ಅಭಿಪ್ರಾಯ / ಸಲಹೆಗಳು

Crime report in Mangalore East Traffic PS      

ಪಿರ್ಯಾದಿದಾರರಾದ ರಾಜೇಶ್ ಕುಮಾರ್ ಎಂಬುವರ ತಂದೆ ಪದ್ಮನಾಭ ಎಂಬುವರು ದಿನಾಂಕ 01-07-2023 ರಂದು ಬೆಳಿಗ್ಗೆ 5.00 ಗಂಟೆಗೆ ವಾಕಿಂಗ್ ಎಂದು ಮನೆಯಿಂದ ಹೋದವರು ಬೆಳಿಗ್ಗೆ 7.30 ಗಂಟೆಯಾದರೂ ವಾಪಾಸ್ ಮನೆಗೆ ಬಾರದ ಕಾರಣ ಪಿರ್ಯಾದಿದಾರರು ಹಾಗೂ ಅವರ ಮನೆಯವರು ಎಲ್ಲಾ ಕಡೆಗಳಲ್ಲಿ ಹುಡುಕುತ್ತಾ ಕೆ.ಪಿ.ಟಿ  ಬಳಿ ಬಂದಾಗ ಸಾರ್ವಜನಿಕರೊಬ್ಬರು ಈ ದಿನ ಬೆಳಿಗ್ಗೆ 05.30 ಗಂಟೆಗೆ  ಕೆಪಿಟಿ ಕಡೆಯಿಂದ ಕುಂಟಿಕಾನ ಕಡೆಗೆ ಹೋಗುತ್ತಿದ್ದ ಸುಮಾರು 60-65 ವರ್ಷ ಪ್ರಾಯದ ಪಾದಚಾರಿ ಒಬ್ಬರಿಗೆ ಪಿಕಪ್ ವಾಹನ ಢಿಕ್ಕಿಪಡಿಸಿದ್ದು,  ಗಾಯಾಳುವನ್ನು ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದು, ಕೂಡಲೇ ಪಿರ್ಯಾದಿದಾರರು ತನ್ನ ಮನೆಯವರೊಂದಿಗೆ ಆಸ್ಪತ್ರೆಗೆ ಹೋದಾಗ ಆಸ್ಪತ್ರೆಯಲ್ಲಿ ಪಿರ್ಯಾದಿದಾರರ ತಂದೆಯವರು ತಲೆಗೆ ಒಳ ಪೆಟ್ಟಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಅಪಘಾತದ ಬಗ್ಗೆ ವಿಚಾರಿಸಲಾಗಿ  ಬೆಳಿಗ್ಗೆ  ಪಿರ್ಯಾದಿದಾರರ ತಂದೆಯವರು ಕೆಪಿಟಿ ಕಡೆಯಿಂದ ಕುಂಟಿಕಾನ ಕಡೆಗೆ  ನಡೆದುಕೊಂಡು ಬರುತ್ತಾ  ಸಮಯ ಸುಮಾರು  5.30 ಗಂಟೆಗೆ NH 66 ರ ಎಸ್.ಕೆ.ಎಸ್. ಅಪಾರ್ಟ್ ಮೆಂಟ್ ಕ್ರಾಸ್ ಬಳಿ ಸ್ವಲ್ಪ ಮುಂದಕ್ಕೆ ತಲುಪುತ್ತಿದ್ದಂತೆ  ಕೆಪಿಟಿ ಕಡೆಯಿಂದ ಕುಂಟಿಕಾನ ಕಡೆಗೆ ಹೋಗುತ್ತಿದ್ದ KA-19-AB-2267  ನಂಬ್ರದ ಪಿಕಪ್ ಗೂಡ್ಸ್  ವಾಹನವನ್ನು ಅದರ ಚಾಲಕ ಇರ್ಫಾನ್  ಎಂಬಾತನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಂದೆಯವರಿಗೆ ಹಿಂಬದಿಯಿಂದ ಢಿಕ್ಕಿಪಡಿಸಿದ್ದು, ಈ ಢಿಕ್ಕಿಯ ರಭಸಕ್ಕೆ ಪಿರ್ಯಾದಿದಾರರ ತಂದೆಯವರು ಕೆಳಗೆ ಬಿದ್ದು, ತೀವ್ರ ಸ್ವರೂಪದ ಗಾಯಕ್ಕೆ ಒಳಗಾಗಿ ಪ್ರಜ್ಞಾಹೀನಗೊಂಡವರನ್ನು ಚಿಕಿತ್ಸೆಯ ಬಗ್ಗೆ ಅಪಘಾತಪಡಿಸಿದ ಪಿಕಪ್ ಗೂಡ್ಸ್ ವಾಹನದ ಚಾಲಕನು ಇತರರೊಂದಿಗೆ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಸಿರುತ್ತಾರೆ. ಸದ್ರಿ ಅಪಘಾತದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

