ಅಭಿಪ್ರಾಯ / ಸಲಹೆಗಳು

Crime Reported in : Panambur PS

ಪಿರ್ಯಾದಿ O K VAHAB ರವರಿಗೆ ಮುನೀಬ್  ಬೆಂಗ್ರೆ ಕಾರ್ಪೋರೇಟರ್  ಫೋನ್ ಕಾಲ್ ಮಾಡಿ ಕಸಬ ಬೆಂಗ್ರೆ ಪುಟ್ ಬಾಲ್ ಗ್ರೌಂಡ್ ಗೆ ಸಾಗರಾ ಮಾಲಾ ಕಾಮಗಾರಿಯ ಬಗ್ಗೆ ಮಾತನಾಡಲು ಇದೆ ಎಂದು ಪಿರ್ಯಾದಿದಾರರನ್ನು ಕರೆಯಿಸಿಕೊಂಡು ಮಾತನಾಡುವ ಸಮಯದಲ್ಲಿ ಮುನೀಬ್ ಬೆಂಗ್ರೆಯ ಕುಮ್ಮಕ್ಕಿನಿಂದ  ಇಮ್ರಾನ್ ಚಾಚಾ ಮತ್ತು ನೌರಿನ್ ಎಂಬಾತರು ಸೇರಿಕೊಂಡು ಕೀ ಬೆಂಚ್ ನಿಂದ ಎದೆಗೆ ಚುಚ್ಚಿದ್ದು ಹಾಗೂ ಮರದ ರೀಪರ್ ನಲ್ಲಿ ಸರಿಯಾಗಿ ಹೊಡೆದು ಜೀವ ಬೆದರಿಕೆ ಹಾಕಿರುತ್ತಾರೆ,  ಗಾಯಗೊಂಡ ಪಿರ್ಯಾದಿದಾರರು ತದನಂತರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಹೋಗಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ಠಾಣೆಗೆ ಬಂದು  ಪಿರ್ಯಾದಿಯನ್ನು ನೀಡಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ.

Crime Reported in : Traffic South Police Station                                                            

ಪಿರ್ಯಾದಿ ವಿರೇಶ್ ಬಿ ಎಮ್ ರವರು ದಿನಾಂಕ: 26-02-2023 ರಂದು ಅವರು ಅಡ್ಯಾರ್ ಕಟ್ಟೆ ಬಳಿ ಇರುವ ಹೋಟೆಲ್ ಒಂದಕ್ಕೆ ಹೋಗಿ ಅಲ್ಲಿ ಊಟ ಮುಗಿಸಿಕೊಂಡು ವಾಪಾಸ್ಸು ಅವರ ಕೆಲಸದ ವರ್ಕ್ ಶಾಪ್ ಕಡೆಗೆ ಬಿಸಿ ರೋಡ್ ಕಡೆಯಿಂದ ಮಂಗಳೂರು ಕಡೆಗೆ ಹಾದು ಹೋಗಿರುವ ರಾ.ಹೆ-73 ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಸಮಯ ಸುಮಾರು ರಾತ್ರಿ 10-00 ಗಂಟೆಗೆ ಅಡ್ಯಾರ್ ನ ಬರಕ ಶಾಲೆಗಿಂತ ಸ್ವಲ್ಪ ಮುಂದೆ ಅಂದರೆ ಅಡ್ಯಾರಿನ ಅತುಲ್ ಆಟೋ ಗ್ಯಾರೇಜ್ ನ ಹತ್ತಿರ ತಲುಪಿದಾಗ ಪಿರ್ಯಾದಿದಾರರ ಎದುರಿನಿಂದ ಅಂದರೆ ಬಿಸಿ ರೋಡ್ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬಸ್ಸು ನಂಬ್ರ:KA-19-D-4505 ನೇದನ್ನು ಅದರ ಚಾಲಕ ಮಧುಸೂದನ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರ ಎಡಬದಿಗೆ ಚಲಾಯಿಸಿಕೊಂಡು ಬಂದು ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ಮಣ್ಣು ರಸ್ತೆಗೆ ಬಿದ್ದು ಪಿರ್ಯಾದಿದಾರರ ಹಣೆಯ ಮಧ್ಯ ಭಾಗಕ್ಕೆ ಗಂಭೀರ ರಕ್ತ ಗಾಯ ,ತಲೆಯ ಮುಂಭಾಗದ ಎಡಭಾಗಕ್ಕೆ ರಕ್ತಗಾಯ ಹಾಗೂ ಎಡಕಣ್ಣಿಗೆ ಗುದ್ದಿದ ಗಾಯವಾಗಿದ್ದ ಅವರನ್ನು ಅಲ್ಲಿ ಸೇರಿದ ಜನರು ಹಾಗೂ ಬಸ್ಸಿನ ಚಾಲಕ ಪಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಅಲ್ಲದೇ ಆರೋಪಿಯ ಅಪಘಾತದ ಬಗ್ಗೆ ಪೊಲೀಸ್ ರಿಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ ಎಂಬಿತ್ಯಾದಿ

Crime Reported in : Ullal PS

ಪಿರ್ಯಾದಿ Fanseem Hameed ತಂದೆ ಹಮೀದ್ ರವರ ಹೆಸರಿನಲ್ಲಿ ನೊಂದಣಿಯಾದ ಕೆಎಲ್ 71 ಸಿ 7134 ನೇ ನಂಬ್ರದ ರಾಯಲ್ ಎನ್ ಫೀಲ್ಡ್  ಕಂಪೆನಿಯ ಹಿಮಾಲಯನ್ ಮೋಟಾರು ಬೈಕ್ ನ್ನು ಉಪಯೋಗ ಮಾಡಿಕೊಂಡಿದ್ದು, ದಿನಾಂಕ:24-02-2023 ರಂದು ಸಂಜೆ 3-00 ಗಂಟೆಗೆ ಪಿರ್ಯಾದಿದಾರರು ಡ್ಯೂಟಿ ಮುಗಿಸಿ ಮೋಟಾರು ಬೈಕ್ ನ್ನು ಯೆನೆಪೋಯಾ ಆಸ್ಪತ್ರೆಯ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿದ್ದು, ದಿನಾಂಕ:25-02-2023 ರಂದು ಸಂಜೆ 3-00 ಗಂಟೆಗೆ ಪಿರ್ಯಾದಿದಾರರ ಪಾರ್ಕಿಂಗ್ ಮಾಡಿದ ಸ್ಥಳದಲ್ಲಿ ಮೋಟಾರು ಬೈಕ್ ನ್ನು ನೋಡಿದಾಗ ಕಾಣಿಸದೇ ಇದ್ದು, ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಈವರೆಗೂ ಪತ್ತೆಯಾಗದೇ ಇರುವುದರಿಂದ ಯಾರೋ ಕಳ್ಳರು ಕೆಎಲ್ 71 ಸಿ 7134 ನೇ ನಂಬ್ರದ ರಾಯಲ್ ಎನ್ ಫೀಲ್ಡ್  ಕಂಪೆನಿಯ ಹಿಮಾಲಯನ್ ಮೋಟಾರು ಬೈಕ್ ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರು ಬೈಕ್ ನ್ನು ಪತ್ತೆ ಮಾಡಿಕೊಡಬೇಕಾಗಿ  ನೀಡಿದ ಪಿರ್ಯಾದಿ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 01-03-2023 07:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080