ಅಭಿಪ್ರಾಯ / ಸಲಹೆಗಳು

Crime Reported in : Mangalore Traffic East PS

ಪಿರ್ಯಾದಿದಾರರಾದ ಶಶಿಕುಮಾರ್ ರವರು ದಿನಾಂಕ: 23/07/2022 ರಂದು ತಮ್ಮ ಸ್ಕೂಟರ್ ನೊಂದಣಿ ಸಂಖ್ಯೆ: KA-19-ES-8349 ನೇಯದರಲ್ಲಿ ತಮ್ಮ ಹೆಂಡತಿಯವರನ್ನು ಹಿಂಬದಿ ಸವಾರೆಯನ್ನಾಗಿ ಕುಳ್ಳರಿಸಿಕೊಂಡು ಲೇಡಿಹಿಲ್ ಕಡೆಯಿಂದ ತಮ್ಮ ಮನೆಗೆ ಹೋಗುತ್ತಿರುವಾಗ ಬಿಜೈ ರೋಹನ್ ಕಾರ್ಪೋರೇಷನ್ ಕನ್ ಷ್ಟ್ರಕ್ಷನ್ ಕಟ್ಟಡದ ಎದುರು ರಸ್ತೆಯಲ್ಲಿ ಸಮಯ ಸಂಜೆ 7-30 ಗಂಟೆಯ ವೇಳೆಗೆ ಕಾರೊಂದನ್ನು ಅದರ ಚಾಲಕನು ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಪಡಿಸಿ ಪರಾರಿಯಾಗಿದ್ದು ಇದರಿಂದ ಪಿರ್ಯಾದಿದಾರರು ಹಾಗೂ ಅವರ ಹೆಂಡತಿ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ತಲೆ, ಕೈ ಕಾಲು, ಹೊಟ್ಟೆಗೆ ಮುಖಕ್ಕೆ ಗಾಯವಾಗಿದ್ದು ಅವರ ಪತ್ನಿಗೆ ಕಾಲಿಗೆ ಗಾಯವಾಗಿದ್ದು ಈ ಬಗ್ಗೆ ಸಿ.ಟಿ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ, ಹಾಗೂ ಅವರು ಚಲಾಯಿಸಿಕೊಂಡಿದ್ದ ಸ್ಕೂಟರ್ ಕೂಡ ಜಖಂಗೊಂಡಿರುತ್ತದೆ, ಪಿರ್ಯಾದಿದಾರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಯಲ್ಲಿ ವಿಶ್ರಾಂತಿಯಲ್ಲಿದ್ದು ಈ ದಿನ ವಿಳಂಭವಾಗಿ ದೂರು ನೀಡುತ್ತಿರುವುದಾಗಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ. ಎಂಬಿತ್ಯಾದಿ.

 

Crime Reported in : Mangalore Rural PS  

ಫಿರ್ಯಾಧಿದಾರ Vanishree ಗಂಡ ಗಣೇಶ್ ಪ್ರಸಾದ್, ಪ್ರಾಯ 31 ವರ್ಷ ರವರು ಮೂಡಬಿದ್ರೆಯಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದು, ವಿಪರೀತ ಮದ್ಯ ಸೇವನೆ ಮಾಡುವ ಚಟವುಳ್ಳವರಾಗಿರುತ್ತಾರೆ. ಗಣೇಶ್ ಪ್ರಸಾದ್ ರವರು  ದಿನಾಂಕ 25-07-2022 ರಂದು ಬೆಳಿಗ್ಗೆ ಎಂದಿನಂತೆ 8.00 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ಕೆಲಸಕ್ಕೂ ಹೋಗದೇ, ಮನೆಗೆ ವಾಪಾಸ್ ಬಾರದೇ ಕಾಣೆಯಾಗಿರುತ್ತಾರೆ. ಫಿರ್ಯಾಧಿದಾರರು ತನ್ನ ಗಂಡ ಗಣೇಶ್ ಪ್ರಸಾದ್ ರವರು ಮದ್ಯ ಸೇವನೆ ಮಾಡಿ ಎಲ್ಲಿಯದರೂ ಬಿದ್ದಿರಬಹುದು ಎಂಬುದಾಗಿ ಎಲ್ಲಾ ಕಡೆಗಳಲ್ಲಿಯೂ ಹುಡುಕಾಡಿದ್ದು, ಪತ್ತೆಯಾಗದ ಕಾರಣ ಈ ದಿನ ದೂರು ನೀಡುತ್ತಿರುವುದಾಗಿದೆ ಎಂಬಿತ್ಯಾದಿ ನೀಡಿದ ದೂರಿನ ಸಾರಾಂಶ. 

