ಅಭಿಪ್ರಾಯ / ಸಲಹೆಗಳು

Crime Reported in : Mangalore South PS                         

ಪಿರ್ಯಾದಿದಾರರಾದ ಶ್ರೀಮತಿ, ಪೌಲಿನ್ ಡಿಸೋಜಾ [52] ರವರ ಮಗಳು ಡಿಂಪಲ್ ಪ್ರೀಯಾ ಡಿಸೋಜಾ [22] ಎಂಬವಳು ದಿನಾಂಕ: 25.10.2022 ರಂದು ಸಮಯ ಬೆಳಿಗ್ಗೆ 10:30 ಗಂಟೆಗೆ ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಹೋಗಿದ್ದು, ಕೂಡಲೇ ಪಿರ್ಯಾದಿದಾರರು ತಮ್ಮ ಮಗಳನ್ನು ಮಂಗಳೂರು ನಗರದ ಕೆಲವೊಂದು ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಲಿಲ್ಲ, ಅಲ್ಲದೇ ನೆರೆಕೆರೆಯವರನ್ನು ಹಾಗೂ ಸಂಭಂಧಿಕರನ್ನು,ಪರಿಚಯದ ಸ್ನೇಹಿತರನ್ನು ವಿಚಾರಿಸಿದಲ್ಲಿ ಯಾವುದೇ ಮಾಹಿತಿ ದೊರೆತಿರುವುದಿಲ್ಲ, ಕಾಣೆಯಾದ  ತನ್ನ ಮಗಳು ಡಿಂಪಲ್ ಪ್ರೀಯಾ ಡಿಸೋಜಾಳನ್ನು ಪತ್ತೆಮಾಡಿಕೊಡಬೇಕಾಗಿ ತಮ್ಮಲ್ಲಿ ಈ ಮೂಲಕ ವಿನಂತಿ ಎಂಬಿತ್ಯಾದಿಯಾಗಿರುತ್ತದೆ.

