ಅಭಿಪ್ರಾಯ / ಸಲಹೆಗಳು

Crime Report in  Kavoor PS      

ಮೃತ ಸೋನು ಸಿಂಗ್ ಗೋಂಡಾ ರವರು ಮೂಡುಶೆಡ್ಡೆಯಲ್ಲಿರುವ ಶಾಮಿಯಾನದಲ್ಲಿ ಕಳೆದ 5 ತಿಂಗಳಿಂದ ಕೆಲಸ ಮಾಡಿಕೊಂಡಿದ್ದು ಶಾಮಿಯಾನ ಅಂಗಡಿಯು ಮೂಡುಶೆಡ್ಡೆ ಗ್ರಾಮ ಪಂಚಾಯತ್ ಕಛೇರಿ ಬಳಿ ಇದ್ದು  ದಿನಾಂಕ-31-10-2023 ರಂದು ಶಾಮಿಯಾನ ಕೆಲಸ ಮುಗಿಸಿಕೊಂಡು ಸಾಯಂಕಾಲ 7:00 ಗಂಟೆಗೆ ಮೂಡುಶೆಡ್ಡೆ ಶಾಮಿಯಾನ ಅಂಗಡಿಗೆ ಬಂದು ನಂತರ ರಾತ್ರಿ 7:45 ಊಟ ರೆಡಿ ಮಾಡಲೆಂದು ಅಂಗಡಿಯ ಸಿಮೆಂಟ್ ಸೀಟ್ ಗೆ ಅಳವಡಿಸಿದ್ದ ಕಬ್ಬಿಣದ ಪಕ್ಕಾಸಿಗೆ ಕಬ್ಬಿಣದ ರಾಡ್ ಸಿಕ್ಕಿಸಿ ಅದರಲ್ಲಿ ತೊಟ್ಟೆಯೊಂದರಲ್ಲಿ ನೀರುಳ್ಳಿ ನೇತು ಹಾಕಿದ್ದು ಅದನ್ನು ತೆಗೆಯಲು ಕಬ್ಬಿಣದ ರಾಡನ್ನು ಮುಟ್ಟಿದಾಗ ಕಬ್ಬಿಣದ ರಾಡ್ ನಲ್ಲಿದ್ದ ವಿದ್ಯುತ್ ಶಾಕ್ ತಗುಲಿ ಕಂಪಿಸಿದಾಗ ಪಿರ್ಯಾದಿದಾರರು ಅಲ್ಲೆ ಇದ್ದ ಪ್ಲಾಸ್ಟಿಕ್ ರೌಂಡ್ ಟೇಬಲ್ ನ ಕಾಲಿನಿಂದ ದೂಡಿ ಕೆಳಗೆ ಬೀಳುವಂತೆ ಮಾಡಿ ವಿದ್ಯುತ್ ಶಾಕ್ ನಿಂದ ಯಾವುದೇ ಚಲನವು ಇಲ್ಲದ ಸೋನು ಸಿಂಗ್ ಗೋಂಡಾ ರವರನ್ನು ರಿಕ್ಷಾವೊಂದರಲ್ಲಿ ಹಾಕಿಕೊಂಡು ಪಿರ್ಯಾದಿದಾರರು ಪಾಧರ್ ಮುಲ್ಲರ್ ಆಸ್ಪತ್ರೆಗೆ ತಂದಾಗ ವೈದ್ಯಾಧಿಕಾರಿಗಳು ಪರೀಶೀಲಿಸಿ ಸೋನು ಸಿಂಗ್ ಗೊಂಡಾರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಘಟನೆಗೆ ಶಾಮಿಯಾನ ಅಂಗಡಿಯ ಮಾಲೀಕ  ರವರು ವಿಧ್ಯುತ್ ಸಂಪರ್ಕವನ್ನು ಅಸಮರ್ಪಕವಾಗಿ ಅಳವಡಿಸಿರುವುದರಿಂದ ಸೋನು ಸಿಂಗೆ ಗೊಂಡಾ ರವರಿಗೆ ವಿದ್ಯುತ್ ಶಾಕ್ ತಗುಲಿ ಮೃತ ಪಟ್ಟಿರುವುದು  ಕಾರಣವಾಗಿರುತ್ತದೆ ಆದುದರಿಂದ ಆತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

