ಅಭಿಪ್ರಾಯ / ಸಲಹೆಗಳು

 

 Crime Report in Mangalore East Traffic PS                         

ಪಿರ್ಯಾದಿ ನಾಗರತಿನಂ ಎಸ್ ದಾರರು ತಮಿಳುನಾಡಿನಿಂದ ಮಂಗಳೂರು ಹಾಗೂ ಸುತ್ತ ಮುತ್ತಲಿನ ಊರುಗಳ ಬಟ್ಟೆ ಅಂಗಡಿಗಳಿಗೆ ಹೋಲ್ ಸೇಲ್ ದರದಲ್ಲಿ ಬಟ್ಟೆಗಳನ್ನು ಸಪ್ಲಾಯ್ ಮಾಡುವ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದು, ಅದರಂತೆ ನಿನ್ನೆ ದಿನ ದಿನಾಂಕ: 31-07-2023 ರಂದು ಮಂಗಳೂರಿಗೆ ಬಂದ ವೇಳೆ ಬಲ್ಮಠದ ಕೆಲವು ಅಂಗಡಿಗಳಿಗೆ ಭೇಟಿ ನೀಡಿ ಬಳಿಕ ಅಂಬೇಡ್ಕರ್ ಜಂಕ್ಷನ್ ಬಳಿ ಮೂಡಬಿದ್ರೆಗೆ ಹೋಗಲು ಬಸ್ ಹಿಡಿಯುವುದಕ್ಕಾಗಿ ಬಲ್ಮಠ ಕಡೆಯಿಂದ ಅಂಬೇಡ್ಕರ್ ಜಂಕ್ಷನ್ ಮೂಲಕ ನಡೆದುಕೊಂಡು ಬಂದು ಬಂಟ್ಸ್ ಹಾಸ್ಟೆಲ್ ಕಡೆಗೆ ಇರುವ ರಸ್ತೆಯ ಡಿವೈಡರ್ ನಿಂದ ರಸ್ತೆಯ ಇನ್ನೊಂದು ಬದಿಗೆ ನಡೆದುಕೊಂಡು ರಸ್ತೆ ದಾಟುತ್ತಿರುವಾಗ ಸಮಯ ಸಂಜೆ 4.00 ಗಂಟೆಗೆ ಬಲ್ಮಠ ಕಡೆಯಿಂದ ನೊಂದಣಿ ಸಂಖ್ಯೆ: KA-09-MG-5563 ನೇ ಕಾರನ್ನು ಅದರ ಚಾಲಕ ರಾಜೀವ್ ಎಂಬುವರು ಜಂಕ್ಷನ್ನಿನಲ್ಲಿ ಕಾರನ್ನು ನಿಧಾನಗೊಳಿಸದೇ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಢಿಕ್ಕಿಪಡಿಸಿದ್ದು, ಈ ಢಿಕ್ಕಿಯ ರಭಸಕ್ಕೆ ಪಿರ್ಯಾದಿದಾರರು ರಸ್ತೆಗೆ ಬಿದ್ದು, ಎಡ ಮೊಣಕಾಲು ಗಂಟಿಗೆ ಹಾಗೂ ಎದೆಗೆ ಗುದ್ದಿದ ರೀತಿಯ ಗಾಯವಾಗಿರುತ್ತದೆ. ಎಂಬಿತ್ಯಾದಿ.

