ಅಭಿಪ್ರಾಯ / ಸಲಹೆಗಳು

Crime Report in Traffic North Police Station          

ದಿನಾಂಕ 01-09-2023 ರಂದು ಪಿರ್ಯಾದಿ Vasu ದಾರರು ಬಲ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಲ್ಕಿ ಕವತ್ತಾರಿನಲ್ಲಿರುವ ತನ್ನ ಮನೆಯ ಎದುರು ನಿಂತುಕೊಂಡಿದ್ದು, ಬೆಳಿಗ್ಗೆ ಸಮಯ ಸುಮಾರು 09:30 ಗಂಟೆಗೆ KA-19-X-2954 ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ಶೇಖರ ಎಂಬುವರು ಕುಕ್ಕಟ್ಟೆ ಕಡೆಯಿಂದ ಮುಲ್ಕಿ ಕಡೆಗೆ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು KA-19-EN-3001 ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರನು ಹಿಂಬದಿಯಲ್ಲಿ ಅರುಣ ಶೆಟ್ಟಿ ಎಂಬವರನ್ನು ಸಹಾ ಸವಾರರಾಗಿ ಕುಳ್ಳಿರಿಸಿಕೊಂಡು ಮುಲ್ಕಿ ಕಡೆಯಿಂದ ಕುಕ್ಕಟ್ಟೆ ಗಡೆಗೆ ನಿರ್ಲಕ್ಷ್ಯತನದಿಂದ ಚಲಾಸಿಕೊಂಡು ಬಂದು ಎರಡೂ ವಾಹನಗಳು ಮುಖಾ-ಮುಖಿ ಡಿಕ್ಕಿಯಾಗಿ, ಎರಡೂ ಮೋಟಾರ್ ಸೈಕಲ್ ನ ಅದರ ಸವಾರರು ಹಾಗೂ ಸಹಸವಾರರು ರಸ್ತೆಗೆ ಬಿದ್ದು, ಅರುಣ್ ಶೆಟ್ಟಿ ರವರಿಗೆ ತಲೆಗೆ ಎಡ ಹಣೆಯ ಬಳಿ, ಮುಖದ ಇತರೆ ಕಡೆಗಳಿಗೆ ರಕ್ತಗಾಯ, ದರ್ಶನ್ ಎಲ್ ಶೆಟ್ಟಿ ರವರಿಗೆ ಬಲ ತೋಳಿನಿಂದ ಬಲ ಕಾಲಿನವರಗೆ ತರಚಿದ ಗಾಯ ಹಾಗೂ ಪಾದಕ್ಕೆ ಗುದ್ದಿ ರೀತಿಯ ಗಾಯವಾಗಿದ್ದು ಅಲ್ಲದೆ ಶೇಖರ್ ರವರಿಗೆ ತಲೆಯ ರಕ್ತಯಗಾಯವಾಗಿದ್ದು ದೇಹದ ಇತರೆ ತರಚಿದ ರೀತಿಯ ಗಾಯವಾಗಿರುತ್ತದೆ ಎಂಬಿತ್ಯಾದಿ.

