ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ

CEN Crime PS

ಈ ದಿನ ದಿನಾಂಕ 01-03-2024 ರಂದು  ಪಿರ್ಯಾದಿ Dr LEKSHMI R SURESH ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:29-02-2024 ರಂದು ಯಾರೋ ಅಪರಿಚಿತ ವ್ಯಕ್ತಿ ಪಿರ್ಯಾದುದಾರರಿಗೆ ದೂರವಾಣಿ ಸಂಖ್ಯೆ ಗೆ 8194438065 ನೇದರಿಂದ ಕರೆ ಮಾಡಿ ಪಿರ್ಯಾದುದಾರರ  ಆಧಾರ್ ನಂಬ್ರ ನೇದರಿಂದ ಖರೀದಿಸಿದ ದೂರವಾಣಿ ಸಂಖ್ಯೆಯಿಂದ ಕಾನೂನು ಬಾಹಿರ ಸಂದೇಶಗಳು ಮತ್ತು ಜಾಹೀರಾತುಗಳನ್ನು ಕಳುಹಿಸಲಾಗಿದೆ ಆದ ಕಾರಣ ಪಿರ್ಯಾದುದಾರರ ಮೇಲೆ FIR areest warrent ಇರುವುದಾಗಿ ಯಾರೋ ಅಪರಿಚಿತ ವ್ಯಕ್ತಿ ತಿಳಿಸಿ ನಂತರ ಪಿರ್ಯಾದುದಾರರಿಗೆ ಅರೆಸ್ಟ್ ಮಾಡುವುದಾಗಿ ಇಲ್ಲವಾದಲ್ಲಿ 10 ಲಕ್ಷ ಹಣ ಸೆಕ್ಯೂರಿಟಿ ಆಗಿ ಡೆಪಾಸಿಟ್ ಮಾಡುವಂತೆ ತಿಳಿಸದಂತೆ ಪಿರ್ಯಾದುದಾರರು ಇದನ್ನು ಸತ್ಯವೆಂದು ಭಾವಿಸಿ ತಮ್ಮ UNION BANK ಮತ್ತು FEDERAL BANK ನೇದರಿಂದ ಕ್ರಮವಾಗಿ 5 ಲಕ್ಷ ರೂ ನಂತೆ ಅಪರಿಚಿತ ವ್ಯಕ್ತಿ ನೀಡಿದ AU SMALL FINANCE BANK A/C NO-2402220256528311, IFSC CODE:AUBL0002202 ಮತ್ತು PUNJAB NATIONAL BANK/C NO-9620002100000015, IFSC CODE:PUNB0962000 ನೇದಕ್ಕೆ ಕ್ರಮವಾಗಿ 5 ಲಕ್ಷರಂತೆ ಒಟ್ಟು 10 ಲಕ್ಷ ರೂಗಳನ್ನು ದಿನಾಂಕ 29-02-2024 ರಂದು ವರ್ಗಾಯಿಸಿರುತ್ತಾರೆ.ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿ ದೂರವಾಣಿ ಕರೆ ಮಾಡಿ ತಾನು ಸಿಬಿಐ ಪೊಲಿಸ್ ಎಂಬ ಹೆಸರಿನಲ್ಲಿ ಪಿರ್ಯಾದುದಾರರಿಗೆ ಆನ್ ಲೈನ್ ಮೋಸ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ

 

Urva PS

ಈ ಪ್ರಕರಣದ ಸಾರಾಂಶವೇನೆಂದರೆ ಠಾಣಾ ಪೊಲೀಸ್ ಉಪ-ನಿರೀಕ್ಷಕರಾದ ಶ್ರೀಮತಿ ಅನಿತ ಹೆಚ್ ಬಿ ರವರು ತಮ್ಮ ಸಿಬ್ಬಂದಿಯವರೊಂದಿಗೆ ವಿಶೇಷ ಕರ್ತವ್ಯದಲ್ಲಿ ಠಾಣಾ ವ್ಯಾಪ್ತಿಯ ಬಿಜೈ ಕೆ ಎಂ ಸಿ ಕಡೆಗೆ ರೌಂಡ್ಸ್ಹಹೋಗುತ್ತಿರುವಾಗ ಸಾರ್ವಜನಿಕ ರಸ್ತೆ ಬದಿಯಲ್ಲಿ ಶಮಂತ್,(24) ,ತಂದೆ: ಸುರೇಶ್ , ವಾಸ: ಶಿವಳ್ಳಿ ದುದ್ದಾ ಹೋಬಳಿ ಮಂಡ್ಯಾ ತಾಲೂಕು ಎಂಬಾತನು ಸೀಗರೇಟ್ ಸೇದುತ್ತಾ ನಿಂತಿದ್ದು,  ರೌಂಡ್ಸ್ ಕರ್ತವ್ಯದಲ್ಲಿರುವವರನ್ನು ನೋಡಿ ಕೈಯಲಿದ್ದ ಸಿಗರೇಟ್ ಬಿಸಾಡಿದ್ದರಿಂದ ಸಂಶಯಗೊಂಡು ವಿಚಾರಿಸಲಾಗಿ ಈತನ ಬಾಯಿಂದ ಗಾಂಜಾ ಸೇವನೆ ಮಾಡಿದ ವಾಸನೆ ಬರುತ್ತಿದ್ದುದರಿಂದ ಮುಂದಿನ ಕ್ರಮದ ಬಗ್ಗೆ ಎ ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಲ್ಲಿ ಈತನನ್ನು ತಪಾಸಣೆಗೆ ಒಳಪಡಿಸಿದ ವೈದ್ಯರು ಈತನು ಗಾಂಜ ಸೇವನೆ ಮಾಡಿರುವುದಾಗಿ ದೃಢಪಡಿಸಿ ವರದಿ ನೀಡಿರುವುದಾಗಿದೆ ಎಂಬಿತ್ಯಾದಿ

