ಅಭಿಪ್ರಾಯ / ಸಲಹೆಗಳು

Crime Reported in : Mangalore East Traffic PS         

ಪಿರ್ಯಾದಿದಾರರಾದ ಪ್ಲೋಸಿ ಪಿಂಟೊ ರವರು ದಿನಾಂಕ 09-01-2023 ರಂದು ಬೆಳಿಗ್ಗೆ 11.30 ಗಂಟೆಗೆ ತನ್ನ ಬಾಬ್ತು  KA-19-EU-6976 ನಂಬ್ರದ ಸ್ಕೂಟರ್ ನಲ್ಲಿ ಸವಾರಳಾಗಿ ಉಜ್ಜೋಡಿ ಕಡೆಯಿಂದ ನಂತೂರು ಕಡೆಗೆ ಹಾದು ಹೋಗಿರುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಹೋಗುತ್ತಾ ಪಂಪ್ ವೆಲ್ ಜಂಕ್ಷನ್ ಬಳಿಗೆ ತಲುಪುತ್ತಿದ್ದಂತೆ KA-19-AD-4666  ನಂಬ್ರದ TATA ACE ವಾಹನವನ್ನು ಅದರ ಚಾಲಕ ಸೊಹೇಬ್ ಎಂಬಾತನು ಪಿರ್ಯಾದಿದಾರರನ್ನು  ಬಲ ಬದಿಯಿಂದ ಓವರ್ ಟೇಕ್ ಮಾಡಿಕೊಂಡು ನಾಗುರಿ ಕಡೆಗೆ ಪಂಪ್ ವೆಲ್ ಪ್ಲೈ ಓವರ್ ಕೆಳಗಡೆ ಹೋದಂತೆ ಮಾಡಿ ಯಾವುದೇ ಸೂಚನೆಯನ್ನು ನೀಡದೆ ಒಮ್ಮೇಲೆ ಕಂಕನಾಡಿ ಬೈಪಾಸ್ ರಸ್ತೆ ಕಡೆಗೆ ಹೋಗಲು ಎಡಕ್ಕೆ ತಿರುಗಿಸಿ ಪಿರ್ಯಾದಿದಾರರ ಸ್ಕೂಟರಿನ ಬಲ ಬದಿ ಹ್ಯಾಂಡಲ್ ಗೆ ಢಿಕ್ಕಿಪಡಿಸಿದ ವೇಳೆ ಪಿರ್ಯಾದಿದಾರರು ಸ್ಕೂಟರನ್ನು ಬೀಳದಂತೆ ನಿಲ್ಲಿಸಲು ಬಲ ಕಾಲನ್ನು ನೆಲಕ್ಕೆ ಕೊಟ್ಟು ನಿಲ್ಲಿಸಿದಾಗ TATA ACE ವಾಹನವನ್ನು ಅದರ ಚಾಲಕ ನಿಲ್ಲಿಸದೆ ಮುಂದಕ್ಕೆ ಪಿರ್ಯಾದಿದಾರರ ಬಲ ಕಾಲಿನ ಮೇಲೆ ಚಲಾಯಿಸಿಕೊಂಡು ಹೋದ ಪರಿಣಾಮ ಪಿರ್ಯಾದಿದಾರರ ಬಲ ಕಾಲಿನ ಮದ್ಯದ ಮೂರು ಬೆರಳುಗಳಿಗೆ ತೀವ್ರ ತರದ ಚರ್ಮ ಹರಿದ ರಕ್ತಗಾಯ ಮತ್ತು ಮದ್ಯದ ಬೆರಳಿಗೆ ಮೂಳೆ ಮುರಿದ ಗಂಭೀರ ಸ್ವರೂಪದ ಗಾಯವಾಗಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆಯನ್ನು ಪಡೆದುಕೊಂಡಿರುವುದಾಗಿದೆ. ಈ ಅಪಘಾತದ ಬಗ್ಗೆ TATA ACE ವಾಹನ ಚಾಲಕ ಸೊಹೇಬ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

