ಧ ಕಲಂ: 269 ಭಾ.ದಂ.ಸಂ. ಮತ್ತು ಕಲಂ: 4 (2) (ಹೆಚ್), 5 ಮತ್ತು 9 ಕರ್ನಾಟಕ ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಕಾಯ್ದೆ 2020 ರಂತೆ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ.

Crime Reported in Traffic South PS

ದಿನಾಂಕ: 31-07-2021 ರಂದು ಪಿರ್ಯಾದಿ MAHAMMOD RIJAN ದಾರರು ಅವರ ಗೆಳೆಯನ ಕಾರು ನಂಬ್ರ  KA-19-MK-2771  ನೇದರಲ್ಲಿ  ಅವರು  ಚಾಲಕರಾಗಿ  ಅವರ ಗೆಳಯ ಸಾಜೀಲ್ ರವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು  ಬೆಂಗಳೂರುನಿಂದ ಮಂಗಳೂರಿಗೆ  ಬರುತ್ತಿರುವ ಸಮಯ ಸುಮಾರು ಬೆಳಿಗ್ಗೆ 10.15 ಗಂಟೆಗೆ  ಮಂಗಳೂರು ತಾಲೂಕಿನ ಕಣ್ಣೂರಿನ ಅಶೋಕ್ ಲೈಲ್ಯಾಂಡ್ ದೋಸ್ತ್ ಶೋರೂಂ ಬಳಿ ತಲುಪಿದಾಗ ಅವರ ಹಿಂದಿನಿಂದ  ಅಂದರೆ ಬಿಸಿ ರೋಡ್ ಕಡೆಯಿಂದ ಬರುತ್ತಿದ್ದ ಬಸ್ಸ್ ನಂಬ್ರ: KA-19-AC-9317ನೇದನ್ನು ಅದರ ಚಾಲಕ ಪ್ರತಾಪ್ ಎಂಬಾತನು  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿನ ಹಿಂಬದಿಗೆ ಡಿಕ್ಕಿ ಪಡಿಸಿದ  ಪರಿಣಾಮ ಕಾರಿನಲ್ಲಿದ್ದ ಪಿರ್ಯಾದಿದಾರರಿಗೆ ಮತ್ತು ಅವರ ಗೆಳೆಯ ಸಾಜೀಲ್ ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ  ಹಾಗೂ ಪಿರ್ಯಾದಿದಾರರ ಕಾರಿನ ಹಿಂಬದಿ ಸಂಪೂರ್ಣ ಜಖಂಗೊಂಡಿದೆ.ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 31-08-2021 06:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080