ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ ದಿನಾಂಕ :01-02-2024

Barke PS

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ ದಿನಾಂಕ:01.02.2024 ರಂದು ಮಂಗಳೂರು ನಗರ ಪೊಲೀಸ್ ಕೇಂದ್ರ  ಉಪ ವಿಭಾಗದ ವತಿಯಿಂದ ರಚಿತವಾಗಿರುವ Anti Drug Team ತಂಡದ ಅಧಿಕಾರಿ ಪ್ರದೀಪ್ ಟಿ ಆರ್ ಪಿಎಸ್ ಐ ಮಂಗಳೂರು ಉತ್ತರ ಪೊಲೀಸ್ ಠಾಣೆ  ರವರು ಸಿಬ್ಬಂದಿ ರವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಸುಲ್ತಾನ್ ಬತ್ತೇರಿಯ ಬಸ್ ನಿಲ್ದಾಣದ ಬಳಿ ತಲುಪಿದಾಗ ಮೊಹಮ್ಮದ್ ಸೂಫಿಯಾನ್ ಪ್ರಾಯ: 42 ವರ್ಷ ತಂದೆ: ಹಕ್ಕಿಂ ಯುನೂಸ್ ವಾಸ: ಹೆಚ್.ಎಸ್. ಮಂಜಿಲ್, ಮೊಯಿದ್ದೀನ್ ನಗರ, ಕರ್ಬಲಾ ರೋಡ್, ಕುದ್ರೋಳಿ, ಮಂಗಳೂರು  ಎಂಬಾತನು ಯಾವುದೋ ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದವನನ್ನು ಮುಂದಿನ ಕ್ರಮದ ಬಗ್ಗೆ ಮಂಗಳೂರು ಎ,ಜೆ ಆಸ್ಪತ್ರೆಗೆ ಸಿಬ್ಬಂದಿಗಳ ಭದ್ರಿಕೆಯಲ್ಲಿ. ಕಳುಹಿಸಿಕೊಟ್ಟಲ್ಲಿ  “Tetrahydracannabinoid (Marijuana) POSITIVE ಎಂಬ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿರುವುದರಿಂದ ಆಪಾದಿತನನ್ನು ವರದಿಯೊಂದಿಗೆ ಠಾಣೆಗೆ  ಕರೆ ತಂದು ನೀಡಿ ಆಪಾದಿತನ ವಿರುದ್ದ ಮಾದಕ ದ್ರವ್ಯ ಕಾಯಿದೆ ಅಡಿ ಕಾನೂನು ಕ್ರಮ ಕೈಗೊಳ್ಳವಂತೆ ಎಂಬಿತ್ಯಾದಿಯಾಗಿರುತ್ತದೆ.

 