 

Traffic South Police Station                                 

ದಿನಾಂಕ:29-02-2024 ರಂದು ರಾತ್ರಿ  ಪಿರ್ಯಾದಿ AKASH BHAT  ಇವರು  ತಂದೆಯವರಾದ ಭಾಸ್ಕರ್ ಭಟ್  ರವರು ನಾಟೆಕಲ್  ಸುಧಾ ಕ್ಲಿನಿಕ್  ಕಡೆಯಿಂದ ನಾಟೆಕಲ್ ಆಟೋರೀಕ್ಷಾ ನಿಲ್ದಾಣದ ಕಡೆಗೆ  ಹೋಗುವರೇ  ರಸ್ತೆ ಮಧ್ಯದ ರಿವೈಡರ್  ಕಡೆಯಿಂದ   ಸಾರ್ವಜನಿಕ ರಸ್ತೆಯನ್ನು ದಾಟುತ್ತಿರುವಾಗ ಸಮಯ ಸುಮಾರು  ರಾತ್ರಿ 10.00 ಗಂಟೆಗೆ ಕೊಣಾಜೆ ಕಡೆಯಿಂದ ದೇರಳಕಟ್ಟೆ ಕಡೆಗೆ KA-19-HN-6883 ನೇ ನಂಬ್ರದ ಮೋಟಾರು ಸೈಕಲ್  ನಲ್ಲಿ ಅದರ ಸವಾರ ಅಫ್ವಾನ್ ಎಂಬಾತನು  ಸಹಸವಾರನನ್ನಾಗಿ  ಆತಿಫ್(17) ರವರನ್ನು ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ತಂದೆಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ತಂದೆ, ಮೋಟಾರು ಸೈಕಲ್  ಸವಾರ ಮತ್ತು ಸಹಸವಾರ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ  ಪಿರ್ಯಾದಿದಾರರ ತಂದೆಯ ಬಲಕೊಲುಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು ಬಲಕೋಲು ಕೈಗೆ, ಮುಖಕ್ಕೆ ತರಚಿದ ರಕ್ತಗಾಯ ಎಡಭುಜಕಕ್ಕೆ ಗುದ್ದಿದ ಗಾಯವಾಗಿರುತ್ತದೆಮೋಟಾರು ಸೈಕಲ್ ಸಹಸವಾರನಿಗೆ ಮೂಗಿನ ಮೇಲೆ ಮತ್ತು ತಲೆಯ ಎಡಭಾಗದಲ್ಲಿ ತರುಚಿದ ರಕ್ತ ಗಾಯವಾಗಿರುತ್ತದೆ.. ಗಾಯಾಳುಗಳನ್ನು  ಸಾರ್ವಜನಿಕರು  ಉಪಚರಿಸಿ  ಕಣಚೂರು ಆಸ್ಪತ್ರೆಗೆ ಕಳುಹಿಸಿದ ಮೇರೆಗೆ ಪ್ರಥಮ ಚಿಕಿತ್ಸೆ ಪಡೆದು  ಬಳಿಕ ಗಾಯಾಳುಗಳು ಹೆಚ್ಚಿನ ಚಿಕಿತ್ಸೆಗೆ  ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಕೆರೆದುಕೊಂಡು ಹೋದಲ್ಲಿ ಪಿರ್ಯಾದಿದಾರರ ತಂದೆಯನ್ನು  ಒಳರೊಗಿಯಾಗಿ ದಾಖಲಿಸಿದ್ದು  ಸಹಸವಾರನಿಗೆ ಹೊರರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ ಎಂಬಿತ್ಯಾದಿ

 