Mulki PS

ಪಿರ್ಯಾದಿದಾರರ ಬಾಬ್ತು ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಕೊರಂಟಬೆಟ್ಟು ಎಂಬಲ್ಲಿ ಕಟ್ಟಡ ಸಂಖ್ಯೆ: 19-29-2 ರಲ್ಲಿ ಶ್ರೀಮತಿ ಸುಮಿತ್ರ ಎಂಬಾಕೆಯು ತನ್ನ ಮೂವರು ಮಕ್ಕಳಾದ ಮಂಜುನಾಥ, ಸಂಜೀವ ಮತ್ತು ಪ್ರಹ್ಲಾದ ಎಂವರೊಂದಿಗೆ ಸುಮಾರು 15 ವರ್ಷದಿಂದ ಬಾಡಿಗೆ ನೆಲೆಯಲ್ಲಿ ವಾಸವಾಗಿದ್ದು,  ಸುಮಿತ್ರರವರು ಮತ್ತು ಅವರ ಮೂವರು ಮಕ್ಕಳು ಕೂಲಿ ಕೆಲಸ ಮಾಡಿಕೊಂಡಿದ್ದು, ಸುಮಿತ್ರಳ ಮಕ್ಕಳಾದ ಮಂಜುನಾಥ, ಸಂಜೀವ, ಪ್ರಹ್ಲಾದ ಎಂಬವರು ಆಗಾಗ ತನ್ನ ತಾಯಿಯ ಜೊತೆಯಲ್ಲಿ ಜಗಳವಾಡುತ್ತಿದ್ದು, ಈ ಹಿಂದೆ 2-3 ಸಲ ಸುಮಿತ್ರಳ ಮಕ್ಕಳು ಆಕೆಯೊಂದಿಗೆ ಜಗಳವಾಡುತ್ತಿದ್ದ ವೇಳೆ ಪಿರ್ಯಾದಿದಾರರು ಸುಮಿತ್ರರವರ ಮನೆಗೆ ಹೋಗಿ ಜಗಳ ಬಿಡಿಸಿ ಸಮಾಧಾನಪಡಿಸಿದ್ದು,  ಸುಮಾರು 1 ತಿಂಗಳ ಹಿಂದೆ ಸುಮಿತ್ರಳೊಂದಿಗೆ ಅವರ ಮಕ್ಕಳು ಜಗಳವಾಡಿದ್ದು, ಪಿರ್ಯಾದಿದಾರರು ಸುಮಿತ್ರಳ ಮನೆಗೆ ಹೋಗಿ ಸಮಾಧಾನ ಪಡಿಸಿ ಸುಮಿತ್ರಳನ್ನು ಅವರ ಊರಾದ ಕಾರವಾರಕ್ಕೆ ಕಳುಹಿಸಿದ್ದರು, ಸುಮಾರು 1 ವಾರದ ಹಿಂದೆ ಸುಮಿತ್ರಳನ್ನು ಅವರ  ಮಕ್ಕಳು ಲಿಂಗಪ್ಪಯ್ಯಕಾಡಿಗೆ ಕರೆತಂದಿದ್ದರು.  ಸುಮಾರು 3-4 ದಿನಗಳ ಹಿಂದೆ ಸುಮಿತ್ರಳೊಂದಿಗೆ ಅವರ ಮಕ್ಕಳಾದ ಸಂಜೀವ ಮತ್ತು ಪ್ರಹ್ಲಾದ್ ರವರು ಮತ್ತೆ ಜಗಳವಾಡಿದ್ದು, ಸುಮಿತ್ರಳು ಪಿರ್ಯಾದಿದಾರರಿಗೆ ಫೋನ್ ಮಾಡಿ ಮಕ್ಕಳು ಜಗಳವಾಡುತ್ತಿದ್ದಾರೆ, ನನಗೆ ಹೊಡೆಯುತ್ತಿದ್ದು, ನೀನು ಸತ್ತರೆ ಸಾಯಿ, ನಾವು ಬೇರೆ ಎಲ್ಲಾದರೂ ಊಟ ಮಾಡುತ್ತೇವೆ, ನಿನ್ನಿಂದ ನನಗೆ ಏನೂ ಆಗಬೇಕಿಲ್ಲ ಎಂದು ಹೇಳುತ್ತಿದ್ದ ಬಗ್ಗೆ ತಿಳಿಸಿದ್ದು, ನಿನ್ನೆ ದಿನಾಂಕ: 31-08-2023 ರಂದು ರಾತ್ರಿ ಸುಮಾರು 10-40 ಗಂಟೆಗೆ ಪಿರ್ಯಾದಿದಾರರು ಸುಮಿತ್ರರವರು ವಾಸವಾಗಿರುವ ಮನೆಯ ಹೊರಬದಿಯ ಸಿಸಿಟಿವಿ ಕ್ಯಾಮರವನ್ನು ಪರಿಶೀಲಿಸಿದಾಗ ಸುಮಿತ್ರಳ ಮಕ್ಕಳು ಅವರ ಮನೆಯ ಒಳಗೆ ಹೊರಗೆ ಗಡಿಬಿಡಿಯಲ್ಲಿ ಓಡಾಡುವುದನ್ನು ಕಂಡು ಸುಮಿತ್ರಳ ಮೊಬೈಲ್ ಪೋನ್ ಗೆ ಕರೆ ಮಾಡಿದಾಗ ಸುಮಿತ್ರಳ ಮಗ ಪ್ರಹ್ಲಾದ್ ನು ಎತ್ತಿ ತಾಯಿ ಮಾತಾಡುವುದಿಲ್ಲ, ಬೇಗ ಬನ್ನಿ ಎಂದು ತಿಳಿಸಿದಂತೆ ಪಕ್ಕದ ಮನೆಯವರಿಗೆ ಕರೆ ಮಾಡಿ ವಿಚಾರಿಸಿದಾಗ ಸುಮಿತ್ರಳು ಕೆಳಗೆ ಮಲಗಿ ಬಿದ್ದುಕೊಂಡಿರುವುದಾಗಿ, ಕರೆಯುವಾಗ ಮಾತಾಡಿರುವುದಿಲ್ಲ ಎಂದು ತಿಳಿಸಿದಂತೆ ಪಿರ್ಯಾದಿದಾರರು ಮುಲ್ಕಿಯ ಲಿಂಗಪ್ಪಯ್ಯಕಾಡಿಗೆ ಬಂದಾಗ ಸುಮಿತ್ರಳು ನೇಣು ಹಾಕಿಕೊಂಡಿದ್ದವಳನ್ನು ಮಕ್ಕಳು ಕೆಳಗಿಳಿಸಿದ್ದನ್ನು ಕಂಡು ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಮುಕ್ಕ ಶ್ರೀನಿವಾಸ ಆಸ್ಪತ್ರೆಯ ವೈದ್ಯರು ಸುಮಿತ್ರಳನ್ನು ಪರೀಕ್ಷಿಸಿ ಆಕೆಯು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದು, ಸುಮಿತ್ರಳು ತನ್ನ ಮಕ್ಕಳಾದ ಮಂಜುನಾಥ, ಸಂಜೀವ, ಪ್ರಹ್ಲಾದ್ ರವರು ತನ್ನೊಂದಿಗೆ ಜಗಳವಾಡುತ್ತಿದ್ದುದರಿಂದ ಬೇಸತ್ತು ಲಿಂಗಪ್ಪಯ್ಯಕಾಡಿನ ಬಾಡಿಗೆ ಮನೆಯಲ್ಲಿ ದಿನಾಂಕ: 31-08-2023 ರಂದು ರಾತ್ರಿ 10-45 ಗಂಟೆಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಮಕ್ಕಳಾದ ಮಂಜುನಾಥ ಸಂಜೀವ ಮತ್ತು ಪ್ರಹ್ಲಾದ್ ರವರ ಕುಡಿದು ಜಗಳವಾಡಿ ಪದೆಪದೆ ಹೊಡೆಯುತ್ತಿದ್ದ ಕಾರಣಕ್ಕಾಗಿ ದುಷ್ಪ್ರೇರಣೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ. ಸುಮಿತ್ರಳು ಆತ್ಮಹತ್ಯೆ ಮಾಡಿಕೊಳ್ಳಲು ದುಷ್ಪ್ರೇರಣೆ ನೀಡಿದ ಸುಮಿತ್ರಳ ಮಕ್ಕಳಾದ 1] ಮಂಜುನಾಥ 2] ಸಂಜೀವ ಮತ್ತು 3] ಪ್ರಹ್ಲಾದ ಇವರುಗಳ ವಿರುದ್ದ ಸೂಕ್ತ ಕಾನೂನು ಕ್ರಮಕ್ಕಾಗಿ ನೀಡಿದ ದೂರು ಎಂಬಿತ್ಯಾದಿ.

