ಅಭಿಪ್ರಾಯ / ಸಲಹೆಗಳು

Crime Reports: Urva PS

ಪಿರ್ಯಾದಿ SHANTHI ಮಂಗಳಮುಖಿಯಾಗಿದ್ದು, ಕಳೆದು ನಾಲ್ಕು ತಿಂಗಳಿಂದ  ಮಂಗಳೂರು ಕುಂಟಿಕಾನ ಜುಲು ಗ್ಯಾಸ್ ಪಂಪ್ ನ ಹತ್ತಿರ ತನ್ನ ಕಸಬನ್ನು  ಮಾಡುತ್ತಿದ್ದು, ದಿನಾಂಕ 30-04-2023 ರಂದು ಬೆಳಗಿನ ಜಾವ 00.00 ಗಂಟೆಗೆ ನಾಲ್ಕು ಮಂದಿ ಯುವಕರು ಪಿರ್ಯಾದಿದಾರರು ಇದ್ದ ಸ್ಥಳಕ್ಕೆ ಬಂದು ಕಸುಬಿನ ಕುರಿತು ವಿಚಾರಿಸಿ ನಂತರ ಆ ಯುವಕರು ಪಿರ್ಯಾದಿದಾರರನ್ನು ಉದ್ದೇಶೀಸಿ “ಬೇವರ್ಸಿ ನಿನಗೆ ಅಷ್ಟು ದುಡ್ಡು ಯಾಕೆ ಕೋಡಬೆಕು” ಎಂದು ಅವಾಚ್ಯ ಶಬ್ದದಿಂದ ಬೈದಾಗ ಪಿರ್ಯಾದಿದಾರರು ಗ್ಯಾಸ್ ಪಂಪಿನ ಒಳಗೆ ಹೋಗಿ ನೀರು ಕುಡಿದು ಹೊರಗಡೆ ಬರುವಾಗ ಸಮಯ ಬೆಳಗಿನ ಜಾವ 00.30 ಗಂಟೆಗೆ ಅದೇ ನಾಲ್ಕು ಮಂದಿ ಯುವಕರ ಪೈಕಿ ಒಬ್ಬನು ಕಲ್ಲಿನಿಂದ ಪಿರ್ಯಾದಿದಾರರ ತಲೆಗೆ ಹೊಡೆದು, ಇನ್ನೊಬ್ಬನು ಪ್ಲಾಸ್ಟಿಕ್ ಪೈಪಿನಿಂದ ಪಿರ್ಯಾದಿದಾರರ ಬೆನ್ನಿಗೆ ಹೊಡೆದು, ಉಳಿದ ಇಬ್ಬರು ಪಿರ್ಯಾದಿದಾದರಿಗೆ ಕಲ್ಲು ಬಿಸಾಡಿರುತ್ತಾರೆ. ಈ ಗಲಾಟೆಯಿಂದ ಪಿರ್ಯಾದಿದಾರರ ಬ್ಯಾಗ್ ನೆಲಕ್ಕೆ ಬಿದ್ದಿದ್ದು, ಈ ಸಮಯ ಸ್ಥಳದಲ್ಲಿ ಕಾರು ಬರುತ್ತಿರುವುದನ್ನು ಕಂಡು ಯುವಕರು ಸ್ಥಳದಿಂದ ಓಡಿ ಹೋಗಿದ್ದು,   ನೆಲಕ್ಕೆ ಬಿದ್ದಿದ್ದ ಬ್ಯಾಗ್ ನ್ನು ಹೆಕ್ಕಿ ಪರಿಶೀಲಿಸಿದಾಗ ಬ್ಯಾಗ್ ನಲ್ಲಿದ್ದ ರೂ 6000/- ಅಲ್ಲಿ ಎಲ್ಲಿಯೋ ಬಿದ್ದು ಕಾಣೆಯಾಗಿರುತ್ತದೆ. ಯುವಕರು ಹಲ್ಲೆ ನಡೆಸಿದ ಪರಿಣಾಮ ಪಿರ್ಯಾದಿದಾರರಿಗೆ ನೋವಾಗಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪಿರ್ಯಾದಿದಾರರ ಸಮುದಾಯದ ಐಶ್ವರ್ಯ ಎಂಬವರು ಪಿರ್ಯಾದಿದಾರರನ್ನು ಕುಂಟಿಕಾನ ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿರುತ್ತಾರೆ ಎಂಬಿತ್ಯಾದಿ.

 

 

 

