ಅಭಿಪ್ರಾಯ / ಸಲಹೆಗಳು

Crime Reported in : Kankanady Town PS        

ಪಿರ್ಯಾದುದಾರ Scchidananda Alva ಮಡ್ಯಾರ್ ಗುಲಾಬಿ ಆಳ್ವ ಕಂಪೌಂಡ್, ಶಾಸ್ತಾನಗರ, 2ನೇ ಅಡ್ಡ ರಸ್ತೆ ಕೋಟೆಕಾರ್. ಮಂಗಳೂರಿನಲ್ಲಿ ವಾಸಮಾಡಿಕೊಂಡಿದ್ದು  ಮಂಗಳೂರಿನ ಗರೋಡಿ ಬಳಿಯಿರುವ “AUTO CARE”  ವರ್ಕ್ ಶಾಪ್ ನ ಮಾಲೀಕರಾಗಿದ್ದು. ಪಿರ್ಯಾದುದಾರರು ವರ್ಕ್ ಶಾಫ್ ನಲ್ಲಿ ಕೆಲಸದ ಬಗ್ಗೆ KA19EG4738 ನೇ ನಂಬ್ರದ ಸ್ಕೂಟರನ್ನು ಉಪಯೋಗಿಸುತ್ತಿದ್ದು, ವರ್ಕ್ ಶಾಪ್ ನ ಮುಂದೆ ಪಾರ್ಕಿಂಗ್ ಮಾಡುತ್ತಿರುವುದಾಗಿದೆ. ದಿನಾಂಕ 29.07.2022 ರಂದು ಮದ್ಯಾಹ್ನ ಪಿರ್ಯಾದುದಾರರು ಊಟ ಮಾಡಿ ಬಂದು 2:00 ಗಂಟೆಗೆ ಸ್ಕೂಟರನ್ನು ವರ್ಕ್ ಶಾಪ್ ಮುಂದೆ ಪಾರ್ಕಿಂಗ್ ಮಾಡಿ ಕೀಯನ್ನು ಸ್ಕೂಟರ್ ನಲ್ಲಿಯೇ ಬಿಟ್ಟು ಕೆಲಸದ ನಿಮಿತ್ತ ನಂತೂರಿಗೆ ಹೋಗಿ ವಾಪಾಸ್ ಸಂಜೆ 3:30 ಗಂಟೆಗೆ ವರ್ಕ್ ಶಾಪ್ ಗೆ ಬಂದು ನೋಡಿದಾಗ ಸ್ಕೂಟರ್ ಪಾರ್ಕ್ ಮಾಡಿದ್ದ ಸ್ಥಳದಲ್ಲಿ ಇರದೇ ಇದ್ದು, ಈ ಬಗ್ಗೆ ಪಿರ್ಯಾದುದಾರರು ವರ್ಕ್ ಶಾಪ್ ಸುತ್ತಮುತ್ತಲ್ಲಿನ ಪರಿಸರದಲ್ಲಿ ಹುಡುಕಾಡಿದ್ದು ಸ್ಕೂಟರ್ ಕಂಡು ಬರಲಿಲ್ಲ. ನಂತರ ಪಿರ್ಯಾದುದಾರರು ಮಂಗಳೂರಿನ ಪರಿಸರದ ಎಲ್ಲಾ ಕಡೆಗಳಲ್ಲಿ ಹುಡುಕಾಡಿ ಹಾಗೂ ಪಿರ್ಯಾದುದಾರರ  ಸ್ನೇಹಿತರುಗಳಲ್ಲಿ ವಿಚಾರಸಿದಲ್ಲಿ ಸ್ಕೂಟರ್ ಪತ್ತೆಯಾಗಿರುವುದಿಲ್ಲ. ಯಾರೋ ಕಳ್ಳರು ದಿನಾಂಕ 29.07.2022 ರಂದು ಮದ್ಯಾಹ್ನ 2:00 ಗಂಟೆಯಿಂದ ಸಂಜೆ 3:30 ಗಂಟೆ ಮದ್ಯವಧಿಯಲ್ಲಿ ಪಿರ್ಯಾದುದಾರರ ಬಾಬ್ತು KA19EG4738 ನೇ ನಂಬ್ರದ ಸ್ಕೂಟರನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳತನವಾದ ಸ್ಕೂಟರ್ ನ ಆದಾಂಜು ಮೌಲ್ಯ 15000/- ರೂಪಾಯಿ ಆಗಿದ್ದುಕಳ್ಳತನವಾದ ಸ್ಕೂಟರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

 