CEN Crime PS

ದಿನಾಂಕ: 26-07-2023 ರಂದು  ಬೆಳಿಗ್ಗೆ 11.00 ಗಂಟೆಗೆ ಪಿರ್ಯಾದಿದಾರರು ಮನೆಯಲ್ಲಿದ್ದ ಸಮಯ ಯಾರೋ ಅಪರಿಚಿತರು ಅವರ ಸ್ನೇಹಿತರಾದ Capt. John Prasad menezes ಎಂಬವರ ಈ-ಮೇಲ್ ಐ.ಡಿ (johnpmenezes@gmail.com ) ಯನ್ನು johnpmeneze@gmail.com ) ಎಂಬುದಾಗಿ ನಕಲಿ ಮಾಡಿ ಫಿರ್ಯಾದುದಾರರ ಗೆಳೆಯನೇ ಮೆಸೇಜ್ ಮಾಡುವಂತೆ ಸಂದೇಶವೊಂದನ್ನು ಕಳುಹಿಸಿದ್ದು ಅದರಲ್ಲಿ ಪಿರ್ಯಾದಿದಾರರ ಸ್ನೇಹಿತ  Capt. John Prasad menezes ರವರು ತನ್ನ  ಮಗ ಲಂಡನ್ ನಲ್ಲಿದ್ದು ಆತನಿಗೆ ಮಗುವಾಗಿರುವುದಾಗಿ ಸಂದೇಶವೊಂದು ಬಂದಿರುತ್ತದೆ.  ಪಿರ್ಯಾದಿದಾರರು ಅದಕ್ಕೆ ಶುಭಾಶಯವನ್ನು ಕೋರುವ  ಕಾರಣ ತಾನು ಲಂಡನ್ ಗೆ ಹೋಗಿದ್ದು,  ಅಲ್ಲಿಂದ ವಾಪಾಸ್ಸು ಬರುತ್ತಿರುವಾಗ ತನ್ನ ಹೆಂಡತಿಗೆ ಅನಾರೋಗ್ಯದ ಕಾರಣ ಪ್ಲೈಟ್ ಮಿಸ್ ಆಗಿದ್ದು, ಮರು ಪ್ರಯಾದ ಪ್ಲೈಟ್ ಹಣದ ಅವಶ್ಯಕತೆ ಇರುವುದಾಗಿ ಮೆಸೇಜ್ ಬಂದ ಕಾರಣ ಫಿರ್ಯಾದುದಾರರು ಸದ್ರಿ ಇ-ಮೇಲ್ ಸಂದೇಶವನ್ನು ನಂಬಿ  ಆರೋಪಿಗಳು ತಿಳಿಸಿದ ಬ್ಯಾಂಕ್ ಖಾತೆಗಳಾದ ಕೆನರಾ ಬ್ಯಾಂಕ್, ಎಸ್.ಬಿ.ಐ ಖಾತೆಗಳಿಗೆ ದಿನಾಂಕ 26-07-2023 ರಿಂದ 31-07-2023 ರವರೆಗೆ ಹಂತ ಹಂತವಾಗಿ ಒಟ್ಟು ರೂಪಾಯಿ 3,56,000/- ವನ್ನು ಪಿರ್ಯಾದಿದಾರರು  ಕೋಟಕ್ ಮಹಿಂದ್ರಾ ಬ್ಯಾಂಕ್ ಖಾತೆ ನೇದರಿಂದ ವರ್ಗಾಯಿಸಿರುತ್ತಾರೆ.  ಹೀಗೆ ಯಾರೋ ಅಪರಿಚಿರು  ತನ್ನ ಸ್ನೇಹಿತರ ಹೆಸರಿನಲ್ಲಿ ನಕಲಿ  ಈ ಮೇಲ್ (johnpmeneze@gmail.com) ಐ.ಡಿ ಯನ್ನು ತರೆದು ವಿವಿಧ ಕಾರಣವನ್ನು ತಿಳಿಸಿ  ತನ್ನ ಖಾತೆಯಿಂದ ಮೋಸದಿಂದ ಹಣವನ್ನು ವರ್ಗಾಯಿಸಿದ್ದು ಸದ್ರಿಯವರ ವಿರುದ್ಧ ಕ್ರಮ ಕೈಗೊಳ್ಳುವರೇ ಕೋರಿಕೆ ಎಂಬಿತ್ಯಾದಿ

