ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Mangalore East Traffic PS                          

ಪಿರ್ಯಾದಿದಾರರಾದ ಮಂಜುನಾಥ ಕಾಮತ್ ರವರು ಈ ದಿನ ದಿನಾಂಕ: 01-04-2024 ರಂದು ತನ್ನ ಬಾಬ್ತು KA-19-V-5001 ನಂಬ್ರದ ಸ್ಕೂಟರನ್ನು ಕಾರ್ ಸ್ಟೀಟ್ ನಿಂದ  ಕೊಂಚಾಡಿ ದೇವಸ್ಥಾನಕ್ಕೆ ಹೂವು ನೀಡುವ ಬಗ್ಗೆ ಕೆಪಿಟಿ ಜಂಕ್ಷನ್ ಮೂಲಕ ಚಲಾಯಿಸಿಕೊಂಡು ಹೋಗುತ್ತಾ ಬೆಳಿಗ್ಗೆ 08:50 ಗಂಟೆಗೆ ಯೆಯ್ಯಾಡಿ ಜಂಕ್ಷನಿನ ತೆರದ ಡಿವೈಡರ್ ಬಳಿ ತಲುಪುತ್ತಿದ್ದಂತೆ  ಮೇರಿಹಿಲ್ ಕಡೆಯಿಂದ ಬಂದ KA-19-MG-0246  ನಂಬ್ರದ ಕಾರನ್ನು ಅದರ ಚಾಲಕಿಯಾದ ಶ್ರೀಮತಿ ಪ್ರಸೀತಾ ಪ್ರದೀಪ್ ಕುಮಾರ್ ಎಂಬವರು ತೆರೆದ ಡಿವೈಡರಿನಲ್ಲಿ  ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಲಬದಿಗೆ ತಿರುಗಿಸಿ ಕೊಂಚಾಡಿ ಕಡೆಗೆ ಹೋಗುತ್ತಿದ್ದ ಪಿರ್ಯಾದಿದಾರರ ಸ್ಕೂಟರಿನ ಹಿಂದಿನ ಬಲಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ  ಪಿರ್ಯಾದಿದಾರರು ತನ್ನ ಸ್ಕೂಟರಿನ ನಿಯಂತ್ರಣ ತಪ್ಪಿ ಮುಂದಕ್ಕೆ  ಎಡಬದಿಗೆ ಚಲಿಸಿ ರಸ್ತೆಯ ಎಡಬದಿಯಿಂದ  ರಸ್ತೆಯ ಮಧ್ಯದ ಡಿವೈಡರ್ ಕಡೆಗೆ ರಸ್ತೆ ದಾಟುತ್ತಿದ್ದ ವಯೋವೃದ್ಧರಾದ ವಾಸುದೇವ ಅಂಚನ್ (85 ವರ್ಷ) ರವರಿಗೆ ಸ್ಕೂಟರ್ ಢಿಕ್ಕಿಯಾಗಿ ಪಾದಾಚಾರಿ ವಾಸುದೇವ ಅಂಚನ್ ಮತ್ತು ಪಿರ್ಯಾದಿದಾರರು ಸ್ಕೂಟರ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದು,  ಪಿರ್ಯಾದಿದಾರರ   ಗಲ್ಲಕ್ಕೆ,ಎಡ ಕೈಯ ಉಂಗುರ  ಬೆರಳ ಬುಡಕ್ಕೆ ತರಚಿದ ಗಾಯವಾಗಿದ್ದು ಅಲ್ಲದೇ ಪಾದಾಚಾರಿ ವಾಸುದೇವ ಅಂಚನ್ ರವರ ಎಡಕಾಲಿನ ಮಣಿಗಂಟಿನ ಬಳಿ ಮೂಳೆ ಬಿರುಕು ಬಿಟ್ಟ ಗಾಯ, ಎರಡೂ ಕೈಗಳ ರಿಸ್ಟ್ ಬಳಿ ತರಚಿದ ರೀತಿಯ ಗಾಯ ಹಾಗೂ ತಲೆಯ ಹಿಂಬದಿ  ಸಣ್ಣ ಪ್ರಮಾಣದ ರಕ್ತಗಾಯವಾಗಿ ವಾಸುದೇವ ಅಂಚನ್ ರವರು ಚಿಕಿತ್ಸೆ ಬಗ್ಗೆ ವೆನ್ ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿಯೂ, ಪಿರ್ಯಾದಿದಾರರು ಹೋರರೋಗಿಯಾಗಿಯೂ ಚಿಕಿತ್ಸೆ ಪಡೆದು ಕೊಂಡಿರುತ್ತಾರೆ ಎಂಬಿತ್ಯಾದಿ