Crime Reported in :   Mangaluru Traffic South Police Station

ದಿನಾಂಕ 31-07-2022 ರಂದು  ಪಿರ್ಯಾದಿದಾರ NISHA ತಂದೆಯವರಾದ ಚಂದ್ರಮೋಹನರವರು ಅವರ ಮನೆಯ ಎದುರುಗಡೆ ಹಾದು ಹೋಗುವ ಡಾಮಾರು ರಸ್ತೆಯ ಬದಿಯ ಮಣ್ಣು ರಸ್ತೆಯಲ್ಲಿ ಮೂತ್ರ ವಿರ್ಸಜನೆ ಮಾಡುತ್ತಿರುವ ಸಮಯ ಸುಮಾರು ಬೆಳ್ಳಗಿನ ಜಾವ 3.30 ಗಂಟೆಗೆ ಪಂಪವೆಲ್ ಕಡೆಯಿಂದ ಪಡೀಲ್ ಕಡೆಗೆ ಕಾರ್ ನಂಬ್ರ KA-19-MH-3373 ನೇದರ ಚಾಲಕ ನೀತಿನ್ ಎಂಬುವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಚಂದ್ರಮೋಹನರವರಿಗೆ ಡಿಕ್ಕಿ ಪಡಿಸಿ ನಂತರ ವಿದ್ಯುತ್ ಕಂಬಕ್ಕೆ ಡಿಕ್ಕಿಪಡಿಸಿರುತ್ತಾನೆ ಈ ಅಪಘಾತದ ಪರಿಣಾಮ  ಚಂದ್ರಮೋಹನರವರು ಮಣ್ಣು ರಸ್ತೆಗೆ ಬಿದ್ದು ಅವರಿಗೆ ಎಡಕಾಲಿಗೆ ಗಂಭೀರ ಸ್ವರೂಪದ ಗಾಯ, ಎಡಭುಜಕ್ಕೆ  ಹಾಗೂ ತಲೆಗೆ ಗುದ್ದಿದ ಸ್ವರೂಪದ ಗಾಯವಾಗಿ ಚಿಕಿತ್ಸೆ ಬಗ್ಗೆ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.

 

2) ದಿನಾಂಕ:31-07-2022 ರಂದು ಪಿರ್ಯಾದಿದಾರ JAGANATHA  ತನ್ನ ಬಾಬ್ತು ಆಟೋರಿಕ್ಷಾ ನಂಬ್ರ:KA-19-AB-6722 ನೇದರಲ್ಲಿ ಚಾಲಕರಾಗಿ ಹಾಗೂ ಚೇತನ್ ಹಾಗೂ ಅವರ ಮಗಳು ನಿದೀಶಾ ರವರನ್ನು ಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು ಅವರ ಮನೆಯಾದ ಮೇರಮಜಲು ಕಡೆಯಿಂದ ಫರಂಗಿಪೇಟೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 11-00 ಗಂಟೆಗೆ ಕೊಪ್ಪಲ  ಬಳಿ ತಲುಪಿದಾಗ ಪಿರ್ಯಾದಿದಾರರ ಎದುರುಗಡೆಯಿಂದ ಅದೇ ರಸ್ತೆಯಲ್ಲಿ ಬರುತ್ತಿದ್ದ ಕಾರು ನಂಬ್ರ:KA-12-B-3988 ನೇದರ ಕಾರು ಚಾಲಕ ನಿಂಗರಾಜು ಎಂಬಾತನು ಕಾರನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಮಗುಚಿ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಮೂಗಿನ ಬಳಿ ಹಾಗೂ ಕೆನ್ನೆಯ ಎಡಭಾಗಕ್ಕೆ ತರಚಿದ ರಕ್ತ ಗಾಯವಾಗಿದ್ದು ಹಾಗೂ ಪ್ರಯಾಣಿಕರಾದ ಚೇತನ್ ರವರಿಗೆ ಹಣೆಯ ಬಳಿ ಗುದ್ದಿದ ಗಾಯ,ನದೀಶಾ ರವರಿಗೆ ಬಲಗಾಲಿನ ಮಂಡಿಯ ಬಳಿ ಗಂಭೀರ ಸ್ವರೂಪದ ರಕ್ತ ಗಾಯವಾಗಿದ್ದವರನ್ನು ಅಲ್ಲಿ ಸೇರಿದ ಸಾರ್ವಜನಿಕರು ಚಿಕಿತ್ಸೆ ಬಗ್ಗೆ ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪಿರ್ಯಾದಿದಾರರು,ಚೇತನ್ ಮತ್ತು ನಿದೀಶಾ ರವರು ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದು  ಪಿರ್ಯಾದಿದಾರರು ಹೊರ ರೋಗಿಯಾಗಿ ತೆರೆಳಿರುತ್ತಾರೆ ಚೇತನ್ ಮತ್ತು ನಿದೀಶಾರವರು ಹೆಚ್ಚಿನ ಚಿಕಿತ್ಸೆ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ.ಎಂಬಿತ್ಯಾದಿ.