Mangalore North PS                     

ಪಿರ್ಯಾದಿ NAGARAJA PALKE ದಾರರು ಮಂಗಳೂರು ನಗರದ ಜಿ.ಹೆಚ್.ಎಸ್ ರಸ್ತೆಯಲ್ಲಿ ಪಾಲ್ಕೆ ಜ್ಯುವೆಲರ್ಸ್ ಎಂಬ ಆಭರಣದ ಅಂಗಡಿಯನ್ನು ನಡೆಸಿಕೊಂಡು ಬರುತ್ತಿದ್ದು ದಿನಾಂಕ 30/06/2023 ರಂದು ಸಂಜೆ ಸುಮಾರು 04-45 ಗಂಟೆ ಸುಮಾರಿಗೆ ಇಬ್ಬರು ಹಿಂದಿ ಮತ್ತು ಇಂಗ್ಲೀಷ್ ಭಾಷೆ ಮಾತನಾಡುವ ದಂಪತಿಗಳು ಪಿರ್ಯಾದಿದಾರರ ಅಂಗಡಿಗೆ ಬಂದು ಬಂಗಾರ ಖರೀದಿ ಮಾಡುವ ನೆಪದಲ್ಲಿ ಬಂಗಾರವನ್ನು ನೋಡುತ್ತಾ ಗುಣಮಟ್ಟ , ಹಾಲ್ ಮಾರ್ಕ್, ಮೌಲ್ಯ ಇತ್ಯಾದಿಗಳನ್ನು ವಿಚಾರಿಸುತ್ತಾ ಹಲವು ಆಭರಣಗಳನ್ನು ನೋಡಿದ ನಂತರ 2 ಆಭರಣಗಳನ್ನು ನೋಡಿ ಅದರ ಮೌಲ್ಯವನ್ನು ಖಚಿತ ಪಡಿಸಿ ಹಣವನ್ನು ಎ.ಟಿ.ಎಂ ನಿಂದ ತರುವುದಾಗಿ ಹೊರಗೆ ಹೋದವರು ತುಂಬಾ ಹೊತ್ತಾದರೂ ಅವರು ಬರದೆ ಇದ್ದುದರಿಂದ ಪಿರ್ಯಾದಿದಾರರು ಸಂಶಯದಿಂದ ಅಂಗಡಿಯ ಸ್ಟಾಕ್ ನ್ನು ಚೆಕ್ ಮಾಡಿದಾಗ ಒಂದು ಚೈನ್ ಕಾಣೆಯಾಗಿದ್ದು ಸುಮಾರು 13.830 ಗ್ರಾಂ ಅಂದಾಜು ಮೌಲ್ಯ ಸುಮಾರು 74000/- ರೂ ಆಗಬಹುದು ಇದನ್ನು ಆ ದಂಪತಿಗಳೆ ಕಳವು ಮಾಡಿಕೊಂಡು ಹೋಗಿರುವುದಾಗಿ ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕಾಗಿ ನೀಡಿದ ಪಿರ್ಯಾದಿ