 

Mangalore East Traffic PS         

ದಿನಾಂಕ: 01-04-2024 ರಂದು ಪಿರ್ಯಾದಿದಾರರ ತಮ್ಮ ರಿದೇಶ ಬೊಹಾರ (14 ವರ್ಷ) ರವರು ಮಧ್ಯಾಹ್ನ ವೇಳೆ ಕಂಕನಾಡಿಗೆ ಹೋಗುವ ಸಲುವಾಗಿ ನಂದಿಗುಡ್ಡ ಎಂಬಲ್ಲಿಂದ ರೂಟ್ ನಂಬ್ರ 15 ನೋಂದಣಿ ಸಂಖ್ಯೆ: KA-19-D-9261  ನಂಬ್ರದ ಶಿಫಾಲಿ ಎಂಬ ಹೆಸರಿನ ಬಸ್ಸಿನಲ್ಲಿ ಹೊರಟು ಮಧ್ಯಾಹ್ನ ಸುಮಾರು 1:00 ಗಂಟೆಗೆ ಕಂಕನಾಡಿಯ ಫಾದರ್ ಮುಲ್ಲರ್  ಆಸ್ಪತ್ರೆಯ ಎದುರಿನ  ಬಸ್ ಸ್ಟಾಪ್ ತಲುಪಿ ಪ್ರಯಾಣಿಕರನ್ನು ಇಳಿಸುವ ಸಲುವಾಗಿ ಕಂಕನಾಡಿ ಫಾದರ್ ಮುಲ್ಲರ್  ಆಸ್ಪತ್ರೆಯ ಎದುರಿನ ಬಸ್ ಸ್ಟಾಪ್ ನಲ್ಲಿ ಬಸ್ಸು ನಿಂತ  ವೇಳೆ  ಬಸ್ಸಿನ ಎದುರಿನ ಬಾಗಿಲಿನ  ಮೂಲಕ ಪ್ರಯಾಣಿಕರೊಬ್ಬರು ಬಸ್ಸಿನಿಂದ ಕೆಳಗೆ ಇಳಿದ ಬಳಿಕ ಪಿರ್ಯಾದಿದಾರರ ತಮ್ಮ ರಿದೇಶ ಬೊಹಾರ ರವರು ಬಸ್ಸಿನಿಂದ ಕೆಳಗಿಳಿಯುತ್ತಿದ್ದಂತೆ ಬಸ್ಸಿನ ನಿರ್ವಾಹಕನ ಸೂಚನೆಗೂ ಕಾಯದೇ ಬಸ್ಸಿನ ಚಾಲಕನಾದ ಸಂತೋಷ ಕುಮಾರ ಭೋವಿ ಎಂಬಾತನು ಬಸ್ಸನ್ನು ನಿರ್ಲಕ್ಷ್ಯತನದಿಂದ ಮುಂದಕ್ಕೆ ಚಲಾಯಿಸಿದ ಪರಿಣಾಮ ಪಿರ್ಯಾದಿದಾರರ ತಮ್ಮ ರಿದೇಶ್ ಬಸ್ಸಿನಿಂದ ಕೆಳಗೆ ಬಿದ್ದ ವೇಳೆ ಬಸ್ಸಿನ ಎಡಬದಿಯ ಹಿಂದಿನ ಚಕ್ರ ಆತನ ಸೊಂಟದ ಮೇಲೆ ಹರಿದು ಸೊಂಟದ ಎರಡೂ ಬದಿಗೆ ಹಾಗೂ ಎಡಕಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯಗೊಂಡು ಚಿಕಿತ್ಸೆ ಬಗ್ಗೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ ಎಂಬಿತ್ಯಾದಿ