Crime Reports: Traffic North Police Station

ಪಿರ್ಯಾದಿ Shridhar  ತಮ್ಮನಾದ ತಂಗರಾಜ್(49 ವರ್ಷ) ಎಂಬವರು ದಿನಾಂಕ 30-04-2023 ರಂದು ತಮ್ಮ ಬಾಬ್ತು KA-19-HJ-1746ನಂಬ್ರದ ಮೋಟಾರು ಸೈಕಲನ್ನು ಸವಾರಿ ಮಾಡಿಕೊಂಡು ಪಡುಪಣಂಬೂರು ತನ್ನ ಮನೆಯಿಂದ ಹಳೆಯಂಗಡಿ ಕಡೆಗೆ ಹೋಗುತ್ತಾ ಪಡುಪಣಂಬೂರು ಪೆಟ್ರೋಲ್ ಪಂಪ್ ಕಡೆಯಿಂದ ರಾ.ಹೆ.66 ನೇ ರಸ್ತೆಯನ್ನು ತೆರೆದ ಡಿವೈಡರ್ ಕಡೆಗೆ ದಾಟುತ್ತಾ ಬೆಳಿಗ್ಗೆ ಸಮಯ ಸುಮಾರು 11:45 ಗಂಟೆಗೆ ರಸ್ತೆ ಮಧ್ಯದ ಡಿವೈಡರ್ ಬಳಿ ತಲುಪುತ್ತಿದ್ದಂತೆ ಹಳೆಯಂಗಡಿ ಕಡೆಯಿಂದ KA-19-ME-4772 ನಂಬ್ರದ ಕಾರನ್ನು ಅದರ ಚಾಲಕ NESTON D’SOUZA ಎಂಬವರು ಮುಲ್ಕಿ ಕಡೆಗೆ ವೇಗವಾಗಿ ಚಲಾಯಿಸಿಕೊಂಡು ಬಂದು ತೆರೆದ ಡಿವೈಡರ್ ಬಳಿಗೆ ಮೋಟಾರು ಸೈಕಲ್ ಸವಾರಿ ಮಾಡಿಕೊಂಡು ತಲುಪಿದ್ದ ಪಿರ್ಯಾದಿದಾರರ ತಮ್ಮ ತಂಗರಾಜ್ ರವರಿಗೆ ರಭಸವಾಗಿ ಡಿಕ್ಕಿ ಪಡಿಸಿದ ಪರಿಣಾಮ ತಂಗರಾಜ್ ರವರು ಮೋಟಾರು ಸೈಕಲಿನ ಸಮೇತ ಡಾಮಾರು ರಸ್ತೆಗೆ ಬಿದ್ದು, ಅವರ ತಲೆಗೆ,ಬಲಕೈಗೆ, ಬಲ ಕಾಲಿನ ಕೋಲುಕಾಲಿಗೆ ಹಾಗೂ ಹಿಮ್ಮಡಿಗೆ ಗಾಯವಾಗಿದ್ದು ಅಲ್ಲದೇ ಬಲ ಹಣೆಗೆ, ಬಲ ಕೆನ್ನೆಗೆ, ಬಲ ಕಿಬ್ಬೊಟ್ಟೆಗೆ,ತರಚಿದ ಗಾಯ,ಎಡಕಾಲಿನ ತೊಡೆಯ ಮೂಳೆ ಮುರಿತವಾಗಿದ್ದು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿದ್ದ ಪಿರ್ಯಾದಿದಾರರ ತಮ್ಮ ತಂಗರಾಜ್(49 ವರ್ಷ)  ರವರು ಚಿಕಿತ್ಸೆ ಫಲಕಾರಿಯಾಗದೇ ಈ ದಿನ ಮಧ್ಯಾಹ್ನ 3:00 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬಿತ್ಯಾದಿ.

Crime Reports: Ullal PS   

ದಿನಾಂಕ 28/04/2023 ರಂದು ಸಂಜೆ 7-30 ಗಂಟೆಯ ಸಮಯಕ್ಕೆ ತಲಪಾಡಿಯ ಅಥಿತಿ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ನೋಡಿ ಪರಿಚಯದ ವ್ಯಕ್ತಿ ವಿಲ್‌ಫ್ರೆಡ್ ಮೈಕಲ್ ಡಿ’ಸೋಜ ಎಂಬುವರು ಪಿರ್ಯಾದಿ Shailesh  ತಮ್ಮ ಮಕರೇಂದ್ರ ರವರು ಕುಡಿಯಲು ಹಣ ಕೇಳಿದ ವಿಚಾರದಲ್ಲಿ ರಂಡೆ ಮಗ, ಬೇವರ್ಸೀ ಎಂಬಿತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ಬೈದು, ಜಾಸ್ತಿ ಮಾತನಾಡಿದರೆ ಹೊಡೆದು ಕೊಲ್ಲುವುದಾಗಿ ಹೇಳಿ, ಮಕರೇಂದ್ರ ನು ಅಂಗಾತವಾಗಿ ನೆಲಕ್ಕೆ ಬಿದ್ದು ಸಾಯಲಿ ಎಂಬ ಉದ್ದೇಶದಿಂದ ಕೈಯಿಂದ ಮುಖಕ್ಕೆ ರಭಸವಾಗಿ ಹೊಡೆದ ಪರಿಣಾಮ ಮಕರೇಂದ್ರನು ಆಯತಪ್ಪಿ ಅಂಗಾತವಾಗಿ ನೆಲದಲ್ಲಿದ್ದ ಕಲ್ಲಿನ ಮೇಲೆ ಬಿದ್ದ ಪರಿಣಾಮ, ತಲೆಯ ಹಿಂಬದಿಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೊಂಡಿರುವುದು ದೂರು ಹೇಳಿಕೆಯ ಸಾರಾಂಶ ಎಂಬಿತ್ಯಾದಿ.

                                  

ಇತ್ತೀಚಿನ ನವೀಕರಣ​ : 21-08-2023 12:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080