Crime Reported in : Kankanady Town PS

ಪಿರ್ಯಾದಿದಾರ Ravi Naik ಕುಂದಾಪುರ ಉಡುಪಿ ಜಿಲ್ಲೆಯವರಾಗಿದ್ದು, ಪಿರ್ಯಾದಿದಾರರ ಮಗನಾದ ರಂಜಿತ್ ನಾಯ್ಕ್ (25)  ರವರು ಪಡೀಲ್ ನ ರತ್ನಾಸ್ ವೈನ್ ಗೇಟ್ ಬಾರ್ ಎಂಡ್ ರೆಸ್ಟೋರೆಂಟ್ ನಲ್ಲಿ ಸುಮಾರು 10 ತಿಂಗಳಿನಿಂದ ಪಿರ್ಯಾದಿದಾರರ  ಭಾವನಾದ ಸುರೇಶ್ ನಾಯ್ಕರವರ ಜೊತೆ ಕುಕ್ಕಿಂಗ್ ಹೆಲ್ಪರ್ ಆಗಿ ಕೆಲಸ ಮಾಡಿಕೊಂಡು, ಅದೇ ಬಾರ್ ಎಂಡ್ ರೆಸ್ಟೋರೆಂಟ್ ನ ಸ್ಟಾಪ್ ರೂಮ್ ನಲ್ಲಿ ವಾಸ ಮಾಡಿಕೊಂಡಿರುವುದಾಗಿದೆ. ಪಿರ್ಯಾದಿದಾರರ ಮಗನಾದ ರಂಜಿತ್  ನಾಯ್ಕ್ ಮೊಬೈಲ್ ನಲ್ಲಿ ಜಾಸ್ತಿ ಮಾತನಾಡುವ ಹಾಗೂ ಕುಡಿತದ ಚಟ ಹೊಂದಿದ್ದು, ದಿನಾಂಕ 17-07-2022 ರಂದು ಎಂದಿನಂತೆ ಬೆಳಗ್ಗೆಯಿಂದ ಬಾರ್ ಎಂಡ್ ರೆಸ್ಟೋರೆಂಟ್ ನಲ್ಲಿ ಕುಕ್ಕಿಂಗ್ ಹೆಲ್ಪರ್ ಕೆಲಸ ಮಾಡಿಕೊಂಡು ಸಾಯಂಕಾಲದ ನಂತರ ಬಾರ್ ಎಂಡ್ ರೆಸ್ಟೋರೆಂಟ್ ನಿಂದ ಹೊರಗಡೆ ಹೋದವನು ಸುಮಾರು ಸಮಯವಾದರೂ ಮರಳಿ ಬಾರದೆ ಇರುವುದರಿಂದ ಪಿರ್ಯಾದಿದಾರರ ಭಾವನಾದ ಸುರೇಶ್ ನಾಯ್ಕ್ ರವರು ರಂಜಿತ್ ನಾಯ್ಕ್ ಮೊಬೈಲ್  ನಂಬ್ರಗೆ ಕರೆ ಮಾಡಿದಾಗ ಸ್ವೀಚ್ ಆಫ್ ಬಂದಿದ್ದು, ನಂತರ ಗಾಬರಿಗೊಂಡ ಸುರೇಶ್ ನಾಯ್ಕ್ ರವರು ಪಿರ್ಯಾದಿದಾರರ ಮಗ ಕಾಣೆಯಾದ ಬಗ್ಗೆ ತಿಳಿಸಿದ್ದು ಕೂಡಲೇ ಪಿರ್ಯಾದಿದಾರರು ನೆರೆಮನೆಯವರಲ್ಲಿ ಹಾಗೂ ಸಂಬಂದಿಕರಲ್ಲಿ ವಿಚಾರಿಸಿದಾಗ ಯಾವುದೇ ಸುಳಿವು ಸಿಗದೇ ಇರುವುದರಿಂದ ಈ ದಿನ ಪಿರ್ಯಾದು ನೀಡುತ್ತಿರುವುದಾಗಿದೆ.ಆದುದರಿಂದ ನಾಪತ್ತೆಯಾಗಿರುವ ಪಿರ್ಯಾದಿದಾರರ ಮಗನಾದ ರಂಜಿತ್ ನಾಯ್ಕ ರವರನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ ಎಂಬಿತ್ಯಾದಿ.

Crime Reported in : MangaloreTraffic South PS    

ಪಿರ್ಯಾದಿದಾರ Dr JAYANATHA KUMAR K  ದಿನಾಂಕ:27-07-2022 ರಂದು ಅವರ ಬಾಬ್ತು ಕಾರು ನಂಬ್ರ KA-21-Z-6177 ನೇದನ್ನು ಚಲಾಯಿಕೊಂಡು ಕಣಚೂರು ಆಸ್ಪತ್ರೆಯ ಮುಂದಿನ ತೊಕ್ಕೊಟ್ಟು-ಕೋಣಾಜೆಯ ಯುನಿವರ್ಸಿಟಿಯ ರಸ್ತೆಯಲ್ಲಿರುವ ಕಣಚೂರು ಆಸ್ಪತ್ರೆಯ ಮುಂದಿನ ಬಸ್ಸ್ ಸ್ಟಾಂಪ್ ನಲ್ಲಿರುವ ರಸ್ತೆ ಬಳಿ ನಿಲ್ಲಿಸಿದ್ದು ಸಮಯ ಸುಮಾರು ಸಂಜೆ 4-05 ಗಂಟೆಗೆ ಅಪರಿಚಿತ ಹದಿಹರೆಯದ ಹುಡುಗನೊಬ್ಬ ಬೈಕ್ ನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಬೈಕ್ ನ ಮುಂದಿನ ಚಕ್ರವನ್ನು ಪಿರ್ಯಾದಿದಾರರ ಕಾರಿನ ಹಿಂಬದಿ ಮತ್ತು ಬಲಭಾಗಕ್ಕೆ ಡ್ರೈವರ್ ಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಕಾರಿನ ಮುಂಭಾಗ ಬಲಭಾಗದಲ್ಲಿ ಕಾರು ನಜ್ಜುಗುಜ್ಜಾಗಿರುತ್ತದೆ.ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 28-07-2022 05:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080