ಅಭಿಪ್ರಾಯ / ಸಲಹೆಗಳು

Urva PS

ಪಿರ್ಯಾದಿ JYOTSNA GOUTAM KAMBLEದಾರರ ಪತಿ ಡಾಕ್ಟರ್ ಗೌತಮ್ ಬಿ. ಕಾಂಬ್ಲೆ ಎಂಬವರು ದಿನಾಂಕ 30-03-2023 ರಂದು ಬೆಳಿಗ್ಗೆ 07:30 ಗಂಟೆಗೆ ಮನೆಯಿಂದ ಕೆಎ19-ಎಮ್ಇ-9793 ಸಿಲ್ವರ್ ಕಲರ್ i20 ಕಾರಿನಲ್ಲಿ ಅವರು ಸಹಾಯಕ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದ ದೇರಳಕಟ್ಟೆ ಕಾಲೇಜಿಗೆ ಹೋದವರು ಮೊಬೈಲ್ ಸ್ವಿಚ್ ಆಫ್ ಮಾಡಿ ಈವರೆಗೆ ಮನೆಗೆ ವಾಪಸ್ಸು ಬಾರದೆ ಕಾಣೆ ಆಗಿರುತ್ತಾರೆ ಎಂಬಿತ್ಯಾದಿ.

ಕಾಣೆಯಾದವರ ವಿವರ: ಹೆಸರು: ಗೌತಮ್ ಬಿ. ಕಾಂಬ್ಲೆ, ಪ್ರಾಯ: 32 ವರ್ಷ,  5.4 ಅಡಿ ಎತ್ತರ, ಗೋಧಿ ಮೈ ಬಣ್ಣ ಹೊಂದಿದ್ದು, ಅವರಿಗೆ ಕನ್ನಡ, ಕನ್ನಡ, ಇಂಗ್ಲೀಷ್, ಮರಾಠಿ, ಹಿಂದಿ ಮತ್ತು ತುಳು ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ತುಂಬು ತೋಳಿನ ಕಪ್ಪು ಬಣ್ಣದ ಶರ್ಟ್ ಹಾಗೂ ಬಿಳಿ ಬಣ್ಣದ ಫ್ಯಾಂಟ್ ಧರಿಸಿರುತ್ತಾರೆ.

Traffic South Police Station

ಪಿರ್ಯಾದಿ LEENA SARITA KUTINHA ದಾರರು  ದಿನಾಂಕ 31-03-2023 ರಂದು ಅವರ ಬಾಬ್ತು  ಕಾರು ನಂಬ್ರ  KA 51 MF 8451  ನೇದನ್ನು ರಾ.ಹೆ 169ರಲ್ಲಿ ಕುಲಶೇಖರ ಕಡೆಯಿಂದ ಬೈತುರ್ಲಿ  ಕಡೆಗೆ ಚಲಾಯಿಸಿ ಕೊಂಡು ಹೋಗುತ್ತಾ ಸಮಯ ಸುಮಾರು ಮಧ್ಯಾಹ್ನ 12-00 ಗಂಟೆಗೆ ಕುಲಶೇಖರದಿಂದ ಸ್ವಲ್ಪ ಮುಂದೆ ತಿರುವು ಡಾಮಾರು ರಸ್ತೆಯಲ್ಲಿ ತಲುಪಿದಾಗ ಪಿರ್ಯಾದಿದಾರ ಹಿಂದಿನಿಂದ ಅಂದರೆ ಬಿರ್ಕನಕಟ್ಟೆಯಿಂದ ವಾಮಂಜೂರು ಕಡೆಗೆ ಬರುತ್ತಿದ್ದ KA-19-AA-0674 ನಂಬರಿನ ಸುನೀಲ್ ಎಂಬ ಹೆಸರಿನ ಬಸ್ಸನ್ನು ಅದರ  ಚಾಲಕ ಅಸೀಪ್  ಸಾಹೇಬ್ ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರ ಕಾರನ್ನು  ಓವರ್ ಟೇಕ್ ಮಾಡುತ್ತಾ ಪಿರ್ಯಾದಿದಾರರ ಕಾರಿನ  ಮುಂದಿನ ಬಲಬದಿಗೆ ಬಸ್ಸಿನ ಎಡಭಾಗ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಕಾರಿನ ಮುಂಬಾಗ ಮತ್ತು ಮುಂದಿನ ಬಲಬದಿ ಜಖಂಗೊಂಡಿರುತ್ತದೆ.ಈ ಅಪಘಾತದಿಂದ ಯಾವುದೇ ಗಾಯಗಳಾಗಿರುವುದಿಲ್ಲ ಎಂಬಿತ್ಯಾದಿ.