Crime Reported in :      Mangaluru City CEN Crime PS

ದಿನಾಂಕ 28-07-2022 ರಂದು ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದು  ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ ಹಾಗೂ ಜನರಲ್ಲಿ ಭಯಭೀತಿಯನ್ನುಂಟು ಮಾಡುವ ಹಲವು   ಪೋಸ್ಟ್ ಹಾಗೂ ಕಮೆಂಟ್ ಗಳನ್ನು    ನಕಲಿ ಖಾತೆಯ ಮೂಲಕ ಪೋಸ್ಟ್ / ಕಮೆಂಟ್ ಮಾಡಿರುವವರ ವಿರುದ್ದ ಸೂಕ್ತ ಕ್ರಮಕ್ಕಾಗಿ ಸಾಮಾಜಿಕ  ಜಾಲತಾಣ ನಿಗಾ ವಿಭಾಗದವರು ನೀಡಿರುವ ದೂರಿನ ಮೇರಗೆ  ವಿವಿದ ಪೋಸ್ಟ್ ಹಾಗೂ ಕಮೆಂಟ್ ಗಳಿಗೆ ಸಂಬಂದಿಸಿದಂತೆ ಪ್ರತ್ಯೇಕ ಪ್ರತ್ಯೇಕವಾಗಿ ಒಟ್ಟು  17 ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ ಎಂಬಿತ್ಯಾದಿ

Crime Reported in : Mangalore North PS   

ಪಿರ್ಯಾದುದಾರ  RAMA KANT VASANTHA POKLE ರವರು ವಿದೇಶದಿಂದ ಕಚ್ಚಾ  ಗೋಡಂಬಿಯನ್ನು ತರಿಸಿ ಅದನ್ನು ಸಿದ್ದಗೊಳಿಸಿ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದು ದಿನಾಂಕ 07/07/2022 ರಂದು  ಪಶ್ಚಿಮ ಆಪ್ರಿಕಾದಿಂದ ಕಚ್ಚಾ ಗೋಡಂಬಿಯು ಮಂಗಳೂರಿನ ಪಣಂಬೂರು ಬಂದರಿಗೆ ಬಂದಿದ್ದು, ಅದನ್ನು ಮಂಗಳೂರಿನಲ್ಲಿರುವ  ಆಂಜಲ್ ಟ್ರಾನ್ಸ್ ಪೋರ್ಟ್ ನ ಮೂಲಕ ದಿನಾಂಕ 25/07/2022 ರಂದು ರಾತ್ರಿ ಸುಮಾರು 09.00 ಗಂಟೆಗೆ ಲಾರಿ ನಂಬ್ರ  RJ.09-GA-6155  ನೇದರ  ಲಾರಿಯಲ್ಲಿ ಪ್ಯಾಕ್ಟರಿಗೆ  ಗೋಡಂಬಿ  ಲೋಡ್ ಮಾಡಿ ಕಳುಹಿಸಿದ್ದು ಅದು ದಿನಾಂಕ 27/07/2022 ರಂದು ಪ್ಯಾಕ್ಟರಿ ಇರುವ  ಮಹಾರಾಷ್ಟ್ರದಲ್ಲಿರುವ  ಸಿಂದುದುರ್ಗ ಜಿಲ್ಲೆಗೆ ಬರಬೇಕಾಗಿದ್ದು ಇಷ್ಟರವರೆಗೆ  ಬಾರದೇ ಇದ್ದು ಏಂಜಲ್ ಟ್ರಾನ್ಸ್ ಪೋರ್ಟ್  ಮಾಲಕರಿಗೆ ಕೇಳಲಾಗಿ,  ಸದ್ರಿ ಲಾರಿಯಲ್ಲಿ ಆರೀಪ್ ಖಾ ಕಯಾಮ್ ಖಾನಿ ಎಂಬ ಚಾಲಕನಿದ್ದು,  ಆತನು ಪೋನ್ ಸ್ವಿಚ್ಚ್ ಆಪ್ ಮಾಡಿರುವುದಾಗಿ ತಿಳಿಸಿದನು. ಪಿರ್ಯಾದಿ ತಕ್ಷಣ ಮಂಗಳೂರಿಗೆ ಬಂದು ವಿಚಾರಿಸಲಾಗಿ  ಸದ್ರಿ ಲಾರಿಯಲ್ಲಿ  ಸುಮಾರು 25.586ನ ಮೆಟ್ರಿಕ್ ಟನ್  (ಸುಮಾರು 28.ಲಕ್ಷ ರೂ.) ಮೌಲ್ಯದ ಗೋಡಂಬಿ ಇದ್ದು ಪಿರ್ಯಾದಿಗೆ  ನಂಬಿಕೆ ದ್ರೋಹ  ಮಾಡಿ  ಮೋಸ ಮಾಡುವ ಉದ್ದೇಶದಿಂದ  ಲಾರಿಯನ್ನು ಪ್ಯಾಕ್ಟರಿಗೆ ತಲುಪಿಸದೆ, ಬೇರೆ ಎಲ್ಲಿಗೋ  ತೆಗೆದುಕೊಂಡು ಹೋಗಿರುವ ಅನುಮಾನ ಇದ್ದು ಸದ್ರಿ ಲಾರಿ ಚಾಲಕನ ಮೇಲೆ  ಮತ್ತು  ಆಂಜಲ್ ಟ್ರಾನ್ಸ್ ಪೋರ್ಟ್  ಮಾಲಕನ ಮೇಲೆ  ಸೂಕ್ತ ಕಾನೂನು  ಕ್ರಮ ಕೈಗೊಳ್ಳಬೇಕಾಗಿ ನೀಡಿದ ಪಿರ್ಯಾದಿ ಸಾರಾಂಶ.

ಇತ್ತೀಚಿನ ನವೀಕರಣ​ : 01-08-2022 10:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080