Crime Reported in : Traffic North Police Station                                       

ಪಿರ್ಯಾದಿದಾರರು ದಿನಾಂಕ 30/01/2023 ರಂದು ಲಾರಿ ನಂಬ್ರ MP-09-HH-3789 ನೇದರಲ್ಲಿ ಸರಕು ಲೋಡ್ ಮಾಡಿಕೊಂಡು ಮಧ್ಯಪ್ರದೇಶದ ಇಂದೋರಿನಿಂದ ಕೇರಳಕ್ಕೆ ಬರುತ್ತಿದ್ದು, ಲಾರಿಯ ಚಾಲಕರಾಗಿ ಅಚಲ್ ಸಿಂಗ್ ರವರೊಂದಿಗೆ ಕ್ಲೀನರ್ ಆಗಿ ಪಿರ್ಯಾದಿದಾರರು RAVI ROKADE  ಇದ್ದು, ತಮ್ಮದೇ ಕಂಪನಿಯ ಇನ್ನೊಂದು ಲಾರಿ ನಂಬ್ರ MH-18-BA-2999 ನೇಯದರಲ್ಲಿ ಚಾಲಕರಾಗಿ ಅನೀಶ್ ಕೆ ಜೆ, ಬದಲಿ ಚಾಲಕರಾಗಿ ವಿಷ್ಣುರವರು ಮತ್ತು ಪಿರ್ಯಾದಿದಾರರ ಅಣ್ಣ ಬಬ್ಲು ರೋಕಡೆರವರು ಕ್ಲೀನರ್ ಆಗಿದ್ದು ಮಧ್ಯಪ್ರದೇಶದ ಇಂದೋರಿನಿಂದ ಕೇರಳಕ್ಕೆ ಎರಡೂ ಲಾರಿಗಳೂ ಜೊತೆಯಾಗಿ ಹೊರಟು ಬರುತ್ತಾ ಈ ದಿನ ದಿನಾಂಕ 01/02/2023 ರಂದು ಮಂಗಳೂರು ಪಡುಪಣಂಬೂರು ಬಳಿ ಇರುವ ಪೆಟ್ರೋಲ್ ಪಂಪ್ ಬಳಿ ಪಿರ್ಯಾದಿದಾರರು ಹೋಗುತ್ತಿದ್ದ MP-09-HH-3789 ನಂಬ್ರದ ಲಾರಿಯ ಹಿಂಬದಿಯ ಬಲಭಾಗದ ಚಕ್ರ ಪಂಚರ್ ಆಗಿದ್ದು ಆ ಸಮಯ ಲಾರಿಯನ್ನು ರಸ್ತೆಯ ಎಡಬದಿಯಲ್ಲಿರುವ ಮಣ್ಣು ರಸ್ತೆಯಲ್ಲಿ ನಿಲ್ಲಿಸಿ ಪಿರ್ಯಾದಿದಾರರು ಹಾಗೂ ಇನ್ನೊಂದು ಲಾರಿಯ ಚಾಲಕರಾದ ಅನೀಶ್ ಕೆ ಜೆ ಮತ್ತು ವಿಷ್ಣು, ಹಾಗೂ ಪಿರ್ಯಾದಿದಾರರ ಅಣ್ಣ ಬಬ್ಲು ರೋಕಡೆ ರವರು ಸೇರಿಕೊಂಡು ಪಂಚರ್ ಆಗಿದ್ದ ಚಕ್ರವನ್ನು ಬಿಚ್ಚಿ ಬದಲಿ ಚಕ್ರವನ್ನು ಜೋಡಿಸಿ ಅದರ ನಟ್ಟು ಬೋಲ್ಟನ್ನು ಟೈಟ್ ಮಾಡುತ್ತಿದ್ದ ಸಮಯ ರಾತ್ರಿ ಸಮಯ 12.15 ಗಂಟೆಗೆ ಕಾರೊಂದನ್ನು ಅದರ ಚಾಲಕ NH66ನೇ ರಸ್ತೆಯಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂಧ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಲಾರಿಯ ಚಕ್ರದ ನಟ್ಟು ಬೋಲ್ಟ್ ಬಿಗಿ ಮಾಡುತ್ತಿದ್ದ ಪಿರ್ಯಾದಿದಾರರ ಅಣ್ಣ ಬಬ್ಲು ರೋಕಡೆ, ಚಾಲಕ ಅಚಲ್ ಸಿಂಗ್  ಮತ್ತಯ ಅನೀಶ್ ಕೆ ಜೆ ರವರಿಗೆ ಡಿಕ್ಕಿ ಪಡಿಸಿಕೊಂಡು ಹಾಗೂ ಲಾರಿಯ ಬಲಬದಿಯ ಹಿಂಬದಿ  ಚಕ್ರಕ್ಕೆ ಡಿಕ್ಕಿ ಪಡಿಸಿಕೊಂಡು ಮಂಗಳೂರು ಕಡೆಗೆ ನಿಲ್ಲಿಸದೇ ಹೋಗಿರುತ್ತಾರೆ, ಈ ಅಪಘಾತದ ಪರಿಣಾಮ ಪಿರ್ಯಾದಿದಾರರ ಅಣ್ಣ ಬಬ್ಲು ರೋಕಡೆಯವರಿಗೆ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಎರಡೂ ಕಾಲುಗಳಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ, ಅಲ್ಲದೇ ಅಚಲ್ ಸಿಂಗ್ ರವರಿಗೆ ತಲೆಗೆ ರಕ್ತಗಾಯ ಎಡಕಣ್ಣು ಹುಬ್ಬಿನ ಬಳಿ ಬಲ ಎದೆಯ ಬಳಿ, ರಕ್ತಗಾಯವಾಗಿದ್ದು, ಎರಡೂ ಕೈ ಮತ್ತು ಕಾಲುಗಳಿಗೆ ಮೂಳೆ ಮುರಿತದ ಗಾಯವಾಗಿದ್ದು, ಅನೀಶ್ ಕೆ ಜೆ ರವರಿಗೆ ಬಲಕೈ ತೋಳಿನ ಬಳಿ ಮೂಳೆ ಮುರಿತದ ಗಾಯ, ಬಲ ಕಾಲಿನ ಬಳಿ ರಕ್ತಗಾಯ, ಹಾಗೂ ಎಡಕಾಲು ಆಡಿಸುತ್ತಿರಲಿಲ್ಲ, ಗಾಯಗೊಂಡಿದ್ದ ಮೂವರನ್ನು ರಸ್ತೆಯಾಗಿ ಬಂದಿದ್ದ ಆಂಬ್ಯಲೆನ್ಸ್ ನಲ್ಲಿ ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಇಲ್ಲಿ ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರ ಅಣ್ಣ ಬಬ್ಲು ರೋಕಡೆಯವರು ಕರೆದುಕೊಂಡು ಬರುವ ದಾರಿ ಮದ್ಯದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಸಿ ಅನೀಶ್ ಕೆ ಜೆ ಹಾಗೂ ಅಚಲ್ ಸಿಂಗ್ ರವರನ್ನು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುವುದಾಗಿದೆ ಎಂಬಿತ್ಯಾದಿ.

