ಅಭಿಪ್ರಾಯ / ಸಲಹೆಗಳು

Crime Report in : Panambur PS

ಪಿರ್ಯಾದುದಾರರು DEVAKI  ಸುಮಾರು 25 ವರ್ಷಗಳಿಂದ ಬೈಕಂಪಾಡಿಯಲ್ಲಿರುವ ಗೇರುಬೀಜ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಅದರಂತೆ ಪಿರ್ಯಾದಿದಾರರು  ದಿನಾಂಕ 30-11-2023 ರಂದು ಕೆಲಸಕ್ಕೆ ತೆರಳಿದ್ದು,  ಸದ್ರಿ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಸಮಯ ಸುಮಾರು ಮದ್ಯಾಹ್ನ 2-30 ಗಂಟೆಗೆ ಪ್ಯಾಕ್ಟರಿಯ ಒಳಗಿನ ಯಂತ್ರಕ್ಕೆ ಪಿರ್ಯಾದುದಾರರ ಬಲಕೈ ಸಿಲುಕಿ ಅಂಗೈಯ ಮೊಣಗಂಟಿನಿಂದ ಕೈ ತುಂಡಾಗಿ ಬೇರ್ಪಟ್ಟಿರುತ್ತದೆ. ಸದ್ರಿ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಸಿಬ್ಬಂದಿಗಳಾದ ಹೇಮಲತಾ ಹಾಗೂ ಇತರರು ಪ್ಯಾಕ್ಟರಿಯ ವಾಹನದಲ್ಲಿ ಮಂಗಳೂರು ನಗರದ ಎ.ಜೆಆಸ್ಫತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದು, ವೈದ್ಯಧಿಕಾರಿಯವರು ಪರೀಕ್ಷಿಸಿ ಚಿಕಿತ್ಸೆ ನೀಡಿರುತ್ತಾರೆ.  ಗೇರುಬೀಜ ಪ್ಯಾಕ್ಟರಿಯಲ್ಲಿ ಕೆಲಸ ಮಾಡುವ ವೇಳೆ ಮಾಲಕರು ಹಾಗೂ ಆಡಳಿತ ವರ್ಗದವರು ನಿರ್ಲಕ್ಷತೆಯಿಂದ  ಕೆಲಸ ಮಾಡಿಸಿರುವುದರಿಂದಲೇ ಈ ಘಟನೆ ನಡೆದಿರುತ್ತದೆ ಎಂಬಿತ್ಯಾದಿ.

Traffic North Police Station

ಪಿರ್ಯಾದಿದಾರರ Chethan Kumar ಅಣ್ಣ ಸಂತೋಷ್ ಕೋಟ್ಯಾನ್ (38 ವರ್ಷ) ಎಂಬವರು ದಿನಾಂಕ 30.11.2023 ರಂದು ರಾತ್ರಿ ವೇಳೆಗೆ ತನ್ನ ಬಾಬ್ತು ಸ್ಕೂಟರ್ ನಂಬ್ರ KA-19HB-7023 ನೇಯದನ್ನು ಸುರತ್ಕಲ್ ಕಡೆಯಿಂದ ಮುಲ್ಕಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ರಾತ್ರಿ ಸಮಯ ಸುಮಾರು 9:00 ಗಂಟೆಗೆ ಪಾವಂಜೆ ಸೇತುವೆ ಮೇಲೆ ತಲುಪಿದಾಗ ಸ್ಕೂಟರನ್ನು ನಿರ್ಲಕ್ಷ್ಯತನದಿಂದ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿದ ಪರಿಣಾಮ ಸ್ಕೂಟರ್ ಸಂತೋಷ್ ಕೋಟ್ಯಾನ್ ರವರ ಹತೋಟಿ ತಪ್ಪಿ ಪಾವಂಜೆ ಸೇತುವೆಯ ಎಡಭಾಗದ ದಂಡೆಗೆ ಢಿಕ್ಕಿ ಹೊಡೆದ ಪರಿಣಾಮ ಸಂತೋಷ್ ಕೋಟ್ಯಾನ್ ರವರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಅವರ ತಲೆಗೆ ಗುದ್ದಿದ ರೀತಿಯ ಗಂಭೀರ ಗಾಯ, ತಲೆಯ ಹಿಂಬದಿ ಚರ್ಮ ಹರಿದ ಗಾಯವಾಗಿದ್ದು ಅಲ್ಲದೇ ಕಿವಿಯಿಂದ ರಕ್ತ ಸೋರುತ್ತಿದ್ದು, ಗಾಯಾಳು ಸಂತೋಷ್ ಕೋಟ್ಯಾನ್ ರವರನ್ನು ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂಟಿಕಾನ ಎ.ಜೆ. ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬಿತ್ಯಾದಿ