Ullal PS     

ಉಳ್ಳಾಲ ತಾಲೂಕ್ಕು ಮುನ್ನುರು ಕುತ್ತಾರ್ ಪದವಿನಲ್ಲಿರುವ ಮಂಗಳ ಸೇವಾ ಸಮಿತಿ ಟ್ರಸ್ಠ್(ರಿ) ಬಾಲ ಸಂರಕ್ಷಣ ಕೇಂದ್ರದ ಆವರಣದ ಒಳಗಡೆ ದಿನಾಂಕ 30/06/2023 ರಂದು 00.05ಗಂಟೆಯಿಂದ ಬೆಳಿಗ್ಗೆ 10.00 ಗಂಟೆಯ ಮಧ್ಯ ಅವಧಿಯಲ್ಲಿ ಯರೋ ಕಿಡಿಗಳು ಅಕ್ರಮ ಪ್ರವೇಶ ಮಾಡಿ ಬಾಲ ಸಂರಕ್ಷಣ ಕೇಂದ್ರದಲ್ಲಿ ಸಾಕುತ್ತಿದ್ದ 3 ನಾಯಿಗಳ ಪೈಕಿ ಎರಡು ಸಾಕು ನಾಯಿಗಳನ್ನು ಯಾವುದೋ ಆಯುಧದಿಂದ ಕೊಂದು ಹಾಕಿದ್ದು ಇನ್ನೂಂದು ನಾಯಿಯ ಪತ್ತೆ ಯಾಗಿರುವುದಿಲ್ಲ ಸದರಿ ಸಾಕುನಾಯಿಗಳನ್ನು ಆಶ್ರಮದ ಆವರಣದೂಳಗೆ ಅಂತ್ಯ ಸಂಸ್ಕಾರ ನಡೆಸಲಾಗಿದೆ ಸದ್ರಿ ಕಿಡಿಗೇಡಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೂಳ್ಳುವಂತೆ ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಂಶ

Panambur PS         

ಪಿರ್ಯಾದು R SANTHOSH KUMAR ದಾರರು ಈಗಲ್ ಲಾಜೆಸ್ಟೀಕ್ಸ್ ವೇಲುಮುರುಗನ್ ಟವರ್ಸ್ ನಾಮಕಲ್ಲು ತಮಿಳುನಾಡು ರಾಜ್ಯ ಈ ಕಂಪೆನಿಯ ಮ್ಯಾನೇಜರ್ ಆಗಿ ಇರುತ್ತಾರೆ, ಇವರ ಕಂಪೆನಿಯ ಎಥುನಾಲ್  ಲೋಡಿಂಗ್ ಟ್ಯಾಂಕರ್ ಕೆಎ 51 ಎ ಹೆಚ್ 4206 ಟ್ಯಾಂಕರ್ ನಲ್ಲಿ ದಿನಾಂಕ: 21-06-2023 ರಂದು ಬಾಗಲಕೋಟೆಯಿಂದ ಲೋಡ್ ಮಾಡಿ ಮಂಗಳೂರು ಐ.ಓ.ಸಿ.ಎಲ್ ಗೆ ಆನ್ ಲೋಡ್ ಗೆ ತೆಗೆದುಕೊಂಡು ಬಂದ ಕಂಪೆನಿಯ ಚಾಲಕ ಸಮೀರ್ ಕೊಲ್ಲಾಂ ಕೇರಳ ಎಂಬವನು ಐ.ಓ.ಸಿ.ಎಲ್ ನಲ್ಲಿ ದಿನಾಂಕ: 27-06-2023 ರಂದು ಲೋಡ್ ನ್ನು ಆನ್ ಲೋಡ್ ಮಾಡಿ ಐ.ಓ.ಸಿ.ಎಲ್ ನಿಂದ ಹೊರಗೆ ಬಂದು ಕಂಪೆನಿಗೆ ಪೋನ್ ಮಾಡಿ 10.000/- ರೂಪಾಯಿ ಮುಂಗಡ ಹಣ ಸಂಬಳ ಕೇಳಿರುತ್ತಾನೆ. ಅವನಿಗೆ ಕಂಪೆನಿಯಿಂದ 7.000/- ಹಣವನ್ನು ವರ್ಗವಣೆ ಮಾಡಿ ಪಾವತಿಸಲಾಯಿತು. ಅವನಿಗೆ ಹಿಂದೆ 3.750/- ರೂಪಾಯಿ ಕೊಟ್ಟಿದ್ದರಿಂದ  ಅವನು ಕೇಳಿದಂತೆ ಒಟ್ಟು 10.000/-  ರೂಪಾಯಿ ಹಣವನ್ನು ಕೊಟ್ಟಿರುವುದಿಲ್ಲ. ಹಣ ಬಂದಿರುವದಿಲ್ಲ ಎಂದು ಕ್ಲೀನರ್ ಕನಕರಾಜು ಮತ್ತು ಚಾಲಕ ಸಮೀರ್ ಪೋನ್ ಮಾಡಿದ. ಅದಕ್ಕೆ ಪಿರ್ಯಾದುದಾರರು  ಹಣ ವರ್ಗಯಿಸುತ್ತೇನೆ ಎಂದು ಹೇಳಿ ಹಣವನ್ನು ವರ್ಗಹಿಸಿರುತ್ತಾರೆ. ದಿನಾಂಕ: 28-06-2023 ರಂದು ಬೆಳಿಗ್ಗೆ ಸಮಯ 6-15 ಗಂಟೆಗೆ ಪೋನ್ ಮಾಡಿ ಚಾಲಕ ಸಮೀರ್ ಗೆ ಲೋಡಿಂಗ್ ಪಾಯಿಂಟ್ ಗೆ ಏಕೆ ಹೋಗಿಲ್ಲ ಎಂದು ಕೇಳಿದ್ದಕ್ಕೆ ತನಗೆ 10.000/- ರೂಪಾಯಿ ಕೇಳಿದ್ದಕ್ಕೆ 7.000/- ರೂಪಾಯಿ ಕೊಟ್ಟಿದ್ದಾರೆ ಆದಕ್ಕೆ ಟ್ಯಾಂಕರ್ ನ್ನು ಕೆ.ಐ.ಓ.ಸಿ.ಎಲ್ ವಾಹನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಮನೆಗೆ ಹೋಗುತ್ತಿದ್ದೇನೆ ಎಂದು ಹೇಳಿರುತ್ತಾನೆ. ಪಿರ್ಯಾದುದಾರರ ಕಂಪೆನಿಯ ಇನ್ನೊಂದು ಟ್ಯಾಂಕರ್ ಚಾಲಕ ದಿನಾಂಕ: 28-06-2023 ರಂದು ಮದ್ಯಾಹ್ನ ನೋಡಿ ಪಿರ್ಯಾದುದಾರರ ಕಂಪೆನಿಯ ಸಮೀರ್ ಚಾಲಕನಾಗಿದ್ದ ಟ್ಯಾಂಕರ್ ನ ಐದು ಡಿಸ್ಕ್ ಸಮೇತ ಟೈಯರ್ ಗಳು ಇಲ್ಲದೇ ನಿಂತಿದ್ದ ಪಿರ್ಯಾದುದಾರರ ಕಂಪೆನಿಯ ಟ್ಯಾಂಕರ್ ನ್ನು ನೋಡಿ ಪಿರ್ಯಾದುದಾರರಿಗೆ ಮಾಹಿತಿ ಕೊಟ್ಟು, ಅದರಂತೆ ಪಿರ್ಯಾದುದಾರರು ಹೋರಟು ಬಂದು ಕಂಪೆನಿಯ ಕೆ.ಎ 41 ಎ ಹೆಚ್ 4206 ನೇ ವಾಹನವನ್ನು ದಿನಾಂಕ 29-06-2023 ರಂದು ಸಂಜೆ ಬಂದು ನೋಡಿರುತ್ತಾರೆ. ಆ ಸಮಯ ಟ್ಯಾಂಕರ್ ನ ಐದು ಡಿಸ್ಕ್ ಸಹಿತ ಟೈಯರ್ ಗಳು ಮತ್ತು ಜಾಕ್ ಇಲ್ಲದೇ ಇದ್ದದ್ದನ್ನು ನೋಡಿರುತ್ತಾರೆ. ಇದನ್ನು ಕಂಪೆನಿ ಚಾಲಕ ಸಮೀರ್ ಇತರ ಯಾರೋ ಜೊತೆ ಸೇರಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ . ಕಳ್ಳತನವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 2.06000/- ರೂಪಾಯಿ ಆಗಿರುತ್ತದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 21-08-2023 02:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080