Crime Reported in : Mulki PS

ಪಿರ್ಯಾದಿದಾರರ Dharmalinga  ಹೆಂಡತಿ ಶ್ರೀಮತಿ ಬಾಗಮ್ಮ ಪ್ರಾಯ 26 ವರ್ಷ ರವರು ಮನೆವಾರ್ತೆ ಕೆಲಸ ಮಾಡಿಕೊಂಡಿದ್ದು ದಿನಾಂಕ 28-01-2023 ರಂದು ಸಮಯ ಸುಮಾರು 3.45 ಗಂಟೆಗೆ ತನ್ನ ಮನೆಯಾದ ಮಂಗಳೂರು, ಮುಲ್ಕಿ ತಾಲೂಕು, ಕಾರ್ನಾಡು ಗ್ರಾಮದ, ಲಿಂಗಪ್ಪಯ್ಯಕಾಡು, ನಾಗಬನದ ಬಳಿ, ಮನೆ ನಂಬ್ರ 19/123 ಎಂಬಲ್ಲಿಂದ ಆಕೆಯ ತವರು ಮನೆಯಾದ ಗುಲ್ಬರ್ಗಾಕ್ಕೆ ಹೋಗುತ್ತೇನೆಂದು ಹೇಳಿ ಮನೆಯಿಂದ ಒಬ್ಬಳೇ ಹೋಗಿದ್ದು, ತವರು ಮನೆಗೆ ಹೋದವಳು ವಾಪಾಸು ಬರಬಹುದೆಂದು ತಿಳಿದು ಸುಮ್ಮನಿದ್ದ ಪಿರ್ಯಾದಿದಾರರು ದಿನಾಂಕ: 30-01-2023 ರಂದು ಆಕೆಯ ತವರು ಮನೆಗೆ ಕರೆ ಮಾಡಿ ವಿಚಾರಿಸಿದಾಗ ಆಕೆಯು ತವರು ಮನೆಗೆ  ಬಂದಿರುವುದಿಲ್ಲ  ಎಂದು ಆಕೆಯ ತಮ್ಮ ಬಲಭೀಮರವರು  ತಿಳಿಸಿರುತ್ತಾರೆ. ಶ್ರೀಮತಿ ಬಾಗಮ್ಮ ಪ್ರಾಯ 26 ವರ್ಷ ರವರು ದಿನಾಂಕ: 28-01-2023 ರಂದು 3.45 ಗಂಟೆಗೆ ತನ್ನ ಮನೆಯಿಂದ ತವರು ಮನೆಯಾದ ಗುಲ್ಭರ್ಗಾ ಕ್ಕೆ ಹೋಗುವುದಾಗಿ ಹೇಳಿ ಹೋದವರು ಈವರೆಗೆ ಗುಲ್ಭರ್ಗಾಕ್ಕೂ ಹೋಗದೇ ಮನೆಗೂ ವಾಪಾಸಾಗದೇ ಕಾಣೆಯಾಗಿರುತ್ತಾರೆ ಎಂಬಿತ್ಯಾದಿ. 

ಕಾಣೆಯಾದವರ ಚಹರೆ ಗುರುತುಗಳು

ಹೆಸರು: ಬಾಗಮ್ಮ, ಪ್ರಾಯ 26 ವರ್ಷ,

ಎತ್ತರ: 4.5”

ಮುಖ: ಕೋಲು ಮುಖ

ಬಣ್ಣ : ಎಣ್ಣೆ ಕಪ್ಪು ಮೈ ಬಣ್ಣ

Crime Reported in :  Mangalore South PS                                      

ಪಿರ್ಯಾದಿದಾರರಾದ ಶ್ರೀ ಸದಾನಂದ.ಕೆ ಎಂಬವರು ಮಂಗಳೂರು ಜೆಪ್ಪು ಕಾರ್ಯ ಮತ್ತು ಪಾಲನಾ ಶಾಖಾ ವ್ಯಾಪ್ತಿಯ ಮಂಗಳೂರು ವಿದ್ಯುತ್ ಸರಬರಾಜು (ಮೆಸ್ಕಾಂ) ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿದೆ. ಪಿರ್ಯಾದಿದಾರರು ಕರ್ತವ್ಯ ನಿರ್ವಹಿಸುತ್ತಿರುವ ವ್ಯಾಪ್ತಿಗೆ ಒಳಪಡುವಂತಹ  ಮಂಗಳೂರು ನಗರದ ಹೊಯ್ಗೆ ಬಜಾರ್ ಎಂಬಲ್ಲಿ ದಿನಾಂಕ 30-01-2023 ರಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ KA 19 ML-8630  ನೇ ನಂಬ್ರದ ಕಾರು ಚಾಲಕ ಕಾರನ್ನು ಅತಿ ವೇಗವಾಗಿ   ಚಲಾಯಿಸಿಕೊಂಡು ಬಂದು ಹೆಚ್.ಟಿ ಕಂಬಕ್ಕೆ ಡಿಕ್ಕಿ ಹೊಡೆಸಿರುತ್ತಾರೆ. ಈ ಪರಿಣಾಮ ಮೆಸ್ಕಾಂ ಇಲಾಖೆಗೆ ಸೇರಿದ ಹೆಚ್.ಟಿ ಕಂಬ ಜಖಂಗೊಂಡು ಮೆಸ್ಕಾಂ ಇಲಾಖೆಗೆ ಸುಮಾರು 30,000/- ನಷ್ಟ ಉಂಟಾಗಿರುತ್ತದೆ. ತಪ್ಪಿತಸ್ಥ ಕಾರು ಚಾಲಕ/ಮಾಲಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಮೆಸ್ಕಾಂಗೆ ಆದ ನಷ್ಟವನ್ನು ಭರಿಸಲು ಸಹಕರಿಸಬೇಕು ಎಂಬಿತ್ಯಾದಿಯಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-02-2023 02:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080