CEN Crime PS

ದಿನಾಂಕ: 16-10-2023 ರಂದು ಟ್ಯೂನ್ ಎಂಬ ಕಂಪನಿ ಎಜೆಂಟ್ ಎಂದು ಪಿರ್ಯಾದಿದಾರರನ್ನು ಸಂಪರ್ಕಿಸಿ ಟೆಲಿಗ್ರಾಮ್ ಖಾತೆಗೆ ಪಾರ್ಟ್ ಟೈಮ್ ಉದ್ಯೋಗ ವೆಬ್ ಸೈಟ್ ಮೂಲಕ ಸಂಹವನ ನಡೆಸಿ ಟ್ಯೂನ್ ಕಂಪನಿಯ ುತ್ಪನಗಳಿಗೆ ರೇಟಿಂಗ್ಸ್ ನ್ನು ನೀಡುವ ಕೆಲಸ ವಾಗಿದ್ದು ಅದಕ್ಕೆ ಪ್ರತಿಯಾಗಿ ಕಮಿಷನ್ ಮತ್ತು ಬೊನಸ್ ನ್ನು ನೀಡುವುದಾಗಿ, ಕೆಲಸವನ್ನು ಆರಂಭಿಸಲು ಮೂಲ ದರವನ್ನು ಇಂತಿಷ್ಟು ತೆರಬೇಕೆಂದು ಸೂಚಿಸಿ ವರ್ಕ್ ಹೋಮ್ ಮತ್ತು ಪಾರ್ಟ್ ಟೈಮ್ ಕೆಲಸ ಹಂಬಲದಿಮದ ಮೊದಲು. 10,077/-,25,600/- ನ್ನು ಪಾವತಿಯನ್ನು ಮಾಡಿಕೊಂಡು ಕೆಲಸವನ್ನು ಪ್ರಾರಂಭಿಸಿದೆನು ನಂತರ ಪ್ರತಿ ಹಂತದಲ್ಲಿ ಲಕ್ಸುರಿ ಪ್ರಾಡಕ್ಟ್ ಎನ್ನುವ ನೆಪದಲ್ಲಿ 30,000/- 50,008/- 20,000/- 3,73,391/-  1,27,073/-  24,372/- ಮತ್ತೋಷ್ಟು ಹಣವನ್ನು ಬೇರೆ ಬೇರೆ ಮರ್ಚಂಟ್ ಖಾತೆಗಳಿಗೆ ಪಾವತಿ ಮಾಡಿಸಿಕೊಂಡಿರುತ್ತಾರೆ ನಂತರ ಪಿರ್ಯಾದೆಇದಾರರಿಗೆ ಸೀನಿಯರ್ ಮ್ಯಾನೇಜರ್ ಎಂದು 7339548271 ನೇದರಿಂದ ಕರೆ ಮಾಡಿ ಹತ್ತು ಲಕ್ಷ ರೂಪಾಯಿ ಕಟ್ಟಿದರೆ ಸಂಪೂರ್ಣ ಹಣವನ್ನು ಹಿಂಪಡೆಯುವುದಾಗಿ ತಿಳಿಸಿ ಯಾರೋ ಅಪರಿಚಿತ ವ್ಯಕ್ತಿಯು ಹೀಗೆ ಹಂತ ಹಂತವಾಗಿ ಸುಮಾರು ಲಾಭ ನೀಡುವುದಾಗಿ ಹೇಳಿ ಪಿರ್ಯಾದಿದಾರರ  ದಿನಾಂಕ 18-10-2023 ರಿಂದ 26-10-2023ರ ವರೆಗೆ ಒಟ್ಟು 6,50,000/-ರೂ.ಗಳನ್ನು ಹಂತ ಹಂತವಾಗಿ ವರ್ಗಾಯಿಸಿಕೊಂಡು ಈ ವರೆಗೆ ಪಿರ್ಯಾದಿದಾರರಿಗೆ ಯಾವುದೇ ಹಣವನ್ನು ಮರುಪಾವತಿ ಮಾಡದೆ ಮೋಸ ಮಾಡಿರುತ್ತಾರೆ ಎಂಬಿತ್ಯಾದಿ.