 

Traffic South Police

ಫಿರ್ಯಾದಿ Sanjeeva Poojari ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 01-04-2024 ರಂದು ಫಿರ್ಯಾದಿದಾರರು ತನ್ನ ಬಾಬ್ತು ಕಾರು ನಂಬ್ರ KA-19-ML-2350 ನೇದನ್ನು ಚಲಾಯಿಸಿಕೊಂಡು ಕಾವೂರಿನಲ್ಲಿರುವ ತನ್ನ ತಾಯಿ ಮನೆಗೆ ಬಂದು ಅಲ್ಲಿಂದ ಕೆ.ಪಿ.ಟಿ ಕಡೆಗೆ ಹೊರಟು ಸಮಯ ಸಂಜೆ 05.15 ಗಂಟೆಗೆ ಬೋಂದೆಲ್ ಚರ್ಚ್ ಮುಂಭಾಗದ ರಸ್ತೆ ತಲುಪುತ್ತಿದ್ದಂತೆ ಫಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿನ ಹಿಂಭಾಗಕ್ಕೆ  KA-19-AD-7049 ನೇ ನಂಬ್ರದ ಟ್ಯಾಂಕರ್ ಲಾರಿಯನ್ನು ಅದರ ಚಾಲಕ ವೀರಭದ್ರ  ಎಂಬಾತನು ದುಡುಕತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಕಾರಿನ ಹಿಂಭಾಗಕ್ಕೆ  ಡಿಕ್ಕಿ ಪಡಿಸಿದ್ದು ಡಿಕ್ಕಿಯ ಪರಿಣಾಮ ಫಿರ್ಯಾದಿದಾರರ ಕಾರಿನ ಹಿಂಭಾಗ ಸಂಪೂರ್ಣ ಜಖಂ ಆಗಿರುತ್ತದೆ ಎಂಬಿತ್ಯಾದಿ

 

Traffic South Police Station

ಫಿರ್ಯಾದಿ Irshad  ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 01-04-2024 ರಂದು ಫಿರ್ಯಾದಿದಾರರು ಲಾರಿ ನಂಬ್ರ KA-63-9693 ನೇದನ್ನು ಹುಬ್ಬಳ್ಳಿಯಿಂದ ಕೊಚ್ಚಿ ಕಡೆಗೆ ಚಲಾಯಿಸಿಕೊಂಡು ಹೊರಟು ಸಮಯ ಮಧ್ಯಾಹ್ನ 02.30 N.H 66 ರಲ್ಲಿ   ಚಲಿಸಿ ತಲಪಾಡಿ RTO ಕಛೇರಿಯ ಎದುರು ರಸ್ತೆಯಲ್ಲಿ ನಿಲ್ಲಿಸಿ ಚಲನ್ ತುಂಬಲು ಹೋಗಿದ್ದ ಸಮಯ  ನಿಲ್ಲಿಸಿದ್ದ ಫಿರ್ಯಾದಿದಾರರ KA-63-9693 ಲಾರಿಗೆ KL-86-B-1479 ನೇ ಲಾರಿಯ ಚಾಲಕ  ರುಂಶಿದ್ ಕೆ.ಸಿ ಎಂಬಾತನು ದುಡುಕತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಲಾರಿಯ ಹಿಂಭಾಗದ ಬಲಬದಿಯ ಮೂಲೆಗೆ  ಡಿಕ್ಕಿ ಪಡಿಸಿ ಮುಂದಕ್ಕೆ ಹೋದ ಪರಿಣಾಮ ಲಾರಿಯ ಬಲಭಾಗ ಜಖಂಗೊಂಡಿದ್ದು ಮತ್ತು ಲಾರಿಯಲಿದ್ದ ಇಂಜಿನ್ ಆಯಿಲ್ ಬಾಕ್ಸಗಳು ಜಖಂಗೊಡಿರುತ್ತವೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 03-04-2024 09:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080