Konaje PS

ಪಿರ್ಯಾದಿ Krushna K H ದಾರರು ದಿನಾಂಕ 31.03.2023 ರಂದು ಉಳ್ಳಾಲ ತಾಲೂಕು ಬಾಳೆಪುಣಿ ಗ್ರಾಮದ ನಂದರಪಡ್ಪು ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಸಿಬ್ಬಂದಿಗಳೊಂದಿಗೆ ವಾಹನ ತಪಾಸಣೆ ನಡೆಸುತ್ತಿದ್ದಾಗ ಸಮಯ ಸುಮಾರು 23-30 ಗಂಟೆಗೆ ಕೆಎಲ್14 ಆರ್ 1940 ನೇ ನಂಬ್ರದ ಕೆಂಪು ಬಣ್ಣದ ಆಲ್ಟೋ ಕಾರು ಬಂದಿದ್ದು, ಪಿರ್ಯಾದಿದಾರರು ಚಾಲಕನ ಹೆಸರು ವಿಳಾಸ ಕೇಳಿದಾಗ ಆತನು ತಡವರಿಸಿದ್ದು, ಕಾರಿನಲ್ಲಿ ಏನಿದೆ ಎಂದು ಕೇಳಿದಾಗ ಮದ್ಯಪಾನದ ಬಾಟಲಿಗಳು ಇದೆ ಹಾಗೂ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯವನ್ನು ಕಾರಿನಲ್ಲಿ ತೊಕ್ಕೊಟ್ಟಿನ ಹೈ ಸ್ಪಿರೀಟ್ ಅಂಗಡಿಯಿಂದ ತೆಗೆದುಕೊಂಡು ಮಾರಾಟಕ್ಕಾಗಿ ಕೇರಳದ ಉಪ್ಪಳದ  ಕಡೆಗೆ  ಹೋಗುತ್ತಿರುವುದಾಗಿ ತಿಳಿಸಿದ್ದು,  ಕಾರಿನ ಹಿಂಬದಿಯ ಸೀಟ್ ನ್ನು ಪರಿಶೀಲಿಸಲಾಗಿ ಒಟ್ಟು 20 ರಟ್ಟಿನ ಬಾಕ್ಸ್ ಗಳಿದ್ದು, ಅದರಲ್ಲಿ ಒಟ್ಟು 66,806.64 ರೂಪಾಯಿ ಮೌಲ್ಯದ  ಒಟ್ಟು 178800 ಮಿಲಿ ಲೀಟರ್ ಮದ್ಯವಿದ್ದು, ಮಹಜರು ಮುಖೇನ ಕೆಎಲ್14 ಆರ್ 1940 ನೇ ನಂಬ್ರದ ಕೆಂಪು ಬಣ್ಣದ ಆಲ್ಟೋ ಕಾರು ಅಂದಾಜು ಮೌಲ್ಯ 2 ಲಕ್ಷ ರೂಪಾಯಿ ಹಾಗೂ 66,806.64 ರೂಪಾಯಿ ಮೌಲ್ಯದ  ಒಟ್ಟು 178.800 ಮಿಲಿ ಲೀಟರ್ ಮದ್ಯವನ್ನು ಸ್ವಾಧೀನ ಪಡಿಸಿಕೊಂಡು, ಅರೋಪಿಗಳನ್ನು ವಶಕ್ಕೆ ಪಡೆದು ಆರೋಪಿಗಳು ಹಾಗೂ ಸೊತ್ತಿನೊಂದಿಗೆ ಕೊಣಾಜೆ ಠಾಣೆಗೆ ಬಂದು ಆರೋಪಿಗಳಾದ ಪುರುಷೋತ್ತಮ ಮತ್ತು ಅವಿನಾಶ್ ಓ ಎಂಬವರುಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

Mangalore East Traffic PS                

ಪಿರ್ಯಾದಿದಾರರು ದಿನಾಂಕ: 31/03/2023 ರಂದು ಮೇಲಾಧಿಕಾರಿಗಳ ಆದೇಶದಂತೆ ಬೆಂದೂರುವೆಲ್ ಜಂಕ್ಷನ್ನಿನಲ್ಲಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ವೇಳೆ ಬೆಳಿಗ್ಗೆ ಸಮಯ ಸುಮಾರು 11-00 ಗಂಟೆಗೆ ಬಲ್ಮಠ ಕಡೆಯಿಂದ ಬಂದ ಬಸ್ ನೊಂದಣಿ ಸಂಖ್ಯೆ: KA-19-D-9261 ನೇಯದನ್ನು ಅದರ ಚಾಲಕ ಎ.ಕೆ ಇಸ್ಮಾಯಿಲ್ ಎಂಬಾತನು ಬಲ್ಮಠ ಕಡೆಯಿಂದ ಬಂದು ಬೆಂದೂರವೆಲ್ ಜಂಕ್ಷನ್ನಿನಲ್ಲಿ ಸಾರ್ವಜನಿಕರಿಗೆ ಹಾಗೂ ಸಾರ್ವಜನಿಕರ ವಾಹನಗಳ ಸುಗಮ ಸಂಚಾರಕ್ಕೆ ತಡೆಯುಂಟು ಮಾಡಿ ಅಪಾಯಕಾರಿಯಾದ ರೀತಿಯಲ್ಲಿ ನಿಲ್ಲಿಸಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿಕೆ. ಎಂಬಿತ್ಯಾದಿ.