Mangalore North PS

 ಈ ದಿನ ದಿನಾಂಕ: 01-02-2024 ರಂದು  ಸಮಯ ಮದ್ಯಾಹ್ನ 13.30 ಗಂಟೆಗೆ ಮಾದಕ ದ್ಯವ್ಯ ವ್ಯಸನ ಮತ್ತು ಮಾರಾಟವನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕೇಂದ್ರ ಉಪವಿಭಾಗದ ವತಿಯಿಂದ ರಚಿತವಾಗಿರುವ Anti Drug Team ತಂಡದ ಅಧಿಕಾರಿ ಪ್ರದೀಪ್ ಟಿ ಆರ್ ಪಿಎಸ್ಐ ಮಂಗಳೂರು ಉತ್ತರ ಪೊಲೀಸ್ ಠಾಣೆ ರವರು ಸಿಬ್ಬಂದಿ ರವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ  ಸಮಯ ಮಂಗಳೂರು ನಗರದ  ಕಂಡತ್ ಪಳ್ಳಿ  ಬಳಿ ತಲುಪಿದಾಗ ಇಕ್ಬಾಲ್ ಸಾಧಿಕ್ (35) ತಂದೆ-ಯೂಸುಪ್, ವಾಸ-9/1970, ಕಂಡತ್ ಪಳ್ಳಿ, ಟೈಲ್ಸ್ ಪ್ಯಾಕ್ಟರಿ ರೋಡ್, ಕಂಡತ್ ಪಳ್ಳಿ, ಹೌಸ್ ಬಂದರ್ ಮಂಗಳೂರು, ಖಾಯಂ ವಿಳಾಸ- 18-30/28, ಧರ್ಮ ನಗರ ಬೊಟ್ಟು, ಉಳ್ಳಾಲ, ಮಂಗಳೂರು ಎಂಬಾತನು ಯಾವುದೋ  ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದವನನ್ನು ಮುಂದಿನ ಕ್ರಮದ ಬಗ್ಗೆ ಮಂಗಳೂರು ಎ,ಜೆ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಕುಂಟಿಕಾನದ ಎ ಜೆ ಆಸ್ಪತ್ರೆಗೆ ಸಿಬ್ಬಂದಿಗಳ ಭದ್ರಿಕೆಯಲ್ಲಿ ಕೋರಿಕೆ ಪತ್ರದೊಂದಿಗೆ ಹಾಜರುಪಡಿಸಿದ್ದು, ಎ ಜೆ ಆಸ್ಪತ್ರೆಯ ವೈದ್ಯರು ಆತನನ್ನುಪರೀಕ್ಷಿಸಿದಲ್ಲಿ, ಇಕ್ಬಾಲ್ ಸಾಧಿಕ್  ಎಂಬಾತನು, Tetrahydracannabinoid, (Marijuana) ಎಂಬ ಮಾದಕ ದ್ರವ್ಯವನ್ನು ಸೇವನೆ ಮಾಡಿರುವುದಾಗಿ ದೃಢ ಪತ್ರವನ್ನು ನೀಡಿರುತ್ತಾರೆ. ಎಂಬಿತ್ಯಾದಿ.

 

 Traffic South Police Station

 ಫಿರ್ಯಾದಿ KIRAN SHETTY ರವರು ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ-01-02-2024 ರಂದು ಪಿರ್ಯಾದಿದಾರರು ತಮ್ಮ ಸ್ನೇಹಿತನಾದ ಸಂಪತ್ ಕುಮಾರ್) ರವರ KA70E4392  ನೇ ನಂಬ್ರದ ಮೋಟಾರ್ ಸೈಕಲ್ ನಲ್ಲಿ ಸಹಸವಾರನಾಗಿ ರಾ.ಹೆ-73 ಮಂಗಳೂರನಿಂದ ಬೆಳ್ತಂಗಡಿ ಕಡೆಗೆ ತೆರಳುತ್ತರುವ ಸಮಯ ಮದ್ಯಾಹ್ನ 01-20 ಗಂಟೆಗೆ  ಅಡ್ಯಾರ್ ಕಟ್ಟೆ ಹತ್ತಿರ ತಲುಪುತ್ತಿದ್ದಂತೆ KA19ME5031 ನೇ ನಂಬ್ರದ ಕಾರ್ ನ ಚಾಲಕನಾದ ಸಚಿನ್ ಕುಮಾರ್ ದುಡುಕುತನ ಹಾಗೂ ನಿರ್ಲಕ್ಷತನ ವೇಗವಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ  ಮೋಟಾರ್ ಸೈಕಲ್ ನ ಹಿಂಭಾಗಕ್ಕೆ ಡಿಕ್ಕಿಪಡಿಸಿದ್ದು ಇದರ ಪರಿಣಾಮ ಪಿರ್ಯಾದಿದಾರರು ಹಾಗೂ ಸಂಪತ್ ಕುಮಾರ್ (34) ರವರು ರಸ್ತೆಗೆ ಬಿದ್ದಿದ್ದು ಸಹಸವಾರರಾದ ಪಿರ್ಯಾದುದಾರರಿಗೆ ಎಡ ಕೈ ಹೆಬ್ಬೆರಳು, ಬಲಭುಜಕ್ಕೆ ತೆರಚಿದ ಗಾಯವಾಗಿದ್ದು, ಪಿರ್ಯಾದುದಾರರ ಸ್ನೇಹಿತನಿಗೆ  ತಲೆಯ ಬಲಭಾಗಕ್ಕೆ ಗಂಭೀರ ಸ್ವೂರೂಪದ ರಕ್ತ ಗಾಯವಾಗಿದ್ದು ಕೈ ಕಾಲುಗಳಿಗೆ ತೆರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ  ನ್ಯೂರೋ ಆಸ್ಪತ್ರೆಯಲ್ಲಿ ಪಿರ್ಯಾದುದಾರರ ಸ್ನೆಹಿತ ಸಂಪತ್ ಕುಮಾರರವರು ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

