ಅಭಿಪ್ರಾಯ / ಸಲಹೆಗಳು

Crime Reported in : TRAFFIC SOUTH PS

ಪಿರ್ಯಾದಿ HAARIS ಹೆಂಡತಿ ಮೈಮುನಾ (39) ವರ್ಷ ರವರು ದಿನಾಂಕ:02-08-2022 ರಂದು ಕೊಲ್ಯ ಪೊಸ್ಟ್ ಆಫೀಸ್ ಗೆ ಹೋಗಿ  ವಾಪಾಸ್ಸು ಮನೆ ಕಡೆಗೆ ಹೋಗಲು ಸಮಯ ಸುಮಾರು ಬೆಳಿಗ್ಗೆ 11-15 ಗಂಟೆಗೆ ಕೊಲ್ಯ ಪೊಸ್ಟ್ ಆಫೀಸ್ ಬಳಿ ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಹಾದು ಹೋಗುವ ರಸ್ತೆಯನ್ನು ರಸ್ತೆಯ ಎಡಬದಿಯಿಂದ ರಸ್ತೆಯ ಮಧ್ಯೆದ ಡಿವೈಡರ್ ಕಡೆಗೆ ದಾಟುತ್ತಿರುವಾಗ ಅದೇ ರಸ್ತೆಯಲ್ಲಿ ಲಾರಿ ನಂಬ್ರ: KA-27-C-4026 ನೇದರ ಚಾಲಕ ಹುಲಿಗೆಪ್ಪ ಬೆಂಡಿಗೇರಿ ಎಂಬಾತನು ಲಾರಿಯನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ  ಮೈಮುನಾ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ಡಾಮಾರು ರಸ್ತೆಗೆ ಬಿದ್ದು ಅವರ ತಲೆಗೆ ರಕ್ತ ಗಾಯ,ಬಲಕೈ ಮೂಳೆ ಮುರಿತದ ಗಾಯ ಹಾಗೂ ಎರಡು ಕಿವಿಯಲ್ಲಿ ರಕ್ತ ಬರುತ್ತಿರುವ ಗಾಯವಾಗಿದ್ದು ಅಲ್ಲಿ ಸೇರಿದ ಸಾರ್ವಜನಿಕರು ಅದೇ ರಸ್ತೆಯಲ್ಲಿ ಬರುತ್ತಿದ್ದ ಆಂಬ್ಯುಲೇನ್ಸ್ ವೊಂದರಲ್ಲಿ ಚಿಕಿತ್ಸೆ ಬಗ್ಗೆ ಯುನಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

Crime Reported in: Moodabidre PS

ದಿನಾಂಕ 03.08.2022 ರಂದು ಪಿರ್ಯಾದಿದಾರರು Mrs. Shantha ತನ್ನ ಮಕ್ಕಳಾದ ಚೇತನ ಮತ್ತು ಅಂಕಿತಾರವರೊಂದಿಗೆ ಎಡಪದವಿನಿಂದ ಕಾರ್ಕಳ ಕಡೆಗೆ  KA 18 B 9949  ನಂಬ್ರದ ಬಸ್ಸಿನಲ್ಲಿ ಪ್ರಯಾಣಿಸಿಕೊಂಡು ಬರುತ್ತಾ ಬೆಳಿಗ್ಗೆ 07.40 ಗಂಟೆಗೆ ಮೂಡಬಿದ್ರೆಯ ಬನ್ನಡ್ಕ ಎಂಬಲ್ಲಿಗೆ ತಲುಪುತ್ತಿದ್ದಂತೆ, ಬಸ್ಸನ್ನು ಅದರ ಚಾಲಕ ದೇವೆಂದ್ರ ಎಂಬಾತನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ನಿಯಂತ್ರಣ ತಪ್ಪಿ ಡಾಮರು ರಸ್ತೆಯಿಂದ ಮಣ್ಣು ರಸ್ತೆ ಕಡೆಗೆ ಹೋಗಿ ಎಡ ಮಗ್ಗುಲಾಗಿ ಬಿದ್ದ ಪರಿಣಾಮ ಪಿರ್ಯಾದಿದಾರರ ಮಗಳಾದ ಚೇತನಳ ಬಲಗಾಲಿನ ಮೊಣಗಂಟಿಗೆ ರಕ್ತಗಾಯವಾಗಿದ್ದು, ಅಂಕಿತಾಳಿಗೆ ಬಲ ಕೈಗೆ ರಕ್ತಗಾಯವಾಗಿರುತ್ತದೆ. ಹಾಗೂ ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಈ ಬಗ್ಗೆ ಆಳ್ವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ಸಾರಾಂಶ.

 

ಇತ್ತೀಚಿನ ನವೀಕರಣ​ : 03-08-2022 06:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080