Mangalore East PS                                   

ದಿನಾಂಕ : 31-08-2023 ರಂದು ಬೆಳಿಗ್ಗೆ ಸಮಯ ಸುಮಾರು 8:00 ಗಂಟೆಗೆ ಪಿರ್ಯಾದುದಾರರು ಮನೆಯಲ್ಲಿರುವ ಸಮಯ ತಮ್ಮ ಕಾಂಚನ ಹೋಂಡಾ ಶೋ ರೂಮ್ ನಲ್ಲಿ ಹೌಸ್  ಕೀಪಿಂಗ್ ಕೆಲಸ ಮಾಡುವ ಸುಶೀಲಾ ರವರು ಫೋನ್ ಕರೆ ಮಾಡಿ ತಮ್ಮ ಶೋ ರೂಮ್ಗೆ ಯಾರೋ ಒಳಗೆ ಬಂದು ಸಾಮಾಗ್ರಿಗಳು ಚೆಲ್ಲಾಪಿಲ್ಲಿಯಾಗಿದೆ. ಯಾರೋ ಕಳ್ಳರು ಬಂದಿರುವ ರೀತಿ ಇರುತ್ತದೆ ಎಂದು ಹೇಳಿದ ಕೂಡಲೇ ಪಿರ್ಯಾದಿದಾರರು ಶೋ ರೂಮ್ ಗೆ ಹೋಗಿ ಪರಿಶೀಲಿಸಿದಾಗ ಹಿಂಬಾಗಿಲಿನ ಚಿಲಕವನ್ನು ಮೀಟಿದ ರೀತಿಯಲ್ಲಿ ಇದ್ದು, ಬಾಗಿಲು ತೆರದ  ಸ್ಥಿತಿಯಲ್ಲಿ ಇರುತ್ತದೆ ಮುಂದಕ್ಕೆ ನೋಡಲಾಗಿ ಡಿಸ್ ಪ್ಲೇಗೆ ಇಟ್ಟ ಬೈಕ್ ಮತ್ತು ಸ್ಕೂಟರ್ ಗಳ ಪೈಕಿ ನಂಬರ್ ಪ್ಲೇಟ್ ಇಲ್ಲದ ಹೊಸ ಬಿಳಿ ಬಣ್ಣದ ಆಕ್ಟಿವಾ DLX ಸ್ಕೂಟರ್ ಒಂದು ಮತ್ತು ನಂಬರ್ ಪ್ಲೆಟ್ ಇಲ್ಲದ ಕೆಂಪು ಬಣ್ಣದ ಹೊಂಡಾ SP 125 ಬೈಕ್ ಇಟ್ಟ ಜಾಗದಲ್ಲಿ ಇಲ್ಲದೇ ಕಳವಾಗಿರುವುದು ಕಂಡುಬರುತ್ತದೆ. ದಿನಾಂಕ : 30-08-2023 ರಂದು ಸಮಯ ಸುಮಾರು ಸಂಜೆ 7:00 ಗಂಟೆಯಿಂದ ದಿನಾಂಕ: 31-08-2023 ರ ಬೆಳಿಗ್ಗೆ ಸುಮಾರು 8:00 ಗಂಟೆ ಮಧ್ಯೆ ಯಾರೋ ಕಳ್ಳರು ಹಿಂಬಾಗಿಲಿನ ಚಿಲಕವನ್ನು ಮುರಿದು ಒಳಗೆ ಪ್ರವೇಶಿಸಿ ಡಿಸ್ ಪ್ಲೇ ಗೆ ಇಟ್ಟ ಸದರಿ ಬೈಕ್ ಮತ್ತು ಸ್ಕೂಟರ್ ಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಇದರ ಇಂಜಿನ್ - JC94EG0230589 ಚಾಸಿಸ್ ನಂ ME4JC942HPG133386, ಇನ್ನಂದು ಇಂಜಿನ್ ನಂ JK15EG5186792 ಚಾಸಿಸ್ ನಂ ME4JK156HPG186554 ಆಗಿದ್ದು ಕಳವಾದ ವಾಹನಗಳ ಒಟ್ಟು ಅಂದಾಜು ಮೌಲ್ಯ 1,72,084/- ಆಗಿದ್ದು  ಕಳವಾದ ವಾಹನವನ್ನು ಪತ್ತೆ ಮಾಡುವರೇ ಹಾಗೂ ಆರೋಪಿಯನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 01-09-2023 06:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080