Traffic North Police Station

ದಿನಾಂಕ 01-12-2023 ರಂದು ಪಿರ್ಯಾದಿ Rajesh Kotian ಅತ್ತೆಯವರಾದ ಇಂದಿರಾ ರವರು ಬೆಳಿಗ್ಗೆ ಸಯಮ ಸುಮಾರು 08:30 ಗಂಟೆಗೆ ಕೊಟ್ಟಾರ ಜಂಕ್ಷನ್ ಬಳಿ ಇರುವ NHAI ರವರ ಬಾಬ್ತು ಬಸ್ಸ್ ತಂಗುದಾಣ ಕಡೆಯಿಂದ ಪ್ಲೈಓವರ್ ಕಡೆಗೆ ರಸ್ತೆ ದಾಟುತ್ತಿದ್ದಂತೆ ಕೋಡಿಕಲ್ ಕಡೆಯಿಂದ ಕಾರೊಂದನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಇಂದಿರಾ ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಇಂದಿರಾ ರವರು ಕಾಂಕ್ರೀಟ್ ರಸ್ತೆಗೆ ಬಿದ್ದು, ತಲೆಗೆ ಗಂಭೀರ ಸ್ವರೂಪದ ಗಾಯ, ತಲೆಯ ಎಡಬದಿ ಮತ್ತು ಬಲ ಹುಬ್ಬಿನಲ್ಲಿ ಚರ್ಮ ಹರಿದ ರಕ್ತಗಾಯ ಹಾಗೂ ಮೈ ಕೈ ಗಳಿಗೆ ತರಚಿದ ರೀತಿಯ ಗಾಯಗಳಾಗಿರುತ್ತದೆ. ನಂತರ ಚಿಕಿತ್ಸೆಯ ಬಗ್ಗೆ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿ ದಾಖಲಾಗಿರುತ್ತಾರೆ. ಡಿಕ್ಕಿ ಪಡಿಸಿದ ಕಾರು ಚಾಲಕನು ಅಪಘಾತ ಸ್ಥಳದಲ್ಲಿ  ಕಾರನ್ನು ನಿಲ್ಲಿಸದೇ ಕಾರು ಸಮೇತ ಪರಾರಿಯಾಗಿರುತ್ತಾನೆ ಎಂಬಿತ್ಯಾದಿ.

Traffic North Police Station

ದಿನಾಂಕ 01-12-2023 ರಂದು ಪಿರ್ಯಾದಿ Avinash  ಹಾಗೂ ಅವರ ಸ್ನೇಹಿತ ಜಗಬಹದ್ದೂರ್ ಸಿಂಗ್ ಎಂಬುವರೊಂದಿಗೆ ಕೆಲಸಕ್ಕೆ ಹೋಗುವ ಸಲುವಾಗಿ ಕೊಟ್ಟಾರ ಚೌಕಿ ಬಸ್ ನಿಲ್ದಾಣದ ಎದುರು ನಿಂತಿರುವಾಗ ಸಮಯ ಸುಮಾರು ಬೆಳಿಗ್ಗೆ 08:30 ಗಂಟೆಗೆ ಉಡುಪಿಯಿಂದ ಮಂಗಳೂರು ಕಡೆಗೆ ಹಾದು ಹೋಗುವ ರಾ.ಹೆ 66 ರ ರಸ್ತೆಯಲ್ಲಿ ಉಡುಪಿ ಕಡೆಯಿಂದ KA-19-HN-2980 ನಂಬ್ರದ ಮೋಟಾರ್ ಸೈಕಲ್ ನ್ನು ಅದರ ಸವಾರ ಚಿರಂತನ್ ಎಂಬುವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಪಕ್ಕದಲ್ಲಿ ನಿಂತಿದ್ದ ಜಗಬಹದ್ದೂರ್ ಸಿಂಗ್ ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಹಾಗೂ ಜಗಬಹದ್ದೂರ್ ಸಿಂಗ್ ರವರು ಕಾಂಕ್ರೀಟ್ ರಸ್ತೆಗೆ ಬಿದ್ದು, ಜಗಬಹದ್ದೂರ್ ಸಿಂಗ್ ರವರಿಗೆ ಬಲಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತದ ರೀತಿಯ ಗಂಭೀರ ಸ್ವರೂಪದ ಗಾಯವಾಗಿರುತ್ತದೆ. ಅಲ್ಲದೇ ಮೋಟರ್ ಸೈಕಲ್ ಸವಾರ ಚಿರಂತನ್ ರವರಿಗೆ ಎಡಕೈ ತಟ್ಟಿನ ಬಳಿ ಹಾಗೂ ಬಲ ಕೈ ಮೊಣಗಂಟಿನಲ್ಲಿ ತರಚಿದ ರೀತಿಯ ರಕ್ತಗಾಯವಾಗಿರುತ್ತದೆ. ಬಳಿಕ ಚಿಕಿತ್ಸೆಯ ಬಗ್ಗೆ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆಎಂಬಿತ್ಯಾದಿ