Traffic North Police Station

 ಈ ಪ್ರಕರಣದ ಸಾರಾಂಶವೇನೆಂದರೆ, ನಿನ್ನೆ ದಿನ ದಿನಾಂಕ 31-01-2024 ರಂದು ಪಿರ್ಯಾದಿದಾರರಾದ ಲೋಕೆಶ್ ಯು ರವರು  ಕೊಟ್ಟಾರಚೌಕಿಯಲ್ಲಿ  ಸ್ನೇಹಿತನ ಮೆಹಂದಿ ಕಾರ್ಯಕ್ರಮ ಮುಗಿಸಿಕೊಂಡು ವಾಪಾಸು ತನ್ನ ಗೆಳಯನಾದ ಸಜನ್ ಎಂಬುವರೊಂದಿಗೆ ದಿನಾಂಕ 01-02-2024 ರಂದು KA-12-S-8570 ನಂಬ್ರದ ಸ್ಕೂಟರಿನಲ್ಲಿ ಸಜನ್ ರವರು ಸವಾರನಾಗಿ, ಪಿರ್ಯಾದಿದಾರರು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಕೊಟ್ಟಾರದಿಂದ ಕೂಳೂರು ಮಾರ್ಗವಾಗಿ ಕಾವೂರಿಗೆ ಹೋಗುತ್ತಿರುವ ಸಮಯ ಸುಮಾರು ಮಧ್ಯರಾತ್ರಿ 01:30 ಗಂಟೆಗೆ ಪಂಜಿಮೊಗರು ಹತ್ತಿರ ತಲುಪುತ್ತಿದ್ದಂತೆ ರಸ್ತೆಯ ಮಧ್ಯದಲ್ಲಿರುವ ಹಂಪ್ಸನ್ನುಗಮನಿಸದೇ ಸ್ಕೂಟರನ್ನು ಅದರ ಸವಾರನಾದ ಸಜನ್ ರವರು ಅಜಾಗರೂಕತೆಯಿಂದ ಮತ್ತು ದುಡುಕುತನದಿಂದ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಸ್ಕೂಟರ್ ಸವಾರನ ನಿಯಂತ್ರಣ ತಪ್ಪಿ ಇಬ್ಬರೂ ಸ್ಕೂಟರ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಬಲಕಣ್ಣಿಗೆ, ತುಟಿಗೆ, ಗಲ್ಲಕ್ಕೆ ಮತ್ತು ಎಡ ಕಾಲಿಗೆ ಎಡಕೈಗೆ ತರಚಿದ ರೀತಿಯ ಗಾಯವಾಗಿದ್ದು, ಸ್ಕೂಟರ್ ಸವಾರ ಸಜನ್ ರವರಿಗೆ ಎಡಕೈಗೆ ಎಡಕಾಲಿನ ಮೊಣಗಂಟಿಗೆ,ಕೆನ್ನೆಯ ಬಲಬದಿ ಮೂಗಿಗೆ ತರಚಿದ ರೀತಿಯ ಗಾಯ ಹಾಗೂ ಬಲಕಣ್ಣಿಗೆ ಗುದ್ದಿದ ರೀತಿಯ ಗಾಯವಾಗಿರುತ್ತದೆ.ನಂತರ ಗಾಯಾಳುಗಳು ಚಿಕಿತ್ಸೆಯ ಬಗ್ಗೆ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

