ಅಭಿಪ್ರಾಯ / ಸಲಹೆಗಳು

Crime Reported in : Mangalore Traffic East PS

ದಿನಾಂಕ 28-07-2022 ರಂದು ರಾತ್ರಿ ಪ್ರಕರಣದ ಪಿರ್ಯಾದಿದಾರರಾದ ಮಹಾಂತೇಶ್  ಚೆನ್ನಪ್ಪ ಯಲಿಗಾರ್ ರವರು ತನ್ನ ಬಾಬ್ತು KA-19-ET-1924 ನಂಬ್ರದ ಮೋಟಾರು ಸೈಕಲಿನಲ್ಲಿ ಸವಾರನಾಗಿ ಹಾಗೂ KA-19-HH-1445 ನಂಬ್ರದ ಸ್ಕೂಟರಿನಲ್ಲಿ ತನ್ನ ಸ್ನೇಹಿತರಾದ ಶಂಕ್ರಪ್ಪ ಮಜ್ಜಗಿ ಸವಾರನಾಗಿಯೂ ಆತನ ಜೊತೆಗೆ ಹಿಂಬದಿ ಸಹಸವಾರನಾಗಿ ಮುತ್ತುರಾಜ್ ನು ಕುಳಿತು ಸಿಟಿ ಸೆಂಟರಿಗೆ ಸಿನಿಮಾ ನೋಡಲು ಹೊರಟು ಕಂಕನಾಡಿ ಕಡೆಯಿಂದ ಹಂಪನಕಟ್ಟೆ ಕಡೆಗೆ ಹಾದು ಹೋಗಿರುವ ಮದರ್ ತೆರೇಸಾ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ಹೋಗುತ್ತಾ ಹೈಲ್ಯಾಂಡ್ ಆಸ್ಪತ್ರೆ ತಲುಪುವುದಕ್ಕಿಂತ ಸ್ವಲ್ಪ ಮೊದಲು ಜಬ್-ತಾಜ್  ಕಮರ್ಷಿಯಲ್ ಕಟ್ಟಡದ ಎದುರುಗಡೆ  ರಸ್ತೆಗೆ ಅಳವಡಿಸಿರುವ ಹಂಪ್ಸ್ ಜಾಗಕ್ಕೆ ಸಮಯ ಸುಮಾರು 9.00 ಗಂಟೆಗೆ ಬಂದು ತಲುಪುತ್ತಿದ್ದಂತೆ ಸ್ಕೂಟರನ್ನು ಸವಾರ ಶಂಕ್ರಪ್ಪ ಮಜ್ಜಗಿನು ನಿಧಾನಗೊಳಿಸದೇ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ವೇಗವಾಗಿ ಹಂಪ್ಸ್ ಮೇಲೆ ಚಲಾಯಿಸಿಕೊಂಡು ಹೋದ ಪರಿಣಾಮ ಸ್ಕೂಟರ್ ಜಂಪ್ ಆದಂತಾಗಿ ಹತೋಟಿ ತಪ್ಪಿ ಸುಮಾರು 50 ಅಡಿ ದೂರ ಮುಂದಕ್ಕೆ ಹೋಗಿ ಕಾಂಕ್ರೀಟ್ ರಸ್ತೆಗೆ ಮಗುಚಿ ಬಿದ್ದು ಸವಾರ ಶಂಕ್ರಪ್ಪ ಮಜ್ಜಗಿಗೆ ಸಣ್ಣಪುಟ್ಟ ಗುದ್ದಿದ ಗಾಯಗಳಾಗಿದ್ದು, ಹಿಂಬದಿ ಸಹಸವಾರನಾಗಿ ಕುಳಿತಿದ್ದ ಮುತ್ತುರಾಜ್ ನು ಸ್ಕೂಟರಿನಿಂದ ಪಲ್ಟಿಯಾಗಿ ಕಾಂಕ್ರೀಟ್ ರಸ್ತೆಗೆ ಬಿದ್ದು ಕುತ್ತಿಗೆ ಮತ್ತು ತಲೆಗೆ ಗಂಭೀರ ಸ್ವರೂಪದ ರಕ್ತಗಾಯವಾದವನನ್ನು ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಹತ್ತಿರದ ಹೈಲ್ಯಾಂಡ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಯಲ್ಲಿದ್ದವನು ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ: 28-07-2022 ರಂದು ರಾತ್ರಿ 10-15 ಗಂಟೆಗೆ ಮೃತಪಟ್ಟಿರುವುದಾಗಿದೆ. ಆದುದರಿಂದ ಈ ಬಗ್ಗೆ ಸ್ಕೂಟರ್ ಸವಾರ ಶಂಕ್ರಪ್ಪ ಮಜ್ಜಗಿ ಈತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೇ ಕೋರಿಕೆ ಎಂಬಿತ್ಯಾದಿ.

 

Crime Reported in : Urva PS

ದಿನಾಂಕ 29-07-2022 ರಂದು ರಾತ್ರಿ ಸುಮಾರು 10-00 ಗಂಟೆಗೆ ಪಿರ್ಯಾದಿದಾರರು NARENDRANATH NAYAK ಹಾಲು ತರಲು ಮನೆಯಿಂದ  ಅವರ  ಕೆಎ-19-ಇ ಎಕ್ಸ್ -0107 ನೊಂದಣಿ ಸಂಖ್ಯೆಯ  ನೀಲಿ ಬಣ್ಣದ ಹೋಂಡಾ ಶ್ರೈನ್ ಮೋಟಾರ್ ಸೈಕಲಿನಲ್ಲಿ ಬಿಜೈ ಸರ್ಕಲ್ ಬಳಿ ಇರುವ ಬೇಕ್ ಏಂಡ್ ಶೇಖ್ ಜನರಲ್ ಸ್ಟೋರ್ಸ್ ಅಂಗಡಿಗೆ ಹೋಗಿದ್ದು ಅವರ  ಮೋಟಾರ್ ಸೈಕಲಿನ ಚಾವಿಯನ್ನು  ವಾಹನದಲ್ಲಿ ಬಿಟ್ಟು ವಾಹನವನ್ನು ರಸ್ತೆ ಬದಿಯಲ್ಲಿ ನಿಲುಗಡೆ ಮಾಡಿ ಅಂಗಡಿಗೆ ಹೋಗಿ ಹಾಲು ತೆಗೊಂಡು  ವಾಪಸ್ ಬರುವಷ್ಟರಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರ ವಾಹನವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಸಾರಾಂಶ ಆಗಿರುತ್ತದೆ.

ಇತ್ತೀಚಿನ ನವೀಕರಣ​ : 29-07-2022 04:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080