 

Mangalore Rural PS

ದಿನಾಂಕ: 30-11-2023 ರಂದು ಪಿರ್ಯಾದಿ Ravalendra ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ ಬೆಳಿಗ್ಗೆ 11.00  ಗಂಟೆಗೆ ಮಂಗಳೂರು ತಾಲೂಕು ತಿರುವೈಲು  ಗ್ರಾಮದ ಕೆತ್ತಿಕಲ್ಲು ಎಂಬಲ್ಲಿ  ಅಮಲು ಪದಾರ್ಥ ಸೇವನೆ   ಮಾಡಿದಂತೆ ಕಂಡು ಬಂದ ಚರಣ್ ರಾಜ್ (28 ವರ್ಷ), ವಾಸ: ಡೋರ್ ನಂ. 2-70/1, ಉತ್ತರಬೆಟ್ಟು ಹೌಸ್, ತಿರುವೈಲು ಗ್ರಾಮ, ವಾಮಂಜೂರು ಮಂಗಳೂರು ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆರೋಪಿತನು ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟಂತೆ ಆರೋಪಿತನ ವಿರುದ್ದ ಸ್ವ ಪಿರ್ಯಾದಿಯಂತೆ ಪ್ರಕರಣ ದಾಖಲಿಸಿರುವುದಾಗಿದೆ ಎಂಬಿತ್ಯಾದಿ ಸಾರಾಂಶವಾಗಿದೆ.

Mangalore Rural PS

ದಿನಾಂಕ: 30-11-2023 ರಂದು ಪಿರ್ಯಾದಿ Ravalendra ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ 14.00 ಗಂಟೆಗೆ ಮಂಗಳೂರು ತಾಲೂಕು ಗ್ರಾಮದ ಉಲಾಯಿಬೆಟ್ಟು ಜಂಕ್ಷನ್ ಎಂಬಲ್ಲಿ  ಅಮಲು ಪದಾರ್ಥ ಸೇವನೆ  ಮಾಡಿದಂತೆ ಕಂಡು ಬಂದ ಕಾರ್ತಿಕ್ ಡಿ (27 ವರ್ಷ) ವಾಸ: ಕೆಂಪುಗುಡ್ಡೆ, ಕಿನ್ನಿಕಟ್ಟ, ಅಮ್ಟಾಡಿ ಗ್ರಾಮ, ಬಂಟ್ವಾಳ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆರೋಪಿತನು ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟಂತೆ ಆರೋಪಿತನ ವಿರುದ್ದ ಸ್ವ ಪಿರ್ಯಾದಿಯಂತೆ ಪ್ರಕರಣ ದಾಖಲಿಸಿರುವುದಾಗಿದೆ ಎಂಬಿತ್ಯಾದಿ ಸಾರಾಂಶವಾಗಿದೆ.

Mangalore North PS

ದಿನ ದಿನಾಂಕ: 30.11.2023  ರಂದು  ಸಮಯ ಸಂಜೆ   19.00 ಗಂಟೆಗೆ ಮಾದಕ ದ್ಯವ್ಯ ವ್ಯಸನ ಮತ್ತು ಮಾರಾಟವನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕೇಂದ್ರ ಉಪವಿಭಾಗದ ವತಿಯಿಂದ ರಚಿತವಾಗಿರುವ Anti Drug Team  ತಂಡದ ಅಧಿಕಾರಿ ರೌಂಡ್ಸ ಕರ್ತವ್ಯ ದಲ್ಲಿರುವ ಸಮಯ ಮಾಹಿತಿಯ ಮೇರೆಗೆ ಈ ದಿನ ಸಂಜೆ 19.30 ಗಂಟೆಗೆ ಉತ್ತರ ದಕ್ಕೆಯ  ಬಳಿ ತಲುಪಿದಾಗ ಒಬ್ಬಾತನು ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು ಆತನನ್ನು ಕಂಡು ವಿಚಾರಿಸಲಾಗಿ ಬಾಯಿಂದ ಗಾಂಜಾ ಸೇವನೆ ಮಾಡಿದ ವಾಸನೆ ಬರುತ್ತಿದ್ದು, ತನ್ನ ಹೆಸರು: ಮೊಹಮ್ಮದ್ ನೌಷಾದ್  ಪ್ರಾಯ: 19 ವರ್ಷ ವಾಸ:  ಎಮ್,ಜೆ,ಎಮ್ 300, ನಬೀದಾ ಮಂಜಿಲ್, ಕಸ್ಬಾ ಬೆಂಗ್ರೆ,  ಮಂಗಳೂರು  ಎಂಬುದಾಗಿ ತಿಳಿಸಿದ್ದು ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಕುಂಟಿಕಾನದ ಎ ಜೆ ಆಸ್ಪತ್ರೆಗೆ ಹಾಜರುಪಡಿಸಿದ್ದು, ಎ ಜೆ ಆಸ್ಪತ್ರೆಯ ವೈದ್ಯರು ಆತನನ್ನುಪರೀಕ್ಷಿಸಿದಲ್ಲಿ, ಮೊಹಮ್ಮದ್ ನೌಷಾದ್  ಎಂಬಾತನು, Tetrahydracannabinoid,(Marijuana)  ಎಂಬ ಮಾದಕ ದ್ರವ್ಯವನ್ನು ಸೇವನೆ ಮಾಡಿರುವುದಾಗಿ ದೃಢ ಪತ್ರವನ್ನು ನೀಡಿರುತ್ತಾರೆ ಎಂಬಿತ್ಯಾದಿ.

