ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ ದಿನಾಂಕ :02-02-2024

 

Mangalore West Traffic PS

 

ಪ್ರಕರಣದ ಸಾರಾಂಶವೇನೆಂದರೆ, ದಿನಾಂಕ:25-01-2024ರಂದು ಪಿರ್ಯಾದಿ SMT DEFNY SYLVIA D SOUZA ದಾರರು ಕಾರ್ ಸ್ಟ್ರೀಟ್ ನ ಬಳಿ ಅಂಗಡಿಯೊಂದಕ್ಕೆ ಕೆಲಸದ ಇಂಟರ್ ವ್ಯೂ ಗೆ ಬಂದವರು ಕೆಲಸ ಮುಗಿಸಿ ಸ್ಕೂಲ್ ಬುಕ್ ಕಂಪೆನಿ ಅಂಗಡಿ ಕಡೆಗೆ ಹೋಗಲು ರಸ್ತೆ ದಾಟುತ್ತಿದ್ದ ಸಮಯ ಸುಮಾರು ಬೆಳಿಗ್ಗೆ 10-00 ಗಂಟೆಗೆ ಹೋಮ್ ಮಾಲ್ ಕಡೆಯಿಂದ KA-19-AD-8331ನೇ ಆಟೋ ರಿಕ್ಷಾವನ್ನು ಅದರ ಚಾಲಕ ಸುವಿನ್ ಕುಮಾರ್ ಎಂಬುವರು ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷತನ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತಿದ್ದ ಪಿರ್ಯಾದುದಾರರಿಗೆ  ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು ಬಲಗಾಲಿನ ಮಣಿಗಂಟಿಗೆ ಗುದ್ದಿದ ಗಾಯ ಹಾಗೂ ಎಡಕಾಲಿನ ಕೋಲು ಕಾಲಿಗೆ ತರಚಿದ ಗಾಯವಾದವರನ್ನು ಅದೇ ರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ಜಿಲ್ಲಾ ಸರಕಾರಿ ವೇನ್ ಲಾಕ್ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ ನಂತರ ಪಿರ್ಯಾದುದಾರರು ಸಣ್ಣಪುಟ್ಟ ಗಾಯವಾಗಿದ್ದು ಈ ಬಗ್ಗೆ ಯಾವುದೇ ಕಾನೋನು ಕ್ರಮದ ಅಗತ್ಯವಿಲ್ಲ ಎಂಬುದಾಗಿ ಲಿಖಿತವಾಗಿ ನೀಡಿ ಮನೆಗೆ ತೆರಳಿದವರು ದಿನಾಂಕ 30.01.2024 ರಂದು ಬಲಗಾಲಿನ ಮಣಿಗಂಟಿನ ನೋವು ಜಾಸ್ತಿಯಾಗಿದ್ದರಿಂದ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಹೋದಲ್ಲಿ ಅಲ್ಲಿ ಪರೀಕ್ಷಿಸಿದ ವೈದ್ಯರು ಬಲಗಾಲಿನ ಮಣಿಗಂಟಿನ ಮೂಳೆ ಮುರಿತವಾಗಿದೆ ಕೂಡಲೇ ಶಸ್ತ್ರ ಚಿಕಿತ್ಸೆ ಆಗಬೇಕೆಂದು ತಿಳಿಸಿರುತ್ತಾರೆ ಎಂಬಿತ್ಯಾದಿ.

 

Traffic South Police Station

ದಿನಾಂಕ:31-07-2023 ರಂದು ಪಿರ್ಯಾದಿ Ajith ಇವರು ಕಣ್ಣೂರು ಚೆಕ್ ಪೋಸ್ಟ್ ನಿಂದ ಅಡ್ಯಾರ್ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ 19-30 ಗಂಟೆ ಸುಮಾರಿಗೆ ಕಣ್ಣೂರು ಮಸೀದಿ ಬಳಿ  ರಸ್ತೆಯ ಡಿವೈಡರ್ ನಿಂದ ಎಡ ಬದಿಗೆ ರಸ್ತೆ ದಾಟುತ್ತಿದ್ದ ದನದ ಕರುವಿಗೆ  ಆರೋಪಿ ಕೆಎ-19-MA-3865  ನಂಬ್ರದ ಮೆರೂನ್ ಬಣ್ಣದ ಮಾರುತಿ ರಿಟ್ಜ್ ಕಾರಿನ ಚಾಲಕನು,  ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಕಾರನ್ನು  ಚಲಾಯಿಸಿಕೊಂಡು ಬಂದು, ಡಿಕ್ಕಿ ಪಡಿಸಿದ ಪರಿಣಾಮ, ದನದ ಕರು ರಸ್ತೆಗೆ ಬಿದ್ದು ಮೃತಪಟ್ಟಿರುತ್ತದೆ. ಕಾರಿನ  ಚಾಲಕನು  ನಂತರ  ಯಾವುದೇ ಸೂಚನೆ ನೀಡದೆ ಕಾರನ್ನು  ನಿಲ್ಲಿಸಿದ ಪರಿಣಾಮ,  ಆ ಕಾರಿನ ಹಿಂದುಗಡೆಯಿಂದ ಬರುತ್ತಿದ್ದ  ಕೆಎ-21- N- 5514  ಬಿಳಿ ಬಣ್ಣದ ಮಹೀಂದ್ರಾ XUV 500 ಕಾರು,  ರಿಟ್ಜ್ ಕಾರಿನ ಹಿಂಬದಿಗೆ ಹಾಗೂ   ಮಹೀಂದ್ರಾ XUV 500 ಕಾರಿನ ಹಿಂಬದಿಗೆ ಅದರ ಹಿಂದುಗಡೆಯಿಂದ ಬರುತ್ತಿದ್ದ ಕೆಎ-35-ಸಿ-8596 ಡೀಸಿಲ್  ಟ್ಯಾಂಕರ್ ಢಿಕ್ಕಿಯಾಗಿ, ರಿಟ್ಜ್ ಕಾರಿನ ಹಿಂಭಾಗ, ಮಹೀಂದ್ರಾ XUV 500  ಕಾರಿನ ಹಿಂಭಾಗ ಹಾಗೂ ಮುಂಭಾಗ ಮತ್ತು  ಡೀಸಿಲ್ ಟ್ಯಾಂಕರ್ ನ ಮುಂಭಾಗ ಜಖಂಗೊಂಡಿರುತ್ತದೆ. ಆರೋಪಿಯು ದನದ ಕರುವಿನ ಮಾಲಕನಿಗೆ 6,000/- ರೂ ನಷ್ಟವನ್ನುಂಟುಮಾಡಿರುತ್ತಾರೆ. ಎಂಬಿತ್ಯಾದಿಯಾಗಿರುತ್ತದೆ.