Ullal PS     

ದಿನಾಂಕ.01-8-2023 ರಂದು ಫಿರ್ಯಾದಿದಾರರಾದ ನಮಿತ, ಮಹಿಳಾ ಪೊಲೀಸ್ ಕಾನ್ ಸ್ಟೇಬಲ್ ರವರು ಮಾನ್ಯ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯವರು ಮಂಗಳೂರು ಭೇಟಿ ಬಂದೋಬಸ್ತು ಕರ್ತವ್ಯಕ್ಕೆ ನೇಮಕಪಟ್ಟಂತೆ ತನ್ನ ಬಾಬ್ತು ಕೆಎ-19-ಹೆಚ್ಎಂ-6786 ನೇ ದ್ವಿಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ಕೊಲ್ಯದ ಮನೆಯಿಂದ ಕೊಣಾಜೆ ಪೊಲೀಸ್ ಠಾಣೆಗೆ ವರದಿ ಮಾಡುವ ಸಲುವಾಗಿ ಒಳರಸ್ತೆಯ ಮುಖಾಂತರ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳಿಗ್ಗೆ 9-00 ಗಂಟೆಯ ಸಮಯಕ್ಕೆ ಸೋಮೇಶ್ವರ ಗ್ರಾಮದ ಕುಂಪಲ ನಿಸರ್ಗ ರಸ್ತೆಗೆ ತಲುಪುವಾಗ್ಗೆ ಆರೋಪಿ ಪ್ರಶಾಂತ್ ನು ಫಿರ್ಯಾದಿದಾರರ ವಾಹನವನ್ನು ಕೈಸನ್ನೆ ಮಾಡಿ ನಿಲ್ಲಿಸುವಂತೆ ಸೂಚನೆ ಕೊಟ್ಟಾಗ ಸಮವಸ್ತ್ರದಲ್ಲಿದ್ದ ಫಿರ್ಯಾದಿದಾರರು ತನ್ನ ವಾಹನವನ್ನು ನಿಲ್ಲಿಸಿದಾಗ ಆರೋಪಿತನು ಒಂದೇ ಸವನೆ ಫಿರ್ಯಾದಿದಾರರ ಎಡಭುಜಕ್ಕೆ ಒಂದೇಟು ಹೊಡೆದನು. ಆಗ ಫಿರ್ಯಾದಿದಾರರು ಆತನಲ್ಲಿ ಸಮವಸ್ತ್ರದಲ್ಲಿದ್ದ ನನ್ನ ಮೈಮೇಲೆ ಕೈಹಾಕಬೇಡಿ, ಸರಿಯಲ್ಲ, ನೀವು ಏಕೆ ವಾಹನವನ್ನು ನಿಲ್ಲಿಸಿರುವುದು, ಏನು ನಿಮ್ಮ ಸಮಸ್ಯೆ ಎಂದು ಕೇಳಿದಾಗ, ಆರೋಪಿತನು ಫಿರ್ಯಾದಿದಾರರನ್ನು ಉದ್ದೇಶಿಸಿ ನೀನು ಸಮವಸ್ತ್ರದಲ್ಲಿ ಇದ್ದರೆ ನನಗೆ ಏನು, ನೀನು ಪೊಲೀಸರಾದರೆ ನಿನಗಾಯ್ತು, ನನಗೇನಾಗಬೇಕು “ಬ್ಲಾಡಿ ಪೊಲೀಸ್” ಎಂದು ಅವಾಚ್ಯಶಬ್ದಗಳಿಂದ ಬೈಯ್ದು ಫಿರ್ಯಾದಿದಾರರ ಮೈಮೇಲೆ ಕೈಹಾಕಿ ಮಾನಹಾನಿ ಮಾಡಿದಾಗ, ಫಿರ್ಯಾದಿದಾರರು ಮತ್ತೆ ಕೂಡಾ ಆರೋಪಿತನಲ್ಲಿ ನೀವು ಈ ರೀತಿ ವರ್ತಿಸುವುದು ಸರಿಯಲ್ಲ, ನನಗೆ ಕರ್ತವ್ಯಕ್ಕೆ ಹೋಗಲು ತಡವಾಗುತ್ತದೆ, ಇಲ್ಲಿಂದ ಹೋಗಿ ಎಂದು ಸಮಾಧಾನದಲ್ಲಿ ತಿಳಿಸಿದರೂ ಆರೋಪಿತನು ಫಿರ್ಯಾದಿಯನ್ನು ಉದ್ದೇಶಿಸಿ ನಿನ್ನನ್ನು ಇಲ್ಲಿಂದ ಹೋಗಲು ಬಿಡುವುದಿಲ್ಲ, ನೀನು ಏನು ಮಾಡುತ್ತೀ ನೋಡುತ್ತೇನೆ ಎಂದು ಹೆದರಿಸಿರುವುದರಿಂದ ಆರೋಪಿತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