Traffic North Police Station               

ದಿನಾಂಕ 30-11-2023 ರಂದು ಪಿರ್ಯಾದಿ Kalandar Shakeel ಮುಲ್ಕಿ ಗೇರುಕಟ್ಟೆಯಲ್ಲಿ ಹೊಸತಾಗಿ ನಿರ್ಮಾಣವಾಗುತ್ತಿರುವ ಮನೆಯ ಕಡೆಗೆ ಹೋಗುವರೇ ತನ್ನ ಬಾಬ್ತು KA-19-HD-3403 ನಂಬ್ರದ ಸ್ಕೂಟರಿನಲ್ಲಿ ಸವಾರಿ ಮಾಡಿಕೊಂಡು ಮುಲ್ಕಿ-ಕಿನ್ನಿಗೊಳಿ ರಸ್ತೆಯಲ್ಲಿ ಗೇರುಕಟ್ಟೆ ಜಂಕ್ಷನ್ ದಾಟಿ ಮುಂದಕ್ಕೆ ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 9:15 ಗಂಟೆಗೆ ಬೆಥನಿ ಸ್ಕೂಲ್ ಮುಂದಿನ ರಸ್ತೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ ಮೋಟರ್ ಸೈಕಲ್ ಒಂದನ್ನು ಅದರ ಸವಾರ ತೀರಾ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿನ ಹಿಂಬದಿಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಸೊಂಟದ ಬಲ ಬದಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು, ಅಲ್ಲದೇ ಎಡ ಕಾಲಿನ ಹೆಬ್ಬರಳಿನಲ್ಲಿ ತರಚಿದ ಗಾಯವಾಗಿರುತ್ತದೆ. ಅಲ್ಲಿ ಸೇರಿದ ಸಾರ್ವಜನಿಕರು ಪಿರ್ಯಾದಿದಾರರನ್ನು ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು, ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿ ದಾಖಲಾಗಿರುತ್ತಾರೆ. ಡಿಕ್ಕಿ ಪಡಿಸಿದ ಮೋಟಾರ್ ಸೈಕಲ್ ಸವಾರನು ಅಪಘಾತ ಸ್ಥಳದಲ್ಲಿ  ನಿಲ್ಲಿಸದೇ ಮೋಟರ್ ಸೈಕಲ್ ಸಮೇತ ಪರಾರಿಯಾಗಿರುತ್ತಾನೆ ಎಂಬಿತ್ಯಾದಿ.

Mangalore East PS

ಮಂಗಳೂರು ನಗರ ಪೊಲೀಸ್ ಕೇಂದ್ರ ಉಪ ವಿಭಾಗ ವತಿಯಿಂದ ರಚಿಸಲಾಗಿರುವ Anti Drug Team ತಂಡದ ಅಧಿಕಾರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಬಾತ್ಮಿದಾರರಿಂದ ಖಚಿತ ಮಾಹಿತಿ ಮೇರೆಗೆ ಸಮಯ 18-00  ಗಂಟೆಗೆ ಪಂಪ್ವೆಲ್ ಬಳಿ ತಲುಪಿದಾಗ ಒಬ್ಬಾತನು ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು, ಬಾಯಿಯಿಂದ  ಗಾಂಜಾ ಸೇವನೆ ಮಾಡಿದ ವಾಸನೆ ಬರುತ್ತಿದ್ದು,  ಆತನನ್ನು  ವಶಕ್ಕೆ ಪಡೆದುಕೊಂಡು ಆತನ ಹೆಸರು ಅಬ್ದುಲ್ ಖಾದರ್ ಪಹಾದ್ ಪ್ರಾಯ: 25 ವರ್ಷ, ವಾಸ: ಸಲಾಪಿ ಮಸೀದಿ ಬಳಿ 7 ನೇ ಬ್ಲಾಕ್ ಕೃಷ್ಣಾಪುರ ಸುರತ್ಕಲ್ ಮಂಗಳೂರು ಎಂಬುದಾಗಿ ತಿಳಿಸಿದ್ದು, ಆತನನ್ನು ಕೂಲಂಕುಷವಾಗಿ ವಿಚಾರಿಸಲಾಗಿ ತಾನು ಗಾಂಜಾ ಸೇವನೆ ಮಾಡಿರುವುದಾಗಿ ತಿಳಿಸಿರುತ್ತಾನೆ, ಈತನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಕಳುಹಿಸಿಕೊಟ್ಟಿರುತ್ತೇನೆ. ವೈದ್ಯರು ಪರಿಕ್ಷೀಸಿ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ವ್ಯೆದಕೀಯ ಪರೀಕ್ಷೆಯಿಂದ TETRAHYDARCANNABINOID(MARIJUANA) 50ng per ml POSITIVE ಸೇವನೆ ಮಾಡಿರುವುದಾಗಿ ವರದಿ ನೀಡಿರುತ್ತಾರೆ. ಅದುದರಿಂದ ಈತನ ವಿರುದ್ದ NARCOTIC DRUGS AND PSYCHOTROPIC SUBSTANCES ACT 1985 ರಂತೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