 

Moodabidre PS

ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿ Sri Sandesh P.G- PI  ಈ ದಿನ ದಿನಾಂಕ: 02/02/2024 ರಂದು 15:50 ಗಂಟೆಗೆ ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮೂಡಬಿದರೆ ತಾಲೂಕಿನ ಪ್ರಾಂತ್ಯ ಗ್ರಾಮದ ಹೈಪರ್ ಮಾರ್ಕೆಟ್ ಹತ್ತಿರ ಮಟ್ಕಾ ಜೂಜಾಟ ನಡೆಯುತ್ತಿರುವುದಾಗಿ ದೊರೆತ ಮಾಹಿತಿಯಂತೆ ಪಂಚರೊಂದಿಗೆ ಹೊರಟು 16.00 ಗಂಟೆಗೆ ಹೈಪರ್ ಮಾರ್ಕೆಟ್ ಹತ್ತಿರ ತಲುಪಿ ಸದ್ರಿ ಸ್ಥಳದಲ್ಲಿ ಮಟ್ಕಾ ಚೀಟಿ ಬರೆಯುತ್ತಾ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿದ್ದ ಕರುಣಾಕರ ಎಂಬಾತನನ್ನು ವಶಕ್ಕೆ ಪಡೆದು, ಆರೋಪಿತನ ವಶದಲ್ಲಿದ್ದ ನಗದು ಹಣ ರೂ: 1200/- ನಗದು, ಮಟ್ಕಾ ನಂಬರ್ ಬರೆದ 01 ಚೀಟಿ ಹಾಗೂ ಮಟ್ಕಾ ಬರೆಯಲು ಉಪಯೋಗಿಸಿದ 01 ಪೆನ್ನನ್ನು ಪಂಚರ ಸಮಕ್ಷಮ ಮಹಜರು ಮೂಲಕ ಸ್ವಾಧೀನಪಡಿಸಿಕೊಂಡು ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

   

Mangalore East PS

ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದುದಾರರಾದ ಶ್ರೀಮತಿ ತಬಿತಾ ನಾಯರ್ ಎಂಬವರು ಮಂಗಳೂರು ನಗರದ ಬಾರೆಬೈಲ್ ಎಂಬಲ್ಲಿರುವ Vishwas Ashakiran ಅಪಾರ್ಟ್ ಮೆಂಟ್ ನ ಫ್ಲಾಟ್ ನಲ್ಲಿ ವಾಸವಾಗಿದ್ದು, ಇವರು ಫ್ಲಾಟ್ ಗೆ ಸಂಬಂಧಿಸಿದಂತೆ ಇರುವ  ಆಸೋಷಿಯೇಷನ್ ನ ಟ್ರೆಸರರ್ ಆಗಿರುವುದಾಗಿದೆ. ಅದೇ ಅಪಾರ್ಟ್ ಮೆಂಟ್ ನ ಫ್ಲಾಟ್ ನಲ್ಲಿ ವಾಸವಾಗಿರುವ ಲೋಹಿತ್ ಸುವರ್ಣ ಎಂಬವರು ದಿನಾಂಕ:02-02-2024ರಂದು ಮಧ್ಯಾಹ್ನ 12:00 ಗಂಟೆಯ ಸುಮಾರಿಗೆ ಅಪಾರ್ಟ್ ಮೆಂಟ್ ನ ಗ್ರೌಂಡ್ ಫ್ಲೋರ್ ನಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ, ಪಿರ್ಯಾದುದಾರರನ್ನು ತಡೆದು ನಿಲ್ಲಿಸಿ ನಿರ್ವಹಣೆ ಸಂಬಂಧವಾಗಿನ ಹಣದ  ತಗಾದೆ ತೆಗೆದು, ಪಿರ್ಯಾದುದಾರರನ್ನುದ್ಧೇಶಿಸಿ, “ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಎಡಬದಿ ಕೆನ್ನೆಗೆ ಹಾಗೂ ಬಲಕೈಗೆ ಹೊಡೆದು, ದೂಡಿ ಹಾಕಿ, ಓಡಿ ಹೋಗಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 02-02-2024 09:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080