Traffic South Police Station          

ಪಿರ್ಯಾದಿದಾರರಾದ ಎಮ್, ಜೆ, ಅಬ್ದುಲ್ ಬಶೀರ್(55) ರವರು ನೀಡಿದ ದೂರಿನಂತೆ ದಿನಾಂಕ:30-10-2023 ರಂದು ಪಿರ್ಯಾದಿದಾರರು ತಮ್ಮ ವ್ಯವಹಾರ ಮುಗಿಸಿ ಮಗನ ಮನೆ ತೊಕ್ಕಟ್ಟಿನಲ್ಲಿರುವ  ಕಿಂಗ್ ಡಮ್  ಟವರ್  ಅಪಾರ್ಟ್ ಮೆಂಟ್ ಗೆ ತೆರಳಿ ಅಲ್ಲಿ ಅವರ ಮೊಮ್ಮಗನಾದ  ಐಮನ್ ಇಬ್ರಾಹಿಂ(3) ಅವರನ್ನು ಕರೆದುಕೊಂಡು ಅಪಾರ್ಟ್ ಮೆಂಟ್ ಎದುರುಗಡೆ ಇರುವ ಬ್ಲಾಕ್ ಕಟ್ ಸೆಲೂನ್ ನಲ್ಲಿ ನನ್ನ ಮೊಮ್ಮಗನಿಗೆ ಹೇರ್ ಕಟ್ ಮಾಡಿಸಿ ವಾಪಸ್ಸು ಅದೇ ಅಪಾರ್ಟ್ ಮೆಂಟ್ ಗೆ ತೆರಳುವ ವೇಳೆ ಸಂಜೆ ಸುಮಾರು 5-30 ಗಂಟೆಗೆ ಕಲ್ಲಾಪು ನಾಗನಕಟ್ಟೆ ಬಳಿ ಇರುವ ಅಲ್ ಇದಾಯನ್ ಜುಮ್ಮಾ ಮಸೀದಿ ಮುಂಭಾಗ ಹಾದು ಹೋಗುವ ರಾ.ಹೆ-66(ತಲಪಾಡಿ –ಮಂಗಳೂರು)ರಸ್ತೆ ದಾಟಿ ರಸ್ತೆ ಮುಂಭಾಗದಿಂದ ಮತ್ತೆ ಹಾದು ಹೋಗುವ ರಾ.ಹೆ. ಮಂಗಳೂರು ತಲಪಾಡಿ ರಸ್ತೆಯನ್ನು ದಾಟುತ್ತಿದಾಗ ಮಂಗಳೂರು ಕಡೆಯಿಂದ ಮೋಟಾರ್ ಸೈಕಲ್ ಸವಾರನು ತನ್ನ ಮೋಟಾರು ಸೈಕಲ್ ನ್ನು ಅತೀ ವೇಗ ಮತ್ತು ದುಡುಕುತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದಿರುತ್ತಾನೆ.ಇದರ ಪರಿಣಾಮ ಪಿರ್ಯಾದಿದಾರರು ಮತ್ತು ಅವರ ಮೊಮ್ಮಗನಾದ ಐಮನ್ ಇಬ್ರಾಹಿಂ(3) ರಸ್ತೆಗೆ ಬಿದ್ದಿದ್ದು, ಇದರ ಪರಿಣಾಮ ಪಿರ್ಯಾದಿದಾರರ ಬಲಕಾಲಿಗೆ ಮೂಳೆ ಮುರಿತದ, ಹಾಗೂ ಎಡಕಾಲಿಗೆ ತೆರಚಿದ ಗಾಯವಾಗಿದ್ದು ನಂತರ ಯೆನಪೋಯ ಆಸ್ಪತ್ರಗೆ ಚಿಕಿತ್ಸೆಗೆ ತೆರಳಿದ್ದು ಅಲ್ಲಿ ಹೆಚ್ಚಿನ ಚಿಕಿತ್ಸೆಗೆ ತೇಜಸ್ವೀನಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಪಿರ್ಯಾದಿದಾರರ ಮೊಮ್ಮಗನಾದ ಐಮನ್ ಇಬ್ರಾಹಿಂ(3) ಸಹರಾ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ದಾಖಲಾಗಿರುತ್ತಾರೆ.  ಸದ್ರಿ ಡಿಕ್ಕಿ ಪಡಿಸಿದ ಮೋಟಾರ್ ಸೈಕಲ್ ನಂ- KA-70-H-4411 ಮತ್ತು ಅದರ ಸವಾರನ ಹೆಸರು ಮಹಮ್ಮದ್ ಇಸ್ಮಾಯಿಲ್(28) ಎಂಬುದಾಗಿ ತಿಳಿದುಬಂದಿರುತ್ತದೆ. ಎಂಬಿತ್ಯಾದಿ