Konaje PS

ಪಿರ್ಯಾದಿ Gulam Husain KA-20-EG-7272 Honda Matrix Activa Scooter ನ್ನುಹೊಂದಿದ್ದು ಸದ್ರಿ ಸ್ಕೂಟರ್ ನಲ್ಲಿ ದಿನಾಂಕ 13-11-2023 ರಂದು ಬೆಳಿಗ್ಗೆ 9.00 ಗಂಟೆಗೆ ಅತ್ತಾವರದ Casa Granda ಫ್ಲಾಟ್ ನಲ್ಲಿ  ಕಾರ್ಪೇಂಟರ್ ಕೆಲಸಕ್ಕೆ ತೆರಳಿ ಕೆಲಸ ಮುಗಿಸಿ ರಾತ್ರಿ 21.00 ಗಂಟೆಗೆ  ಪಿರ್ಯಾದಿದಾರರ ಬಾಬ್ತು KA-20-EG-7272 Scooter ನ್ನು ದೇರಳ ಕಟ್ಟೆ ಗ್ರೀನ್ ಗ್ರೌಂಡ್ ಬಳಿ ವಾಸವಾಗಿರುವ ಪಿರ್ದೋಸ್ ಅಪಾರ್ಟಮೆಂಟ್ ನ ನೆಲ ಮಹಡಿ ಪಾರ್ಕಿಂಗ್ ನಲ್ಲಿ ನಿಲ್ಲಿಸಿ ಮನೆಗೆ ಹೋಗಿದ್ದು.ರಾತ್ರಿ ಊಟ ಮಾಡಿ ಮಲಗಿರುತ್ತಾರೆ. ನಂತರ ದಿನ ದಿನಾಂಕ 14.11,2023 ರಂದು ರಾತ್ರಿ 00.30 ಗಂಟೆಗೆ ಪಿರ್ಯಾದಿದಾರರ ಫ್ಲಾಟಿನಲ್ಲಿ ವಾಸವಾಗಿರುವ  ಮಹಿಳೆ ಪಿರ್ಯಾದಿದಾರರಿಗೆ ದೂರವಾಣಿ ಕರೆಮಾಡಿ ನಿಮ್ಮ ಪಾರ್ಕಿಂಗ್ ನಲ್ಲಿರುವ KA-20-EG-7272 ಸ್ಕೂಟರ್  ಕಾಣುತ್ತಿಲ್ಲ ಎಂಬುದಾಗಿ ತಿಳಿಸಿದ್ದು, ಪಿರ್ಯಾದಿದಾರರು ಕೂಡಲೇ ಕೆಳಗೆ ಬಂದು ನೋಡಿದಾಗ ಸ್ಕೂಟರ್ ಕಂಡುಬಂದಿರುವುದಿಲ್ಲ, ಪಿರ್ಯಾದಿದಾರರ  ಬಾಬ್ತು KA-20-EG-7272 ಸ್ಕೂಟರ್ ದಿನಾಂಕ 13-11-2023 ರಂದು ರಾತ್ರಿ 09.00  ಗಂಟೆಯಿಂದ  ದಿನಾಂಕ 14-11-2023  ರಂದು ರಾತ್ರಿ 00.30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರವುದಾಗಿದ್ದು, ಕಳವಾದ ಬೈಕ್ ನ ಅಂದಾಜು ಮೌಲ್ಯ ರೂಪಾಯಿ 15,000/- ಆಗಬಹುದು. ಪಿರ್ಯಾದಿದಾರರ ಕಳವಾದ  ಮೋಟಾರ್ ಸೈಕಲ್ ನ್ನು ಪಿರ್ಯಾದಿದಾರರ ಪರಿಚಯದವರು ಕೊಂಡು ಹೋಗಿರಬಹುದೆಂದು ತಿಳಿದು ದೂರು ನೀಡಿರಲಿಲ್ಲಇಷ್ಟುದಿನವಾದರೂ ಪಿರ್ಯಾದಿದಾರರ ಸ್ಕೂಟರ್ ಸಿಗದೆ ಇರುವುದರಿಂದ ಹಾಗೂ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದೇ ಇರುವುದರಿಂದ ಈ ದಿನ ಠಾಣೆಗೆ ಬಂದು ದೂರು ನೀಡಿರುವುದಾಗಿದೆ.