Moodabidre PS

 ದಿನಾಂಕ 31.03.2023 ರಂದು ಪಿರ್ಯಾಧಿ Sangamesha ದಾರರು ಸಾಯಂಕಾಲ ಕೆಲಸ ಮುಗಿಸಿ ಮನೆ ಸಾಮಾನು ಖರೀದಿಸಲು ಬೆಳುವಾಯಿಗೆ ಹೋಗಿದ್ದು, ಸಮಯ ಸುಮಾರು 8.30 ಗಂಟೆಗೆ ಪಿರ್ಯಾದುದಾರರ ಜೊತೆಯಿದ್ದ ಶಿವಾನಂದ ಎಂಬುವರಿಗೆ ಫೋನ್ ಕರೆ ಬಂದಿದ್ದು, ಮುತ್ತಪ್ಪ ಎಂಬುವರು ಬೈಕ್ ನಲ್ಲಿ ಬಿದ್ದು ಗಂಬೀರ ಸ್ಥಿತಿಯಲಿರುವುದಾಗಿ ತಿಳಿಸಿರುತ್ತಾರೆ. ಪಕ್ಕದಲ್ಲಿದ್ದ ಪಿರ್ಯಾದುದಾರರು ವಿಷಯ ತಿಳಿದು ಸ್ಥಳಕ್ಕೆ ಬಂದು ನೋಡಲಾಗಿ ಪಿರ್ಯಾದುದಾರರ ಅಳಿಯ ಮುತ್ತಪ್ಪ ಎಂಬುವರು ಕೆಸರುಗದ್ದೆಯ ಮಂಜನಕಟ್ಟೆ ಎಂಬಲ್ಲಿ ಸಮಯ ರಾತ್ರಿ 8.30 ರ ಸುಮಾರಿಗೆ ಬೈಕ್ ನ್ನು ಕಲ್ಲು ಕಂಬಕ್ಕೆ  ಡಿಕ್ಕಿಪಡಿಸಿ ಬಿದ್ದು ಗಾಯಗೊಂಡವರನ್ನು ಸ್ಥಳೀಯರ ಸಹಾಯದಿಂದ ಚಿಕಿತ್ಸೆಗಾಗಿ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿದ್ದು, ಗಾಯಳು ಮುತ್ತಪ್ಪನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಅಪಘಾತವು KA-19-EG-5784 ನಂಬರಿನ ಬೈಕ್ ಸವಾರನಾದ ಮುತ್ತಪ್ಪನ ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದ ಆಗಿರುವುದಾಗಿದೆ ಎಂಬಿತ್ಯಾದಿ.

Ullal PS

ದಿನಾಂಕ 28-03-2023 ರಂದು00.30 ಗಂಟೆಗೆ Rajesh N ತನ್ನ ಬಾಬ್ತು KA19HJ1109  ನೇ ನಂಬ್ರದ ಹೀರೋ ಸ್ಲೆಂಡರ್ ಮೋಟರ್ ಸೈಕಲ್ ನ್ನು ಕೋಟೆಕಾರ್ ಕೊರಗಜ್ಜನ ಕಟ್ಟೆಯ ಬಳಿಯಲ್ಲಿ ಪಾರ್ಕ ಮಾಡಿ ಕಟ್ಟೆಯ ಹಿಂಬದಿಯಲ್ಲಿರುವ ಪಿರ್ಯದಿದಾರರು ಕೆಲಸ ಮಾಡುವ ರಾಜೇಶ್ ಪೊಜಾರಿ ಯವರ ವಿನಾಯಕ ಎಲೆಕ್ಟ್ರೀಷಿಯನ್ ಅಂಗಡಿಯಲ್ಲಿ ಮಲಗಿ ದಿನಾಂಕ 28-03-2023 ರಂದು ಬೆಳ್ಳಿಗ್ಗೆ 8.00 ಗಂಟೆಗೆ ಮನೆಗೆ ತೆರಳಲೆಂದು ಮೋಟಾರ್ ಸೈಕಲ್ ನಿಲ್ಲಿಸಿದ್ದ ಜಾಗಕ್ಕೆ ಹೋಗಿ ನೋಡಿದಾಗ ಮೋಟರ್ ಸೈಕಲ್ ಕಾಣೆಯಾಗಿದ್ದು  ಸದ್ರಿ ಮೋಟಾರ್ ಸೈಕಲ್ ನ್ನು ಎಲ್ಲಾ ಕಡೆ ಹುಡುಕಾಡಿದ್ದು ಪತ್ತೆ ಯಾಗದೇ ಇದ್ದು ಈ ಮೋಟರ್ ಸೈಕಲ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡಿರುವುದಾಗಿ ಪಿರ್ಯದಿದಾರರ ಸಾರಂಶ.

ಇತ್ತೀಚಿನ ನವೀಕರಣ​ : 21-08-2023 12:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080