Barke PS

ಪಿರ್ಯಾದಿದಾರರಾದ ಶ್ರೀ ಮನೀಷ್ ರಾವ್ ಎಂಬುವರು ಮಣ್ಣಗುಡ್ಡೆಯಲ್ಲಿ ಮೀನು ವ್ಯಾಪಾರ ಕೆಲಸ ಮಾಡಿಕೊಂಡಿದ್ದು, ದಿನಾಂಕ: 30-10-2023 ರಂದು ಎಂದಿನಂತೆ ತನ್ನ ಕೆಲಸವನ್ನು ಮುಗಿಸಿ ಸಮಯ ಸುಮಾರು 8-00 ಗಂಟೆಗೆ ನ್ಯಾಷನಲ್ ಬೋಳೂರು ಏಡ್ಜ್ ವಾಟರ್ ಎದುರುಗಡೆ ಇರುವ ಕಾಳಿ ಚರಣ್ ಫ್ರೇಂಡ್ಸ್ ಕ್ಲಬ್ ನಲ್ಲಿ ಪಿರ್ಯಾದಿದಾರರು ತನ್ನ ಸ್ನೇಹಿತರೊಂದಿಗೆ ಮಾತನಾಡಿಕೊಂಡು ರಾತ್ರಿ ಸಮಯ ಸುಮಾರು 10-00 ಗಂಟೆಗೆ ತಾನು ಮತ್ತು ಅವರ ಸ್ನೇಹಿತರಾದ ನಿಹಾಲ್, ವೈಭವ್ ರವರೊಂದಿಗೆ ಕ್ಲಬ್ ನ ಬಾಗಿಲನ್ನು ಹಾಕಿಕೊಂಡು ಮನೆಗೆ ತೆರೆಳುವ ಸಮಯ ಪಿರ್ಯಾದಿದಾರರಿಗೆ ಈ ಮೊದಲೆ ಗುರುತು ಪರಿಚಯವಿರುವ ಅವಿನಾಶ್, ರೋಶನ್ ಕಿಣಿ ಎಂಬುವರು ಪಿರ್ಯಾದಿದಾರರ ಬಳಿ ಬಂದು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ “ನೀನು ಭಾರಿ ಪೋಲಿಸರಿಗೆ ಗಾಂಜಾ ಸೇವನೆ ಮಾಡಿರುವ ಬಗ್ಗೆ ನಮ್ಮ ಮೇಲೆ ದೂರು ನೀಡುತ್ತೀಯಾ ಬೇವರ್ಸೀ ರಂಡೇ ಮಗ” ಎಂದು ಅವ್ಯಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರಿಗೆ ಅವಿನಾಶ್ ಎಂಬಾತನು ಕೈಯಿಂದ ಏಕಾಏಕಿ ಪಿರ್ಯಾದಿಯ ಬಲ ಕೆನ್ನೆ ಹೊಡಿದ್ದು, ಅದೇ ಸಮಯದಲ್ಲಿ ಪಿರ್ಯಾದಿದಾರರ ಸ್ನೇಹಿತರಾದ ವೈಭವ್ ಮತ್ತು ನಿಹಾಲ್ ರವರು ಮಧ್ಯಕ್ಕೆ ಬಂದು ಗಲಾಟೆಯನ್ನು ಬಿಡಿಸಲು ಪ್ರಯತ್ನಿಸಿದಾಗ ಅವಿನಾಶ್ ಜೊತೆಯಲ್ಲಿ ರೋಶನ್ ಕಿಣಿ ಹಾಗೂ ಶಿವು ಎಂಬುವರು ಪಿರ್ಯಾದಿದಾರರಿಗೆ ಕೈಯಿಂದ ಹಲ್ಲೆ ಮಾಡಿ ನಿನಗೆ ಮತ್ತು ನಿಮ್ಮ ಫ್ರೇಂಡ್ಸ್ ಕ್ಲಬ್ ನವರಿಗೆ ಜೀವಂತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಅವರಿಬ್ಬರೂ ಫ್ರೇಂಡ್ಸ್ ಕ್ಲಬ್ ನ ಬಾಗಿಲಿನ ಬೀಗವನ್ನು ಹೊಡೆದು ಹಾಕಿ ಸುಮಾರು ರೂ.200/- ನಷ್ಟುಂಟು ಮಾಡಿರುವುದಾಗಿದೆಂಬಿತ್ಯಾದಿ.