Konaje PS

ದಿನಾಂಕ  30-11-2023 ರಂದು 19-30 ಗಂಟೆಗೆ  ಉಳ್ಳಾಲ ತಾಲೂಕು ಕೊಣಾಜೆ  ಗ್ರಾಮದ ಅಸೈಗೋಳಿ ಬಸ್ ನಿಲ್ದಾಣದ ಬಳಿ  ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಚೀಟಿ ಬರೆದು ಕೊಟ್ಟು ಹಣವನ್ನು ಸಂಗ್ರಹಿಸಿಕೊಂಡು ಮಟ್ಕಾ ಎಂಬ ನಸೀಬಿನ ಆಟವನ್ನು ಆಡುತ್ತಿರುವುದಾಗಿ ಠಾಣಾ ಸಿಬ್ಬಂದಿಯಾದ  ಪಿಸಿ ಬಸಪ್ಪರವರು ಠಾಣೆಗೆ ನೀಡಿದ ಲಿಖಿತ ಮಾಹಿತಿಯಂತೆ, ಪೊಲೀಸ್ ಉಪನಿರಿಕ್ಷಕರಾದ ನಾಗರಾಜ್ ಎಸ್ ರವರು ಕೊಣಾಜೆ  ಗ್ರಾಮದ ಅಸೈಗೋಳಿ ಬಸ್ ನಿಲ್ದಾಣದ ಬಳಿ 21.50 ಗಂಟೆಗೆ ಹೋದಾಗ ಅಲ್ಲಿ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಪಡೆದುಕೊಂಡು ಮಟ್ಕಾ ಆಟವನ್ನು ಆಡಿಸುತ್ತಿದ್ದ ಆರೋಪಿ ಗಂಗಾಧರ್  ಎಂಬಾತನನ್ನು ವಶಕ್ಕೆ ಪಡೆದುಕೊಂಡು ಆತನ ಸ್ವಾಧೀನದಲ್ಲಿದ್ದ ನಗದು ಹಣ ರೂ 1700/-, ಅಂಕೆಗಳನ್ನು ಬರೆದ ಮಟ್ಕಾ ಚೀಟಿ-2, ಪೆನ್-1 ಇವುಗಳನ್ನು ಸ್ವಾಧೀನಪಡಿಸಿಕೊಂಡು, ಠಾಣೆಗೆ ಕರೆತಂದು ಗಂಗಾಧರ್ ಎಂಬಾತನ  ವಿರುದ್ದ ಪ್ರಕರಣ ದಾಖಲಿಸಲಾಗಿರುತ್ತದೆ ಎಂಬಿತ್ಯಾದಿ.