Moodabidre PS

 ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ಮುಸ್ತಾಫ ರವರು ದಿನಾಂಕ:26-01-2024 ರಂದು ಸಂಜೆ  ತನ್ನ ಬಾಬ್ತು KA-19-EE-8957 ನೇ ಮೋಟಾರು ಸೈಕಲ್ ನಲ್ಲಿ ಮೂಡಬಿದ್ರೆಯಿಂದ ತನ್ನ ಮನೆಯ ಕಡೆಗೆ ಹೋಗುತ್ತಾ ಸಂಜೆ ಸುಮಾರು 6.30 ಗಂಟೆಗೆ ಜೈನ್ ಪೇಟೆ ಬೆಟಕೇರಿ ಎಂಬಲ್ಲಿಗೆ ತಲುಪಿದಾಗ ಶಿರ್ತಾಡಿ ಕಡೆಯಿಂದ KA-19-AA-7772 ನೇ ಆಟೋ ರಿಕ್ಷಾವನ್ನು ಸಂತೋಷ್ ಎಂಬಾತನು ಅತೀ ವೇಗವಾಗಿ ರಾಂಗ್ ಸೈಡ್ ನಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಎದುರುಗಡೆ ಗಣೇಶ್ ಎಂಬುವರು ಚಲಾಯಿಸಿಕೊಂಡು ಹೋಗುತ್ತಿದ್ದ KA-19-S-3916 ನೇ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದು ನಂತರ ಮುಂದಕ್ಕೆ ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದಿದ್ದರಿಂದ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದು, ಈ ಅಪಘಾತದ ಪರಿಣಾಮ ಪಿರ್ಯಾದಿದಾರರ ತಲೆಯ ಎಡ ಭಾಗಕ್ಕೆ ಗಾಯವಾಗಿದ್ದು, ಅಲ್ಲದೇ ಎಡ ಭುಜಕ್ಕೆ, ಸೊಂಟದ ಎಡ ಬದಿಗೆ ಗುದ್ದಿದ ಜಖಂ ಆಗಿದ್ದು, ಮೋಟಾರು ಸೈಕಲ್ ಸವಾರ ಗಣೇಶ್ ಮತ್ತು ಆಟೋ ರಿಕ್ಷಾದಲ್ಲಿದ್ದ ಹರೀಶ್ ಎಂಬುವರಿಗೂ ಗಾಯ ನೋವುಗಳಾಗಿದ್ದು, ಮೂಡಬಿದ್ರೆ ಸಮೂದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಹೆಚ್ಚಿನ ಚಿಕಿತ್ಸತೆಯ ಬಗ್ಗೆ ಗಾಯಾಳು ಹರೀಶ್ ರವರು ಕಾರ್ಕಳಕ್ಕೆ ಹಾಗೂ ಗಣೇಶ್ ರವರು ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.

 

Kankanady PS

 ಈ ಪ್ರಕರಣದ ಸಂಕ್ಷೀಪ್ತ ಸಾರಾಂಶವೇನೆಂದರೆ, ದಿನಾಂಕ: 01-02-2024 ರಂದು  ಬೆಳಿಗ್ಗೆ 11-40 ಗಂಟೆ ಸುಮಾರಿಗೆ ಪ್ರಕರಣದ ಪಿರ್ಯಾದಿ Rajesh K N ದಾರರು ಠಾಣಾ ಸಿಬ್ಬಂದಿಯೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ಖಾಸಗಿ  ಮೋಟಾರ್ ಸೈಕಲ್ ನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ, ಮಂಗಳೂರು ನಗರದ  ಎಕ್ಕೂರು ಮೈದಾನದ ಬಳಿ  ಮಾದಕ   ವಸ್ತು ಗಾಂಜಾವನ್ನು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಆರೋಪಿ ಅಬ್ಬುಸಾಲಿ, ಪ್ರಾಯ: 35 ವರ್ಷ  ಎಂಬಾತನನ್ನು, ಪಿರ್ಯಾದಿದಾರರು ಹಾಗೂ ಸಿಬ್ಬಂದಿ ಸೇರಿ  ಮದ್ಯಾಹ್ನ ವಶಕ್ಕೆ ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದವನನ್ನು, ಮಂಗಳೂರು ಎಜೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ, ಆರೋಪಿಯು ನಿಷೇದಿತ ಮಾದಕ ವಸ್ತು ಗಾಂಜಾ ಸೇವನೆ ನಡೆಸಿರುವುದು ದೃಢಪಟ್ಟಿರುವುದರಿಂದ ಆರೋಪಿಯ ವಿರುದ್ದ ಕಲಂ-27 (ಬಿ) ಎನ್.ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ  ದಾಖಲಿಸಿಕೊಂಡಿರುವುದಾಗಿದೆ.