Moodabidre PS

ಪಿರ್ಯಾದಿದಾರರು ದಿನಾಂಕ 31-10-2023 ರಂದು 21.45 ಗಂಟೆಗೆ ಠಾಣೆಯಲ್ಲಿರುವಾಗ ಭಾತ್ಮಿದಾರರೊಬ್ಬರು ಮೂಡಬಿದರೆಯ ಬೆಳುವಾಯಿ ಗ್ರಾಮದ ಮೂಡಾಯಿಕಾಡಿನ ದೇವಿನಗರ ಎಂಬಲ್ಲಿ ಉಲಾಯಿ ಪಿದಾಯಿ ಎಂಬ ಜುಗಾರಿ ಆಟ ನಡೆಯುತ್ತಿರುವ ಬಗ್ಗೆ ನೀಡಿದ ಖಚಿತ ಮಾಹಿತಿಯನ್ನಾಧರಿಸಿ ಮಾಹಿತಿ ಬಂದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಂತು ಗಮನಿಸಿದಾಗ ಅಲ್ಲೇ ಸ್ವಲ್ಪ ದೂರದಲ್ಲಿರುವ ಒಂದು ಶೆಡ್ ನಲ್ಲಿ ಬೆಡ್ ಶೀಟ್ ನ್ನು ನೆಲಕ್ಕೆ ಹಾಸಿ ಕೆಲವರು ಹಣವನ್ನು ಪಣವನ್ನಾಗಿ ಇಟ್ಟು ಉಲಾಯಿ- ಪಿದಾಯಿ ಎಂಬ ಜುಗಾರಿ ಅದೃಷ್ಟದ ಆಟವನ್ನು ಆಡುತ್ತಿರುವುದನ್ನು ಖಚಿತಪಡಿಸಿಕೊಂಡು 22.15 ಗಂಟೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ಮಾಡಲು ಹತ್ತಿರ ಹೋಗುತ್ತಿದ್ದಂತೆ ಸಮವಸ್ತ್ರದಲ್ಲಿದ್ದವರನ್ನು ಹಾಗೂ ಸಿಬ್ಬಂದಿಗಳನ್ನು ನೋಡಿ ಜುಗಾರಿ ಆಟ ಆಡುತ್ತಿದ್ದ 6 ಜನರನ್ನು ಸಿಬ್ಬಂದಿಗಳೊಂದಿಗೆ ಸುತ್ತುವರೆದು ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ಆರೋಪಿಗಳೆಲ್ಲರೂ ಸೇರಿಕೊಂಡು ಹಣವನ್ನು ಪಣವಾಗಿಟ್ಟು ಉಲಾಯಿ-ಪಿದಾಯಿ ಎಂಬ ಅದೃಷ್ಟದ ಜುಗಾರಿ ಆಟ ಆಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡಿದ್ದು, ಜುಗಾರಿ ಆಟಕ್ಕೆ ಬಳಸಿದ ಇಸ್ಪಿಟ್ ಎಲೆಗಳು-52 ಬೆಡ್ ಶೀಟ್-01 ಹಾಗೂ ನಗದು 9,860/- ರೂ ಮತ್ತು ಜುಗಾರಿ ಆಟಕ್ಕೆ ಬಳಿಸಿದ ಸೊತ್ತುಗಳು ಸೇರಿ ಒಟ್ಟು ಮೌಲ್ಯ ರೂ 8,84,860/- ನ್ನು ಸ್ವಾಧೀನಪಡಿಸಿಕೊಂಡ ಸೊತ್ತುಗಳ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ನೀಡಿದ ದೂರು ಎಂಬಿತ್ಯಾದಿ.

Moodabidre PS

ದಿನಾಂಕ 24.10.2023 ರಂದು ರಾತ್ರಿ 08.30 ಗಂಟೆಯಿಂದ ದಿನಾಂಕ 25.10.2023 ರಂದು ಬೆಳಿಗ್ಗೆ 04.30 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರ ಬಾಬ್ತು KA-19-EX-4848 ನಂಬರಿನ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮೋಟಾರು ಸೈಕಲ್‌ನ್ನು ಪಿರ್ಯಾದಿದಾರರು ವಾಸವಿರುವ ಮೂಡಬಿದ್ರೆ ತಾಲೂಕಿನ ಮಾರ್ಪಾಡಿ ಗ್ರಾಮದ ಜೈನ್ ಪೇಟೆಯ ಬಡಗ ಬಸದಿ ಎದುರು ಇರುವ ದೇವಿಕೃಪ ಅಪಾರ್ಟ್‌ಮೆಂಟ್ ನ ಪಾರ್ಕಿಂಗ್ ಸ್ಥಳದಿಂದ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 01-11-2023 03:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080