Crime Reported in : Traffic South Police Station

ಪಿರ್ಯಾದಿದಾರರಾದ ದುರಗಪ್ಪ ಟೇಗಮ್ಮನವರ (36 ವರ್ಷ) ರವರು ದಿನಾಂಕ: 01-02-2023 ರಂದು ಕೆಲಸದ ನಿಮಿತ್ತ ಅವರ ಹೆಂಡತಿ ಹಾಗೂ ಸಂಬಂದಿಯಾದ ಭೀಮ್ ಸಿ @ ಭೀಮಪ್ಪ ಮಾದರ ರವರನ್ನು ಕರೆದುಕೊಂಡು ನೇತ್ರಾವತಿ ಸೇತುವೆಯಲ್ಲಿ ರೋಡ್ ಕ್ಲಿನಿಂಗ್ ಕೆಲಸ ಮಾಡುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 11-00 ಗಂಟೆಗೆ ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಹೋಗುವ ರಾ ಹೆ-66 ರಲ್ಲಿ ಬರುತ್ತಿದ್ದ ಮೋಟಾರ್ ಸೈಕಲ್ ನಂಬ್ರ: KA-19-EX-9326 ನೇದರ ಸವಾರ ಸಹ ಸವಾರನ್ನು ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ಬದಿಯಲ್ಲಿ ಕೆಲಸ ಮಾಡುತ್ತಿದ್ದ ಭೀಮಪ್ಪ ಮಾದರ ರವರಿಗೆ ಡಿಕ್ಕಿ ಪಡಿಸಿ ವಾಹನ ಸಮೇತ ರಸ್ತೆಗೆ ಬಿದ್ದ ಬಳಿಕ ಅಪಾಘತ ಪಡಿಸಿದ ಮೋಟಾರ್ ಸೈಕಲ್ ಸವಾರನು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸದೇ ಹಾಗೂ ಹತ್ತಿರದ ಪೊಲೀಸ್ ಠಾಣೆಗೆ ಯಾವುದೇ ಮಾಹಿತಿ ನೀಡದೇ  ಅಪಘಾತ ಸ್ಥಳದಿಂದ ಪರಾರಿಯಾಗಿರುತ್ತಾನೆ ಈ ಅಪಘಾತದ ಪರಿಣಾಮ ಬೀಮಪ್ಪ ಮಾದರ ರವರು ರಸ್ತೆಗೆ ಎಸೆಯಲ್ಪಟ್ಟು  ಅವರ ತಲೆಗೆ ಗುದ್ದಿದ ಗಂಬೀರ ಸ್ವರೂಪದ ಗಾಯ,ಎಡಕೈಗೆ ಮೂಳೆ ಮುರಿತದ ಗಾಯ ಹಾಗೂ ಬಲಗಾಲಿಗೆ ಮೂಳೆ ಮುರಿತದ ಗಾಯವಾಗಿದ್ದು ಕೂಡಲೇ ಪಿರ್ಯಾದಿದಾರರು ಹಾಗೂ ಇತರ ಸಾರ್ವಜನಿಕರು ಸೇರಿ ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಆಟೋರಿಕ್ಷಾವೊಂದರಲ್ಲಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ ಎಂಬಿತ್ಯಾದಿ.

Crime Reported in : Traffic North Police Station                               

ದಿನಾಂಕ 01/02/2023 ರಂದು ಪಿರ್ಯಾದಿದಾರರು NIHAL KHADER KUKKADI  ತನ್ನ ಗೆಳೆಯನ ಬಾಬ್ತು KA-51-V-6604 ನಂಬ್ರದ ಮೋಟಾರ್ ಸೈಕಲಿನಲ್ಲಿ ಕೃಷ್ಣಾಪುರ 5ನೇ ಬ್ಲಾಕ್ ಕಡೆಯಿಂದ ಕೃಷ್ಣಾಪುರ 7ನೇ ಬ್ಲಾಕ್ ಕಡೆಗೆ ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 10.45 ಗಂಟೆಗೆ ಕೆ.ಇ.ಬಿ ಮತ್ತು ಲಂಡನ್ ಪಾರ್ಕ್ ಮದ್ಯೆ ಸಮೀಪಿಸುತ್ತಿದ್ದಂತೆ KA-19-EW-0098 ನಂಬ್ರದ ಸ್ಕೂಟರನ್ನು ಅದರ ಸವಾರ ಬಸೀರ್ ಎಂಬಾತನು ಒಳರಸ್ತೆಯಿಂದ ಮುಖ್ಯ ರಸ್ತೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಅಪಘಾತ ಪಡಿಸಿದ ಸ್ಕೂಟರ್ ಸವಾರನು ತಮ್ಮ ತಮ್ಮ ಸ್ಕೂಟರ್ ಹಾಗೂ ಮೋಟಾರ್ ಸೈಕಲ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದು ಪಿರ್ಯಾದಿದಾರರ ಕೆನ್ನೆಯ ಎಡಬದಿಗೆ ಮೂಳೆ ಬಿರುಕುಬಿಟ್ಟ ಗಂಭೀರ ಸ್ವರೂಪದ ಗಾಯವಾಗಿದ್ದು, ಅಲ್ಲದೇ ಮೂಗಿನಲ್ಲಿ ರಕ್ತ ಹೊರ ಬಂದಿದ್ದು ಚಿಕಿತ್ಸೆಯ ಬಗ್ಗೆ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Crime Reported in : Mangalore North PS                                  