Traffic South Police Station

ಪಿರ್ಯಾದುದಾರರು MERRYI SUNNY MACHADO ದಿನಾಂಕ 29-11-2023 ರಂದು ಮನೆಯಲ್ಲಿರುವ ಸಮಯ ಸುಮಾರು ಸಂಜೆ 6.50 ಗಂಟೆಗೆ ಅವರ ಸ್ನೇಹಿತರಾದ ರೋಬಿನ್ ಡಿಸೋಜಾ ಎಂಬವರು ಪೋನ್ ಮಾಡಿ ಬಜ್ಜೋಡಿಯ ಸಿಂಥಿಯಾ ಹಾಸ್ಟೇಲ್ ಬಳಿ ಪಿರ್ಯಾದಿದಾರರ ತಂದೆ ಯುಜಿನ್ ಮಾಚಾದೊ(71) ರವರಿಗೆ ರಸ್ತೆ ಅಪಘಾತವಾದ ಬಗ್ಗೆ ತಿಳಿಸಿದ ಕೂಡಲೇ ಪಿರ್ಯಾದುದಾರರು ಸ್ಥಳಕ್ಕೆ ಹೋಗಿ ನೋಡಲಾಗಿ ಅಲ್ಲಿದ್ದ ಸಾರ್ವಜನಿಕರು ಪಿರ್ಯಾದಿದಾರರ ತಂದೆಯನ್ನು ಉಪಚರಿಸಿದ್ದು, ಅಪಘಾತದ ಬಗ್ಗೆ ವಿಚಾರಿಸಲಾಗಿ ಪಿರ್ಯಾದಿದಾರರ ತಂದೆ ಬಿಕರ್ನಕಟ್ಟೆ ಕಡೆಯಿಂದ ಬಜ್ಜೋಡಿ ಕಡೆಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸಮಯ ಸುಮಾರು ಸಂಜೆ 6.45 ಗಂಟೆಗೆ ಬಜ್ಜೋಡಿ ಬಳಿಯ ಸಿಂಥಿಯಾ ಹಾಸ್ಟೇಲ್ ಬಳಿ ತಲುಪಿದಾಗ ಬಜ್ಜೋಡಿ ಕಡೆಯಿಂದ ಬಿಕರ್ನಕಟ್ಟೆ ಕಡೆಗೆ ಆಟೋ ರಿಕ್ಷಾ ಚಾಲಕನು ರಿಕ್ಷಾದಲ್ಲಿ ಪ್ಲೆಕ್ಸನ ಪ್ರೇಮ್ ತರ ಇರುವ ವಸ್ತುವನ್ನು ತುಂಬಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ತಂದೆಗೆ ಡಿಕ್ಕಿಪಡಿಸಿ ಆಟೋ ರಿಕ್ಷಾ ನಿಲ್ಲಿಸದೇ,ಆಟೋ ರಿಕ್ಷಾ ಸಮೇತ ಪರಾರಿಯಾಗಿರುತ್ತಾರೆ. ಆ ಸಮಯ ಆಟೋ ರಿಕ್ಷಾ ನಂಬರನ್ನು ನೋಡಿರುವುದಿಲ್ಲವೆಂದು ತಿಳಿಸಿರುತ್ತಾರೆ. ನಂತರ ಪಿರ್ಯಾದಿದಾರರು ಅಘಾತಕ್ಕೊಳಗಾದ ಅವರ ತಂದೆಯನ್ನು ಆಟೋ ರಿಕ್ಷಾದಲ್ಲಿ ಕಂಕನಾಡಿ ಪಾಧರ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರ ತಂದೆಯ ಹಣೆಗೆ  ರಕ್ತಗಾಯ, ಬಲಭುಜಕ್ಕೆ & ಎಡ ಮೊಣ ಕೈ ಮೂಳೆ ಮುರಿತವಾದ ಗಾಯವಾಗಿರುತ್ತದೆ ಎಂದು ತಿಳಿಸಿ ಒಳರೋಗಿಯಾಗಿ ದಾಖಲುಮಾಡಿಕೊಂಡಿರುತ್ತಾರೆ. ಎಂಬಿತ್ಯಾದಿ.

Traffic South Police Station      

ಪಿರ್ಯಾದಿ ARUN ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದು  ದಿನಾಂಕ:30-11-2023 ರಂದು ಅಗತ್ಯ ಕೆಲಸ ನಿಮಿತ್ಯ ಸೊಮೇಶ್ವರದಿಂದ ಪಂಪವೆಲ್ ಕಡೆಗೆ ತನ್ನ ಬಾಬ್ತು KA-19-EN-8217 ನೇ ಆಕ್ಟೀವ್ ಹೊಂಡಾದಲ್ಲಿ ಹೊರಟು ತೊಕ್ಕೊಟ್ಟು ನಾಗನ ಕಟ್ಟೆ ಎಂಬಲ್ಲಿ ಸಮಯ ಸುಮಾರು 11.30 ಗಂಟೆಗೆ ತಲಪುತ್ತಿದ್ದಂತೆಯೇ ನಾಗನ ಕಟ್ಟೆ ಸರ್ವಿಸ್ ರಸ್ತೆಯಿಂದ ಬಿಳಿ ಬಣ್ಣದ ಕಾರೊಂದರ ಚಾಲಕನು ತನ್ನ ಕಾರನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ  ಪಂಪವೆಲ್ ಕಡೆಗೆ ಚಲಾಯಿಸಿಕೊಂಡು ಬಂದು ರಸ್ತೆಯ ಬಲಭಾಗದಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ಆಕ್ಟೀವ್ ಹೊಂಡಾದ ಎಡ ಬದಿಗೆ ಡಿಕ್ಕಿ ಪಡಿಸಿ  ವಾಹನವನ್ನು ನಿಲ್ಲಿಸದೆ ಪರಾರಿಯಾಗಿದ್ದು, ಪರಿಣಾಮ ಪಿರ್ಯಾದಿದಾರರು ವಾಹನ ಸಮೇತವಾಗಿ ರಸ್ತೆಗೆ ಎಸೆಯಲ್ಪಟ್ಟು ಎಡಕೈಗೆ ಮೂಳೆ ಮುರಿತದ ಗಾಯ,ಎಡಕಾಲು,ಬೆನ್ನಿಗೆ ಗುದ್ದಿದ ಮತ್ತು ತರಚಿದ ಗಾಯಗಳುಂಟಾದವರನ್ನು ಅಲ್ಲಿ ಸೇರಿದ ಸಾರ್ವಜನಿಕರು ಉಪಚರಿಸಿ ವಾಹನವೊಂದರಲ್ಲಿ ದೇರಳ ಕಟ್ಟೆ ಯೇನಾಪೊಯಾ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾಧಿ.