Mangalore East PS

ಈ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿ JAGAT CHAUDHARY ಇವರ ದಾರರು ತನ್ನ ಹೆಂಡತಿ ಆಶಾ ಚೌದರಿ ಪ್ರಾಯ 25 ವರ್ಷ,  ರವರೊಂದಿಗೆ ವಾಸ ಮಾಡಿಕೊಂಡಿದ್ದು  ಹೆಂಡತಿಯು ಸುದೀರ್ ಎಲ್ ಕದ್ರಿ ಎಂಬುವವರ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡಿದ್ದು ದಿನಾಂಕ 29-02-2024 ರಂದು ಬೆಳಿಗ್ಗೆ ಸುಮಾರು 09.00 ಗಂಟೆಗೆ ಮನೆಯಿಂದ ಕೆಲಸಕ್ಕೆಂದು ಹೋಗಿದ್ದು ಪಿರ್ಯಾದುದಾರರು ಸುಮಾರು 11:00 ಗಂಟೆಗೆ  ತನ್ನ ಹೆಂಡತಿ ಮೊಬೈಲ್ ನಂಬರ್ ಗೆ ಕರೆ ಮಾಡಲಾಗಿ ಮೊಬೈಲ್ ಸ್ವಿಚ್ ಆಫ್ ಆಗಿದ್ದು ನಂತರ ಪಿರ್ಯಾದುದಾರರು ಆಕೆ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋಗಿ ಅಲ್ಲಿನ ಸೆಕ್ಯೂರಿಟಿಯನ್ನು  ವಿಚಾರಿಸಲಾಗಿ  ಕೆಲಸಕ್ಕೆ ಬಂದಿರುವುದಿಲ್ಲ ಎಂದು ತಿಳಿಸಿರುತ್ತಾರೆನಂತರ ವಾಪಾಸ್ಸು ವಾಸವಿದ್ದ ಮನೆಗೆ ಬಂದು ನೋಡಲಾಗಿ ಅಲ್ಲಿಯು ಪಿರ್ಯಾದುದಾರರ ಹೆಂಡತಿ ಮನೆಗೆ ಬಂದಿಲ್ಲವಾಗಿದ್ದು ನಂತರ ಸುತ್ತಮುತ್ತ  ಎಲ್ಲಾ ಕಡೆ ಹುಡುಕಾಡಿ ಸಂಬಂಧಿಕರ ಮನೆಯಲ್ಲಿ ವಿಚಾರಿಸಿದರೂ ಪತ್ತೆಯಾಗದ ಕಾರಣ, ಕಾಣೆಯಾದ ಅರ್ಜಿದಾರರ ಹೆಂಡತಿಯನ್ನು ಪತ್ತೆ ಮಾಡಿಕೊಡಬೇಕಾಗಿ ಎಂಬಿತ್ಯಾದಿ

 

Mangalore South PS

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ಹರೇಂದ್ರ ರಾಮ್ (43) ರವರ ಜೊತೆ ಕೆಲಸ ಮಾಡಿಕೊಂಡಿದ್ದ ಧನ್ ಜಯ ಪಾಸ್ವಾನ್   (26) ರವರು ಮೂಡಬಿದ್ರೆ ಹತ್ತಿರ  ಇರುವ ಐಡಿಯಲ್ ಫ್ಯಾಕ್ಟರಿಯಲ್ಲಿ  ಲೊಡ್ ಆನ್ ಲೋಡ್  ಕೆಲಸ ಮಾಡಿಕೊಂಡಿರುತ್ತಾರೆ, ದಿನಾಂಕ:25-02-2024 ರಂದು ಸ್ಮೆಹಿತರೊಡನೆ ಸುತ್ತಾಡಲು ಮೂಡಬಿದ್ರೆಯಿಂದ ಮಂಗಳೂರು ನಗರದ   ಸ್ಟೇಟ್ ಬ್ಯಾಂಕ್ ಬಳಿ ಸಮಯ  13.30 ಗಂಟೆಗೆ ಬಂದು ಇಳಿದು ಮಾರ್ಕೆಟ್ ಕಡೆಗೆ ಹೋಗುವಾಗ ಯಾರಿಗು ಕಾಣದೆ ನಾಪತ್ತೆಯಾಗಿದ್ದು ತದ ನಂತರ ಮೂಡಬಿದ್ರೆಯಲ್ಲಿರುವ  ಮನೆಗೂ ಬಾರದೇ ಇರುವುದರಿಂದ, ಫಿರ್ಯಾದಿದಾರು ಧನ್ ಜಯ ಪಾಸ್ವಾನ್  (26) ರವರ ಬಗ್ಗೆ ತಂದೆ ತಾಯಿ ಹಾಗೂ ನೆರೆಕೆರೆಯವರಲ್ಲಿ ವಿಚಾರಿಸಲಾಗಿ, ಯಾವುದೇ ಮಾಹಿತಿ ದೊರೆತಿರುವುದಿಲ್ಲ. ನಂತರ ಮಂಗಳೂರು ಮತ್ತು  ಮೂಡಬಿದ್ರೆ ನಗರದಲ್ಲಿ ಹುಡುಕಾಡಿದ್ದು ಈ ವರೆಗೂ ಪತ್ತೆಯಾಗಿರುವುದಿಲ್ಲ, ಕಾಣೆಯಾದ ಧನ್ ಜಯ ಪಾಸ್ವಾನ್   (26) ರವರನ್ನು ಪತ್ತೆ ಮಾಡಿಕೊಡಬೇಕಾಗಿ ಎಂಬಿತ್ಯಾದಿ ಫಿರ್ಯಾದಿಯ ಸಾರಾಂಶವಾಗಿರುತ್ತದೆ

ಇತ್ತೀಚಿನ ನವೀಕರಣ​ : 01-03-2024 11:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080