 

 Kankanady PS

 ಈ ಪ್ರಕರಣದ ಸಂಕ್ಷೀಪ್ತ ಸಾರಾಂಶವೇನೆಂದರೆ, ದಿನಾಂಕ: 01-02-2024 ರಂದು  ಬೆಳಿಗ್ಗೆ 11-20 ಗಂಟೆ ಸುಮಾರಿಗೆ ಪ್ರಕರಣದ ಪಿರ್ಯಾದಿ Deepak ಇವರು ಠಾಣಾ ಸಿಬ್ಬಂದಿಯೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ಖಾಸಗಿ  ಮೋಟಾರ್ ಸೈಕಲ್ ನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ, ಮಂಗಳೂರು ನಗರದ ಕಣ್ಣೂರು ಬಸ್ ಸ್ಟ್ಯಾಂಡ್ ಬಳಿ ಮಾದಕ   ವಸ್ತು ಗಾಂಜಾವನ್ನು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಆರೋಪಿ, ಮಹಮ್ಮದ್ ನಿಝಾಮುದ್ದೀನ್ ಪ್ರಾಯ: 30 ವರ್ಷ  ಎಂಬಾತನನ್ನು, ಪಿರ್ಯಾದಿದಾರರು ಹಾಗೂ ಸಿಬ್ಬಂದಿ ಸೇರಿ  ಮದ್ಯಾಹ್ನ ವಶಕ್ಕೆ ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದವನನ್ನು, ಮಂಗಳೂರು ಎಜೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ, ಆರೋಪಿಯು ನಿಷೇದಿತ ಮಾದಕ ವಸ್ತು ಗಾಂಜಾ ಸೇವನೆ ನಡೆಸಿರುವುದು ದೃಢಪಟ್ಟಿರುವುದರಿಂದ ಆರೋಪಿಯ ವಿರುದ್ದ ಕಲಂ-27 (ಬಿ) ಎನ್.ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ  ದಾಖಲಿಸಿಕೊಂಡಿರುವುದಾಗಿದೆ.

 

Kankanady PS

 ಈ ಪ್ರಕರಣದ ಸಂಕ್ಷೀಪ್ತ ಸಾರಾಂಶವೇನೆಂದರೆ, ದಿನಾಂಕ: 01-02-2024 ರಂದು  ಬೆಳಿಗ್ಗೆ 11-20 ಗಂಟೆ ಸುಮಾರಿಗೆ ಪ್ರಕರಣದ ಪಿರ್ಯಾದಿ Kushal Hegde ಇವರು ಠಾಣಾ ಸಿಬ್ಬಂದಿಯೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ಖಾಸಗಿ  ಮೋಟಾರ್ ಸೈಕಲ್ ನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ, ಮಂಗಳೂರು ನಗರದ ಮರೋಳಿ ಕೆ.ಇ.ಬಿ ಬಳಿ ಮಾದಕ   ವಸ್ತು ಗಾಂಜಾವನ್ನು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಆರೋಪಿ, ಅಬ್ಬುಲ್ ಮುನಾಝ್ ಪ್ರಾಯ: 28 ವರ್ಷ  ಎಂಬಾತನನ್ನು, ಪಿರ್ಯಾದಿದಾರರು ಹಾಗೂ ಸಿಬ್ಬಂದಿ ಸೇರಿ  ಮದ್ಯಾಹ್ನ ವಶಕ್ಕೆ ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದವನನ್ನು, ಮಂಗಳೂರು ಎಜೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ, ಆರೋಪಿಯು ನಿಷೇದಿತ ಮಾದಕ ವಸ್ತು ಗಾಂಜಾ ಸೇವನೆ ನಡೆಸಿರುವುದು ದೃಢಪಟ್ಟಿರುವುದರಿಂದ ಆರೋಪಿಯ ವಿರುದ್ದ ಕಲಂ-27 (ಬಿ) ಎನ್.ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ  ದಾಖಲಿಸಿಕೊಂಡಿರುವುದಾಗಿದೆ.

ಇತ್ತೀಚಿನ ನವೀಕರಣ​ : 02-02-2024 09:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080