Surathkal PS

ದಿನಾಂಕ 30-11-2023 ರಂದು ಜನತಾ ಕಾಲೋನಿ ಕಡೆಗೆ ಮರಳನ್ನು ಕಳ್ಳತನ ಮಾಡಿ ಆಕ್ರಮವಾಗಿ ಟಿಪ್ಪರ್ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದಾರೆ ಎಂದು ಮಾಹಿತಿಯಂತೆ   ಬೆಳಿಗ್ಗೆ ಸುಮಾರು 05:50 ಗಂಟೆಗೆ ಕಾನಾ ಸುಗ್ಗಿ ಬಾರ್ ಕಡೆಯಿಂದ ಜನತಾ ಕಾಲೋನಿ ಕಡೆಗೆ ಟಿಪ್ಪರ್ ಲಾರಿಯೊಂದು ಹೋಗುತ್ತಿದ್ದು, ಟಿಪ್ಪರ್ ಲಾರಿಯನ್ನು ನಿಲ್ಲಿಸಲು ಸೂಚನೆ ನೀಡಿದ್ದು, ಕೂಡಲೇ ಟಿಪ್ಪರ್  ಚಾಲಕ ಲಾರಿಯನ್ನು ರಸ್ತೆಯ ಎಡ ಬದಿಗೆ ನಿಲ್ಲಿಸಿ ಟಿಪ್ಪರ್ ಲಾರಿಯಿಂದ ಇಳಿದು ವಸತಿ ಸಮಯುಚ್ಛದ ಕಡೆಗೆ  ಓಡಿ ಹೋಗಿ  ತಪ್ಪಿಸಿಕೊಂಡಿರುತ್ತಾನೆ. ಟಿಪ್ಪರ್ ಲಾರಿಯನ್ನು ಪರಿಶೀಲಿಸಿ ನೋಡಿದಾಗ ಬಾಡಿಯಲ್ಲಿ ಸುಮಾರು 3 ಯೂನಿಟ್ ನಷ್ಟು ಸಾಮಾನ್ಯ ಮರಳು ತುಂಬಿರುವುದು ಕಂಡು ಬರುತ್ತದೆ, ಸದ್ರಿ ಟಿಪ್ಪರ್ ಲಾರಿಯ ನೊಂದಣಿ ನಂಬ್ರ KL-63-B-3105 ಆಗಿದ್ದು,   ಟಿಪ್ಪರ್ ಲಾರಿಯ ಚಾಲಕ ತಮ್ಮ ಮಾಲಿಕರೊಂದಿಗೆ ಸೇರಿಕೊಂಡು ಟಿಪ್ಪರ್ ಲಾರಿಯಲ್ಲಿ ಮರಳನ್ನು ಸಾಗಿಸಲು ಅಧಿಕೃತ ಪರವಾನಿಗೆಯನ್ನು ಹೊಂದದೇ ಎಲ್ಲಿಂದಲೋ ಸಾರ್ವಜನಿಕರ ಖನಿಜ ಸಂಪತ್ತಾದ ಮರಳನ್ನು ಕದ್ದು, ರಾಜ್ಯ ಸರಕಾರಕ್ಕೆ ಯಾವುದೇ ರಾಜಧನ ಪಾವತಿಸದೇ ಆಕ್ರಮವಾಗಿ ಸರಕಾರದ ಖನಿಜ ಸಂಪತ್ತಾದ ಮರಳನ್ನು ಟಿಪ್ಪರ್ ಲಾರಿಯಲ್ಲಿ ತುಂಬಿಕೊಂಡು ಸಾಗಿಸುತ್ತಿರುವುದಾಗಿ ದೃಡಪಟ್ಟಿರುವುದರಿಂದ   KL-63-B-3105 ಟಿಪ್ಪರ್ ಲಾರಿಯನ್ನು ಮುಂದಿನ ಕ್ರಮದ ಮಹಜರು ಮುಖೇನಾ ಸ್ವಾದೀನಪಡಿಸಿಕೊಳ್ಳಲಾಗಿದೆ, ವಶಪಡಿಸಿಕೊಂಡ ಟಿಪ್ಪರ್ ಲಾರಿಯ ಅಂದಾಜು ಮೌಲ್ಯ ಸುಮಾರು ರೂ 300000/- (ರೂಪಾಯಿ ಮೂರು ಲಕ್ಷ) ಹಾಗೂ ಈ ಟಿಪ್ಪರ್ ಲಾರಿಯಲ್ಲಿದ್ದ ಮರಳಿನ ಅಂದಾಜು ಮೌಲ್ಯ ಸುಮಾರು ರೂ 7000/- ( ರೂಪಾಯಿ ಏಳು ಸಾವಿರ) ಆಗಬಹುದು. ಒಟ್ಟು ಮೌಲ್ಯ ರೂ 307000/- ( ರುಪಾಯಿ ಮೂರು ಲಕ್ಷ ಏಳು ಸಾವಿರ) ಆಗಿರುತ್ತದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 01-12-2023 07:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080