ಅಭಿಪ್ರಾಯ / ಸಲಹೆಗಳು

Traffic South Police

ಈ ಪ್ರಕರಣದ ಸಾರಾಂಶವೇನೆಂದರೆ ನಿನ್ನೆ ದಿನ ದಿನಾಂಕ:  31-12-2023 ರಂದು ಫಿರ್ಯಾದಿದಾರರು ISAMMA ತನ್ನ ಸಂಬಂದಿ ಹಾಜಿರಾ ರವರನ್ನು ಕರೆದುಕೊಂಡು ಆಳ್ವರ ಬೆಟ್ಟು ಎಂಬಲ್ಲಿಗೆ ತಲುಪುವರೇ ಆಟೋ ರಿಕ್ಷಾ ನಂ. KA-19-AA-7096 ನೇದರಲ್ಲಿ ಹೊರಟು ಆಳ್ವರ ಬೆಟ್ಟು ಎಂಬಲ್ಲಿಯ ಇಳಿಜಾರು ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು 13-00 ಗಂಟೆಗೆ ನಾಯಿ ಅಡ್ಡ ಬಂದುದರಿಂದ ಆಟೋರಿಕ್ಷಾ ಚಾಲಕ ಮೊಹಮ್ಮದ್ ಸಂಶುದ್ದಿನ್ ಎಂಬಾತನು ಆಟೋ ರಿಕ್ಷಾವನ್ನು ನಿರ್ಲಕ್ಷತನದಿಂದ ಚಲಾಯಿಸಿ ನಿಯಂತ್ರಣ ಕಳೆದುಕೊಂಡು ರಸ್ತೆ ಚರಂಡಿಗೆ ತನ್ನ ಆಟೋರಿಕ್ಷಾವನ್ನು ಬೀಳಿಸಿದ ಪರಿಣಾಮ ರಿಕ್ಷಾದಲ್ಲಿದ್ದ ಫಿರ್ಯಾದಿದಾರ ಬಲಕಾಲಿನ ಪಾದ, ಬಲಭುಜಕ್ಕೆ ಗುದ್ದಿದ ಮತ್ತು ತರಚಿದ ಗಾಯಗಳಾಗಿದ್ದು, ಜೊತೆ ಪ್ರಯಾಣಿಕರಾಗಿದ್ದ ಹಾಜಿರಾ ರವರಿಗೆ ಎಡಕೈ ತೋಳಿನಲ್ಲಿ ಮೂಳೆ ಮುರಿತದ ಗಾಯ, ಬಲಕಣ್ಣಿನ ಮೇಲ್ಭಾಗದಲ್ಲಿ ಗುದ್ದಿದ ಗಾಯ, ಬಲಕೈ ಮಣಿಗಂಟಿನ ಬಳಿ ತರಚಿದ ರಕ್ತಗಾಯ ಉಂಟಾಗಿರುತ್ತದೆ. ಅಪಘಾತದ ಸಮಯ ಸ್ಥಳದಲ್ಲಿ ಸೇರಿದವರು ಫಿರ್ಯಾದಿದಾರರನ್ನು ಮತ್ತು ಸಹ ಪ್ರಯಾಣಿಕರಾದ ಹಾಜಿರಾ ರವರನ್ನು ಉಪಚರಿಸಿ ವಾಹನವೊಂದರಲ್ಲಿ ಕಣಚೂರು ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬಿತ್ಯಾದಿ.

 

Traffic North Police

ಈ ಪ್ರಕರಣದ ಸಾರಾಂಶವೇನಂದರೆ, ಪಿರ್ಯಾದಿದಾರರ ಪಿಂಗಾರ ಹೊಟೇಲಿನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುವ Krishna Kumar Jamatia(38) ಎಂಬಾತನು ತನ್ನ ಕೆಲಸ ಮುಗಿದ ಬಳಿಕ ಹೊಟೇಲ್ ಹಾಗೂ ಹೊಟೇಲಿನ ಅವರಣ ಕ್ಲೀನ್ ಮಾಡಿದ ಬಳಿಕ ವಿಶ್ರಾಂತಿ ಪಡೆಯುವ ಸಲುವಾಗಿ ದಿನಾಂಕ 01-12-2024 ರಂದು ಬೆಳಗಿನ ಜಾವ ಸಮಯ 00:55 ಗಂಟೆಗೆ ಪಿಂಗಾರ ಹೊಟೇಲಿನಿಂದ  NH 66 ನೇ ಡಾಮರು ರಸ್ತೆಯ ಪೂರ್ವ ಬದಿಯಲ್ಲಿರುವ ಚಿಂಟು ಡಾಭಾ ಹೊಟೀಲಿನ ಹಿಂಭಾಗದಲ್ಲಿರುವ ವಿಶ್ರಾಂತಿ ಕೊಠಡಿಗೆ ಹೋಗುವ ಸಲುವಾಗಿ NH66 ನೇ ಡಾಮರು ರಸ್ತೆಯ ಮಧ್ಯದ ಡಿವೈಡರ್ ದಾಟಿ ರಸ್ತೆಯ ಇನ್ನೊಂದು ಬದಿಗೆ ಹೋಗುತ್ತಿದ್ದಂತೆ ಬೆಳಗಿನ ಜಾವ ಸಮಯ ಸುಮಾರು 01:00 ಗಂಟೆಗೆ KA-18-MA-7902 ನಂಬ್ರದ ಕಾರನ್ನು Shahan Ahamed ಎಂಬಾತನು ಹೊಸಬೆಟ್ಟು ಜಂಕ್ಷನ್ ಕಡೆಯಿಂದ ಹೊನ್ನಕಟ್ಟೆ ಕಡೆಗೆ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತಿದ್ದ Krishna Kumar Jamatia ಎಂಬಾತನಿಗೆ ಡಿಕ್ಕಿ ಪಡಿಸಿದ ಪರಿಣಾಮ ಆತನ ತಲೆಯ ಹಿಂಭಾಗ ಚರ್ಮಹರಿದ ಗಭೀರ ಸ್ವರೂಪದ ಗಾಯವಾಗಿ ಚಿಕಿತ್ಸೆಯ ಬಗ್ಗೆ AJ ಆಸ್ಪತ್ರೆಯಲ್ಲಿಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ

 

Konaje PS        

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ:01-01-2024 ರಂದು ಪಿರ್ಯಾದಿದಾರರು ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಮಯ 09.30 ಗಂಟೆಗೆ ಉಳ್ಳಾಲ ತಾಲೂಕು ಕೊಣಾಜೆ ಗ್ರಾಮದ ಅಸೈಗೋಳಿ ಜಂಕ್ಷನ್ ಬಳಿ   ಅಮಲು ಪದಾರ್ಥ ಸೇವನೆ ಮಾಡಿ ನಶೆಯಲ್ಲಿದ್ದಂತೆ ಕಂಡು ಬಂದ ವಿರೂಪಾಕ್ಷ, ಪ್ರಾಯ 26 ವರ್ಷ, ತಂದೆ : ಶಂಕರಯ್ಯ, ವಾಸ : ಪೊಲೀಸ್ ಕ್ವಾಟ್ರಸ್ ಬಳಿ, ರಾಜೀವ ನಗರ, ಶಕ್ತಿನಗರ, ಮಂಗಳೂರು ತಾಲೂಕು ಎಂಬಾತನನ್ನು ವಶಕ್ಕೆ ಪಡೆದುಕೊಂಡು ಮಂಗಳೂರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿಯು TETRAHYDROCANNABINOL ಎಂಬ ಗಾಂಜ ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ ಎಂಬಿತ್ಯಾದಿ

 

Mulki PS  

ಪಿರ್ಯಾದಿದಾರರು ದಿನಾಂಕ: 31-12-2023 ರಂದು ಠಾಣಾ ವ್ಯಾಪ್ತಿಯಲ್ಲಿ ಸಿಬ್ಬಂದಿಯವರೊಂದಿಗೆ ಇಲಾಖಾ ವಾಹನ ಸಂಖ್ಯೆ: ಕೆಎ-19-ಜಿ-0513ನೇ   ದರಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ 10-00 ಗಂಟೆಗೆ ಬಾತ್ಮೀದಾರರಿಂದ ಬಂದ ಮಾಹಿತಿಯಂತೆ ಬಪ್ಪನಾಡು ಗ್ರಾಮದ ಬಪ್ಪನಾಡು ಬ್ರಿಡ್ಜ್ ಮೇಲೆ   10-15 ಗಂಟೆಗೆ ದಾಳಿ ನಡೆಸಿ ಬೀಡಿಯೊಂದಿಗೆ ಗಾಂಜಾವನ್ನು ತುಂಬಿಸಿ ಸೇವನೆ ಮಾಡಿ ನಶೆಯಲ್ಲಿ ಸದ್ರಿ ರಸ್ತೆಯಲ್ಲಿ ನಡೆದಾಡುವ ಮತ್ತು ವಾಹನದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಜೋರಾಗಿ ಮಾತನಾಡುತ್ತಾ, ಕಿರುಚಾಡುತ್ತಿದ್ದ ಆಪಾದಿತ   ಶೆಹರಾಜ್ ಎಂಬಾತನನ್ನು ವಶಕ್ಕೆ ಪಡೆದು ಮಾದಕ ವಸ್ತು ಸೇವನೆ ಮಾಡಿರುತ್ತಾನೆಯೇ ಎಂಬ ಬಗ್ಗೆ ಖಚಿತ ಪಡಿಸುವ ಸಲುವಾಗಿ ಆತನನ್ನು ಮಂಗಳೂರು ಎ.ಜೆ. ಆಸ್ಪತ್ರೆಯ ವೈದ್ಯಾಧಿಕಾರಿಯವರಲ್ಲಿ ತಪಾಸಣೆಗೆ ಒಳಪಡಿಸಿದ್ದಲ್ಲಿ ಆಪಾದಿತ ಶೆಹರಾಜ್ ಎಂಬಾತನು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 01-01-2024 09:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080