ಪಿರ್ಯಾದಿದಾರರಾದ ಶ್ರೀಮತಿ ಜ್ಯೋತಿ ಬಾಳಿಗಾ ಎಂಬವರು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್ ಕೊಡಿಯಾಲ್ ಬೈಲ್ ಮಂಗಳೂರು ಇಲ್ಲಿ ಶಾಖಾ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 31.01.2023 ರಂದು ಸಾಯಂಕಾಲ 05.00 ಗಂಟೆಗೆ ಬ್ಯಾಂಕಿನ ಲ್ಯಾಂಡ್ ಲೈನ್ ನಿಂದ ಶಾಖೆಯ ಕೌಂಟರ್ ಗೆ ಮೇಘರಾಜ್ ಎಂಬ ಅಪರಿಚಿತ  ವ್ಯಕ್ತಿ ದೂರವಾಣಿ ಕರೆ ಮಾಡಿದ್ದು, ಕೌಂಟರ್ ನ ಸಿಬ್ಬಂದಿಯವರು ದೂರವಾಣಿ ಕರೆಯನ್ನು ಪಿರ್ಯಾದಿದಾರರಿಗೆ ವರ್ಗಾಯಿಸಿ ಮಾತನಾಡಿದಾಗ    2 ಕೋಟಿ ಠೇವಣಿ ಇಡುವರೇ ಬಡ್ಡಿ ದರವನ್ನು ವಿಚಾರಿಸಿರುತ್ತಾರೆ ಹಾಗೂ ಈ ಬಗ್ಗೆ ನೀಡಬೇಕಾಗಿರುವ ಕೆ.ವೈ.ಸಿ ಸಂಬಂದಿಸಿದ ದಾಖಲೆಗಳನ್ನು ಕೇಳಿರುತ್ತಾರೆ, ಪಿರ್ಯಾದಿದಾರರ ಮೊಬೈಲ್ ನಂಬರ್ ನ್ನು  ಕೇಳಿದ್ದು ಸದ್ರಿಯವರಿಗೆ ಮೊಬೈಲ್ ನಂಬರ್  ನೀಡಿದ್ದು ,ಸದ್ರಿ ಸಂಸ್ಥೆಗೆ ಸಂಬಂಧಿಸಿದ ಅಕೌಂಟ್ ಬ್ಯಾಲೆನ್ಸ್ ನ್ನು ಕೇಳಿದಾಗ ನಾನು ಅದು ವ್ಯಯಕ್ತಿಕ ದಾಖಲೆಯಾಗಿರುವುದರಿಂದ ನೀಡಲು ಬರುವುದಿಲ್ಲವೆಂದು ತಿಳಿಸಿದ್ದರಿಂದ ಸದ್ರಿ ವ್ಯಕ್ತಿಯು ಅವಾಚ್ಯ ಶಬ್ಧಗಳಿಂದ ಬೈದು ಪೋನನ್ನು ಕಟ್ ಮಾಡಿರುತ್ತಾನೆ. ತದನಂತರ ಆತನ ಮೊಬೈಲ್ ಸಂಖ್ಯೆ 8810920704 ಯಿಂದ, ಪಿರ್ಯಾದಿದಾರರ ಮೊಬೈಲ್ ವ್ಯಾಟ್ಸಾಪ್ ನಂಬ್ರ  ನೇದಕ್ಕೆ ಸಂದೇಶದ ಕಳುಹಿಸಿರುತ್ತಾರೆ. ಸದ್ರಿ ಮೇಘರಾಜ್ (8810920704) ಎಂಬ ಹೆಸರಿನ ಅಪರಿಚಿತ ವ್ಯಕ್ತಿಯ ಮೇಲೆ ಸೂಕ್ತ ಕಾನೂನು ಕ್ರಮ  ಜರುಗಿಸಬೇಕೆಂದು ಕೋರಿಕೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 02-02-2023 08:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080