Kavoor PS     

ಫಿರ್ಯಾದಿ SMT GANGAMMA ದಾರರ  ಮಗಳಾದ ಚೈತ್ರಾ (21 ವರ್ಷ) ಎಂಬವಳು ದಿನಾಂಕ 29/07/2023 ರಂದು ಎಂದಿನಂತೆ ಮಂಗಳೂರಿನ ಬಿಜೈಯಲ್ಲಿ ಮೊಬೈಲ್ ಶೋರೂಂ ನಲ್ಲಿ ಕೆಲಸಕ್ಕೆ ಹೋಗಿದ್ದು, ಪಿರ್ಯಾದಿದಾರರು ಕೂಡಾ ಮನೆ ಕೆಲಸಕ್ಕಾಗಿ ಮಲ್ಲಿಕಟ್ಟೆ ಕಡೆ ಹೋಗಿದ್ದು, ಅದೇ ದಿನ ಮನೆ ಕೆಲಸ ಮುಗಿಸಿ ಸಂಜೆ 07.00 ಗಂಟೆಗೆ ಪಿರ್ಯಾದಿದಾರರು ಮನೆ ಕಡೆ ಬರುತ್ತಿರುವಾಗ ಮಗಳಾದ ಚೈತ್ರಾ  ರವರಿಗೆ ಪೋನ್ ಕರೆ ಮಾಡಿ  “ ನಾವು ಮಂಗಳೂರಿನಲ್ಲಿ ಇರುವುದು ಬೇಡ್, ನಾವು ಊರಿಗೆ ಹೋಗುವ ನೀನು KSRTC ಬಸ್ ಸ್ಟ್ಯಾಂಡ್ ನಲ್ಲಿ ನಿಲ್ಲು ನಾನು ಬಟ್ಟೆ ತೆಗೆದುಕೊಂಡು ಬರುತ್ತೇನೆ” ಎಂದು ತಿಳಿಸಿದಾಗ ಮಗಳು ಚೈತ್ರಾ ಊರಿಗೆ ಬರುವುದಿಲ್ಲವಾಗಿ ಹಠ ಹಿಡಿದು ಹೇಳಿದಳು. ನಂತರ ಪಿರ್ಯಾದಿದಾರರು ಬಟ್ಟೆ ತರುವ ಬಗ್ಗೆ ಬಸ್ಸಿನಲ್ಲಿ ಹೋಗುವಾಗ ಮಂಗಳೂರಿನ KPT ಬಳಿ ಸಂಜೆ 7.15 ಗಂಟೆಗೆ ತಲುಪಿದಾಗ ಇನ್ನೊಂದು ಬಸ್ಸಿನಲ್ಲಿ ಮಗಳು ಮನೆ ಕಡೆ ಹೋಗುವುದನ್ನು ನೋಡಿ ಪಿರ್ಯಾದಿದಾರರು ಮಗಳಿಗೆ KSRTC ಗೆ ಬರುವಂತೆ ಪೋನ್ ಮಾಡಿ ತಿಳಿಸಿದಾಗ ಮಗಳು ಬರುವುದಿಲ್ಲವಾಗ ತಿಳಿಸಿ ಬಸ್ಸಿನಿಂದ ಇಳಿಯದೇ ಪೋನ್ ಕಟ್ಟ ಮಾಡಿ ಪುನಃ ಮಾಡಿದಾಗ ಕರೆಯನ್ನು ಸ್ವೀಕರಿಸದೇ ಬಸ್ಸಿನಲ್ಲಿ ಯಯ್ಯಾಡಿ ಕಡೆಗೆ ಹೋಗಿದ್ದು ನಂತರ ಮನೆಗೂ ಕೂಡಾ ಬಾರದೇ ಇದ್ದು,  ಈ ಬಗ್ಗೆ ಫಿರ್ಯಾದಿದಾರರು  ಸಂಬಂದಿಕರಲ್ಲಿ ಮತ್ತು ದೇವಸ್ಥಾನಗಳಲ್ಲಿ ಹುಡುಕಾಡಿದ್ದು ಪತ್ತೆಯಾಗದೇ ಕಾಣೆಯಾಗಿರುತ್ತಾಳೆ. ಆದ್ದರಿಂದ ಈ ದಿನ ಠಾಣೆಗೆ ಬಂದು ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 21-08-2023 02:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080